ಹೆಸರು, ಲೋಗೋ, ಟ್ಯಾಗ್ ಲೈನ್ ಮಾಡಿ15 ಲಕ್ಷ ರೂಪಾಯಿ ಗೆಲ್ಲಿ

Written by By: janajagran

Updated on:

ಮನೆಯಲ್ಲಿಯೇ ಕುಳಿತು 15 ಲಕ್ಷ ರೂಪಾಯಿ ಗಳಿಸುವುದು ಹೇಗೆ? ಇದೇನು ಲಾಟರಿ ಅಂದುಕೊಂಡಿದ್ದೀರಾ. ಅಲ್ಲವೇ ಅಲ್ಲ. ನಿಮ್ಮಲ್ಲಿ ಕೌಶಲ್ಯವಿದ್ದರೆ 15 ಲಕ್ಷ ರೂಪಾಯಿ ಮನೆಯಲ್ಲಿಯೇ ಕುಳಿತು ಗೆಲ್ಲಬಹುದು. ಹೌದು, ಕೇಂದ್ರ ಸರ್ಕಾರವು ಇಂತಹದೊಂದು ಯೋಜನೆಯನ್ನು ತಂದಿದೆ. ಅದು ಯಾವ ಯೋಜನೆ ಅಂದುಕೊಂಡಿದ್ದೀರಾ. ಇಲ್ಲಿದೆ ಸಂಪೂರ್ಣ ಮಾಹಿತಿ.

ಮೂಲ ಸೌಕರ್ಯಕ್ಕೆ ಹಣ ಒದಗಿಸುವ ಸಲುವಾಗಿ ರಚಿಸಲಾದ ಹೊಸ ಅಭಿವೃದ್ಧಿ ಸಂಸ್ಥೆ (ಡಿಎಫ್ಐ)ಗಾಗಿ ಹೆಸರು, ಟ್ಯಾಗ್ ಲೈನ್ ಮತ್ತು ಲೋಗೋ ಮಾಡಿಕೊಟ್ಟರೆ ಸಾಕು. ಅತ್ಯುತ್ತಮವಾದುದನ್ನು ಆಯ್ಕೆ ಮಾಡಿ ಸರ್ಕಾರವು ವಿಜೇತರಿಗೆ 15 ಲಕ್ಷ ರೂಪಾಯಿ ನೀಡಲಾಗುವುದು ಎಂದು My gov india ಟ್ವೀಟ್ ಮಾಡಿದೆ. ಇದಕ್ಕಾಗಿ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧೆಯಲ್ಲಿ ಭಾಗವಹಿಸಲು ಆಗಸ್ಟ್ 15 ಕೊನೆಯ ದಿನವಾಗಿದೆ.

ಹಣಕಾಸು ಸೇವಾ ಇಲಾಖೆ, ಹಣಕಾಸು ಸಚಿವಾಲಯ, ಅಭಿವೃದ್ಧಿ ಹಣಕಾಸು ಸಂಸ್ಥೆ (ಡಿಎಫ್ಐ) ಸಂಸ್ಥೆಯ ಹೆಸರು, ಟ್ಯಾಗ್ ಲೈನ್ ಮತ್ತು ಅದರ ಲೋಗೋದ ಡಿಸೈನ್ ನ್ನು ಮಾಡಿಕೊಟ್ಟರೆ 15 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು.

ಆಸಕ್ತ ಅಭ್ಯರ್ಥಿಗಳು ಕೊಡುವ ಹೆಸರು, ಟ್ಯಾಗ್ ಲೈನ್ ಲೋಗೋವನ್ನು ಡಿಎಫ್ಐ ನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗಳಿಸಬೇಕು. ಹೆಸರು, ಟ್ಯಾಗ್ ಲೈನ್ ಹಾಗೂ ಲೋಗೋ ಅಭಿವೃದ್ಧಇ ಹಣಕಾಸು ಸಂಸ್ಥೆ ಸ್ಥಾಪನೆಯ ಹಿಂದಿನ ಉದ್ದೇಶವನ್ನು ಪ್ರತಿನಿಧಿಸಬೇಕು.  ಅದು ಏನು ಮಾಡುತ್ತದೆ/ಮಾಡಬಹುದು ಎಂಬುದರ ಸ್ಪಷ್ಟ ಸಂದೇಶ ಹೊಂದಿರಬೇಕು.ಇದೊಂದು ವರ್ಚುವಲ್ ಸಹಿಯಂತೆ ಇರಬೇಕು. ಉಚ್ಚರಿಸಲು ಸುಲಭವಿರಬೇಕು. ಹೆಸರು, ಟ್ಯಾಗ್ ಲೈನ್ ಗಳು ಮತ್ತು ಲೋಗೋ ಈ ಮೂರು ರೀತಿಯಲ್ಲಿ ಭಿನ್ನವಾಗಿರಬೇಕು. ಈ ಮೂರು ಅಂಶಗಳಲ್ಲಿ ಪ್ರತಿಯೊಂದು ತನ್ನದೇ ಆದ ನಿಲುವನ್ನು ಹೊಂದಿರಬೇಕು.

ಹೆಸರು, ಟ್ಯಾಗ್ ಮತ್ತು ಲೋಗೋ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಇರುತ್ತದೆ. ಹೆಸರಿಗೆ ಮೊದಲ ಸ್ಥಾನಕ್ಕೆ 5 ಲಕ್ಷ ರೂಪಾಯಿ, ಎಱಡನೇ ಸ್ಥಾನಕ್ಕೆ 3 ಲಕ್ಷ ರೂಪಾಯಿ ಮತ್ತು ಮೂರನೇ ಸ್ಥಾನಕ್ಕೆ 2 ಲಕ್ಷ ರೂಪಾಯಿ ಸಿಗುತ್ತದೆ.

ಟ್ಯಾಗ್ ಲೈನ್ ಗಾಗಿ  ಮೊದಲ ಸ್ಥಾನಹೊಂದಿದವರಿಗೆ 5 ಲಕ್ಷ ರೂಪಾಯಿ ಎರಡನೇ ಸ್ಥಾನ ಹೊಂದಿದವರಿಗೆ 3 ಲಕ್ಷ ರೂಪಾಯಿ ಮೂರನೇ ಸ್ಥಾನ ಹೊಂದಿದವರಿಗೆ 2 ಲಕ್ಷ ರೂಪಾಯಿ ಸಿಗುತ್ತದೆ.

ಲೋಗೋ ಮಾಡಿದವರಿಗೆ ಮೊದಲ ಬಹುಮಾನ 5 ಲಕ್ಷ ಎರಡನೇ ಬಹುಮಾನ 3 ಲಕ್ಷ ಹಾಗೂ ಮೂರನೇ ಬಹುಮಾನ 2 ಲಕ್ಷ ರೂಪಾಯಿ ಸಿಗಲಿದೆ.

ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮೊದಲು https://www.mygov.in/ ಲಿಂಕ್ ಮೇಲೆ ಕ್ಲಿಕಿ ಮಾಡಿದ ನಂತರ ವೆಬ್ ಪೇಜ್ ಓಪನ್ ಆಗುತ್ತದೆ ಆಗ ಅಲ್ಲಿ ರೆಜಿಸ್ಟ್ರೇಷನ್ ಮೇಲೆ ಕ್ಲಿಕ್ ಮಾಡಿ ನೋಂದಣಿ ಮಾಡಿದ ನಂತರ, ಎಂಟ್ರಿ ಖಚಿತಪಡಿಸಿಕೊಳ್ಳಬೇಕು. ನಂತರ

https://www.mygov.in/task/name-tagline-and-logo-contest-development-financial-institution/ ಈ ಲಿಂಕ್ ಮೇಲೆ ಕ್ಲಿಕ್ ಮಾಡಿ ಲಾಗಿಟ್ ಟು ಪಾರ್ಟಿಸಿಪೇಟ್ ಟ್ಯಾಬ್ ಮೇಲೆ ಕ್ಲಿಕ್ ಮಾಡಿದ ನಂತರ ನೋಂದಣಿ ವಿವರಗಳನ್ನು ಭರ್ತಿ ಮಾಡಬೇಕು.ಹೆಚ್ಚಿನ ಮಾಹಿತಿಗಾಗಿ https://www.mygov.in/task/name-tagline-and-logo-contest-development-financial-institution/ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.

Leave a Comment