ಪಿಎಂ ಕಿಸಾನ್ ನಿಮಗೆ ಜಮೆಯಾಗುತ್ತೋ ಇಲ್ಲವೋ? ಚೆಕ್ ಮಾಡಿ

Written by Ramlinganna

Updated on:

PM Kisan money be credited  ರೈತರಿಗೆ ಇನ್ನೂ ಮುಂದೆ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಕ್ಷಣಾರ್ಧದಲ್ಲಿ ತಮಗೆ ಮುಂದಿನ ಕಂತುಗಳು ಜಮೆಯಾಗುವುದರ ಕುರಿತು ಚೆಕ್ ಮಾಡಬಹುದು. ಇದಕ್ಕಾಗಿ ಯಾರ ಸಹಾಯವೂ ಬೇಕಿಲ್ಲ. ರೈತರೇ ಚೆಕ್ ಮಾಡಬಹುದು.

PM Kisan money be credited  ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಜಮೆಯಾಗುವುದೇ? ಚೆಕ್ ಮಾಡಿ

ರೈತರು ಪಿಎಂ ಕಿಸಾನ್ ಯೋಜನೆಯ ಹಣ ತಮಗೆ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು Enter Value  ಕೆಳಗಡೆ ಮೊಬೈಲ್ ನಂಬರ್ ಹಾಕಬೇಕು. Captcha Code ನಲ್ಲಿ ಅಲ್ಲಿ ಕಾಣುವ ಕ್ಯಾಪ್ಚ್ಯಾ ಕೋಡ್ ನ್ನು ಸರಿಯಾಗಿ ಹಾಕಬೇಕು.ಕ್ಯಾಪಿಟಲ್ ಲೆಟರ್ ನಲ್ಲಿದ್ದರೆ ಕ್ಯಾಪಿಟಲ್, ಸ್ಮಾಲ್ ಲೆಟರ್ ನಲ್ಲಿದ್ದರೆ ಸ್ಮಾಲ್ ಲೆಟರ್ ಅಲ್ಲ ಇದ್ದಹಾಗೆ  ಬರೆದು ಗೆಟ್ ಡಾಟಾ ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಹೆಸರು, ನಿಮ್ಮ ತಂದೆಯ ಹೆಸರು, ಸೇರಿದಂತೆ ರಾಜ್ಯ, ಜಿಲ್ಲೆ, ನಿಮ್ಮ ಗ್ರಾಮದ ಹೆಸರು ಕಾಣುತ್ತದೆ. ಆಧಾರ್ ಕಾರ್ಡ್ ಅಥೆಂಟಿಕೇಶನ್ ಸ್ಟೇಟಸ್ Success ಇರಬೇಕು.ಅದರ ಮುಂದೆ Yes ಇರಬೇಕು. ಎಲಿಜಿಬಿಲಿಟಿ Yes ಇರಲೇಬೇಕು. ಇದರೊಂದಿಗೆ Land Seedling ಎದುರುಗಡೆ Yes ಇದ್ದವರಿಗೆ ಮುಂದಿನ ಪಿಎಂ ಕಿಸಾನ್ ಯೋಜನೆಯ ಮುಂದಿನ  ಕಂತಿನ ಹಣ ಜಮೆಯಾಗುತ್ತದೆ. ಒಂದು ವೇಳೆ ಅಲ್ಲಿ ನೋ ಇದ್ದರೆ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗುವ ಸಾಧ್ಯತೆ ತುಂಬಾ ಕಡಿಮೆ ಇರುತ್ತದೆ.

ಇಲ್ಲಿಯವರೆಗೆ ನಿಮಗೆ ಎಷ್ಟು ಕಂತುಗಳು ಜಮೆಯಾಗಿದೆ? ಯಾವ ಬ್ಯಾಂಕಿನಲ್ಲಿ ಯಾವಾಗ ಜಮೆಯಾಗಿದೆ ಎಂಬುದರ ಸಂಪೂರ್ಣ ಮಾಹಿತಿಯೂ ಇರುತ್ತದೆ.

ನೀವು ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಹೊಂದಿದ್ದರೂ 12 ನೇ ಕಂತಿನ ಹಣ ನಿಮಗೆ ಜಮೆ ಮಾಡುವುದನ್ನು ತಡೆಹಿಡಿದಿದ್ದರೆ ಕೂಡಲೇ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಿ ಲ್ಯಾಂಡ್ ಸೀಡ್ಲಿಂಗ್ ಬಗ್ಗೆ ವಿಚಾರಿಸಿ ಸರಿಪಡಿಸಿಕೊಳ್ಳಬೇಕು.

ಪಿಎಂ ಕಿಸಾನ್ ಫಲಾನುಭವಿಗೆ ಯಾವ ತಿಂಗಳಲ್ಲಿ ಹಣ ಜಮೆಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ರೈತರಿಗೆ ಒಂದು ವರ್ಷದಲ್ಲಿ ಮೂರು ಕಂತುಗಳಲ್ಲಿ ಹಣ ಜಮೆಯಾಗುತ್ತದೆ. ಈ ಮೂರು ಕಂತುಗಳಲ್ಲಿ ತಲಾ 2 ಸಾವಿರ ರೂಪಾಯಿಯಂತೆ ಮೂರು ಕಂತುಗಳಲ್ಲಿ ಒಟ್ಟು 6 ಸಾವಿರ ರೂಪಾಯಿಯನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಪಿಎಂ ಕಿಸಾನ್ ಯೋಜನೆ ಆರಂಭವಾದಾಗಿನಿಂದ ಇಲ್ಲಿಯವರೆಗೆ 12 ಕಂತುಗಳನ್ನು ರೈತರ ಖಾತೆಗೆ ಜಮೆ ಮಾಡಲಾಗಿದೆ.

ಇದನ್ನೂ ಓದಿ : ಈ ರೈತರ ಖಾತೆಗೆ ಬೆಳೆ ಹಾನಿ ಪರಿಹಾರ ಹಾಗೂ ಬೆಳೆ ವಿಮೆ ಹಣ ಜಮೆ: ? ಇಲ್ಲೇ ಚೆಕ್ ಮಾಡಿ

ರೈತರು ಯಾವಾಗ ನೋಂದಣಿ ಮಾಡಿಸಿದ್ದಾರೋ ಆ ಆಧಾರದ ಮೇಲೆ ಕಂತುಗಳನ್ನು ಲೆಕ್ಕ ಮಾಡಲಾಗುತ್ತದೆ.  ರೈತರು ಪಿಎಂ ಕಿಸಾನ್ ಯೋಜನೆಗೆ ಇದೇ ತಿಂಗಳಲ್ಲಿ ನೋಂದಣಿ ಮಾಡಿಸಿದ್ದರೆ ಸರ್ಕಾರ ಬಿಡುಗಡೆ ಮಾಡುವ 13 ನೇ ಕಂತಿನ ಹಣ ರೈತರಿಗೆ  ಮೊದಲ ಕಂತಾಗಿರುತ್ತದೆ.

ಯಾವ ಯಾವ ತಿಂಗಳಲ್ಲಿ ಪಿಎಂ ಕಿಸಾನ್ ಹಣ ಜಮೆಯಾಗುತ್ತದೆ?

ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ರೈತರಿಗೆ ಏಪ್ರೀಲ್ – ಜುಲೈತಿಂಗಳ ಮಧ್ಯದಲ್ಲಿ ಒಂದನೇ ಕಂತಿನ ಹಣ ಜಮೆಯಾಗುತ್ತದೆ. ಅದೇ ರೀತಿ ಆಗಸ್ಟ್ – ನವೆಂಬರ್ ತಿಂಗಳ ಅವಧಿಯಲ್ಲಿ ಎರಡನೇ ಕಂತಿನ ಹಣ ಜಮೆಯಾಗುತ್ತದೆ. ಇದರೊಂದಿಗೆ ಡಿಸೆಂಬರ್ – ಮಾರ್ಚ್ ತಿಂಗಳ ಅವಧಿಯಲ್ಲಿ ಮೂರನೇ ಕಂತು ಜಮೆಯಾಗುತ್ತದೆ.

Leave a Comment