ರೈತರಿಗೆ 10 ತಿಂಗಳು ಉಚಿತ ತೋಟಗಾರಿಕೆ ತರಬೇತಿ

Written by Ramlinganna

Updated on:

10 month free training to farmers ತೋಟಗಾರಿಕೆಯಲ್ಲಿ ಆಸಕ್ತಿಯಿರುವ ರೈತರ ಮಕ್ಕಳಿಗೆ 10 ತಿಂಗಳ ಕಾಲ ವಿವಿಧ ತೋಟಗಾರಿಕೆ ಬೆಳೆಗಳ ಕುರಿತಂತೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ತೋಟಗಾರಿಕೆ ಇಲಾಖೆಯ ವತಿಯಿಂದ ರೈತರ ಮಕ್ಕಳಿಗಾಗಿ ಚಿಂಚೋಳಿ ತಾಲೂಕಿನ ಚಂದ್ರಂಪಳ್ಳಿ ತೋಟಗಾರಿಕೆ ತರಬೇತಿ ಕೇಂದ್ರದಲ್ಲಿ ತರಬೇತಿ ನೀಡಲಾಗುವುದು.

2023-24ನೇ ಸಾಲಿನ ಹತ್ತು ತಿಂಗಳ ಅವಧಿಗೆ ತೋಟಗಾರಿಕೆ ತರಬೇತಿಯನ್ನು 2023ರ ಮೇ 2 ರಿಂದ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ (ರಾಜ್ಯ ವಲಯ) ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

10 month free training to farmers ತರಬೇತಿ ಪಡೆಯಲು ಬೇಕಾಗುವ ಅರ್ಹತೆಗಳು 

ಸದರಿ ತರಬೇತಿಗಾಗಿ ಅಭ್ಯರ್ಥಿಯು ಕನಿಷ್ಠ ಎಸ್.ಎಸ್.ಎಲ್.ಸಿ  ಕನ್ನಡ ವಿಷಯದೊಂದಿಗೆ ಪಾಸಾಗಿರಬೇಕು. ಅಭ್ಯರ್ಥಿಯು ದೃಢಕಾಯವಾಗಿರಬೇಕು. ಅಭ್ಯರ್ಥಿಗಳು (ಮಾಜಿ ಸೈನಿಕರು ಹಾಗೂ ಇತರೆ ಎಲ್ಲಾ ಅಭ್ಯರ್ಥಿಗಳು) ತಂದೆ /ತಾಯಿ / ಪೋಷಕರು ಕಡ್ಡಾಯವಾಗಿ ಜಮೀನು ಹೊದಿರಬೇಕು. ಸ್ವಂತ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಪಹಣಿಯನ್ನು ಕಡ್ಡಾಯವಾಗಿ ನೀಡಬೇಕು.

ಇದನ್ನೂ ಓದಿ : ರೈತರ ಜಮೀನಿಗೆ ಹೋಗುವ ಕಾಲಾದಾರಿ, ಬಂಡಿದಾರಿ ಹಳ್ಳಕೊಳ್ಳಗಳ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ

ನಿಗದಿತ ಅಱ್ಜಿ ನಮೂನೆಗಳನ್ನು ಕಲಬುರಗಿ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ) ರಾಜ್ಯ ವಲಯದ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ, ಆಯಾ ತಾಲೂಕಿನ ತೋಟಗಾರಿಕೆ ಕಚೇರಿಯಿಂದ ಅಥವಾ ಇಲಾಖೆಯ

https://horticulturesec.karnataka.gov.in/

ವೆಬ್ಸೈಟ್ ದಿಂದ 2023- ಮಾರ್ಚ್ 11 ರಿಂದ ಏಪ್ರೀಲ್  12 ರವರೆಗೆ ಡೌನ್ಲೋಡ್ ಮಾಡಿಕೊಳ್ಳಬೇಕು.

ನಿಗದಿತ ನಮೂನೆಯನ್ನು ಭರ್ತಿ  ಮಾಡಿದ ಅರ್ಜಿಯೊಂದಿಗೆ ಅವಶ್ಯಕ ದಾಖಲೆಗಳು ಹಾಗೂ ಇತ್ತೀಚಿನ  ಭಾವಚಿತ್ರಗಳನ್ನು ಲಗತ್ತಿಸಬೇಕು.

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು? (where to apply)

ಕಲಬುರಗಿ (ಜಿಲ್ಲಾ ಪಂಚಾಯತ)  ತೋಟಗಾರಿಕೆ ಉಪನಿರ್ದೇಶಕರ ಕಚೇರಿ / ಹಿರಿಯ ಸಹಾಯಕ ನಿರ್ದೇಶಕರು (ರಾ.ವ) ಕಚೇರಿಯಲ್ಲಿ ಕಚೇರಿ ಸಮಯದಲ್ಲಿ 2023 ರ ಏಪ್ರೀಲ್ 12 ರ ಸಂಜೆ 5 ಗಂಟೆಯೊಳಗಾಗಿ ಅರ್ಜಿ ಸಲ್ಲಿಸಬೇಕು. 2023 ರ ಏಪ್ರೀಲ್ 15 ರಂದು ಬೆಳಗ್ಗೆ 10 ಗಂಟೆಗೆ ತಮ್ಮ ಮೂಲ ದಾಖಲೆಗಳೊಂದಿಗೆ ಕಲಬುರಗಿಯ ತೋಟಗಾರಿಕೆ ಉಪ ನಿರ್ದೇಶಕರು (ಜಿಲ್ಲಾ ಪಂಚಾಯತ)ಕಚೇರಿಯಲ್ಲಿ ಸಂದರ್ಶನಕ್ಕೆ ಹಾಜಕರಾಗಬೇಕು.

ವಯೋಮಿತಿ ಅರ್ಹತೆಗಳು (Qualification eligibility)

ಪರಿಶಿಷ್ಟ ಜಾತಿ  ಮತ್ತು ಪರಿಶಿಷ್ಟ ಪಂಗಡದವರಿಗೆ ಕನಿಷ್ಠ ವಯೋಮಿತಿ 10 ರಿಂದ 33 ವರ್ಷದೊಳಗಿರಬೇಕು. ಇತರರಿಗೆ ವಯೋಮಿತಿ ಕನಿಷ್ಠ 18 ರಿಂದ 30 ವರ್ಷದೊಳಗಿರಬೇಕು.

ಇದನ್ನೂ ಓದಿ : ಬೆಳೆ ವಿಮೆ, ಬೆಳೆ ಹಾನಿ ಹಾಗೂ ಪಿಎಂ ಕಿಸಾನ್ ಹಣ ನಿಮಗೆಷ್ಟು ಜಮೆಯಾಗಿದೆ. ಮೊಬೈಲ್ ನಲ್ಲೇ ಚೆಕ್ ಮಾಡಿ

ಅರ್ಜಿ ಶುಲ್ಕ ಹಾಗೂ ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಈ ಕಚೇರಿಯ ದೂರವಾಣಿ ಸಂಖ್ಯೆ 08472 229479 ನ್ನು ಹಾಗೂ ಸದರಿ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.

ತರಬೇತಿಯಲ್ಲಿ ಏನೇನು ತರಬೇತಿ ನೀಡಲಾಗುವುದು?

ಕೃಷಿಯಲ್ಲಿ ತೊಡಗಿರುವ ರೈತರು ಸಾಂಪ್ರದಾಯಿಕವಾಗಿ ಬೆಳೆ ಬೆಳೆಯಲು ಮುಂದಾಗುತ್ತಾರೆ. ಹಾಗಾಗಿ ಕೃಷಿಯಲ್ಲಿ ಹಾನಿಗೊಳಲಾಗುತ್ತಾರೆ.  ಕಡಿಮೆ ಭೂಮಿಯಲ್ಲಿ ಕಡಿಮೆ ನೀರು ಬಳಸಿ ತೋಟಗಾರಿಕೆ ಬೆಳೆಯುವುದು ಹೇಗೆ? ಕಡಿಮೆ ಖರ್ಚಿನಿಂದ ಹೆಚ್ಚು ಲಾಭ ಗಳಿಸುವುದು ಹೇಗೆ? ಒಂದೇ ಬೆಳೆ ಬೆಳೆಯುವುದಕ್ಕಿಂತ  ಮಿಶ್ರ ಬೆಳೆಯಿಂದಾಗಿ ಲಾಭ ಮಾಡುವ ಕುರಿತು, ತೋಟಗಾರಿಕೆ ಬೆಳೆಗಳಿಗೆ ತಗಲುವ ಬರುವ ರೋಗ, ಹಾಗೂ ರೋಗ ತಡೆಯಲು ಏನೇನು ಕ್ರಮಕೈಗೊಳ್ಳಬೇಕೆಂಬುದರ ಕುರಿತು ತರಬೇತಿ ನೀಡಲಾಗುವುದು. ಸಾವಯವ ಕೃಷಿ ಮಾಡಿ ಆರ್ಥಿಕವಾಗಿ ಸಬಲರಾಗುವುದು ಹೇಗೆ? ನಶಿಸಿಹೋಗುತ್ತಿರುವ ತೋಟಗಾರಿಕೆ ಬೆಳೆಗಳಿಂದ ಲಾಭ ಮಾಡುಕೊಳ್ಳುವದರೊಂದಿಗೆ ಬೆಳೆಗಳನ್ನು ಮಾರಾಟ ಮಾಡುವುದು ಹೇಗೆ ಸೇರಿದಂತೆ ಇನ್ನಿತರ ಕುರಿತು ತರಬೇತಿ ನೀಡಲಾಗುವುದು.

Leave a Comment