ಮಹಿಳೆಯರೇಕೆ ಬೆಳ್ಳಿಯ ಕಾಲುಂಗುರ ಧರಿಸುತ್ತಾರೆ? ಇಲ್ಲಿದೆ ಮಾಹಿತಿ

Written by Ramlinganna

Updated on:

Why women wear anklets ತಮಗೆಲ್ಲಾ ಗೊತ್ತಿದ್ದ ಹಾಗೆ ಮದುವೆಯಾದ ಮಹಿಳೆಯರೆಲ್ಲರೂ ಕಾಲುಂಗುರ ಧರಿಸುತ್ತಾರೆ. ಮದುವೆಯಾದ ಮಹಿಳೆಯರಿಗೆ ಇದು ಕಡ್ಡಾಯವೂ ಆಗಿದೆ. ಆದರೆ ಬೆಳ್ಳಿಯ ಕಾಲುಂಗರ ಏಕೆ ಧರಿಸಬೇಕು? ಇದರಿಂದಿರುವ ವೈಜ್ಞಾನಿಕ ಸತ್ಯವೇನು? ಕಾಲುಂಗರ ಧರಿಸುವುದರಿಂದ ಮಹಿಳೆಯರಿಗಾಗುವ ಪ್ರಯೋಜನಗಳೇನು ಎಂಬುದರ ಸಂಪೂರ್ಣ ಮಾಹಿತಿಇಲ್ಲಿದೆ.

ಮಹಿಳೆಯರಿಗೆ ಹೇಳಿರುವ 16 ಬಗೆಯ ಶೃಂಗಾರಗಳಲ್ಲಿ ಕಾಲುಂಗುರ ಕೂಡ ಒಂದಾಗಿದೆ. ಮಹಿಳೆಯರು ಮದುವೆಯಾದ ನಂತರ ಎರಡು ಕಾಲಿನ ಹೆಬ್ಬೆರಳಿನ ಪಕ್ಕದ ಬೆರಳಿಗೆ ಕಾಲುಂಗುರ ಧರಿಸುತ್ತಾರೆ. ಬಹುತೇಕ ಮಹಿಳೆಯರು ಅಂದರೆ ಬಡವರಿಂದ ಹಿಡಿದು ಶ್ರೀಮಂತ ಕುಟುಂಬದ ಮಹಿಳೆಯರೂ ಸಹ ಹೆಚ್ಚಾಗಿ ಬೆಳ್ಳಿಯ ಕಾಲುಂಗರವನ್ನೇ ಧರಿಸುತ್ತಾರೆ. ಅದರಲ್ಲಿ ಬೇರೆ ಬೇರೆ ಡಿಸೈನ್ ಇರಬಹುದು. ಆದರೆ ಬೆಳ್ಳಿ ಕಾಲುಂಗರಕ್ಕೆ ಹೆಚ್ಚು ಮಹತ್ವವಿದೆ.

ಮದುವೆಯ ಹಲವು ಶಾಸನಗಳಲ್ಲಿ ಪತಿ ತನ್ನ ಪತ್ನಿಗೆ ಕಾಲುಂಗರ ತೊಡಿಸುವುದು ಸಂಪ್ರದಾಯವಾಗಿದೆ. ಕಾಲುಂಗುರದ ಆಧಾರದ ಮೇಲೆಯೆ ಮಹಿಳೆಗೆ ಮದುವೆ ಆಗಿದೆಯೋ ಇಲ್ಲವೋ ಎಂಬುದನ್ನು ಗುರುತಿಸಲಾಗುವುದು. ಕಾಲುಂಗುರ ಧರಿಸಿದ ಮಹಿಳೆಯನ್ನು ಸಮಾಜ ಗುರುತಿಸುವುದು ಸಹ ಇದೇ ಸಂಕೇತದಿಂದಾಗಿ.ಇದರಿಂದಾಗಿ ಮಹಿಳೆಗೆ ಸಹಜವಾಗಿ ಸಿಗುವ ಸಾಮಾಜಿಕ ಭದ್ರತೆಯೂ ಸಹ ಸಿಗುತ್ತದೆ.

ಕಾಲುಂಗುರದಿಂದ ಮಹಿಳೆಯರಿಗೆ ಸಿಗುವ ಆರೋಗ್ಯದ ಲಾಭಗಳು

ಸಂಪ್ರದಾಯ ಹಾಗೂ ಸಾಮಾಜಿಕ ಮಹಿತ್ವಕ್ಕಿಂತ ಹೆಚ್ಚಾಗಿ ಮಹಿಳೆಯರಿಗೆ ಕಾಲುಂಗುರದಿಂಗಾ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಲಾಭಗಳಿವೆ. ಆಯುರ್ವೇದದ ಪ್ರಕಾರ ಕಾಲಿನ ಎರಡನೇ ಬೆರಳಿನಿಂದ ಒಂದು ಪ್ರಮುಖ ನರವು ಗರ್ಭಕೋಶದ ಮೂಲಕ ಮೆದುಳಿಗೆ ಕನೆಕ್ಟ್ ಆಗಿರುತ್ತದೆ. ಕಾಲುಂಗುರವು ಆಕ್ಯುಪ್ರೇಶರ್ ರೀತಿ ಮಹಿಳೆಯರಿಗೆ ಕೆಲಸ ಮಾಡುತ್ತದೆ. ಇದರೊಂದಗೆ ರಕ್ತ ಚಲನೆಯನ್ನು ಸಹ ಕಾಲುಂಗುರ ಸರಳಗೊಳಿಸಿ ಗರ್ಭಕೋಶವನ್ನು ಆರೋಗ್ಯವಾಗಿರಿಸುತ್ತದೆ ಎಂಬದು ವೈದ್ಯರ ಅನಿಸಿಕೆಯಾಗಿದೆ.

ಇದನ್ನೂ ಓದಿ ಉದ್ಯೋಗಖಾತ್ರಿ Jobcard listನಲ್ಲಿ ನಿಮ್ಮ ಹೆಸರು ಇದೆ? ಇಲ್ಲೇ ಚೆಕ್ ಮಾಡಿ

ಕಾಲುಂಗುರ ಋತುಚಕ್ರವನ್ನು ನಿಯಮಿತಗೊಳಿಸುವ ಮೂಲಕ ಸಂತಾನಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಸಹ ಹೇಳಲಾಗುವುದು. ಬೆಳ್ಳಿಯು ಭೂಮಿಯಲ್ಲಿರುವ ಧ್ರುವೀಯ ಶಕ್ತಿಗಳನ್ನು ಮಹಿಳೆಯ ದೇಹಕ್ಕೆ ದಾಟಿಸುತ್ತದೆ. ಅದರಿಂದಾಗಿ ಮಹಿಳೆಯ ದೇಹ ಚೈತನ್ಯಶೀಲವಾಗಿರುತ್ತದೆ. ಹಾಗಾಗಿ ಕಾಲುಂಗುರ ಮಹಿಳೆಗೆ ಅಲಂಕಾರದ ಆಭರಣ ಅಷ್ಟೇ ಅಲ್ಲ, ಅದು ಮಹಿಳೆಯ ಆರೋಗ್ಯವನ್ನು ವೃದ್ಧಿಸುವ ಆಕೆಯ ಸಾಮಾಜಿಕ ಸ್ಥಾನಮಾನವನ್ನು ಗುರುತಿಸುವ ಋತುಚಕ್ರವನ್ನು ನಿಯಮಿತಗೊಳಿಸಲುವ ಹಾಗೂ ರಕ್ತದ ಪರಿಚಲನೆಯನ್ನು ಸುಗುಮಗೊಳಿಸುವ ಸಾಧನವಾಗಿದೆ. ಹಾಗಾಗಿ ಭಾರತದಲ್ಲಿ ಬಹುತೇಕ ಎಲ್ಲಾಸಮುದಾಯದ ಮಹಿಳೆಯರು ಬೆಳ್ಳಿಯ ಕಾಲುಂಗುರಗಳನ್ನು ಧರಿಸುತ್ತಾರೆ.

Why women wear anklets ಕಾಲುಂಗುರ ಏಕೆ ಧರಿಸುತ್ತಾರೆ? ನೀವೇನಂತಿರಾ? ಕಾಮೆಂಟ್ ಮಾಡಿ

ಕಾಲುಂಗುರ ಏಕೆ ಧರಿಸುತ್ತಾರೆ ಎಂಬುದರ ಬಗ್ಗೆ ನಿಮಗೇನಾದರೂ ಭಿನ್ನ ಮಾಹಿತಿ ಗೊತ್ತಿದ್ದರೆ  ಅಥವಾ ನೀವು ನಿಮ್ಮ ಹಿರಿಯರಿಂದ ಕೇಳಿದ್ದರೆ ತಾವು ಕಾಮೆಂಟ್ ಮಾಡಿ ತಿಳಿಸಬಹುದು.ಇಂದಹ ವೈಜ್ಞಾನಿಕ ಸತ್ಯಗಳುಳ್ಳ ಮಾಹಿತಿಗಳನ್ನು ಬರೆಯಲು ನಮಗೆ ಸ್ಪೂರ್ತಿ ಸಿಗುತ್ತದೆ.

ಬೆಳೆ ಕಾಲುಂಗಾರದ ಬದಲಾಗಿ ಇತ್ತೀಚೆಗೆ ಕೆಲವು ಶ್ರೀಮಂತ ಮಹಿಳೆಯರು ಬಂಗಾರದ ಕಾಲುಂಗರ ಧರಿಸುತ್ತಿರುವುದು ಕಾಣಿಸುತ್ತಿದೆ. ಹೌದು, ಉಳ್ಳುವರು ಬಂಗಾರವೇಕೆ ವಜ್ರದಿಂದ ತಯಾರಿಸಿದ ಕಾಲುಂಗುರ ಧರಿಸುತ್ತಾರೆ. ಯಾವುದೇ ಉಂಗುರ ಧರಿಸಲಿ ಅದಕ್ಕೆ ತನ್ನದೇ ಆದ ಇತಿಹಾಸವಿದೆ.

Leave a Comment