ನಿಮ್ಮಲ್ಲಿ ಪ್ರತಿಭೆಯಿದ್ದರೂ ನೌಕರಿ ಸಿಕ್ಕಿಲ್ಲವೆಂದು ನಿರಾಶೆರಾಗಿದ್ದೀರಾ….ಕೆಲಸಕ್ಕೆ ಅರ್ಜಿ ಹಾಕಿ ಹಾಕಿ ಸುಸ್ತಾಗಿದ್ದೀರಾ…. ಈಗಿನ ಕಾಲದಲ್ಲಿ ಎಲ್ಲಿ ನೌಕರಿ ಸಿಗುತ್ತದೆ ಎಂಬ ಚಿಂತೆಯಲ್ಲಿದ್ದರೆ ಇನ್ನೂ ಮುಂದೆ ಚಿಂತೆ ಮಾಡಬೇಕಿಲ್ಲ. ಮನೆಯಲ್ಲಿಯೇ ಕುಳಿತು ನೀವು ನಿಮ್ಮ ಪ್ರತಿಭೆಗೆ ತಕ್ಕಂತೆ ಹಣ ಗಳಿಸಬಹುದು. ಮನೆಯಲ್ಲಿಯೇ ಕುಳಿತು ಹಣ ಹೇಗೆ ಗಳಿಸುವುದು. ಅದು ಒಂದ ಲಕ್ಷ ರೂಪಾಯಿಯವರಗೆ ಹಣ ಗಳಿಸುವುದೆಲ್ಲಾ ಸುಳ್ಳೆಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಇಲ್ಲಿ ಯಾವುದೇ ಕಟ್ಟುಕಥೆಯನ್ನು ಹೇಳುತ್ತಿಲ್ಲ. ಅನುಭವದ ಆಧಾರದ ಮೇಲೆ ಬರೆಯುತ್ತಿದ್ದೇನೆ. ಕೆಲಸ ಮಾಡದೆ ಲಕ್ಷಾಂತರ ರೂಪಾಯಿ ಸಿಗುತ್ತದೆ ಎಂದು ಹೇಳುತ್ತಲೇ ಇಲ್ಲ. ಕೆಲಸ ಮಾಡಬೇಕು. ಆದರೆ ಸ್ಮಾರ್ಟ್ ವರ್ಕ್ ಮಾಡಬೇಕಾಗುತ್ತದೆ. ಈಗಾಗಲೇ ಎಷ್ಟೋ ಜನರು ಸ್ಮಾರ್ಟ್ ವರ್ಕ್ ಮಾಡಿ ಮನೆಯಲ್ಲಿಯೇ ಕುಳಿತು ಒಂದು ಲಕ್ಷಕ್ಕೂ ಹೆಚ್ಚು ಹಣ ಪ್ರತಿ ತಿಂಗಳೂ ಗಳಿಸುತ್ತಿದ್ದಾರೆ.

ಪ್ರತಿಭೆಗೆ ತಕ್ಕಂತೆ ಯಾರು ನೌಕರಿ ಕೊಡುತ್ತಾರೆ ಎಂಬ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿರಬಹುದು. ಯಾರೂ ನೌಕರಿ ಕೊಡಬೇಕಿಲ್ಲ. ನೀವೇ ನಿಮ್ಮ ನೌಕರಿ ಪಡೆಯಬಹುದು. ನಾವ್ಹೇಗೆ ನೌಕರಿ ಪಡೆಯಬಹುದು ಎಂಬ ಗೊಂದಲ ನಿಮ್ಮ ತಲೆಯಲ್ಲಿದ್ದರೆ ಇಲ್ಲಿದೆ ಅದಕ್ಕೆ ಉತ್ತರ.

ಯಾವ ವಿಷಯಗಳ ಬಗ್ಗೆ ನೀವು ಹೇಳಬೇಕೆಂದುಕೊಂಡಿದ್ದೀರೋ… ಸೀನೆಮಾ ಡೈಲಾಗ್ ಆಗಿರಬಹುದು. Acting, ಡ್ಯಾನ್ಸಿಂಗ್, ಸಿಂಗಿಂಗ್, ಕಾಮಿಡಿ, ಪ್ಲೇಯಿಂಗ್,ನಿಮ್ಮಲ್ಲಿ ಯಾವುದೇ ಕಲೆಯಿರಲಿ ಅದನ್ನು ನೀವು ಉತ್ತಮವಾಗಿ ಮಾಡಬಲ್ಲೀರಿ ಎಂಬ ವಿಶ್ವಾಸವಿದ್ದರೆ ಸಾಕು ನೀವು ಆ ಕ್ಷೇತ್ರದಲ್ಲಿ ಗ್ಯಾರೆಂಟಿ ಸಕ್ಸೆಸ್ ಆಗುತ್ತೀರಿ. ನಿರಂತರವಾಗಿ ಮಾಡುವ ಛಲ ಮಾತ್ರ ಇರಬೇಕು.

ಆರಂಭದಲ್ಲಿ ನಿಮ್ಮ  ಕೆಲಸಕ್ಕೆ ಟೀಕೆ ಮಾಡುವವರೂ ಇರುತ್ತಾರೆ. ಹೀಯಾಳಿಸುವವರೂ ಇರುತ್ತಾರೆ. ಅಂತಹ ಮಾತಿಗೆ ತಲೆಕೆಡಿಸಿಕೊಳ್ಳದೆ ನಿಮ್ಮ ಕೆಲಸದಲ್ಲಿ ನೀವು ಮಗ್ನರಾದರೆ ಸಾಕು…ಒಳ್ಳೆಯದನ್ನು ಮಾಡುವ ಮನಸ್ಸಿದ್ದರೆ ನಾಲ್ಕು ಜನರಿಗೆ ಉಪಯೋಗವಾಗುವ ಮಾಹಿತಿ ನೀಡುತ್ತಾ ಹೋದರೆ ನಿಮಗರಿವಿಲ್ಲದೆ ಲಕ್ಷಾಂತರ ಮಂದಿ ನಿಮ್ಮ ವೀಡಿಯೋಗಳಿಗೆ ಲೈಕ್ ಶೇರ್ ಮಾಡುತ್ತಿರುತ್ತಾರೆ.

ಇತ್ತೀಚೆಗೆ ನೀವು ಪ್ರತಿನಿತ್ಯ ನಿಮ್ಮ ಮೊಬೈಲ್ ಗಳಲ್ಲಿ ಯೂಟೂಬ್ ನಲ್ಲಿ ಸಾಕಷ್ಟು ವೀಡಿಯೋ ಗಳನ್ನು ಸುದ್ದಿಯ ತುಣಕುಗಳನ್ನು , ಕಾಮಿಡಿ ವೀಡಿಯೋಗಳನ್ನು ಫೇಸ್ಬುಕ್, ಗೂಗಲ್ ನಲ್ಲಿ ನೋಡಿರಬಹುದು. ಯೂಟೂಬ್ ಗಳಲ್ಲಿ ಒಳ್ಳೆಯ ವೀಡಿಯೋಗಳನ್ನು  ಲಕ್ಷಾಂತರ ಜನ ನೋಡಿ ಶೇರ್ ಮಾಡುತ್ತಿರುತ್ತಾರೆ. ನಿಮಗ ಇಷ್ಟವಾದ ವೀಡಿಯೋ ಅಥವಾ ಮಾಹಿತಿ ನೋಡಿದ ಮೇಲೆ ಕಳಿಸಿದರವಾರು ಎಂಬುದನ್ನು ಯೋಚಿಸದೆ ಇಷ್ಟವಾದ ಮಾಹಿತಿಗಳನ್ನು ನೀವೂ  ಶೇರ್ ಮಾಡಿರಬಹುದು. ಕೆಲವು ಸಾಮಾನ್ಯ ವೀಡಿಯೋಗಳಿರುತ್ತವೆ. ಹೊಲದಲ್ಲಿ ಕೆಲಸ ಮಾಡುತ್ತಿರುವುದು, ಪಶುಪಕ್ಷಿಗಳೊಂದಿಗೆ, ಅಷ್ಟೇ ಅಲ್ಲ ನೀವು ದಿನ ನಿತ್ಯ ಮಾಡುವ ಕೆಲಸಗಳ ವೀಡಿಯೋ, ಉತ್ತಮ ಸಂದೇಶವುಳ್ಳ ಮಾಹಿತಿ, ಒಂದೆರಡು ವಾಕ್ಯದಲ್ಲಿ ಉತ್ತಮ ಸಂದೇಶ ಕೊಡುವ ಮಾಹಿತಿ ಹೀಗೆ ಹತ್ತುಹಲವಾರು ವೀಡಿಯೋಗಳನ್ನು ನೀವು ನಿಮ್ಮ ಮೊಬೈಲ್ ನಲ್ಲಿ ನೋಡಿರುತ್ತೀರಿ…ಇದನ್ನೆಲ್ಲಾ ನಾನ್ಯಾಕೆ ಹೇಳುತ್ತಿದ್ದೇನೆಂದರೆ ಈ ಯೂಟೂಬ್ ವೀಡಿಯೋಗಳಿಂದಲೂ ನೀವು ಹಣ ಗಳಿಸಬಹುದು.

ನಿಮ್ಮಲ್ಲಿ ಯಾವ ಪ್ರತಿಭೆಯಿದೆ ಎಂಬುದನ್ನು ನೀವೆ ಮೊದಲು ಗುರುತಿಸಕೊಳ್ಳಬೇಕು. ಪ್ರತಿಯೊಬ್ಬರಲ್ಲಿಯೂ ಒಂದಲ್ಲ ಒಂದು ಟ್ಯಾಲೆಂಟ್ ಇದ್ದೇ ಇರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಲು ಕಲಿತರೆ ಸಾಕು, ಯಾರ ಮುಂದೆ ಕೈಚಾಚುವ ಅವಶ್ಯಕತೆಯಿಲ್ಲ. ಯಾರ ಹತ್ತಿರವೂ ನೌಕರಿ ಕೇಳಬೇಕಿಲ್ಲ. ನೀವೇ ಅದಕ್ಕೆ ಯಜಮಾನರು ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಪ್ರತಿಭೆಯನ್ನು ಇನ್ನೊಬ್ಬರಿಗೆ ತಿಳಿಸಬೇಕಾಗಿದೆ. ಅದಕ್ಕೆ ಬೇಕಾಗಿರುವುದು ಮೊಬೈಲ್,  ನಿಮ್ಮ ಹೆಸರಿನ ಮೇಲೆ ಯೂಟೂಬ್ ಚಾಲನೆ ತೆಗದು ಅಪ್ಲೋಡ್ ಮಾಡಿದರೆ ಸಾಕು. ನೀವು ಮಾಡಿದ ವೀಡಿಯೋ ಸಾಕಷ್ಟು ಜನರಿಗೆ ಇಷ್ಟವಾಗುವಂತಿರಬೇಕು. ಆಗಮಾತ್ರ ನಿಮ್ಮ ವೀಡಿಯೋ ಲಕ್ಷಾಂತರ ಜನರಲ್ಲಿಗೆ ತಲುಪುತ್ತದೆ. ಒಳ್ಳೆಯ ಸಂದೇಶ ಚಿರಕಾಲ ಉಳಿಯುತ್ತದೆ. ಕೆಟ್ಟದ್ದು ಅಲ್ಪಕಾಲದಲ್ಲಿಯೇ ನಮ್ಮನ್ನು ಹಾಳುಮಾಡುತ್ತದೆ.

ಯೂಟೂಬ್ ಚಾನೆಲ್ ನಿಂದ ಹಣ ಗಳಿಸುವುದು ಹೇಗೆ?

ಯೂ ಟೂಬ್ ಚಾನೆಲ್ ತೆಗೆದನಂತರ ನೀವು ಅಲ್ಲಿ ವೀಡಿಯೋಗಳನ್ನು ಅಪ್ಲೋಡ್ ಮಾಡುತ್ತೀರಿ. ನಿಮ್ಮ ಸ್ನೇಹಿತರಿಗೆ ಶೇರ್ ಮಾಡುತ್ತೀರಿ. ಅದು ಅವರಿಗೆ ಇಷ್ಟವಾದರೆ ಅವರು ಇತರರಿಗೆ ಶೇರ್ ಮಾಡುತ್ತಾರೆ. ಯೂಟೂಬ್ ಚಾನೆಲ್ ನಿಂದ ಹಣ ಗಳಿಸಲು ಕನಿಷ್ಟ 1 ಸಾವಿರ ಜನ ನಿಮ್ಮ ಚಾನೆಲ್ಗೆ ಸಬ್ ಸ್ಕ್ರೈಬರ್ ಆಗಬೇಕು. 4 ಸಾವಿರ ಗಂಟೆ ವಾಚ್ ಟೈಬ್ ಅಂದರೆ ವೀಡಿಯೋ 4 ಸಾವಿರ ಗಂಟೆಗಳ ಕಾಲ ಜನ ನೋಡಿರಬೇಕು. ಓ… ಇದೆಲ್ಲಾ ಆಗಲ್ಲ ಅನ್ಕೋಬೇಡಿ,…ನಮ್ಮ ಸಾಮಾನ್ಯ ಜನರ ವೀಡಿಯೋ ಯಾರ್ ನೋಡ್ತಾರೆ ಎಂಬ ವಿಚಾರ ತಲೆಯಿಂದ ತೆಗೆದುಹಾಕಿ. ಪಾಸಿಟಿವ್ ಆಗಿ ವಿಚಾರಿಸಿ ಪ್ಲೀಸ್. ಖಂಡಿತವಾಗಿ ನೀವು ಸಕ್ಸೆಸ್ ಆಗುತ್ತೀರಿ…ನೀವು ನೋಡುವ ವೀಡಿಯೋಗಳನ್ನು ಒಮ್ಮೆ ವೀವ್ಸ್ ನೋಡಿ…. ಒಂದೆರಡು ದಿನಗಳಲ್ಲ ಕೆಲವು ವೀಡಿಯೋ ಲಕ್ಷಾಂತರ ಜನ ನೋಡಿರುತ್ತಾರೆ. ಅದೆನು ಮಹಾನ್ ವೀಡಿಯೋ ಇರುವುದಿಲ್ಲ. ಸಾಮಾನ್ಯವಾಗಿರುತ್ತದೆ. ಸಾಕಷ್ಟು ಜನರಿಗೆ ಉಪಯೋಗವಾಗುವಂತಿರುತ್ತದೆ. ನಿಮ್ಮ ಪ್ರತಿಭೆಯ ವೀಡಿಯೇ ಸಾಕಷ್ಟು ಜನರಿಗೆ ಇಷ್ಟವಾಗುವಂತಹದಿದ್ದರೆ ಒಂದೇ ವಾರದಲ್ಲಿ ಅದು 4 ಸಾವಿರ ತಾಸು ಜನ ನೋಡಿರುತ್ತಾರೆ ಇದರೊಂದಿಗೆ ಒಂದುಸಾವಿರ ಸಬ್ ಸ್ಕ್ರೈಬರೂ ಆಗುತ್ತಾರೆ.ನಿಮ್ಮಲ್ಲಿ ಪ್ರತಿಭೆ ಇರಬೇಕು. ಪಾಸಿಟಿವ್ ಆಗಿ ವಿಚಾರಿಸಬೇಕು. ಸುಮ್ಮನೆ ಯಾರೋ ಹೇಳಿದ್ದಾರೆಂದು ನೋಡೋಣವೆಂದು ವೀಡಿಯೋ ಮಾಡಿದರೆ ಆಗಲ್ಲ.

Google adsense ಗೆ ಕಳಿಸುವುದು ಹೇಗೆ?

ಒಂದು ಸಾವಿರ ಸಬ್ ಸ್ಕ್ರೈಬರ್, 4 ಸಾವಿರ ಗಂಟೆಗಳ ಕಾಲ ವೀಡಿಯೋ ಗಳನ್ನು ಜನ ನೋಡಿದ್ದ ಮೇಲೆ ನೀವು Google adsense ಗೆ ಅಪ್ಲೈ ಮಾಡಬೇಕು. ಇದಕ್ಕಾಗಿ ಯಾವುದೇ ಹಣ ಬೇಕಾಗಿಲ್ಲ. ನಿಮ್ಮ ಮನೆಗೆ ಗೂಗಲ್ ವೆರಿಫಿಕೇಷನ್ ಕೋಡ್ ಕಳಿಸಲಾಗುತ್ತದೆ. ಅದನ್ನು ನಿಮ್ಮ ಯೂಟೂಬ್ ಚಾನೆಲ್ ನಲ್ಲಿ ಸೇರಿಸಿದರೆ ಸಾಕು. ಆಗ ನಿಮ್ಮ ಚಾನೆಲ್ ನಲ್ಲಿ ಜಾಹೀರಾತುಗಳು ಬರುತ್ತವೆ. ಆಗ ನಿಮ್ಮ ಗಳಿಕೆ ಆರಂಭವಾಗುತ್ತದೆ. ಒಂದು ನೂರು ಡಾಲರ್ ಐತೆಂದರೆ ಸಾಕು ನಿಮ್ಮ ಖಾತೆಗೆ ಪ್ರತಿ ತಿಂಗಳು 24ರೊಳಗೆ ಹಣ ಜಮೆಯಾಗುತ್ತದೆ. ಆರಂಭದಲ್ಲಿ ಡಾಲರ್ ಅಮೌಂಟ್ ಹೆಚ್ಚಾಗುವುದರಲ್ಲಿ ಸಮಯ ತೆಗೆದುಕೊಳ್ಳಬಹುದು.  ನಿಮ್ಮ ಪ್ರತಿಭೆ ಲಕ್ಷಾಂತರ ಜನರಿಗೆ ತಲುಪಿದರೆ ನೀವು ಪ್ರತಿದಿನ ಮನೆಯಲ್ಲಿ ಕುಳಿತು ನಾಲ್ಕೈದು ತಾಸು ಒಳ್ಳೆಯ ವೀಡಿಯೋಗಾಗಿ ಪ್ರಿಪೇರ್ ಮಾಡಿದರೆ ಸಾಕು,  ಒಂದು ಲಕ್ಷಕ್ಕೂ ಹೆಚ್ಚು ಮನೆಯಲ್ಲಿಯೇ ಕುಳಿತು ಗಳಿಸಬಹುದು.ದೆ. ಇಲ್ಲಿ ನಾನು ವಿವರಿಸಿದ್ದು ಸುಳ್ಳೆಂದು ನಿಮಗೆ ಅನಿಸಿದರೆ.. ಯಾರಾದರೂ ನಿಮಗೆ ಪರಿಚಯಿಸ್ಥರ ಯೂಟೂಬ್ ಚಾನೆಲ್ ಇದ್ದರೆ ಅವರನ್ನು ಕೇಳಿ.. ಅಥವಾ ನೀವೇ ಯೂಟೂಬ್ ನಲ್ಲಿ ಹುಡುಕಿ. ಮನೆಯಲ್ಲಿಯೇ ಕುಳಿತು ಹಣ ಗಳಿಸುವುದು ಹೇಗೆ ಎಂದು ಟೈಪ್ ಮಾಡಿದರೆ ಸಾಕು, ಸಾಕಷ್ಟು ವೀಡಿಯೋಗಳು ನಿಮ್ಮ ಕಣ್ಮುಂದೆ ಇರುತ್ತದೆ.

Leave a Reply

Your email address will not be published. Required fields are marked *