Jobcard list ನಲ್ಲಿ ನಿಮ್ಮ ಹೆಸರು ಇದೆ? ಇಲ್ಲೇ ಚೆಕ್ ಮಾಡಿ

Written by Ramlinganna

Updated on:

ಉದ್ಯೋಗ ಖಾತ್ರಿ Jobcard list ಗಾಗಿ ಅರ್ಜಿ ಸಲ್ಲಿಸಿದವರಿಗೆ ಇಲ್ಲಿದೆ ಸಂತಸದ ಸುದ್ದಿ. ತಮ್ಮ ಹೆಸರು ಲಿಸ್ಟ್ ನಲ್ಲಿರುವುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಯೂಟೂಬ್ ಚಾನೆಲ್ ಸಬಸ್ಕ್ರೈಬ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹೌದು,  ಗ್ರಾಮೀಣ ಪ್ರದೇಶವಷ್ಟೇ ಅಲ್ಲ, ನಗರ ಪ್ರದೇಶದಲ್ಲಿಯೂ ಕೃಷಿ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿರುತ್ತಾರೆ. ಆದರೆ ಇತ್ತೀಚೆಗೆ ಬಹಳಷ್ಟು ಫಲಾನುಭವಿಗಳ ಹೆಸರುಗಳನ್ನು ಜಾಬ್ ಕಾರ್ಡ್ ಲಿಸ್ಟ್ ನಿಂದ ತೆಗೆದುಹಾಕಲಾಗುತ್ತಿದೆ ಎಂಬ ಮಾಹಿತಿಗಳು ಕೇಳಿಬರುತ್ತಿವೆ. ಹಾಗಾಗಿ ಯಾರು ಜಾಬ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸಿದ್ದಾರೋ ಅವರು ಜಾಬ್ ಕಾರ್ಡ್ ಲಿಸ್ಟ್ ನಲ್ಲಿ ತಮ್ಮ ಹೆಸರಿರುವುದನ್ನು ಚೆಕ್ ಮಾಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ… ಇಲ್ಲಿದೆ ನೋಡಿ ಮಾಹಿತಿ.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿಯಲ್ಲಿ ಜಾಬ್ ಕಾರ್ಡ್ ಹೊಂದಿರುವವ ಕೃಷಿ ಕೂಲಿ ಕಾರ್ಮಿಕರಿಗೆ ಕೆಲಸ ನೀಡಲಾಗುವುದು.

Jobcard list ಲಿಸ್ಟ್ ನಲ್ಲಿ ಹೆಸರು ಚೆಕ್ ಮಾಡುವುದು ಹೇಗೆ?

ಗ್ರಾಮೀಣ ಪ್ರದೇಶದ ಕೂಲಿ ಕಾರ್ಮಿಕರು ಜಾಬ್ ಕಾರ್ಡ್ ಲಿಸ್ಟ್ ನಲ್ಲಿ ತಮ್ಮ ಹೆಸರಿನೊಂದಿಗೆ ಕುಟುಂಬದ ಯಾವ ಯಾವ ಸದಸ್ಯರ ಹೆಸರು ಸೇರ್ಪಡೆ ಮಾಡಲಾಗಿದೆ ಎಂಬುದನ್ನು ಚೆಕ್ ಮಾಡಲು ಈ

https://nregastrep.nic.in/netnrega/loginframegp.aspx?salogin=Y&state_code=15

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಮಹಾತ್ಮಗಾಂಧಿ ನ್ಯಾಶನಲ್ ರೂರಲ್ ಎಂಪ್ಲಾಯಮೆಂಟ್ ಗ್ಯಾರೆಂಟಿ ಆ್ಯಕ್ಟ್ ಪೇಜ್ ಓಪನ್ ಆಗುತ್ತದೆ.ಅಲ್ಲಿ ಕರ್ನಾಟಕ ರಾಜ್ಯ ಕಾಣಿಸುತ್ತದೆ.  ಫೈನಾನ್ಸ್ ಇಯರ್ ಎದುರುಗಡೆ  ಪ್ರಸಕ್ತ ವರ್ಷ 2023-2024 ಆಯ್ಕೆ ಮಾಡಿಕೊಳ್ಳಬೇಕು. ಡಿಸ್ಟ್ರಿಕ್ಟ್ ಎದುರುಗಡೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ಬ್ಲಾಕ್ ಎದುರುಗಡೆ ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಪಂಚಾಯತ್ ಎದುರುಗಡೆ ನಿಮ್ಮ ಗ್ರಾಮ ಪಂಚಾಯತ್ ಆಯ್ಕೆಮಾಡಿಕೊಳ್ಳಬೇಕು. ನಂತರ proceed  ಮೇಲೆ ಕ್ಲಿಕ್ ಮಾಡಬೇಕು. ಆಗ ಮತ್ತೊಂದು ಪೇಜ್ ತೆರೆದುಕೊಳ್ಳುತ್ತದೆ.

ಜಾಬ್ ಕಾರ್ಡ್ ರೆಜಿಸ್ಟ್ರೇಶನ್ ಕೆಳಗಡೆ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ Job card Employment Register ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿದ ಗ್ರಾಪಂ ವ್ಯಾಪ್ತಿಯಲ್ಲಿ ಎಷ್ಟು ಜನರು ಜಾಬ್ ಕಾರ್ಡ್ ಗಾಗಿ ನೋಂದಣಿ ಮಾಡಿಸಿದ್ದಾರೋ ಅವರ ಜಾಬ್ ಕಾರ್ಡ್ ನಂಬರ್ ನೊಂದಿಗೆ ಅವರ ಹೆಸರು ಕಾಣಿಸುತ್ತದೆ.

ಇದನ್ನೂ ಓದಿ ನಿಮ್ಮ ಜಮೀನಿಗೆ ಹೋಗುವ ಕಾಲುದಾರಿ ಬಂಡಿದಾರಿ ಮೊಬೈಲ್ ನಲ್ಲೇ ನೋಡಿ

ಇಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಕೆಳಗಡೆ ನೋಡುತ್ತಾ ಹೋಗಬೇಕು. ನಿಮ್ಮ ಹೆಸರು  ಹಿಂದುಗಡೆಯಿರುವ ಜಾಬ್ ಕಾರ್ಡ್ ನಂಬರ್ ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮ್ಮ ಹೆಸರಿನ ಜಾಬ್ ಕಾರ್ಡ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ  ಹೆಸರು, ತಂದೆಯ/ಪತಿಯ ಹೆಸರು, ಕೆಟಗೇರಿ, ನಿಮ್ಮ ವಿಳಾಸ ತಾಲೂಕು, ಜಿಲ್ಲೆ, ಬಿಪಿಎಲ್ ಕಾರ್ಡ್ ನಂಬರ್ ಕಾಣಿಸುತ್ತದೆ.

Jobcard list ದಿಂದ ಎಷ್ಟು ದಿನ ಎಲ್ಲಿ  ಕೆಲಸ ಮಾಡಿದ್ದೀರಿ?

ಜಾಬ್ ಕಾರ್ಡ್ ದಿಂದಾಗಿ ನೀವು ಯಾವ ತಿಂಗಳಲ್ಲಿ ಎಷ್ಟು ದಿನ ಕೆಲಸ ಮಾಡಿದ್ದೀರಿ.  ಇದರೊಂದಿಗೆ ಯಾವ ಕಾಮಗಾರಿ ಕೆಲಸಗಳನ್ನು ಮಾಡಿದ್ದೀರಿ ಎಂಬ ಮಾಹಿತಿಯನ್ನು ಚೆಕ್ ಮಾಡಬಹುದು.

ಉದ್ಯೋಗ ಖಾತ್ರಿ ನರೇಗಾ  ಕೂಲಿ ಹೆಚ್ಚಳ

ಗ್ರಾಮೀಣ ಪ್ರದೇಶದ ಬಡ ಕುಟುಂಬಗಳ ಆದಾಯವನ್ನು ಹೆಚ್ಚಿಸಲು  ಕೇಂದ್ರ ಸರ್ಕಾರದ ಮನರೇಗಾ ಯೋಜನೆಯನ್ನು ಪ್ರಾರಂಭಿಸಿದೆ ಈಗ ಈ ಯೋಜನೆಯಡಿಯಲ್ಲಿ ನೀಡುವ ದಿನಗೂಲಿ ಹೆಚ್ಚಿಸಲಾಗಿದೆ. ಹೌದು,  ಕರ್ನಾಟಕದಲ್ಲಿ 309 ರೂಪಾಯಿಯಿಂದ 316 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ..

Leave a Comment