ರೈತರು ಈಗ ಮನೆಯಲ್ಲಿಯೇ ಕುಳಿತು ತಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಯಾರ ಹೆಸರಿಗೆ ಎಷ್ಟು ಎಕರೆ ಜಮೀನು ಇದೆ? ಅವರ ಜಮೀನು ಜಂಟಿಯಾಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಚೆಕ್ ಮಾಡಬಹುದು.
ಹೌದು, ಕರ್ನಾಟಕ ಸರ್ಕಾರವು ರೈತರಿಗೆ ಜಮೀನಿನ ದಾಖಲೆಗಳು ಸುಲಭವಾಗಿ ಸಿಗುವಂತೆ ಹಾಗೂ ತಮಗೆ ಬೇಕಾದ ಜಮೀನನ ದಾಖಲೆಗಳನ್ನು ಪಡೆದುಕೊಳ್ಳಲು ಈ ವ್ಯವಸ್ಥೆ ಮಾಡಿದೆ. ಇದರಿಂದಾಗಿ ರೈತರು ದೇಶದ ಯಾವುದೇ ಮೂಲೆಯಲ್ಲಿದ್ದರೂ ಸಹ ಕ್ಷಣಮಾತ್ರದಲ್ಲಿ ತಮ್ಮ ಜಮೀನಿನ ದಾಖಲೆಗಳನ್ನು ಪರಿಶೀಲಿಸಬಹುದು. ಇದಕ್ಕಾಗಿ ರೈತರು ಗ್ರಾಮ ಪಂಚಾಯತ್ ಆಗಲಿ, ನಾಡಕಚೇರಿಯಾಗಲಿ, ಅಥವಾ ಗ್ರಾಮ ಒನ್ ಕೇಂದ್ರಕ್ಕೂ ಹೋಗಬೇಕಿಲ್ಲ. ತಹಶೀಲ್ದಾರ ಕಚೇರಿ ಬಳಿ ಸರತಿಯಲ್ಲೂ ನಿಂತುಕೊಳ್ಳುವ ಅಗತ್ಯವಿಲ್ಲ. ಇಲ್ಲಿ ಹೇಳಿದಂತೆ ನಿಮ್ಮ ಸರ್ವೆ ನಂಬರ್ ನಮೂದಿಸಿದರೆ ಸಾಕು, ನೀವೇ ನಿಮ್ಮ ಜಮೀನಿನ ದಾಖಲೆಗಳನ್ನು ಪಡೆದುಕೊಳ್ಳಬಹುದು. ಅದು ಹೇಗೆ ಅದುಕೊಂಡಿದ್ದೀರಾ… ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.
ನಮ್ಮ ಜಮೀನಿನ ಅಕ್ಕಪಕ್ಕದಲ್ಲಿ ಯಾರಿಗೆ ಎಷ್ಟು ಎಕರೆ ಜಮೀನಿದೆ? ಹೀಗೆ ಚೆಕ್ ಮಾಡಿ
ರೈತರು ತಮ್ಮ ಜಮೀನಿನ ಸುತ್ತಮುತ್ತಲು ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಲು ಈ
https://landrecords.karnataka.gov.in/Service2/
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಭೂಮಿ ಆನ್ಲೈನ್ ಲ್ಯಾಂಡ್ ರಿಕಾರ್ಡ್ ಪೇಜ್ ತೆರೆದುಕೊಳ್ಳುತ್ತದೆ. ಲ್ಲಿ ರೈತರಿಗೆ ಇಂದಿನ ವರ್ಷದ ಪಹಣಿ (ಉತಾರ), ಹಳೆಯ ವರ್ಷದ ಪಹಣಿ (ಉತಾರ), ಮುಟೇಶನ್, ಮುಟೇಶನ್ ಸ್ಟೇಟಸ್, ಖಾತಾ, ಜಮೀನಿನ ಆಕಾರಬಂದ್ ಎಂಬ ಆಯ್ಕೆಗಳು ಕಾಣಿಸುತ್ತವೆ. ರೈತರು ಯಾವುದರ ದಾಖಲೆ ಪಡೆಯಬೇಕೆಂದುಕೊಂಡಿದ್ದಾರೋ ಆ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಅಲ್ಲಿ ಕೇಳಲದ ಮಾಹಿತಿ ಆಯ್ಕೆ ಮಾಡಿಕೊಂಡು ತಮಗೆ ಬೇಕಾದ ದಾಖಲೆ ಪಡೆದುಕೊಳ್ಳಬಹುದು.
ನಿಮ್ಮ ಜಮೀನಿನ ಅಕ್ಕಪಕ್ಕದ ರೈತರ ಯಾರ ಹೆಸರಿಗೆ ಎಷ್ಚು ಎಕರೆ ಜಮೀನಿದೆ ಎಂಬುದನ್ನು ಚೆಕ್ ಮಾಡಬೇಕಾಗಿರುವುದರಿಂದ ನೀವು ಅಲ್ಲಿ ಕಾಣುವ ಜಿಲ್ಲೆ ಕೆಳಗಡೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. ಸರ್ವೆ ನಂಬರ್ ನಮೂದಿಸಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ. ಆಗ ನಿಮಗೆ ಸರ್ನೋಕ್ ನಲ್ಲಿ ಸ್ಟಾರ್ ಆಯ್ಕೆ ಕಾಣಿಸುತ್ತದೆ. ಸ್ಟಾರ್ ಆಯ್ಕೆ ಮಾಡಿಕೊಂಡ ನಂತರ ಹಿಸ್ಸಾ ನಂಬರ್ ನಲ್ಲಿ ಸ್ಟಾರ್ ಆಯ್ಕೆ ಮಾಡಿಕೊಳ್ಳಬೇಕು.
ಇದನ್ನೂ ಓದಿ : ಪಿಎಂ ಕಿಸಾನ್ ಹಣ ಈ ರೈತರಿಗೇಕೆ ಜಮೆಯಾಗಿಲ್ಲ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ
ಇದಾದ ಮೇಲೆ ರೈತರು ಪಿರಿಯಡ್ ನಲ್ಲಿ ಪ್ರಸಕ್ತ ವರ್ಷ ಅಂದರೆ 2022-23 ಆಯ್ಕೆ ಮಾಡಿಕೊಳ್ಳಬೇಕು. ನಂತರ ಇಯರ್ ನಲ್ಲಿ 2022-23 ಆಯ್ಕೆ ಮಾಡಿಕೊಳ್ಳಬೇಕು. ನಂತರ Fetch details ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ನಮೂದಿಸಿ ಸರ್ವೆ ನಂಬರಿನಲ್ಲಿ ಬರುವ ಅಂದರೆ ನಿಮ್ಮ ಜಮೀನಿನ ಸುತ್ತಮುತ್ತಲಿನ ಮಾಲಿಕರ ಹೆಸರು ಕಾಣಿಸುತ್ತದೆ.ಇದರೊಂದಿಗೆ ಯಾರ ಹೆಸರಿಗೆ ಎಷ್ಟು ಎಕರೆ ಜಮೀನಿದೆ? ಜಮೀನು ಮಾಲಿಕರ ಖಾತಾ ನಂಬರ್ ಕಾಣಿಸುತ್ತದೆ.
ಜಮೀನು ಜಂಟಿಯಾಗಿದ್ದರೆ ಯಾರ ಯಾರ ಜಮೀನು ಜಂಟಿಯಾಗಿದೆ ಎಂಬ ಮಾಹಿತಿ ಕಾಣಿಸುತ್ತದೆ.
ಇದಾದ ಮೇಲೆ ನೀವು ಅಲ್ಲಿ ಕಾಣುವ View ಮೇಲೆ ಕ್ಲಿಕ್ ಮಾಡಬೇಕು. ಆಗ ಪಹಣಿ(ಉತಾರ) ಪೇಜ್ ತೆರೆದುಕೊಳ್ಳುತ್ತದೆ.
ಪಹಣಿಯಲ್ಲಿ ಏನೇನು ಮಾಹಿತಿ ಇರುತ್ತದೆ?
ಪಹಣಿ ಪೇಜ್ ನಲ್ಲಿ ಮೊದಲ ಕಾಲಂನಲ್ಲಿ ಸರ್ವೆ ನಂಬರ್ ಇರುತ್ತದೆ. ನಂತರ ಆ ಸರ್ವೆ ನಂಬರಿನಲ್ಲಿ ಎಷ್ಟು ಎಕರೆ ಜಮೀನಿದೆ? ಸರ್ವೆ ನಂಬರಿನಲ್ಲಿ ಇತ್ತೀಚೆಗೆ ಜಮೀನು ಖರೀದಿ ಮಾರಾಟವಾಗಿರುವ ಮಾಹಿತಿ ಇರುತ್ತದೆ. ಇದರೊಂದಿಗೆ ಯಾವ ಜಮೀನಿನ ಮಾಲಿಕರು ಯಾವ ಬ್ಯಾಂಕಿನಿಂದ ಎಷ್ಟು ಸಾಲ ಪಡೆದಿದ್ದಾರೆ ಎಂಬ ಮಾಹಿತಿಯೂ ಕಾಣಿಸುತ್ತದೆ.