Suryodaya scheme:ಅಡಿಯಲ್ಲಿ 300 ಯೂನಿಟ್ ವರೆಗೆ ಉಚಿತ ವಿದ್ಯುತ್

Written by Ramlinganna

Updated on:

Suryodaya scheme ಫಲಾನುಭವಿಗಳಿಗೆ ಪ್ರತಿ ತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ನೀಡಲಾಗುವುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ಮಾಹಿತಿ

ಹೌದು, ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ ನಲ್ಲಿ ನಿರ್ಮಲಾ ಸೀತಾರಾಮನ್ ರವರು ಘೋಷಣೆ ಮಾಡಿದ ಸೂರ್ಯೋದಯ ಸೋಲಾರ ಯೋಜನೆಯಡಿಯಲ್ಲಿ ಈ ಸೌಲಭ್ಯ ಸಿಗಲಿದೆ. ಸೂರ್ಯೋದಯ ಸೋಲಾರ್ ಯೋಜನೆಯಡಿಯಲ್ಲಿ 300 ಯೂನಿಟ್ ಉಚಿತ ವಿದ್ಯುತ್ ಪಡೆಯುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೂರ್ಯೋದಯ  ಯೋಜನೆಯಡಿಯಲ್ಲಿ ಪ್ರತಿತಿಂಗಳು 300 ಯೂನಿಟ್ ವರೆಗೆ ಉಚಿತ ವಿದ್ಯುತ್ ಪಡೆಯುವುದರೊಂದಿಗೆ ಅವರು ಉತ್ಪಾದಿಸಿದ ಹೆಚ್ಚುವರಿ ಸೌರವಿದ್ಯುತ್ ಅನ್ನು ವಿದ್ಯುತ್ ತಯಾರಕ ಕಂಪನಿಗಳಿಗೆ ಮಾರಾಟ ಮಾಡಲು ಅವಕಾಶವಿದೆ.

ದೇಶದ 1 ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ ವರೆಗೆ ಉಿತ ವಿದ್ಯುತ್ ನೀಡಲಾಗುವುದ. ಇದು ಕುಟುಂಬಗಳಿಗೆ ವಾರ್ಷಿಕವಾಗಿ 15 ಸಾವಿರ ರೂಪಾಯಿಯಿಂದ 18 ಸಾವಿರ ರೂಪಾಯಿಗಳನ್ನು ಉಳಿಸಲು ಸಹಾಯ ಮಾಡುತ್ತದೆ.

ಸೂರ್ಯೋದಯ ಸೋಲಾರ ಯೋಜನೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಅಯೋಧ್ಯೆಯಲ್ಲಿ ರಾಮಮಂದಿರದಲ್ಲಿ ಬಾಲಕ ರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭದ ನಂತರ ಒಂದು ಕೋಟಿ ಮನೆಗಳಲ್ಲಿ ಪ್ರಧಾನಮಂತ್ರಿ ಸೂರ್ಯೋದಯ ಯೋಜನೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದರು.

ಇದನ್ನೂ ಓದಿ ನಿಮ್ಮ ಜಮೀನು ಹಿಂದೆ ಯಾರ ಯಾರ ಹೆಸರಿನಲ್ಲಿತ್ತು? ಇಲ್ಲೇ ಚೆಕ್ ಮಾಡಿ

ಈ ಯೋಜನೆಯು ಬಡ ಮತ್ತು ಮಧ್ಯಮ ವರ್ಗದವರ ವಿದ್ಯುತ್ ಬಿಲ್ ಅನ್ನು ಕಡಿಮೆ ಮಾಡುವುದಲ್ಲದೆ ಇಂಧನ ಕ್ಷೇತ್ರದಲ್ಲಿ ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಘೋಷಣೆ ಮಾಡುವ ಸಂದರ್ಭದಲ್ಲಿ ಹೇಳಿದ್ದರು.

Suryodaya scheme ಸೌರವಿದ್ಯುತ್ ಯೋಜನೆಯ ಉಪಯೋಗಗಳು

ಛಾವಣಿ ಸೌರಶಕ್ತೀಕರಣ ಯೋಜನೆಯಡಿ ದೇಶದ ಒಂದು ಕೋಟಿ ಮನೆಗಳಿಗೆ ಪ್ರತಿ ತಿಂಗಳು ಉಚಿತವಾಗಿ ಅವರೇ ಉತ್ಪಾದಿಸಿದ 300 ಯೂನಿಟ್ ಸೌರವಿದ್ಯುತ್ ಲಭಿಸಲಿದೆ.

300 ಕ್ಕಿಂತ ಹೆಚ್ಚು ಯುನಿಟ್ ಸೌರವಿದ್ಯುತ್ ಉತ್ಪಾದಿಸಿದರೆ ಅದನ್ನು ಅವರು ವಿದ್ಯುತ್ ವಿತರಕ ಕಂಪನಿಗಳಿಗೆ ಮಾರಾಟ ಮಾಡಬಹುದು.

ಈ ಸೌರ ವಿದ್ಯುತ್ ಬಳಸಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಬಹುದು.

ಈ ಯೋಜನೆಯಿಂದ ದೊಡ್ಡ ಸಂಖ್ಯೆಯ ವ್ಯಾಪಾರಿಗಳಿಗೆ ಸೌರವಿದ್ಯುತ್ ಘಟಕಗಳನ್ನು ಪೂರೈಸುವ ಹಾಗೂ ಅಳವಡಿಸುವ ಕೆಲಸ ಲಭಿಸಲಿದೆ.

ಸೌರಛಾವಣಿ ಯೋಜನೆಯಿಂದ ಉತ್ಪಾದನಾ ಕ್ಷೇತ್ರದಲ್ಲಿ ಹಾಗೂ ಸೌರ ಉಪಕರಣಗಳ ಅಳವಡಿಕೆ ಮತ್ತು ನಿರ್ವಹಣೆ ಕ್ಷೇತ್ರದಲ್ಲಿ ತಾಂತ್ರಿಕ ಕೌಶಲ್ಯ ಹೊಂದಿರುವ ಯುವಕರಿಗೆ ಉದ್ಯೋಗಾವಕಾಶಗಳು ಲಭಿಸಲಿದೆ.

Leave a Comment