ಸಾಮಾನ್ಯವಾಗಿ ಬೆಲೆಬಾಳುವ ಬಂಗಾರ, ಬೆಳ್ಳಿ ಕದ್ದಿರುವುದನ್ನು, ಹಣ, ಮೊಬೈಲ್ ಗಳನ್ನು ಕಸಿದುಕೊಂಡು ಹೋಗಿದನ್ನು ನೋಡಿದ್ದೇವೆ. ಬೈಕ್, ಕಾರ್, ಲಾರಿಯಂತಹ ವಾಹಗಳನ್ನು ಕದ್ದಿರುವುದನ್ನು ಕೇಳಿದ್ದೇವೆ. ಆದರೆ ಇಲ್ಲೊಂದು ಸೆಗಣಿ (cow dung stolen) ಕದ್ದಿರುವ ವಿಲಕ್ಷಣ ಘಟನೆ ನಡೆದಿದೆ.

ಹೌದು,  ಛತ್ತೀಸಗಢ ರಾಜ್ಯದ ಕೊರ್ಬಾ ಜಿಲ್ಲೆಯ ಹಳ್ಳಿಯೊಂದರಿಂದ 800 ಕೆಜಿ ಸಗಣಿ ಕಳ್ಳತನವಾದ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸೆಗಣಿಯ ಒಟ್ಟು ಮೌಲ್ಯ 1600 ರೂಪಾಯಿಯಿದೆ.

ದೀಪ್ಕಾ ಠಾಣೆ ವ್ಯಾಪ್ತಿಯ ಧುರೇನಾ ಗ್ರಾಮದಲ್ಲಿ ಜೂನ್ 8 ಮತ್ತು 9 ರ ನಡುವೆ ರಾತ್ರಿ 1600 ರೂಪಾಯಿ ಮೌಲ್ಯದ ಸೆಗಣಿ ಕಳುವಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

ಕೊಟ್ಟಿಗೆ-ಗೊಬ್ಬರ (ವರ್ಮಿಕಾಂಪೋಸ್ಟ್) ತಯಾರಿಗಾಗಿ ಛತ್ತೀಸಗಢ ರಾಜ್ಯ ಸರ್ಕಾರ ಗೋದಾನ್ ನ್ಯಾಯ ಯೋಜನೆಯನ್ನು ಜಾರಿಗೆ ತಂದಿದೆ. ಈ  ಮಹತ್ವಕಾಂಕ್ಷೆ ಯೋಜನೆಯಡಿ ರಾಜ್ಯ ಸರ್ಕಾರ ಪ್ರತಿ ಕೆಜಿಗೆ ಎರಡು ರೂಪಾಯಿಯಂತೆ ರೈತರಿಂದ ಹಸುವಿನ ಸೆಗಣಿ ಖರೀದಿಸುತ್ತದೆ.  ಕದ್ದು ಸೆಗಣಿಯನ್ನು ಗೋದಾನ್ ನ್ಯಾಯ ಯೋಜನೆಯಡಿಯಲ್ಲಿ ಮಾರಾಟ ಮಾಡಿ ದುಡ್ಡು ಮಾಡಬೇಕೆಂದು ರೈತರ ಹಸುವಿನ ಸೆಗಣಿ ಕಳವು ಮಾಡಿದ್ದಾರೆ. ಈ ಸಗಣಿಯಿಂದ ಸರ್ಕಾರ ಸಾವಯವ ಗೊಬ್ಬರ ಉತ್ಪಾದಿಸಿ ರೈತರಿಗೆ ಮಾರಾಟ ಮಾಡುತ್ತದೆ. ಸೆಗಣಿ ಮಾರಿ ಹಣ ಮಾಡಿಕೊಳ್ಳಲು ಅದನ್ನು ಕದ್ದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

ಏನಿದು ಗೋದಾತ ನ್ಯಾಯ ಯೋಜನೆ (what is godan nyaya yojana)

ಭೂಮಿಯ ಫಲವತ್ತತೆಯನ್ನು ಹೆಚ್ಚಿಸುವ ಮತ್ತು ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವ ಭರವಸೆಯೊಂದಿಗೆ ಛತ್ತೀಸ್ ಗಢದ ಸರ್ಕಾರವು ಗೋಧನ್ ನ್ಯಾಯ ಯೋಜನೆಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ರಾಜ್ಯ ಸರ್ಕಾರವು ಜಾನುವಾರು ಸಾಕಣೆದಾರರಿಂದ ಸೆಗಣಿಯನ್ನು ಪ್ರತಿ ಕೆಜಿಗೆ 2 ರೂಪಾಯಿಯಂತೆ ಖರೀದಿಸುತ್ತದೆ.

ದೇಶದ ಮೊದಲ ಗೋಧನ್ ನ್ಯಾಯ ಯೋಜನೆಯನ್ನು ಛತ್ತೀಸಗಢದಲ್ಲಿ ಆರಂಭವಾಗಿದೆ. ಮುಖ್ಯಮಂತ್ರಿ ಭೂಪೇಶ್ ಬಘೇಲ್ ಸಾಂಕೇತಿಕವಾಗಿ ಸಗಣಿಖರೀದಿಸುವ ಮೂಲಕ ಅದನ್ನು ಪ್ರಾರಂಭಿಸಿದರು. ಈ ಯೋಜನೆಯಡಿ ಸರ್ಕಾರ ಜಾನುವಾರು ಸಾಕಣೆದಾರರಿಂದ ಸೆಗಣಿಯನ್ನು ಪ್ರತಿ ಕೆ.ಜಿ.ಗೆ 2 ರೂ.ಗಳಂತೆ ಖರೀದಿಸಿ ನಂತರ ಸಾವಯವ ಗೊಬ್ಬರವನ್ನಾಗಿ ಮಾಡುತ್ತದೆ.

Leave a Reply

Your email address will not be published. Required fields are marked *