ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮಗೇಕೆ ಜಮೆಯಾಗಿಲ್ಲ?

Written by Ramlinganna

Updated on:

who has not received pm kisan money ಪಿಎಂ ಕಿಸಾನ್ ಯೋಜನೆಯ ಹಣ ಕೆಲವು ಫಲಾನುಭವಿಗಳಿಗೆ ಜಮೆಯಾಗಿದ್ದರೆ ಇನ್ನೂ ಕೆಲವು ರೈತರಿಗೆ ಜಮೆಯಾಗಿಲ್ಲ.  ಯಾವ ಕಾರಣದಿಂದಾಗಿ ಹೀಗಾಗುತ್ತಿದೆ ಎಂಬುದನ್ನು  ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ಜಮೆಯಾಗದೆ ಇರುವ ರೈತರೇನು ಮಾಡಬೇಕು? ಯಾವ ಕಾರಣಕ್ಕಾಗಿ ಪಿಎಂ ಕಿಸಾನ್ ಹಣ ತಡೆಹಿಡಿಯಲಾಗಿದೆ? ಎಲ್ಲಾ ಅರ್ಹತೆಯಿದ್ದರೂ ಜಮೆಯಾಗದೆ ಇರುವುದಕ್ಕೆಕಾರಣವೇನು? ಎಂಬಿತ್ಯಾದಿಗಳ ಮಾಹಿತಿ ಇಲ್ಲಿದೆ.

who has not received pm kisan money ಪಿಎಂ ಕಿಸಾನ್ ಯೋಜನೆಯ ಹಣ ನಿಮಗೇಕೆ ಜಮೆಯಾಗಿಲ್ಲ? ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯ 13ನೇ ಕಂತಿನ ಹಣ ನಿಮಗೇಕೆ ಜಮೆಯಾಗಿಲ್ಲ? ಎಂಬುದನ್ನು ಚೆಕ್ ಮಾಡಲು ಈ

https://pmkisan.gov.in/BeneficiaryStatus.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು Enter Value ಕೆಳಗಡೆ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ನಂತರ Captcha Code  ನಲ್ಲಿ  ಕಾಣುವ ಕ್ಯಾಪ್ಚ್ಯಾ ಕೋಡ್ ಹಾಕಿ Get Data ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜ್ ತೆರೆದುಕೊಳ್ಳುತ್ತದೆ.

ಇಕೆವೈಸಿ ಆಗಿದೆಯೋ ಇಲ್ಲವೋ ಮೊಬೈಲ್ ನಲ್ಲಿ ಚೆಕ್ ಮಾಡಿ (Check your eKYC status)

ರೈತರು ತಮ್ಮ ಮೊಬೈಲ್ ನಲ್ಲಿ ಇಕೆವೈಸಿ ಆಗಿದೆಯೋ ಇಲ್ಲವೋ ಎಂಬುದನ್ನು ಮೊದಲು ಚೆಕ್ ಮಾಡಬೇಕು. ಅಲ್ಲಿ ಕಾಣುವ  eKYC Done ಎದುರುಗಡೆ Yes  ಇದ್ದರೆ ನಿಮ್ಮ ಇಕೆವೈಸಿ ಆಗಿದೆಯೆಂದರ್ಥ. ಒಂದು ವೇಳೆ ಅಲ್ಲಿ No  ಇದ್ದರೆ ನಿಮ್ಮ ಆಧಾರ್ ಕಾರ್ಡ್ ಇಕವೈಸಿ ಆಗಿಲ್ಲವೆಂದು ತಿಳಿದುಕೊಳ್ಳಬೇಕು. ಇಕೆವೈಸಿ ಮಾಡಿಸಲು ನೀವು ನಿಮ್ಮ ಹತ್ತಿರದ ಗ್ರಾಮ ಒನ್ , ಸಿಎಸ್.ಸಿ ಕೇಂದ್ರಗಳಲ್ಲಿ ಬಯೋಮೆಟ್ರಿಕ್ ಆಧಾರಿತ ಇಕೆವೈಸಿ ಮಾಡಿಸಿಕೊಳ್ಳಬೇಕು.

ಪಿಎಂ ಕಿಸಾನ್ ಯೋಜನೆಯ ಅರ್ಹತೆ ಪಡೆದಿದ್ದೀರೋ ಇಲ್ಲವೋ? (Check your pm kisan Eligibility)

ರೈತರು ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಪಡೆದಿದ್ದೀರೋ ಇಲ್ಲವೋ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಅಲ್ಲಿ ಕಾಣುವ ಪೇಜ್ ನಲ್ಲಿ Eligibility  ಎದುರುಗಡೆ Yes ಇದ್ದರೆ ನೀವು ಪಿಎಂ ಕಿಸಾನ್ ಯೋಜನೆಗೆ ಅರ್ಹತೆ ಪಡೆದಿದ್ದೀರೆಂದರ್ಥ.

ಇದನ್ನೂಓದಿ ನಿಮ್ಮ ಸರ್ವೆ ನಂಬರ್ ಅಕ್ಕಪಕ್ಕದಲ್ಲಿ ಯಾರಿಗೆ ಎಷ್ಟು ಎಕರೆ ಜಮೀನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಒಂದು ವೇಳೆ ಎಲಿಜಿಬಿಲಿಟಿ ಎದುರುಗಡೆ ನೋ   No ಇದ್ದರೆ ನೀವು ಅರ್ಹತೆ ಪಡೆದಿಲ್ಲವೆಂದರ್ಥ. ಯಾವ ಕಾರಣಕ್ಕಾಗಿ ನೀವು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಯಾಗಿಲ್ಲವೆಂಬುದನ್ನು ಅಲ್ಲೇ ಬರೆದಿರುತ್ತಾರೆ.

Land Seeding ಎದುರುಗಡೆ Yes ಇರಬೇಕು (check your land seeding status)

ಒಂದು ವೇಳೆ ಲ್ಯಾಂಡ್ ಸೀಡಿಂಗ್ ಎದುರುಗಡೆ No ಇದ್ದರೆ ನಿಮಗೆ ಪಿಎಂ ಕಿಸಾನ್ ಯೋಜನೆಯ ಹಣ ತಡೆಹಿಡಲಾಗಿದೆ ಎಂದರ್ಥ. ಏಕೆಂದರೆ ನಿಮ್ಮ ಜಮೀನಿನ ದಾಖಲೆಗಳು, ಆಧಾರ್ ಕಾರ್ಡ್ ಹಾಗೂ ಬ್ಯಾಂಕ್ ಪಾಸ್ ಬುಕ್ ನಲ್ಲಿ ಹೆಸರು ಒಂದೇ ರೀತಿಯಾಗಿಲ್ಲವೆಂದರ್ಥ. ಹಾಗಾಗಿ ರೈತರು ತಮ್ಮ ಹೆಸರು ಎಲ್ಲಾ ದಾಖಲೆಗಳಲ್ಲಿ ಒಂದೇ ರೀತಿಯಾಗಿದೆಯೇ ಎಂಬುದನ್ನು ಚೆಕ್ ಮಾಡಿಕೊಳ್ಳಬೇಕು. ಈ ಮೂರರ ಕಡೆ ಯಸ್ ಇದ್ದರೂ ನಿಮಗೆ ಪಿಎಂ ಕಿಸಾನ್ ಹಣ ಜಮೆಯಾಗದಿದ್ದರೆ ಯಾವ ಕಾರಣಕ್ಕಾಗಿ ಜಮೆಯಾಗಿಲ್ಲವೆಂಬುದನ್ನು ವಿಚಾರಿಸಬಹುದು.

ಹೌದು, ರೈತರು ಮನೆಯಲ್ಲಿಯೇ ಕುಳಿತು ತಮ್ಮ ಬಳಿಯಿರುವ ಮೊಬೈಲ್ ನಿಂದ ಪಿಎಂ ಕಿಸಾನ್ ಯೋಜನೆಯ ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಿ ವಿಚಾರಿಸಬಹುದು. ರೈತರು 155261 ಅಥವಾ 011 24300606 ಗೆ ಕರೆ ಮಾಡಬಹುದು.

Leave a Comment