Which farmer eligible for crop insurance ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಿದ ರೈತರಲ್ಲಿ ಕೆಲವು ರೈತರಿಗೆ ಜಮೆಯಾಗುತ್ತದೆ. ಇನ್ನೂ ಕೆಲವು ರೈತರಿಗೇಕೆ ಜಮೆಯಾಗುವುದಿಲ್ಲ? ನಿಮಗೆ ಗೊತ್ತೇ?
ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ರೈತರು ತಮ್ಮ ಬೆಳೆಗಳಿಗೆ ವಿಮೆ ಮಾಡಿಸುತ್ತಾರೆ. ಆದರೆ ವಿಮೆ ಮಾಡಿಸಿದ ಮಾತ್ರಕ್ಕೆ ವಿಮೆ ಹಣ ಜಮೆಯಾಗುವುದಿಲ್ಲ. ಬೆಳೆ ವಿಮೆ ಮಾಡಿಸಿದ ನಂತರ ರೈತರೇನು ಮಾಡಬೇಕು? ಯಾರಿಗೆ ಸಂಪರ್ಕಿಸಬೇಕು? ಬೆಳೆ ವಿಮೆ ಹೇಗೆ ನಿರ್ಧರಿಸುತ್ತಾರೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಮೊದಲು ಬೆಳೆ ವಿಮೆ ಎಂದರೇನು? ರೈತರೇಕೆ ಬೆಳೆ ವಿಮೆ ಮಾಡಿಸಬೇಕೆಂಬುದರ ಬಗ್ಗೆ ತಿಳಿದುಕೊಳ್ಳೋಣ.
ಬೆಳೆ ವಿಮೆ ಎಂದರೇನು?
ಮನುಷ್ಯರು, ಜಾನುವಾರು ಹಾಗೂ ವಾಹನಗಳಿಗಿರುವಂತೆ ಬೆಳೆಗಳಿಗೂ ವಿಮೆ ಇರುತ್ತದೆ. ಅಂದರೆ ಪ್ರಾಕೃತಿಕ ವಿಕೋಪಪದಿಂದಾಗಿ ಬೆಳೆ ಹಾಳಾದಾಗ ರೈತರಿಗೆ ಆರ್ಥಿಕ ಸಂಕಷ್ಟ ಎದುಗಾರಬಾರದು. ರೈತರಿಗೆ ಆರ್ಥಿಕ ಸಹಾಯ ನೀಡುವುದಕ್ಕಾಗಿ ಪ್ರಧಾನನಮಂತ್ರಿ ಫಸಲಿ ಬಿಮಾ ಯೋಜನೆ ಜಾರಿಗೆ ತರಲಾಗಿದೆ. ಇದನ್ನೇ ಬೆಳೆ ವಿಮೆ ಎನ್ನಬಹುದು.
Which farmer eligible for crop insurance ರೈತರೇಕೆ ಬೆಳೆ ವಿಮೆ ಮಾಡಿಸಬೇಕು?
ರೈತರು ಕಷ್ಟಪಟ್ಟು ಜಮೀನನ್ನು ಹರಗಿ ಬಿತ್ತನೆ ಮಾಡುತ್ತಾರೆ. ಮೊಳಕೆ ಒಡೆದ ನಂತರ ಜೋಪಾನವಾಗಿ ಬೆಳೆಗಳನ್ನು ನೋಡಿಕೊಳ್ಳುತ್ತಾರೆ. ಆದರೆ ಪ್ರಾಕೃತಿಕ ವಿಕೋಪಗಳಾದ ಅತೀವೃಷ್ಟಿ, ಸಿಡಿಲು ಗುಡುಗು, ಭೂ ಕುಸಿತ, ಪ್ರವಾಹಹಿಂದಾಗಿ ಬೆಳೆ ಹಾಳಾದಾಗ ರೈತರಿಗೆ ಸಹಾಯವಾಗಲು ಮುಂದೆ ಬರುತ್ತದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಮೇಲೆ ನಿಮಗೆ ಗೊತ್ತಿಲ್ಲದೆ ಬೆಳೆ ಸಾಲ ಪಡೆಯಲಾಗಿದೆಯೇ? ಇಲ್ಲೇ ಚೆಕ್ ಮಾಡಿ
ಬೆಳೆ ವಿಮೆ. ರೈತರು ಬೆಳೆ ವಿಮೆ ಮಾಡಿಸಿದರೆ ಮಾತ್ರ ಅವರಿಗೆ ನಷ್ಟದ ಪ್ರಮಾಣ ನೋಡಿ ವಿಮೆ ಹಣ ಪಾವತಿಸಲಾಗುವುದು. ಹಾಗಾಗಿ ರೈತರು ಬೆಳೆ ವಿಮೆ ಮಾಡಿಸಬೇಕು. ಬೆಳೆ ವಿಮೆ ಹಣ ತುಂಬಾ ಕಡಿಮೆ ಇರುತ್ತದೆ. ಇದು ರೈತರಿಗೆ ಹೊರೆಯಾಗುವುದಿಲ್ಲ.
ಬೆಳೆ ವಿಮೆ ಯಾವ ರೈತರಿಗೆ ಜಮೆಯಾಗುತ್ತದೆ? ಯಾವ ರೈತರಿಗೆ ಜಮೆಯಾಗಲ್ಲ?
ಬೆಳೆ ವಿಮೆ ಮಾಡಿಸಿದ ನಂತರ ಯಾವ ರೈತರು ಬೆಳೆ ಹಾಳಾದಾಗ ವಿಮಾ ಕಂಪನಿಗೆ ದೂರು ನೀಡುತ್ತಾರೋ ಆ ರೈತರಿಗೆ ವಿಮೆ ಹಣ ಜಮೆಯಾಗುತ್ತದೆ. ದೂರು ನೀಡಿದ ನಂತರ ವಿಮಾ ಕಂಪನಿಯ ಸಿಬ್ಬಂದಿಗಳು ರೈತರ ಜಮೀನಿಗೆ ಬಂದು ನಷ್ಟದ ಪ್ರಮಾಣವನ್ನು ಪರಿಶೀಲಿಸಿ ಮೇಲಧಿಕಾರಿಗಳಿಗೆ ವಿಮೆ ಹಣ ಪಾವತಿಸಲು ವರದಿ ಕಳಿಸುತ್ತಾರೆ. ಆ ಆಧಾರದ ಮೇಲೆ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.
ಇದನ್ನೂ ಓದಿ : ಪಿಎಂ ಕಿಸಾನ್ 14ನೇ ಕಂತು ಯಾರಿಗೆ ಜಮೆಯಾಗುತ್ತದೆ ಯಾರಿಗೆ ಜಮೆಯಾಗಲ್ಲ? ಇಲ್ಲೇ ಚೆಕ್ ಮಾಡಿ
ಬೆಳೆ ವಿಮೆ ಕಟ್ಟಿದ ರೈತರು ಬೆಳೆ ಸಂಪೂರ್ಣ ಹಾಳಾದರೂ 72 ಗಂಟೆಯೊಳಗೆ ವಿಮಾ ಕಂಪನಿಗೆ ತಿಳಿಸದೆ ಹೋದರೆ ರೈತರಿಗೆ ನಯಾ ಪೈಸೆ ಜಮೆಯಾಗುವುದಿಲ್ಲ. ಕೆಲವು ಸಲ ಹಳೆ ವಿಮಾ ಆಧಾರದ ಮೇಲೆ ನೂರಕ್ಕೆ ಒಬ್ಬ ರೈತರಿಗೆ ವಿಮೆ ಹಣ ಜಮೆಯಾಗಬಹುದು. ಆದರೆ ವಿಮೆಹಣ ಕಟ್ಟಿದ ನಂತರ ವಿಮಾ ಕಂಪನಿಗೆ ರೈತರು ದೂರು ನೀಡಿದರೆ ಹೋದರೆ ವಿಮೆ ಹಣ ಜಮೆಯಾಗುವುದಿಲ್ಲ.
ಬೆಳೆ ವಿಮೆ ಮಾಡಿಸಿದ ರೈತರು ಯಾರಿಗೆ ಸಂಪರ್ಕಿಸಬೇಕು?
ಬೆಳೆ ವಿಮೆ ಮಾಡಿಸಿದ ರೈತರು ಯಾವ ವಿಮಾ ಕಂಪನಿಗೆ ಹಣ ಪಾವತಿಸಿದ್ದಾರೋ ಆ ವಿಮಾ ಕಂಪನಿಗೆ ಸಂಪರ್ಕಿಸಬೇಕು. ಒಂದು ವೇಳೆ ವಿಮಾ ಕಂಪನಿಯ ನಂಬರ್ ಗೊತ್ತಿಲ್ಲದಿದ್ದರೆ ಬೆಳೆ ವಿಮೆ ಉಚಿತ ಸಹಾಯವಾಣಿ 1800 180 1551 ನಂಬರಿಗೆ ಕರೆ ಮಾಡಿ ನಿಮ್ಮ ಜಿಲ್ಲೆ ವಿಮಾ ಕಂಪನಿಯ ನಂಬರ್ ಪಡೆದು ಕರೆ ಮಾಡಬೇಕು.
ಬೆಳೆ ವಿಮೆ ಹಣ ಎಷ್ಟು ಜಮೆಯಾಗುತ್ತದೆ?
ಬೆಳೆ ವಿಮೆ ಮಾಡಿಸಿದ ನಂತರ ಬೆಳೆ ಎಷ್ಟು ಪ್ರಮಾಣದಲ್ಲಿ ಹಾಳಾಗಿದೆ ಹಾಗೂ ಬೆಳೆ ಯಾವ ಹಂತದಲ್ಲಿ ಹಾಳಾಗಿದೆ ಎಂಬುದನ್ನು ನಿರ್ಧರಿಸಿ ರೈತರಿಗೆ ವಿಮೆ ಹಣ ಪಾವತಿಸಲಾಗುವುದು.