who will get pm kisan money ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಅಂದರೆ 14ನೇ ಕಂತು ನಿಮ್ಮ ಖಾತೆಗೆ ಜಮೆಯಾಗುತ್ತೋ ಇಲ್ಲವೋ ಎಂಬುದನ್ನು ರೈತರು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.
ಹೌದು, ದಿನದಿಂದ ದಿನಕ್ಕೆ ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಯೋಜನೆಯ ಕಂತು ಜಮೆ ಮಾಡುತ್ತಿಲ್ಲ. ಒಬ್ಬೊಬ್ಬ ರೈತರಿಗೆ ಒಂದೊಂದು ಕಾರಣಗಳನ್ನು ನೀಡಿ ಪಿಎಂ ಕಿಸಾನ್ ಯೋಜನೆಯ ಕಂತಿನ ಹಣ ತಡೆಹಿಡಿಯಲಾಗುತ್ತಿದೆ. ಆದರೆ ಬಹುತೇಕ ರೈತರಿಗೆ ಯಾವ ಕಾರಣಕ್ಕಾಗಿ ತಮ್ಮ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗುತ್ತಿದೆ ಎಂಬುದು ಗೊತ್ತಾಗುತ್ತಿಲ್ಲ.
ಪಿಎಂ ಕಿಸಾನ್ ಯೋಜನೆಯ ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಿದರೆ ಸ್ವೀಕರಿಸುವುದಿಲ್ಲ. ರೈತ ಸಂಪರ್ಕ ಕೇಂದ್ರ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳಿಗೂ ಕರೆ ಮಾಡಿದರೂ ಯಾವ ಕಾರಣಕ್ಕಾಗಿ ತಡೆಹಿಡಿಯಲಾಗಿದೆ ಎಂಬುದರ ಕುರಿತು ಮಾಹಿತಿ ಹೇಳುತ್ತಿಲ್ಲವೆಂದು ಹಲವಾರು ರೈತರ ಆಕ್ರೋಶವಾಗಿದೆ.
ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗಿದೆ ಎಂಬುದರ ಕುರಿತು ಗೊತ್ತಾದರೆ ಸಂಬಂಧಿಸಿದ ದಾಖಲೆಯಾಗಲಿ ಅಥವಾ ಇನ್ನ್ಯಾವ ಕಾರಣ ಹೇಳಿದರೆ ಅದಕ್ಕೆ ಸರಿಪಡಿಸಬಹುದು ಎಂದು ರೈತರು ಕರೆ ಮಾಡಿ ಮನವಿ ಮಾಡುತ್ತಿದ್ದಾರೆ.
who will get pm kisan money ಪಿಎಂ ಕಿಸಾನ್ ಹಣ ನಿಮಗೆ ಜಮೆಯಾಗುತ್ತೋ ಇಲ್ಲವೋ ಹೀಗೆ ಚೆಕ್ ಮಾಡಿ
ರೈತರು ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಜಮೆಯಾಗುತ್ತೋ ಇಲ್ಲವೋ ಎಲ್ಲಾ ಮಾಹಿತಿ ಸರಿಯಿದೆಯೋ ಎಂಬುದನ್ನು ಚೆಕ್ ಮಮಾಡಲು ಈ
https://pmkisan.gov.in/BeneficiaryStatus.aspx
ಲಿಂಕ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಅಗ ಅಲ್ಲಿ ತೆರೆದುಕೊಳ್ಳುವ ಪೇಜ್ ನಲ್ಲಿ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ ಅಲ್ಲಿ ಕಾಣುವ ಕ್ಯಾಪ್ಚ್ಯಾಕೋಡ್ ನ್ನು ಸರಿಯಾಗಿ ನಮೂದಿಸಿ ಗೆಟ್ ಡಾಡಾ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮಗೆ ಇನ್ನಷ್ಟು ಮಾಹಿತಿಗಳು ಕಾಣಿಸುತ್ತವೆ. ಇಲ್ಲಿ ನಿಮಗೆ ಇಲ್ಲಿಯವರೆಗೆ ಎಷ್ಟು ಕಂತುಗಳು ಜಮೆಯಾಗಿದೆ. ಹಾಗೂ ನಿಮ್ಮ ಎಲ್ಲಾ ಮಾಹಿತಿಗಳು ಸರಿಯಾಯಾಗಿದೆಯೋ ಇಲ್ಲವೋ ಎಂಬುದರ ಕುರಿತು ಇಲ್ಲೇ ಚೆಕ್ ಮಾಡಬಹುದು.
ಯಾವ ಯಾವ ಮಾಹಿತಿ ಸರಿಯಿರಬೇಕು?
ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತು ಜಮೆಯಾಗಬೇಕಾದರೆ ಆಧಾರ್ ಡೆಮೋ ಅಥೆಂಟಿಕೇಶನ್ ಸ್ಟೇಟಸ್ ಎದುರುಗಡೆ ಸಕ್ಸೆಸ್ ಇರಬೇಕು. ಇದ ಮುಂದುಗಡೆ ಇಕೆವೈಸಿ ಡನ್ ಮುಂದೆಯೂ ಯಸ್ ಇರಬೇಕು. ಇದಾದನಂತರ ಎಲಿಜಿಬಿಲಿಟಿ ಎದುರುಗಡೆ ಯಸ್ ಇರಬೇಕು. ಅಂದರೆ ನೀವು ಪಿಎಂ ಕಿಸಾನ್ ಯೋಜನೆಯ ಅರ್ಹತೆ ಹೊಂದಿದ್ದೀರೋ ಇಲ್ಲವೋ ಎಂಬ ಮಾಹಿತಿ ಇಲ್ಲಿ ಗೊತ್ತಾಗುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಹಳೆಯ ಪಹಣಿಗಳನ್ನು (ಉತಾರ) ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ
ಇದರೊಂದಿಗೆ ಪಿಎಫ್ಎಮ್ಎಸ್ ಬ್ಯಾಂಕ್ ಸ್ಟೇಟಸ್ ಎದುರುಗಗಡೆ ಫಾರ್ಮರ್ ರಿಕಾರ್ಡ್ ಹ್ಯಾಸ್ ಬಿನ್ ಎಕ್ಸಪಟೇಡ್ ಎಂಬ ಮಾಹಿತಿ ಇರಬೇಕು. ನಂತರ ಅತೀ ಮುಖ್ಯವಾದದ್ದು ಲ್ಯಾಂಡ್ ಸೀಡಿಂಗ್ ಎದುರುಗಡೆ ಎಸ್ ಇರಲೇಬೇಕು. ಈ ಎಲ್ಲಾ ಮಾಹಿತಿಗಳು ಸರಿಯಿದ್ದರೆ ಮಾತ್ರ ನಿಮಗೆ ಮುಂದಿನ ಕಂತು ಜಮೆಯಾಗುತ್ತದೆ.
ಎಲ್ಲಾ ಮಾಹಿತಿ ಸರಿಯಿದ್ದರೂ ಈ ದಾಖಲೆ ಪರಿಶೀಲಿಸಿ
ಮೇಲಿನ ಎಲ್ಲಾ ಮಾಹಿತಿಗಳು ಸರಿಯಿದ್ದರೂ ಸಹ ನಿಮಗೆ ಜಮೆಯಾಗುತ್ತಿಲ್ಲವಾದರೆ ನಿಮ್ಮ ಬ್ಯಾಂಕ್ ಅಕೌಂಟ್ ಪಾಸ್ ಬುಕ್, ಆಧಾರ್ ಕಾರ್ಡ್ ಹಾಗೂ ಜಮೀನಿನ ಪಹಣಿಗಳಲ್ಲಿ ಹೆಸರು ಒಂದೇ ಆಗಿದ್ದೆಯೋ ಅಥವಾ ಒಂದು ದಾಖಲೆಯಲ್ಲಿ ಇನ್ನೊಂದು ದಾಖಲೆಗೆ ಹೋಲಿಕೆಯಾಗುತ್ತಿಲ್ಲವೆೋ ಅಂದರೆ ನಿಮ್ಮ ಹೆಸರು, ತಂದೆಯ ಹೆಸರು ಹಾಗೂ ಸರ್ ನೇಮ್ ನಲ್ಲಿ ವ್ಯತ್ಯಾಸವಿದ್ದರೆ ನಿಮಗೆ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗುವುದು. ಎಲ್ಲಾ ದಾಖಲೆಗಳಲ್ಲಿ ಹೆಸರು ಒಂದೇ ರೀತಿಯಾಗಿದ್ದರೂ ಮಾಹಿತಿ ಸರಿಯಿದ್ದರೂ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗಿದ್ದರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಕೃಷಿ ಇಲಾಖೆಗೆ ಸಂಪರ್ಕಿಸಿ ವಿಚಾರಿಸಬಹುದು.