ರೈತರ ಕೃಷಿ ಚಟುವಟಿಕೆಗಳಿಗಾಗಿ  3 ಲಕ್ಷ ರೂಪಾಯಿಯವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದು.  ಆದರೆ ಬಹುತೇಕ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸಿಗುವುದಿಲ್ಲ. ಇದಕ್ಕೆ ಮಾಹಿತಿಯ ಕೊರತೆಯೂ ಇದೆ. ಸಾಲಕ್ಕಿರುವ ಮಾನದಡಂಗಳು ಷರತ್ತುಗಳ ಬಗ್ಗೆ ಬಹುತೇಕ ರೈತರಿಗೆ ಸಂಪೂರ್ಣ ಮಾಹಿತಿಯಿರುವುದಿಲ್ಲ. ಮಾಹಿತಿಯಿದ್ದರೂ ಕೆಲವು ರೈತರು ಜನಪ್ರತಿನಿಧಿಗಳ ಹಿಂಬಾಲಕರಿಗೆ ಸಾಲ ಸಿಗುವುದೆಂದು ಸಾಲ ಕೇಳಕ್ಕೆ ಹೋಗುವುದಿಲ್ಲ. ಆದರೆ ಸಾಲಕ್ಕಿರುವ ಷರತ್ತುಗಳು, ಮತ್ತು ಮಾನದಂಡಗಳ ಬಗ್ಗೆ ಮಾಹಿತಿ ಪಡೆದು ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆದುಕೊಳ್ಳಬಹುದು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳು ಶೂನ್ಯ ಬಡ್ಡಿದರದಲ್ಲಿ 3 ಲಕ್ಷ ರೂಪಾಯಿಯವರೆಗೆ ಸಾಲ ನೀಡುತ್ತವೆ. ಆದರೆ ಸಾಲ ನೀಡುವುದಕ್ಕೆ ಕೆಲವು ಷರತ್ತುಗಳನ್ನು ಬ್ಯಾಂಕುಗಳು ವಿಧಿಸಿವೆ. ರೈತರಿಗೆ ಕೃಷಿ ಚಟುವಟಿಕೆಗಾಗಿ ಅಲ್ಬಾವಧಿ ಬೆಳೆ ಸಾಲವನ್ನು 3 ಲಕ್ಷ ರೂಪಾಯಿಯವರೆಗೆ ಪಶುಸಂಗೋಪನೆ, ಮೀನವುಗಾರಿಕೆಗಾಗಿ 2 ಲಕ್ಷ ರೂಪಾಯಿಯವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡುತ್ತವೆ. ಈ ಸಾಲ ಎಲ್ಲಾ ರೈತರಿಗೆ ಕೊಡುವುದಿಲ್ಲ. ಇದಕ್ಕೆ ಕೆಲವು ಷರತ್ತುಗಳಿವೆ.

ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಲಿಚ್ಚಿಸುವ ರೈತರು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಪಿಕಾರ್ಡ್ ಬ್ಯಾಂಕ್ ಅಥವಾ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಲ್ಲಿ ಸದಸ್ಯತ್ವ ಹೊಂದಿರಬೇಕು. ರೈತರು ಪಹಣಿ ಮತ್ತು ಆಧಾರ್ ಕಾರ್ಡ್ ದಾಖಲೆಗಳೊಂದಿಗೆ ನಿಗದಿತ ನಮೂನೆಯಲ್ಲಿ ಸಂಬಂಧಿಸಿದ ಸಂಘಗಳಿಗೆ ಅರ್ಜಿ ಸಲ್ಲಿಸಬೇಕು. ರೈತರು ಪಹಣಿ ಮೇಲೆ ಬೇರೆ ಬ್ಯಾಂಕುಗಳಲ್ಲಿ ಸಾಲ ಪಡೆದಿರಬಾರದು. ರೈತ ವಾಸವಿರುವ ಸ್ಥಳದ ಸಂಘ ಅಥವಾ ಭೂಮಿ ಹೊಂದಿರುವ ಸ್ಥಳದ ಸಂಘ ಈ ಮೂರರಲ್ಲಿ ಯಾವುದಾದರೊಂದು ಸಂಘದ ವ್ಯಾಪ್ತಿಯಲ್ಲಿ ಮಾತ್ರ ಸಾಲ ಪಡೆಯಬೇಕು. ಒಂದು ಜಿಲ್ಲೆ ಅಥವಾ ತಾಲೂಕಿನ ಹೋಬಳಿಯಲ್ಲಿರುವ ರೈತರು ಇನ್ನೊಂದು ಜಿಲ್ಲೆಯ ಹೋಬಳಿಯಲ್ಲಿ ಸಾಲ ಪಡೆಯುವಂತಿಲ್ಲ.  ಭೂ ದಾಖಲೆಗಳು ಅಂದರೆ ಪಹಣಿಯೊಂದಿಗೆ, ಆಧಾರ್ ಕಾರ್ಡ್, ಬ್ಯಂಕ್ ಪಾಸ್ಪುಕ್ ಸೇರಿದಂತೆ ಅಗತ್ಯ ದಾಖಲೆಗಳೊಂದಿಗೆ ರೈತರು ಸಂಘದ ಸದಸ್ಯರಾಗಿರಬೇಕು.

ಇದನ್ನೂ ಓದಿ : ರೈತರ ಖಾತೆಗೆ ಜಮೆಯಾಯಿತು ಬೆಳೆ ಹಾನಿ ಪರಿಹಾರದ ಹಣ-ನಿಮ್ಮ ಖಾತೆಗೆ ಜಮೆಯಾಗಿರುವ ಸ್ಟೇಟಸ್ ನೋಡಲು ಇಲ್ಲಿ ಕ್ಲಿಕ್ ಮಾಡಿ

3 ಲಕ್ಷ ರೂಪಾಯಿಯವರೆಗೆ ಸಾಲವು ಕೃಷಿ ಚಟುವಟಿಕೆಗೆ ಮಾತ್ರ ತೆಗೆದುಕೊಳ್ಳಬೇಕು. ಕೃಷಿಗೆ ಸಂಬಂಧಿಸಿದ ಲಘು ನೀರಾವರಿ, ಭೂ ಅಭಿವೃದ್ಧಿ, ತೋಟಗಾರಿಕೆ, ಪಶುಸಂಗೋಪನೆ, ಮೀನುಗಾರಿಕೆ, ರೇಷ್ಮೆ, ಜೇನು ಸಾಕಾಣಿಕೆ ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗೆ ಸಾಲ ನೀಡಲಾಗುವುದು. ಈ ಯೋಜನೆಯು ಕೊಯ್ಲುವರೆಗಿನ ಮತ್ತು ಕೊಯ್ಲು ನಂತರದ ಕೃಷಿ ಚಟುವಟಿಕೆಗೂ ಅನ್ವಯವಾಗುತ್ತದೆ.

ವಾಹನ ಖರೀದಿ, ಮನೆ ಸೇರಿದಂತೆ ಇನ್ನಿತರ ಕೃಷಿಗೆ ಸಂಬಂಧಿಸದೆ ಇರುವ ಚಟುವಟಿಕೆಗಳಿಗೆ ಈ ಯೋಜನೆಯು ಅನ್ವಯವಾಗುವುದಿಲ್ಲ. ಅಲ್ಪಾವಧಿ ಕೃಷಿ ಸಾಲ ಯೋಜನೆಯಲ್ಲಿ ಒಂದು ಕುಟುಂಬಕ್ಕೆ ಗರಿಷ್ಠ 3 ಲಕ್ಷ ರೂಪಾಯಿಯವರೆಗೆ ಮಾತ್ರ ಸಾಲ ನೀಡಲಾಗುವುದು. ಮಾಸಿಕ 20 ಸಾವಿರಕ್ಕಿಂತ ಹೆಚ್ಚು ವೇತನ, ಪಿಂಚಣಿ ಅಥವಾ ಕಳೆದ ಮೂರು ವರ್ಷಗಳಲ್ಲಿ ಆದಾಯ ತೆರಿಗೆ ಪಾವತಿಸಿದ್ದರೆ ಅಂತಹ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲಾಗುವುದಿಲ್ಲ.

Leave a Reply

Your email address will not be published. Required fields are marked *