ರೈತರು ಮನೆಯಲ್ಲಿಯೇ ಕುಳಿತು ತಮ್ಮ ಅಕ್ಕಪಕ್ಕದ ಜಮೀನು, ಹಳ್ಳಕೊಳ್ಳ, ಗುಡ್ಡಬೆಟ್ಟ, ಕಾಲದಾರಿ, ಬಂಡಿದಾರಿಗಳ ಮಾಹಿತಿಯನ್ನು ಪಡೆಯಬಹುದು.
ಹೌದು, ರೈತರ ಬಳಿ ಫೋನ್ ಇದ್ದರೆ ಸಾಕು, ಒಂದೇ ನಿಮಿಷದಲ್ಲಿ ಎಲ್ಲಾ ಜಮೀನುಗಳ ಸರ್ವೆ ನಂಬರ್, ಊರಿನಲ್ಲಿರುವ ಹಳೆ ಬಾವಿ, ಅಕ್ಕಪಕ್ಕದ ಊರಿನ ದಾರಿ, ನದಿ ಹರಿಯುವ ದಿಕ್ಕು, ರಸ್ತೆ ಮಾರ್ಗಗಳ ಮಾಹಿತಿಯನ್ನು ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ಊರಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ? (how to download village map)
ರೈತರು ತಮ್ಮೂರಿನ ಮ್ಯಾಪ್ ಡೌನ್ಲೋಡ್ ಮಾಡಿಕೊಳ್ಳಲು ಈ
https://www.landrecords.karnataka.gov.in/service3/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕಂದಾಯ ಇಲಾಖೆಯ ಸಿದ್ದಪಡಿಸಿದ ಕರ್ನಾಟಕದ ಎಲ್ಲಾ ಊರುಗಳ ನಕ್ಷೆ ಡೌನ್ಲೋಡ್ ಮಾಡಿಕೊಳ್ಳುವ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆಮಾಡಿಕೊಳ್ಳಬೇಕಾಗುತ್ತದೆ. ನಂತರ ತಾಲೂಕು ಆಯ್ಕೆ ಮಾಡಿಕೊಂಡು ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಆಗ ನೀವು ಆಯ್ಕೆಮಾಡಿಕೊಂಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಪಟ್ಟಿ ಕಾಣಿಸುತ್ತದೆ. ನಿಮ್ಮ ಊರಿನ ಮುಂದೆ ಇರುವ ಪಿಡಿಎಫ್ ಫೈಲ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಊರಿನ ಮ್ಯಾಪ್ ನಿಮಗೆ ಓಪನ್ ಆಗುತ್ತದೆ.
ಗ್ರಾಮ ನಕ್ಷೆಯಲ್ಲಿ ಏನೇನು ಮಾಹಿತಿ ಇರುತ್ತದೆ? (What are information will be there in map)
ನೀವು ಓಪನ್ ಮಾಡಿದ ಗ್ರಾಮ ನಕ್ಷೆಯಲ್ಲಿ ಮೊದಲು ಗ್ರಾಮ ಗಡಿ ರೇಖೆ ಕಾಣುಸುತ್ತದೆ. ಸರ್ವೆ ನಂಬರ್ ಗಡಿಗಳು ಕಾಣಿಸುತ್ತವೆ. ಹಿಸ್ಸಾ ನಂಬರ್ ಹಾಗೂ ಸರ್ವೆ ನಂಬರ್ ಗಳ ಮಾಹಿತಿ ಇರುತ್ತದೆ. ಕಾಲುದಾರಿ ಬಂಡಿದಾರಿ ಮತ್ತು ಡಾಂಬಾರು ರಸ್ತೆ ಗಳ ಮಾಹಿತಿ ಇರುತ್ತದೆ. ಇದರೊಂದಿಗೆ ನಿಮ್ಮೂರಿನ ಸುತ್ತಮುತ್ತಲಿರುವ ಹಳ್ಳಕೊಳ್ಳಗಳು, ಬೆಟ್ಟ ಗುಡ್ಡಗಳ ಮಾಹಿತಿ ಇರುತ್ತದೆ. ಇದರೊಂದಿಗೆ ನಿಮ್ಮೂರಿನ ಸುತ್ತಮುತ್ತಲಿನಲ್ಲಿ ಕೆರೆಗಳಿದ್ದರೆ ಕೆರೆ ಯಾವ ಮೂಲೆಯಲ್ಲಿದೆ ಎಂಬುದು ಸಹ ಕಾಣಿಸುತ್ತದೆ. ಇದರೊಂದಿಗೆ ಕೆರೆ ಅಥವಾ ಹಳ್ಳ ಅಥವಾ ನದಿ ಇದ್ದರೆ ಅದು ಯಾವ ದಿಕ್ಕಿನಿಂದ ಯಾವ ದಿಕ್ಕಿಗೆ ಹರಿಯುತ್ತಿದೆ ಎಂಬ ಮಾಹಿತಿಯನ್ನು ಮಾರ್ಕ್ ಮಾಡಲಾಗಿರುತ್ತದೆ.
ಗ್ರಾಮದ ಸುತ್ತಮುತ್ತಲಿನ ಮಾಹಿತಿ ಗುರುತು ಹಿಡಿಯುವುದು ಹೇಗೆ? (How to find village information)
ನಿಮ್ಮೂರಿನ ಸುತ್ತಮುತ್ತಲಿರುವ ಸರ್ವೆ ನಂಬರಗಳು, ಬೆಟ್ಟಗುಡ್ಡ, ಹಳ್ಳಕೊಳ್ಳಗಳು, ನದಿ, ನಿಮ್ಮೂರಿನ ಸುತ್ತಮುತ್ತಲಿರುವ ರಸ್ತೆಗಳು, ಬಂಡಿದಾರಿ, ಕಾಲುದಾರಿಗಳ ಮಾಹಿತಿಯನ್ನು ಗುರುತಿಸಲು ಮ್ಯಾಪ್ ಎಡಗಡೆ ಗುರುತು ಮಾಡಲಾಗಿರುತ್ತದೆ. ಆ ಆಧಾರದ ಮೇಲೆ ರೈತರು ಪತ್ತೆ ಹಚ್ಚಬಹುದು. ನಿಮ್ಮೂರಿನಲ್ಲಿ ಹಳೆಯ ದೇವಸ್ಥಾನವಿದ್ದರೂ ಸಹ ದೇವಸ್ಥಾನದ ಮಾಹಿತಿ ಸಿಗುತ್ತದೆ.
ಊರಿನ ಮ್ಯಾಪ್ ರೈತರಿಗೆ ಹೇಗೆ ಪ್ರಯೋಜನಕಾರಿಯಾಗಲಿದೆ? (what type of information will get farmers)
ಊರಿನ ಮ್ಯಾಪ್ ಸಹಾಯದಿಂದ ರೈತರು ತಮ್ಮ ಜಮೀನಿಗೆ ಹೋಗಲು ದಾರಿ ಇದೆಯೋ ಇಲ್ಲವೋ? ದಾರಿಯಿದ್ದರೆ ಅತಿಕ್ರಮಣವಾಗಿದೆಯೇ ಎಂಬುದನ್ನು ನೋಡಬಹುದು. ಇದರೊಂದಿಗೆ ನಿಮ್ಮ ಊರಿನ ಸುತ್ತಮುತ್ತಲು ಕೆರೆ, ಹಳ್ಳಕೊಳ್ಳಗಳು ಇದ್ದರೂ ಸಹ ಹರಿದು ಹೋಗುವ ಮಾರ್ಗ ಹೇಗಿದೆ? ಊರಿನ ಅಕ್ಕಪಕ್ಕದ ಊರುಗಳಿಗೆ ಹೋಗುವ ರಸ್ತೆಎಲ್ಲಿಂದ ಹಾದುಹೋಗುತ್ತದೆ ಎಂಬುದನ್ನು ಈ ಮ್ಯಾಪ್ ನಲ್ಲಿ ಮಾಹಿತಿ ಸಿಗುತ್ತದೆ.ಇದರೊಂದಿಗೆ ತಮ್ಮ ಜಮೀನಿನ ಅಂದರೆ ಸರ್ವೆ ನಂಬರ್ ಅಕ್ಕಪಕ್ಕದಲ್ಲಿರುವ ಸರ್ವೆ ನಂಬರ್ ಗಳ ಮಾಹಿತಿಯನ್ನೂ ಇಲ್ಲಿ ಚೆಕ್ ಮಾಡಬಹುದು.