ಯಶಸ್ವಿನಿ ಯೋಜನೆ ರೈತರಿಗೆ ಹೇಗೆ ಸಹಾಯವಾಗಲಿದೆ? ಇಲ್ಲಿದೆ ಮಾಹಿತಿ

Written by By: janajagran

Updated on:

Yeshasvini Health insurance Scheme ಐದು ವರ್ಷಗಳ ಹಿಂದೆ ಸ್ಥಗಿತವಾಗಿದ್ದ ಜನಪ್ರಿಯ ಯೋಜನೆ ಯಶಸ್ವಿನಿ ಆರೋಗ್ಯ ವಿಮಾ ಯೋಜನೆಯನ್ನು ಏಪ್ರೀಲ್ 1 ರಿಂದ ಮತ್ತೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮತ್ ಶಾ ತಿಳಿಸಿದ್ದಾರೆ.

ಏಪ್ರೀಲ್ 1 ರಂದು ಬೆಂಗಳೂರಿನಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ  ಅಮಿತ್ ಶಾರವರು ಯಶಸ್ವಿನಿ ಯೋಜನೆಗೆ ಚಾಲನೆ ನೀಡಲಿದ್ದಾರೆ.

ಸಹಕಾರಿ ಸಂಘಗಳ ಸದಸ್ಯರಿಗೆ ಆರೋಗ್ಯ ಸೇವೆ ನೀಡಲು 2003 ರಲ್ಲಿ ಯಶಸ್ವಿನಿ ಯೋಜನೆಯನ್ನು ರಾಜ್ಯ ಸರ್ಕಾರ ಆರಂಭಿಸಿತ್ತು. ಆದರೆ 2018 ರಲ್ಲಿ ರಾಜ್ಯದ ಎಲ್ಲರಿಗೂ ಸಾರ್ವತ್ರಿಕ ಆರೋಗ್ಯ ರಕ್ಷಣೆ ನೀಡಲು ಆರೋಗ್ಯ ಕರ್ನಾಟಕ ಯೋಜನೆ ಅನು ಅನುಷ್ಠಾನಗೊಳಿಸಿದ ಸರ್ಕಾರ 2018ರ ಮೇ 31 ರಂದು ಯಶಸ್ವಿನಿ ಆರೋಗ್ಯ ಯೋಜನೆಯನ್ನು ರದ್ದುಗೊಳಿಸಿತ್ತು. ಇದೇ ಯೋಜನೆಯನ್ನು ಈಗ ಮರು ಚಾಲನೆ ನೀಡಲಾಗುತ್ತಿದೆ.

ಹಿಂದೆ ಯಶಸ್ವಿನಿ ಯೋಜನೆಯಡಿಯಲ್ಲಿ ಸಹಕಾರ ಗ್ರಾಮೀಣ ಸದಸ್ಯರು ವಾರ್ಷಿಕವಾಗಿ 300 ರೂಪಾಯಿ ಹಾಗೂ ನಗರ ಪ್ರದೇಶದವರು 710 ರೂಪಾಯಿ ವಂತಿಗೆ ಪಾವತಿಸಬೇಕಿತ್ತು. ಈ ವತಿಂಗೆಯಲ್ಲಿ ಎಸ್.ಸಿ ಎಸ್.ಟಿ ಸಮುದಾಯಗಳಿಗೆ 250 ರೂಪಾಯಿ ಹಾಗೂ ಇತರೆ ವರ್ಗಗಳಿಗೆ 50 ರೂಪಾಯಿಗಳನ್ನು ಸರ್ಕಾರ ಸಬ್ಸಿಡಿ ನೀಡುತ್ತಿತ್ತು.  ನೋಂದಾಯಿತ ರಾಜ್ಯದ ಯಾವುದೇ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಅವಕಾಶವಿತ್ತು.

ಕೇವಲ 300 ರೂಪಾಯಿ ವಂತಿಗೆಯಲ್ಲಿ ಹಲವು ಕಾಯಿಲೆಗಳಿಗೆ ಶಸ್ತ್ರ ಚಿಕಿತ್ಸೆ ನಡೆಸುವ ಈ ಯೋಜನೆ ವಿಶ್ವದಲ್ಲಿ ಗಮನ ಸೆಳೆದಿತ್ತು.  ಆದರೆ ಈಗ ಹಳೆಯ ವಂತಿಗೆ ಮುಂದುವರೆಸುತ್ತಾರೋ ಅಥವಾ ವಂತಿಗೆ ಮೊತ್ತ ಹೆಚ್ಚಿಸುತ್ತಾರೋ ಎಂಬುದು ಏಪ್ರೀಲ್ 1 ರಂದು ಗೊತ್ತಾಗುತ್ತದೆ. ಈ ಯೋಜನೆಯಡಿಯಲ್ಲಿ ಈ ಹಿಂದೆ ಚಿಕಿತ್ಸೆಗೆ ಗುರುತಿಸಲಾಗಿದ್ದು ಕಾಯಿಲೆಗಳನ್ನು ಬಹುತೇಕ ಯಥಾವತ್ತಾಗಿ ಮುಂದುವರೆಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ಯಾವ ಬ್ಯಾಂಕಿನಲ್ಲಿ ಎಷ್ಟು ಸಾಲ ಪಡೆದಿದ್ದೀರೆಂಬುದನ್ನು ಮೊಬೈಲ್ ನಲ್ಲೇ ಉಚಿತವಾಗಿ ಚೆಕ್ ಮಾಡಬೇಕೆ? ಇಲ್ಲಿದೆ ಮಾಹಿತಿ

ಚಿಕಿತ್ಸೆ ನೀಡುವ ಆಸ್ಪತ್ರೆಗಳ ಪಟ್ಟಿಯನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಹಿಂದೆ ಸಹಕಾರಿ ಸದಸ್ಯರು ವಿಮೆ ಪಡೆದಿದ್ದಲ್ಲಿ 2 ಲಕ್ಷ ರೂಪಾಯಿಯವರೆಗೆ ಉಚಿತ ಚಿಕಿತ್ಸೆ ಸಿಗುತ್ತಿತ್ತು.  ಆದರೆ ಈಗ ವಿಮಾ ಮೊತ್ತವನ್ನೂಸಹ ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಸಹಕಾರಿ ರಂಗದಲ್ಲಿ ಹಲವು ಸುಧಾರಣೆ ತರಬೇಕೆಂಬ ಉದ್ದೇಶವಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್ ಪ್ರಾರಂಭಿಸಲು ನಿರ್ಧರಿಸಲಾಗಿದೆ.

Yeshasvini Health insurance Scheme ಏನಿದು ಯಶಸ್ವಿನಿ ಯೋಜನೆ?

ಗ್ರಾಮೀಣ ಸಹಕಾರಿಗಳ ಆರೋಗ್ಯ ಸುರಕ್ಷತಾ ಯೋಜನೆ ಯಾವುದೇ ಸಹಕಾರ ಸಂಘದ ಸದಸ್ಯರು ಕನಿಷ್ಟು ಮೊತ್ತದ ಪ್ರಿಮಿಯಂ ಪಾವತಿಸಿ ತಮ್ಮ ಕುಟುಂಬದವರ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಆಗ ಹಲವು ವಿಧದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.

ಯಶಸ್ವಿನಿ ಯೋಜನೆಯ ಫಲಾನುಭವಿಯಾಗಲು ಅರ್ಹತೆಗಳು?

ಯಶಸ್ವಿನಿ ಯೋಜನೆಯ ಫಲಾನುಭವಿಯಾಗಲು ಕನಿಷ್ಟ 3 ತಿಂಗಳು ಮುಂಚಿತವಾಗಿ ಅರ್ಹ ಗ್ರಾಮೀಣ ಸಹಕಾರ ಸಂಘವೊಂದರ ಸದಸ್ಯರಾಗಿರಬೇಕು. ಗ್ರಾಮೀಣ ಸಹಕಾರ ಸಂಘ/ಬ್ಯಾಂಕ್ ಗಳೊಡನೆ ವ್ಯವಹರಿಸುತ್ತಿರುವ ಗ್ರಾಮೀಣ ಸ್ತ್ರೀ ಶಕ್ತಿ ಗುಂಪು, ಸ್ವ-ಸಹಾಯ ಗುಂಪಿನ ಸದಸ್ಯರು ಮತ್ತು ಅವರ ಕುಟುಂಬದ ಎಲ್ಲಾ ಸದಸ್ಯರು ಯೋಜನೆಯ ಫಲಾನುಭವಿಯಾಗಬಹುದು.

ರೈತರಿಗೆ ಹೇಗೆ ಅನುಕೂಲ?

ಯಶಸ್ವಿನಿ ಯೋಜನೆಯಡಿಯಲ್ಲಿ ಫಲಾನುಭವಿಯಾಗಿರುವ ರೈತರು ಖಾಸಗಿ ಆಸ್ಪತ್ರೆಗೆ ದಾಖಲಾಗಲು ಸರ್ಕಾರಿ ಆಸ್ಪತ್ರೆಯ ಅನುಮತಿಯ ಅಗತ್ಯವಿಲ್ಲ. ಸಮಯದ ಉಳಿತಾಯವಾಗುವುದರೊಂದಿಗೆ ಪರಿಣಾಮಕಾರಿ ಶಸ್ತ್ರ ಚಿಕಿತ್ಸೆ ಸಿಗುವುದು. ರಾಜ್ಯದ ಬೃಹತ್ ಖಾಸಗಿ ಆಸ್ಪತ್ರೆಗಳಲ್ಲಿ ನಗದು ರಹಿತ ಚಿಕಿತ್ಸೆ ಸಿಗಲಿದೆ. ಗಂಭೀರ ಕಾಯಿಲೆಗಳಿಗೆ ನಗದು ನೀಡಬೇಕೆಂದ ಸಂಕಷ್ಟದಿಂದ ಮುಕ್ತಿ ಸಿಕ್ಕಂತಾಗುತ್ತದೆ.

Leave a Comment