ರೈತರು ತಮ್ಮ ಜಮೀನಿನ ಮುಟೇಷನ್ ಪ್ರತಿಯನ್ನು ಈಗ ಮೊಬೈಲ್ ನಲ್ಲೇ ಪಡೆಯಬಹುದು. ಹೌದು, ಇದಕ್ಕಾಗಿ ರೈತರು ಯಾರ ಸಹಾಯವೂ ಇಲ್ಲದೆ ಮೊಬೈಲ್ ನಲ್ಲೇ ನೋಡಬಹುದು. ರೈತರ ಬಳಿ ಸ್ಮಾರ್ಟ್ ಫೋನ್ ಇದ್ದರೆ ಸಾಕು, ಅತೀ ಸುಲಭವಾಗಿ ಜಮೀನಿನ ಮುಟೇಷನ್ ಪ್ರತಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ಮಾಹಿತಿ.

ರೈತರು ತಮ್ಮ ಜಮೀನಿನ ದಾಖಲೆಗಳನ್ನು ಪಡೆಯಲು ಹಾಗೂ ನೋಡಲು ಈಗ ತಹಶೀಲ್ದಾರ ಕಚೇರಿ, ಗ್ರಾಮ ಪಂಚಾಯತಿ ಕಚೇರಿಗಳಿಗೆ ಹೋಗಬೇಕಿಲ್ಲ. ರೈತರು ಮನೆಯಲ್ಲಿ ಕುಳಿತಲ್ಲಿಯೇ ಜಮೀನಿನ ದಾಖಲೆಗಳನ್ನು ಒದಗಿಸಲು ಸೌಲಭ್ಯ ಒದಗಿಸಲಾಗಿದೆ. ಜಮೀನಿನ ಪಹಣಿ, 11ಇ ಮ್ಯಾಪ್, ಮುಟೇಷನ್ ಸೇರಿದಂತೆ ಇನ್ನಿತರ ದಾಖಲೆಗಳನ್ನು ಮೊಬೈಲ್ ನಲ್ಲೇ ಪಡೆಯಬಹುದು.

ಮೊಬೈಲ್ ನಲ್ಲಿ ಮುಟೇಷನ್ ಪ್ರತಿ ಪಡೆಯುವುದು ಹೇಗೆ?

ರೈತರ ಜಮೀನಿನ ಮುಟೇಷನ್ ಪ್ರತಿಯನ್ನು ಮೊಬೈಲ್ ನಲ್ಲೇ ನೋಡಬೇಕಾದರೆ ಈ

https://landrecords.karnataka.gov.in/Service11/MR_MutationExtract.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಮುಟೇಷನ್ ಪೇಜ್ ತೆರೆದುಕೊಳ್ಳುತ್ತದೆ.  ಅಲ್ಲಿ ರೈತರು ಯಾವ ಸರ್ವೆ ನಂಬರಿನ ಮುಟೇಷನ್ ನೋಡಬೇಕೆಂದುಕೊಂಡಿದ್ದಾರೋ ಅದನ್ನು ನಮೂದಿಸಬೇಕಾಗುತ್ತದೆ.  ಮೊದಲು ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಇದಾದನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು.

ಯಾವ ಸರ್ವೆ ನಂಬರಿನ ಮುಟೇಷನ್ ಪ್ರತಿ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ನಮೂದಿಸಬೇಕು. ನಂತರ Fetch Details ಮೇಲೆ ಕ್ಲಿಕ್ ಮಾಡಬೇಕು.  ಸರ್ವೆ ನಂಬರ್ ನಮೂದಿಸಿದ ನಂತರ Fetch Details ಕಾಣಲಿಲ್ಲವೆಂದರೆ ಹೊರಗಡೆ ಕ್ಲಿಕ್ ಮಾಡಬೇಕು. ನಂತರ ಫೆಟ್ಚ್ ಡಿಟೇಲ್ ಕಾಣುತ್ತದೆ. ಆಗ Fetch Details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಯಾವ ಸರ್ವೆ ನಂಬರ್ ಮುಟೇಶನ್ ನೋಡಬೇಕೆಂದುಕೊಂಡಿದ್ದೀರೋ ಆ ಸರ್ವೆ ನಂಬರ್ ಮತ್ತು ಹಿಸ್ಸಾ ನಂಬರ್ ಕಾಣುತ್ತದೆ.

ಮುಟೇಶನ್ ಡಿಟೇಲ್ಸ್ ನಲ್ಲಿ ಸರ್ವೆ ನಂಬರ್ ಹಿಸ್ಸಾನಂಬರ್, ಮುಟೇಷನ್ ನಬರ್, ಮುಟೇಶನ್ ಹೇಗಾಗಿದೆ ಖಾತಾ ಬದಲಾವಣೆಯಾಗಿದೆಯೋ ಅಥವಾ ಪೋಡಿಯಾಗಿದೆಯೋ ಎಂಬುದು ಕಾಣುತ್ತದೆ. ಜಮೀನು ಖರೀದಿ ಮಾಡಲಾಗಿದೆ, ಖಾತೆ ಬದಲಾವಣೆಯಾಗಿದೆಯೋ ಎಂಬುದು ಗೊತ್ತಾಗುತ್ತದೆ.

ನಿಮ್ಮ ಜಮೀನು ಹಿಸ್ಸಾ ನಂಬರ್ ಪಕ್ಕದಲ್ಲಿರುವ Select ಮೇಲೆ ಕ್ಲಿಕ್ ಮಾಡಬೇಕು.  ನಂತರ ಪ್ರಿವಿವ್ ಮೇಲೆ ಕ್ಲಿಕ್ ಮಾಡಬೇಕು. ಆಗ ಮುಟೇಷನ್ ರಿಜಿಸ್ಟರ್ ಪ್ರತಿ ತೆರೆದುಕೊಳ್ಳುತ್ತದೆ. ಇದರಲ್ಲಿ ಜಮೀನು ವರ್ಗಾವಣೆ ಹೇಗಾಗಿದೆ. ಹಕ್ಕುದಾರರ ಹೆಸರು, ಬ್ಯಾಂಕುಗಳಿಂದ ಎಷ್ಟು ಸಾಲ ಪಡೆದಿದ್ದಾರೆ? ಯಾವ ಬ್ಯಾಂಕಿನಿಂದ ಸಾಲ ಪಡೆದಿದ್ದರೆ ಎಂಬ ಮಾಹಿತಿ ಕಾಣುತ್ತದೆ. ನೀವು ನಮೂದಿಸಿದ ಸರ್ವೆ ನಂಬರ್ ನಲ್ಲಿ ಯಾರ ಯಾರ ಹೆಸರಿದೆ. ಹಾಗೂ ಹಿಸ್ಸಾ ನಂಬರಿನಲ್ಲಿ ಯಾರ ಹೆಸರಿದೆ. ಜಮೀನಿನ ಮಾಲಿಕರು ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿ ಕಾಣುತ್ತದೆ.

ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ12 ಕಂತಿನ ಹೊಸ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನುಮೊಬೈಲ್ ನಲ್ಲೇ ಚೆಕ್ ಮಾಡಿ

ಜಮೀನು ಖರೀದಿ ಮಾಡುವುದಕ್ಕಿಂತ ಮುಂಚಿತವಾಗಿ ಮುಟೇಷನ್ ಪ್ರತಿಯನ್ನು ನೋಡಿಕೊಳ್ಳಬಹುದು. ಇದರಿಂದಾಗಿ ಯಾವ ಜಮೀನು ಮಾಲಿಕರಿಂದ ಜಮೀನು ಖರೀದಿ ಮಾಡಬೇಕೆಂದುಕೊಂಡಿದ್ದೀರೋ ಅವರ ಆ ಜಮೀನಿನ ಮೇಲೆ ಸಾಲ ಪಡೆದಿದ್ದಾರೆಯೋ ಇಲ್ಲವೋ ಎಂಬುದು ಗೊತ್ತಾಗುತ್ತದೆ.

ರೈತರು ಈ ಮುಟೇಷನ್ ಪ್ರತಿಯನ್ನು ಮೊಬಲ್ ನಲ್ಲೇ  ಡೌನ್ಲೋಡ್ ಮಾಡಿಕೊಳ್ಳಬಹುದು. ಇದನ್ನು ಕೇವಲ ನೋಡುವುದಕ್ಕಾಗಿ ಬಳಸಬಹುದು. ಓರಿಜಿನಲ್ ಮುಟೇಷನ್ ನಿಮ್ಮ ತಾಲೂಕು ಕಚೇರಿಯಲ್ಲಿ ಅಥವಾ ಹೋಬಳಿ ಕೇಂದ್ರದಲ್ಲಿ ಪಡೆಯಬಹುದು. ರೈತರು ತಮ್ಮ ಮೊಬೈಲ್ ನಲ್ಲಿ ಆಗಾಗ ಜಮೀನಿನ ಮುಟೇಶನ್ ಪ್ರತಿಯನ್ನು ನೋಡಬಹುದು. ಜಮೀನು ಯಾರಿಂದ ಯಾರ ಹೆಸರಿಗೆ ವರ್ಗಾವಣೆಯಾಗಿದೆ ಎಂಬುದನ್ನು ತಿಳಿಯಬಹುದು.

Leave a Reply

Your email address will not be published. Required fields are marked *