ನಿಮ್ಮ ಹಳೆಯ ಪಹಣಿ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ

Written by Ramlinganna

Updated on:

Check your old land records ರೈತರು ಮನೆಯಲ್ಲಿಯೇ ಕುಳಿತು ಯಾರ ಸಹಾಯವೂ ಇಲ್ಲದೆ ಒಂದೇ ನಿಮಿಷದಲ್ಲಿ ಜಮೀನಿನ ಹಳೆಯ ಪಹಣಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು.

ಹೌದು, ರೈತರು ಬಳಿಯಿಸುವ ಸ್ಮಾರ್ಟ್ ಫೋನ್ ನಲ್ಲೇ ಹಳೆಯ ಪಹಣಿಗಳನ್ನು ವೀಕ್ಷಿಸಬಹುದು. ಅದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

Check your old land records ಹಳೆಯ ಪಹಣಿ ಮೊಬೈಲ್ ನಲ್ಲಿ ಪಡೆಯುವುದು ಹೇಗೆ?

ರೈತರು ಹಳೆಯ ಪಹಣಿಯನ್ನು ಮೊಬೈಲ್ ನಲ್ಲಿ ಪಡೆಯಲು ಈ

https://landrecords.karnataka.gov.in/Service2/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ನಿಮಗೆ ಕಂದಾಯ ಇಲಾಖೆಯ ಜಮೀನಿನ ದಾಖಲೆಗಳನ್ನು ಚೆಕ್ ಮಾಡುವ ಪೇಜ್ ತೆರೆದುಕೊಳ್ಳುತ್ತದೆ.

ಅಲ್ಲಿ ನಿಮಗೆ ಕರೆಂಟ್ ಇಯರ್, ಓಲ್ಡ್ ಇಯರ್, ಎಮ್ಆರ್, ಮುಟೇಶನ್ ಸ್ಟೇಟಸ್, ಖಾತಾ ಎಕ್ಸಟ್ರ್ಯಾಕ್ಟ್, ಸರ್ವೆ ಡಾಕುಮೆಂಟ್ ಹಾಗೂ ಆಕಾರಬಂದ್ ಹೀಗೆ ಆಯ್ಕೆಗಳು ಕಾಣಿಸುತ್ತವೆ. ಅದರಲ್ಲಿ ನೀವು Old Year ಮೇಲೆ ಕ್ಲಿಕ್ ಮಾಡಬೇಕು.

ಸೆಲೆಕ್ಟ್ ಸರ್ವೆ ನಂಬರ್ ಕೆಳಗಡೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಹೋಬಳಿ ಸೆಲೆಕ್ಟ್ ಮಾಡಿದ ನಂತರ ನಿಮ್ಮ ಗ್ರಾಮ ಸೆಲೆಕ್ಟ್ ಮಾಡಬೇಕು. ಆಮೇಲೆ ನಿಮ್ಮ ಸರ್ವೆ ನಂಬರ್ ನಮೂದಿಸಿದ ನಂತರ Go ಮೇಲೆ ಕ್ಲಿಕ್ ಮಾಡಲೇಬೇಕು. ನಂತರ Surnoc ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು.

ಹಿಸ್ಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಪಿರಿಯಡ್ ನಲ್ಲಿ ನಿಮ್ಮ ಪಹಣಿ ಎಷ್ಟು ವರ್ಷ ಹಳೆಯ ಪಹಣಿಯನ್ನು ಚೆಕ್ ಮಾಡಬಹುದು ಎಂಬ ಆಯ್ಕೆಗಳು ಕಾಣಿಸುತ್ತವೆ. ನಂತರ ಇಯರ್ ನಲ್ಲಿಯೂ ನೀವು ಯಾವ ವರ್ಷದಿಂದ ಪಹಣಿ ಚೆಕ್ ಮಾಡಬೇಕೆಂದುಕೊಂಡಿದ್ದೀರೋ ಆ ವರ್ಷ ಆಯ್ಕೆ ಮಾಡಿಕೊಳ್ಳಬೇಕು.  ನಂತರ Fetch details ಮೇಲೆ ಕ್ಲಿಕ್ ಮಾಡಬೇಕು.

ಇದನ್ನೂ ಓದಿ ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಸರ್ವೆ ನಂಬರ್ ಏನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಆಗ ನೀವು ಆಯ್ಕೆ ಮಾಡಿದ ಸರ್ವೆ ನಂಬರಿನಲ್ಲಿ ಯಾವ ಯಾವ ಜಮೀನು ಮಾಲಿಕರು ಬರುತ್ತಾರೆ. ಎಂಬ ಪಟ್ಟಿಕಾಣಿಸುತ್ತದೆ. ನಂತರ ನೀವು View  ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿದ ಸರ್ವೆ ನಂಬರಿನ  ಪಹಣಿ ತೆರೆದುಕೊಳ್ಳುತ್ತದೆ.

ಪಹಣಿಯಲ್ಲಿಏನೇನು ಮಾಹಿತಿ ಇರುತ್ತದೆ? (in land records what are information will be there)

ಓಪನ್ ಆಗಿದ್ದ ಪಹಣಿಯ (ಉತಾರ) ನಲ್ಲಿ ನೀವು ಯಾವ ವರ್ಷದಿಂದ ಆಯ್ಕೆ ಮಾಡಿದ್ದೀರೋ ಆ ವರ್ಷದಿಂದ ಇಲ್ಲಿಯವರೆಗೆ ಎಂದು ಮೇಲ್ಗಡೆ ನಮೂದಾಗಿರುತ್ತದೆ. ಅದರ ಕೆಳಗಡೆ ನಿಮ್ಮ ಸರ್ವೆ ನಂಬರ್, ಆ ಸರ್ವೆ ನಂಬರ್ ನಲ್ಲಿ ಎಷ್ಟು ಎಕರೆ ಜಮೀನಿದೆ ಆ ಹಿಸ್ಸಾ ನಂಬರ್ ನಲ್ಲಿ ಜಮೀನಿನ ಮಾಲಿಕರು ಯಾರ್ಯಾರು ಇದ್ದಾರೆ ಅವರ ಹೆಸರು ತಂದೆಯ ಹೆಸರು ಕಾಣಿಸುತ್ತದೆ.

ಇದರೊಂದಿಗೆ  ಅವರ ಹೆಸರಿಗೆ ಎಷ್ಟೆಷ್ಟು ಎಕರೆ ಜಮೀನಿದೆ ಎಂಬ ಮಾಹಿತಿಯೊಂದಿಗೆ ಖಾತಾ ನಂಬರ್ ಸಹ ಕಾಣಿಸುತ್ತದೆ. ಅದು ಮುಂದುಗಡೆ ಮುಟೇಶನ್ ವಿವರ ಇರುತ್ತದೆ.

ಮುಂಗಾರು ಮತ್ತು ಹಿಂದಾಗುರ ಹಂಗಾಮಿಗೆ ಯಾವ ಬೆಳೆ ಬಿತ್ತಲಾಗಿದೆ. ಎಂಬುದರೊಂದಿಗೆ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ.  ಈ ಪಹಣಿಯು ವೀಕ್ಷಿಸುವುದಕ್ಕಾಗಿ ಇರುತ್ತದೆ. ಇದನ್ನು ನಿಮ್ಮ ಮಾಹಿತಿಗೆ ಡೌನ್ಲೋಡ್ ಮಾಡಿಕೊಳ್ಳಬಹುದು.

ಆದರೆ ಓರಿಜಿನಲ್ ಪಹಣಿ ಬೇಕಾದರೆ ನೀವು ಅದಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ. ಶುಲ್ಕ ಪಾವತಿಸಿ ಓರಿಜಿನಲ್ ಪಹಣಿ ಡೌನ್ಲೋಡ್ ಮಾಡಿಕೊಂಡು ಹತ್ತಿರದ ಝರಾಕ್ಸ್ ಅಂಗಡಿಗಳಲ್ಲಿ ಪ್ರಿಂಟ್ ತೆಗೆದುಕೊಳ್ಳಬಹುದು.

Leave a Comment