ಯಾವ ರೈತರಿಗೆ ಬೆಳೆ ಸಾಲಮನ್ನಾ ಆಗಿದೆ? ಯಾವ ರೈತರಿಗೆ ಬೆಳೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ? ಬೆಳೆ ಸಾಲಮನ್ನಾ ಏಕಾಗಿಲ್ಲ ಎಂಬುದರ ಕುರಿತು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ರೈತರು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಬೆಳೆ ಸಾಲ ಮನ್ನಾಕ್ಕೆ ಯಾವ ರೈತರಿಗೆಆಗಿಲ್ಲ ಹಾಗೂ ನಿಮಗೆಷ್ಟು ಬೆಳೆ ಸಾಲಮನ್ನಾ ಆಗಿದೆ ಎಂಬುದನ್ನು ಚೆಕ್ ಮಾಡಬಹುದು.
ಯಾವ ರೈತರಿಗೆ ಬೆಳೆ ಸಾಲ ಮನ್ನಾ ಆಗಿಲ್ಲ (croploan waive not get these farmers)
ಆದಾಯ ತೆರಿಗೆ ವ್ಯಾಪ್ತಿಗೆ ಸೇರಿದ ರೈತರಿಗೆ ಬೆಳೆ ಸಾಲಮನ್ನಾ ಆಗುವುದಿಲ್ಲ. ಕಳೆದ 3 ಮೌಲ್ಯಮಾಪನ ವರ್ಷಗಳಲ್ಲಿ ಯಾವುದಾದರೂ ಒಂದು ವರ್ಷ ಆದಾಯ ತೆರಿಗೆ ಪಾವತಿ ಮಾಡಿದವರಿಗೆ ನೀಡಲಾದ ಬೆಳೆ ಸಾಲ ಮನ್ನಾ ಆಗುವುದಿಲ್ಲ. ಪಿಂಚಣಿ ಯೋಜನೆಯಲ್ಲಿ ಅವರ ಹೆಸರಿರಬಾರದು. ಅಂದರೆ ತಿಂಗಳಿಗೆ 15 ಸಾವಿರಕ್ಕೂ ಹೆಚ್ಚಿನ ಪಿಂಚಣಿ ಪಡೆಯುವ ನಿವೃತ್ತ ವೇತನದಾರರಿಗೆ ನೀಡಲಾದ ರೈತರಿಗೆ ಬೆಳೆ ಸಾಲ ಮನ್ನಾ ಆಗುವುದಿಲ್ಲ. ವೈಯಕ್ತಿಕ ರೈತ ಕುಟುಂಬಗಳನ್ನು ಹೊರತುಪಡಿಸಿ ಎಲ್ಲಾ ಕಾನೂನುಬದ್ದ ಸಂಸ್ಥೆಗಳಿಗೆ ನೀಡಲಾದ ಬೆಳೆ ಸಾಲ ಮನ್ನಾ ಆಗುವುದಿಲ್ಲ. ಕಂಪನಿಗಳು ರೈತರಿಗೆ ನೀಡಲಾದ ಸಾಲಗಳು, ಟ್ರಸ್ಟ್ ಗಳು ಮತ್ತು ಪಾಲುದಾರಿಕೆ ಸಂಸ್ಥೆಗಳು ಬ್ಯಾಂಕುಗಳಿಂದ ಪಡೆದ ಸಾಲಗಳು ಮನ್ನಾ ಆಗುವುದಿಲ್ಲ. ಕೃಷಿ ಉತ್ಪನ್ನಗಳನ್ನು ಅಡವಿಟ್ಟುಕೊಂಡು ನೀಡಿರುವ ಸಾಲಗಳು ಮನ್ನಾ ಆಗುವುದಿಲ್ಲ. ಸರ್ಕಾರಿ, ಅರೆ ಸರ್ಕಾರಿ ಅಥವಾ ಅನುದಾನಿತ ಸಂಸ್ಥೆಗಳ ಮತ್ತು ಸಾರ್ವಜನಿಕ ವಲಯದ ಅಧೀನದಲ್ಲಿರುವ ನೌಕರರಿಗೆ ನೀಡಿದ ಬೆಳೆ ಸಾಲಗಳು ಮನ್ನಾ ಆಗುವುದಿಲ್ಲ.
ಬೆಳೆ ಸಾಲ ಮನ್ನಾಸ್ಟೇಟಸ್ ಚೆಕ್ ಮಾಡುವುದು ಹೇಗೆ? (Check crop loan wavier status)
ರೈತರು ತಮ್ಮ ಬೆಳೆ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಲು ಈ
https://clws.karnataka.gov.in/clws/pacs/citizenreport/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ crop loan waiver ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ಕಾರ್ಡ್ ನಂಬರ್ ಹಾಗೂ ರೇಶನ್ ಕಾರ್ಡ್ ನಂಬರ್ ಎರಡು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ರೈತರು ಆಧಾರ್ ಕಾರ್ಡ್ ನಂಬರ್ ನಮೂದಿಸಿ Fetch Report ಮೇಲೆ ಕ್ಲಿಕ್ಮಾಡಬೇಕು ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.
ಅಲ್ಲಿ ನಿಮ್ಮ ಜಿಲ್ಲೆ ತಾಲೂಕು, ಬ್ಯಾಂಕಿನ ಹೆಸರು ಕಾಣಿಸುತ್ತದೆ. ಯಾವ ಪ್ರಕಾರದ ಬೆಳೆ ಸಾಲವಿತ್ತು. ನಿಮ್ಮ ಆಧಾರ್ ಕಾರ್ಡ್ , ಪಡಿತರ ಚೀಟಿ ಪರಿಶೀಲಿಸಲ್ಪಟ್ಟಿದೆಯೋ ಇಲ್ಲವೋ ಎಂಬುದನ್ನು ಸಹ ನೀವು ಖಚಿತತೆ ಪಡೆಯಬಹುದು. ಬ್ಯಾಂಕಿನ ಬ್ರ್ಯಾಂಚ್ ನಿಮ್ಮ ಹೆಸರು ತಂದೆಯ ಹೆಸರು ಹಾಗೂ ಬ್ಯಾಂಕ್ ಅಕೌಂಟ್ ಸಹ ಕಾಣಿಸುತ್ತದೆ. ಅದರ ಮುಂದುಗಡೆ ನಿಮಗೆ 2017 ರ ಡಿಸೆಂಬರ್ 31 ರವರೆಗೆ ಎಷ್ಟು ಬೆಳೆ ಸಾಲವಿತ್ತು. ಅದರ ಕೆಳಗಡೆ ನಿಮಗೆ ಎಷ್ಟು ಬೆಳೆ ಸಾಲ ಮನ್ನಾ ಹಣ ಮಂಜೂರಾಗಿದೆ ಯಾವ ದಿನಾಂಕದಂದು ಮಂಜೂರಾಗಿದೆ ಎಂಬ ಮಾಹಿತಿ ಇರುತ್ತದೆ.
ಇದನ್ನೂ ಓದಿ : ನಿಮ್ಮ ಅಕ್ಕಪಕ್ಕದ ಜಮೀನು ಯಾರ ಹೆಸರಿನಿಂದ ಯಾರಿಗೆ ವರ್ಗಾವಣೆಯಾಗಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ
ಬೆಳೆಸಾಲಮನ್ನಾ ಘೋಷಣೆ ಮಾಡಿದಾಗಿನಿಂದ ಹಂತಹಂತವಾಗಿ ಸಾಲಮನ್ನಾ ಹಣ ರೈತರ ಖಾತೆಗೆ ಜಮೆ ಮಾಡಲಾಯಿತು. ಒಂದೇ ಹಂತದಲ್ಲಿ ಬೆಳೆ ಸಾಲ ಮನ್ನಾ ಹಣ ಜಮೆಯಾಗಿಲ್ಲ.2018 ರಲ್ಲಿ ಸಾಲಮನ್ನಾ ಘೋಷಣೆ ಮಾಡಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ 8165 ಕೋಟಿ ರೂಪಾಯಿ ಬೆಳೆ ಸಾಲಮನ್ನಾ ಆಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರವಿದ್ದಾಗ 22.27 ಲಕ್ಷ ರೈತರಿಗೆ ಬೆಳೆ ಸಾಲಮನ್ನಾ ಭಾಗ್ಯ ಸಿಕ್ಕಿದೆ.