ಹೈದರಾಬಾದ್‌ನ 7 ವರ್ಷದ ಬಾಲಕನ ಸಾಹಸಕ್ಕೆ ಇಡೀ ವಿಶ್ವವೇ ನಿಬ್ಬೆರಗಾಗಿದೆ. ಹೌದು, ಕೇವಲ 7ನೇ ವರ್ಷಕ್ಕೆ ವಿರಾಟ್ ಚಂದ್ರ ಮಾಡಿದ್ದು ಸಾಹಸವೇನು ಗೊತ್ತಾ. ದಕ್ಷಿಣ ಆಫ್ರಿಕಾದ ಅತಿ ಎತ್ತರದ ಮೌಂಟ್ ಕಿಲಿಮಂಜಾರೋ ಪರ್ವತವನ್ನು ಏರಿ ದಾಖಲೆ ನಿರ್ಮಿಸಿದ್ದಾನೆ (7 year old boy becomes youngest to scale Africa’s Highest Peak Mt Kilimanjaro). ಈ ಕೀರ್ತಿ ಪಡೆದು ವಿಶ್ವದ ಅತ್ಯಂತ ಕಿರಿಯ ವಯಸ್ಸಿನ ಬಾಲಕ ಎಂಬ ದಾಖಲೆ ನಿರ್ಮಿಸಿದ್ದಾರೆ.
ಬರೋಬ್ಬರಿ 5,895 ಮೀಟರ್ ಎತ್ತರವಿರುವ ಈ ಪರ್ವತ ಏರಲು ಎಂತವರಿಗೂ ಎದೆಗಾರಿಕೆ ಬೇಕು ಎಷ್ಟು ಪರ್ವಾರೋಹಿಗಳು ಅರ್ಧಕ್ಕೆ ಏರಿ ವಾಪಸ್ಸು ಬಂದಿದ್ದಾರೆ. ಆದರೆ ಈ ಬಾಲಕ ಧೈರ್ಯದಿಂದ ಸ್ವಲ್ಪವೂ ಎದೆಗುಂದದೆ ಈ ಸಾಧನೆ ಮಾಡಿ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ.
ಮಾರ್ಚ್ 6ರಂದು ಮೌಂಟ್ ಕಿಲಿಮಂಜಾರೋ ಮೇಲೆ ಸಾಧನೆಯ ಹೆಜ್ಜೆಯನ್ನು ವಿರಾಟ್ ಚಂದ್ರ ಇಟ್ಟಿದ್ದಾನೆ. ಬಳಿಕ ಸಾಧನೆಯ ನುಡಿಗಳನ್ನಾಡಿರುವ ವಿರಾಟ್, ನನಗೆ ಪರ್ವತ ಏರುವಾಗ ಭಯ ಇತ್ತು. ಆದರೆ, ನನಗೆ ನನ್ನ ಗುರಿ ಮುಟ್ಟುವುದು ಮುಖ್ಯವಾಗಿತ್ತು ಎಂದು ಹೇಳಿದ್ದಾರೆ.
ಇನ್ನು, ತಮ್ಮ ಶಿಷ್ಯನ ಸಾಧನೆ ಬಗ್ಗೆ ಪ್ರತಿಕ್ರಿಯಿಸಿರುವ ಕೋಚ್ ಭರತ್, ತಿಂಗಳ ಅತಿ ಕಠಿಣ ತರಬೇತಿ ಬಳಿಕ ವಿರಾಟ್ ಪರ್ವತ ಏರಿದ್ದಾನೆ. ಆತನಲ್ಲಿ ಪರ್ವತ ಏರುವ ಉತ್ಸಾಹ ಇತ್ತು. ನನಗೂ ಕೂಡ ಆತನಿಗೆ ತರಬೇತಿ ನೀಡಲು ಖುಷಿಯಾಗುತ್ತಿತ್ತು. ಅನೇಕ ಜನರು ಅರ್ಧದಲ್ಲಿಯೇ ಈ ತರಬೇತಿಯನ್ನು ಬಿಟ್ಟು ಹೋಗಿದ್ದಾರೆ. ಆದರೆ ವಿರಾಟ್ ತನ್ನ ಗುರಿಸಿ ಸಾಧಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಇದಕ್ಕೂ ಮೊದಲು ಮಾರ್ಚ್ ನಲ್ಲಿ 9 ವರ್ಷದ ಬಾಲಕಿ ಆಂಧ್ರಪ್ರದೇಶದ ಕಡಪಾಲ ಋತ್ವಿಕಾ ಶ್ರೀ ಆಫ್ರಿಕಾದ ಅತಿ ಎತ್ತರದ ಶಿಖರವಾದ ಕಿಲಿಮಂಜಾರೋ ಪರ್ವತವನ್ನು ಗೆದ್ದ ಏಷ್ಯಾದ ಅತ್ಯಂತ ಕಿರಿಯ ಬಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು.
2018ರ ಅಕ್ಟೋಬರ್ ನಲ್ಲಿ, ಅಮೆರಿಕದ ನ್ಯೂ ಮೆಕ್ಸಿಕೋದ ಅಲ್ಬುಕರ್ಕ್ ನ ಆರು ವರ್ಷದ ಬಾಲಕ ಕೋಲ್ಟನ್ ಟ್ಯಾನರ್ ಕಿಲಿಮಂಜಾರೋ ವನ್ನು ಏರಿದ ಅತ್ಯಂತ ಕಿರಿಯ ವ್ಯಕ್ತಿಎನಿಸಿಕೊಂಡಿದ್ದಾನೆ.