ಉಚಿತವಾಗಿ ಕೊಳವೆ ಬಾವಿ ಕೊರೆಯಲು ರೈತರಿಂದ ಅರ್ಜಿ ಆಹ್ವಾನ

Written by Ramlinganna

Updated on:

Subsidy for Ganga kalyan ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ 2021-22ನೇ ಸಾಲಿನ ಗಂಗಾ ಕಲ್ಯಾಣ ಯೋಜನೆಯಡಿ ಉಚಿತವಾಗಿ ಕೊಳವೆಬಾವಿ ಕೊರೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಮತ್ತು 3 ಬಿ ರಲ್ಲಿ ಒಳಪಡುವ (ವಿಶ್ವಕರ್ಮ, ಉಪ್ಪಾರ, ಅಂಬಿಗ, ಸವಿತಾ, ಮಡಿವಾಳ, ಕಾಡುಗೊಲ್ಲ, ಹಟ್ಟಿಗೊಲ್ಲ, ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳು, ಒಕ್ಕಲಿಗ, ಲಿಂಗಾಯತ, ಮರಾಠ ಮತ್ತು ಇತರ ಉಪ ಸಮುದಾಯಗಳನ್ನು ಹೊರತುಪಡಿಸಿ ಅರ್ಪ ಫಲಾನುಭವಿಗಳಿಂದ ಅರ್ಜಿಆಹ್ವಾನಿಸಲಾಗಿದೆ.

Subsidy for Ganga kalyan ಗಂಗಾ ಕಲ್ಯಾಣ ಯೋಜನೆಯಡಿ ರೈತರಿಗೆ ಯಾವ ಯಾವ ಸೌಲಭ್ಯ ನೀಡಲಾಗುವುದು?

ರೈತರು ಕನಿಷ್ಠ 2 ಎಕರೆ ಹಾಗೂ ಗರಿಷ್ಠ 5 ಎಕರೆ ಜಮೀನು ಹೊಂದಿರಬೇಕು.ಯಾವುದೇ ಮೂಲದಿಂದ ನೀರಾವರಿ ಸೌಲಭ್ಯ ಪಡೆದಿರಬಾರದು. ಸಣ್ಣ ಮತ್ತು ಅತೀ ಸಣ್ಣ ರೈತರಾಗಿದ್ದು, ವಾರ್ಇಕ ವರಮಾನ 40 ಸಾವಿರ ರೂಪಾಯಿಗಳ ಮಿತಿಯಲ್ಲಿರಬೇಕು. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು.

ಇದನ್ನೂ ಓದಿ : ರೈತರ ಖಾತೆಗೆ ಜಮೆಯಾಯಿತು ಪರಿಹಾರದ ಹೆಚ್ಚುವರಿ ಹಣಃ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

ವೈಯಕ್ತಿಕನೀರಾವರಿ ಕೊಳವೆ ಬಾವಿಗಳಿಗೆ ಘಟಕ ವೆಚ್ಚ 2.50 ಲಕ್ಷ ನಿಗದಿಪಡಿಸಲಾಗಿದ್ದು, ಇದರಲ್ಲಿ2 ಲಕ್ಷ ಸಹಾಯಧನನೀಡಲಾಗುವುದು. 50 ಸಾವಿರ ರೂಪಾಯಿಗಳ ಶೇ. 4 ರ ಬಡ್ಡಿದರದಲ್ಲಿ ಸಾಲ ನೀಡಲಾಗುವುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ ಹಾಗೂತುಮಕೂರು ಜಿಲ್ಲೆಗಳಿಗೆ ಘಟಕ ವೆಚ್ಚ 4 ಲಕ್ಷರೂಪಾಯಿ ನಿಗದಿಪಡಿಸಲಾಗಿತ್ತು, ಇದರಲ್ಲಿ 3.50 ಲಕ್ಷ ಸಹಾಯಧನ ಇರಲಿದೆ. 50 ಸಾವಿರ ರೂಪಾಯಿ ಶೇ 4 ರ ಬಡ್ಡಿ ದರದಲ್ಲಿ ಸಾಲ ನೀಡಲಾಗುವುದು. ನಿಗದಿತ ಘಟಕ ವೆಚ್ಚದಿಂದ ಗಂಗಾಕಲ್ಯಾಣ ಯೋಜನೆಯಡಿ ಸೌಲಭ್ಯ ಒದಗಿಸಲಾಗುವುದು.ವೈಯಕ್ತಿಕ ನೀರಾವರಿ ಕೊಳವೆ ಬಾವಿ ಘಟಕಕ್ಕೆ ನಿಗದಿಪಡಿಸಿದ ಘಟಕ ವೆಚ್ಚದಲ್ಲಿ ಕರಾವಳಿ ಹಾಗೂ ಮಲೆನಾಡು ಪ್ರದೇಶದ ಜಿಲ್ಲೆಗಳಲ್ಲಿ ತೆರೆದ ಬಾವಿ ಮೂಲಕ ನೀರಾವರಿ ಸೌಲಭ್ಯ ಒದಗಿಸಲು ಅವಕಾಶವಿರುತ್ತದೆ.

ಗಂಗಾ ಕಲ್ಯಾಣ ಯೋಜನೆ  ಸೌಲಭ್ಯ ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾಫೇಕ್ಷಿಗಳು ನಿಗಮದ ವೆಬ್ ಸೈಟ್ www.dbcdc.karnataka.gov.in ಇಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ ಸಂಖ್ಯೆ 080-22374832 ಅಥವಾ ಆಯಾ ಜಿಲ್ಲಾ ಕಚೇರಿ ದೂರವಾಣಿ ಸಂಖ್ಯೆಗಳನ್ನು ವೆಬ್ ಸೈಟ್ ನಲ್ಲಿ ನೀಡಲಾಗಿದ್ದು, ಅದರಂತೆ ಸಂಪರ್ಕಿಸಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಆಯಾ ಜಿಲ್ಲೆಯ ವ್ಯವಸ್ಥಾಪಕರಿಗೆ ಸಲ್ಲಿಸಲು ಮಾರ್ಚ್ 7 ಕೊನೆಯ ದಿನಾಕಂಕವಾಗಿದೆ.

ಗಂಗಾ ಕಲ್ಯಾಣ ಯೋಜನೆ ಸೌಲಭ್ಯವನ್ನು ಪಡೆಯಲು ಇಚ್ಚಿಸುವ ಹಿಂದುಳಿದ ವರ್ಗದ ಫಲಾನುಫೇಕ್ಷಿಗಳು ನಿಗಮದ ವೆಬ್ ಸೈಟ್ https://dbcdc.karnataka.gov.in/

ಗೆ ಭೇಟಿ ನೀಡಬಹುದು. ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯುವ ರೈತರು ಅರ್ಜಿ ನಮೂನೆಗಾಗಿ ವೆಬ್ಸ್ಟೈಟ್ ನ ಸೇವೆಗಳು ಮತ್ತು ಯೋಜನೆಗಳು ಕೆಳಗಡೆ 2021-22 ಸಾಲಿನ ಗಂಗಾ ಕಲ್ಯಾಣ ಆಫ್ ಲೈನ್ ಅರ್ಜಿ ಮೇಲೆ ಕ್ಲಿಕ್ ಮಾಡಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

Leave a Comment