ಅತೀವೃಷ್ಟಿಯಿಂದ ಬೆಳೆಹಾನಿಯಾದ ರೈತರ ಖಾತಿಗೆ  ಪರಿಹಾರ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ನೋಡಲು ಈಗ ಎಲ್ಲಿಗೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ನಿಮ್ಮ ಮೊಬೈಲ್ ನಲ್ಲಿಯೇ ಬೆಳೆ ಪರಿಹಾರ ಹಣ (crop damage compensation deposit status) ಯಾವಾಗ ಎಷ್ಟು ಜಮೆಯಾಗಿದೆ ಎಂಬುದನ್ನು ನೋಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ…. ಇಲ್ಲಿದೆ ಮಾಹಿತಿ.

2020-21ನೇ ಸಾಲಿನಲ್ಲಿ ಸುರಿದ ಮಳೆಯಿಂದಾಗಿ ರಾಜ್ಯದ ಲಕ್ಷಾಂತರ ರೈತರ ಬೆಳೆ ಹಾನಿಯಾಗಿತ್ತು. ಅತೀವೃಷ್ಟಿಯಿಂದ (Flood) ಪ್ರವಾಹ ಉಂಟಾಗಿ ಸಾಕಷ್ಟು ಬೆಳೆ  ಕೊಚ್ಚಿಕೊಂಡು ಹೋಗಿತ್ತು. ಇನ್ನೂ ಕೆಲವು ರೈತರ ಬೆಳೆ ಮಳೆಯಲ್ಲಿಯೇ ಕೊಳೆತುಹೋಗಿ ರೈತರು ಸಂಕಷ್ಟಕ್ಕೊಳಗಾಗಿದ್ದರು. ಇದಕ್ಕಾಗಿ ಸರ್ಕಾರವು ಪ್ರತಿ ಹೆಕ್ಟೇರಿಗೆ ಸುಮಾರು 6 ರೂಪಾಯಿಯಂತೆ  ಪರಿಹಾರ ನೀಡಲು ಘೋಷಣೆ ಮಾಡಿದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಮೀಕ್ಷೆ ನಡೆಸಿ ಪರಿಹಾರದ ಹಣವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಆಯಾ ಜಿಲ್ಲಾಡಳಿತವು ಪರಿಹಾರ ತಂತ್ರಾಂಶದಲ್ಲಿ ರೈತರ ಹೆಸರು ನೋಂದಣಿ ಮಾಡಿದ ನಂತರ ಪರಿಹಾರ ಹಣ ಜಮೆ ಮಾಡಲಾಗುತ್ತಿದೆ.

ಒಂದು ವೇಳೆ ನೀವು ನಿಮ್ಮ ಹೆಸರು ನಿಮ್ಮ ಗ್ರಾಮ ಪಂಚಾಯತಿಯಲ್ಲಿ ನೋಂದಣಿ ಮಾಡಿಸದಿದ್ದರೆ ಕೂಡಲೇ ನಿಮ್ಮ ಪಹಣಿ, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ಬುಕ್ ತೆಗೆದುಕೊಂಡು ಹೋಗಿ ಹೆಸರು ನೋಂದಾಯಿಸಿಕೊಳ್ಳಿ. ಗ್ರಾಮ ಪಂಚಾಯತಿಯ ವಿಲೇಜ್ ಅಕೌಂಟೆಂಟ್ ನಿಮ್ಮ ಹೆಸರನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಸೇರಿಸುತ್ತಾರೆ. ಡಿಸೆಂಬರ್ 7 ಹೆಸರುನೋಂದಾಯಿಸಲು ಕೊನೆಯ ದಿನಾಕಂಕವಾಗಿದೆ.

ನಿಮ್ಮ ಖಾತೆಗೆ ಪರಿಹಾರದ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು….. ಈ ಕೆಳೆಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿದರೆ ಸಾಕು. ನಿಮ್ಮ ಖಾತೆಗೆ ಯಾವ ವರ್ಷ ಎಷ್ಟು ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು.

ಉದಾಹರಣೆಗೆ 201-22ನೇ ಸಾಲಿನಲ್ಲಿ ಅತೀವೃಷ್ಟಿಯಿಂದ ಹಾನಿಗೊಳಗಾದ ರೈತರ ಖಾತೆಗೆ ಬೆಳೆ ಪರಿಹಾರ ಹಣ ಖಾತೆಗೆ ಜಮೆಯಾಗಿದ್ದನ್ನು ನೋಡಲು   https://landrecords.karnataka.gov.in/PariharaPayment/ ಈ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪರಿಹಾರ ತಂತ್ರಾಂಶದ ಪೇಜ್ ಓಪನ್ ಆಗುತ್ತದೆ. ಅಲ್ಲಿ ಆಧಾರ್ ಕಾರ್ಡ್ ಸೆಲೆಕ್ಟ್ ಮಾಡಿಕೊಳ್ಳಬೇಕು. ಕೆಳಗಡೆ  Select Calamity type ನಲ್ಲಿ  Flood ಆಯ್ಕೆ ಮಾಡಿಕೊಳ್ಳಬೇಕು. ವರ್ಷದಲ್ಲಿ  2021-22 ಸೆಲೆಕ್ಟ್ ಮಾಡಿಕೊಳ್ಳಬೇಕು. ಕೆಳಗಡಿ ಆಧಾರ್ ಸಂಖ್ಯೆ ನಮೂದಿಸಿ ಕ್ಯಾಪ್ಚಾ ಕೋಡ್ ಎಂಟರ್ ಮಾಡಿದ ನಂತರ ವಿವರಗಳನ್ನು ಪಡೆಯಲು Fetch details  ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಜಿಲ್ಲೆ, ಬ್ಯಾಂಕಿನ ಹೆಸರು, ನಿಮ್ಮ ಹೆಸರು, ಬ್ಯಾಂಕ್ ಅಕೌಂಟ್ ನಂಬರ್, ಹಣ ಸಂದಾಯವಾದ ಸ್ಥಿತಿಗತಿ, ಯಾವುದರಿಂದ ಹಣ ಬಂದಿದೆ ಉದಾಹರಣೆಗೆ ಫ್ಲಡ್ (ಅತೀವೃಷ್ಟಿ) ಸಂದಾಯವಾದ ಕಾಲ (ಖಾರಿಪ್ ಅಥವಾ ರಬ್ಬಿ)  ಮತ್ತು ಯಾವ ವರ್ಷ ಹಣ ಬಂದಿದೆ ಎಂಬ ವರದಿ ಓಪನ್ ಆಗುತ್ತದೆ. ಇದೇ ರೀತಿ ನೀವು ಕಳೆದ ನಾಲ್ಕೈದು ವರ್ಷದ ರಿಪೋರ್ಟ್ ಸಹ ನೋಡಬಹುದು.

ಇದನ್ನೂ ಓದಿ: ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ, ಎತ್ತಿನಬಂಡಿ ದಾರಿ, ಸರ್ವೆನಂಬರ್, ಊರಿನ ಮ್ಯಾಪ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮೂಲ: ಕಂದಾಯ ಇಲಾಖೆ

One Reply to “ಬೆಳೆ ಹಾನಿ ಪರಿಹಾರ ಹಣ ಜಮೆ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಲು ಇಲ್ಲಿ ಕ್ಲಿಕ್ ಮಾಡಿ”

Leave a Reply

Your email address will not be published. Required fields are marked *