11 ಇ ನಕ್ಷೆ ಜಮೀನಿಗೆ ಸಂಬಂಧಿಸಿದ್ದಾಗಿದೆ. ಇದೊಂದು ಆಸ್ತಿಯ ಭಾಗದ ರೇಖಾಚಿತ್ರವಾಗಿದೆ.  ಸರ್ವೆಯರ್ ಗಳು ಜಮೀನಿಗೆ ಬಂದು ಜಮಿನು ಆಳತೆ ಮಾಡಿದ ನಂತರ ಒಂದು ನಕ್ಷೆ ತಯಾರಿಸಲಾಗುತ್ತದೆ. ಒಂದು ಜಮೀನಿನ ಸರ್ವೆ ನಂಬರ್ ನಲ್ಲಿ ಅಣ್ಣತಮ್ಮಂದಿರಲ್ಲಿ ಭಾಗ ಮಾಡಿದಾಗ ಅಥವಾ ಒಂದು ಭಾಗವನ್ನು ಮಾರಾಟ, ದಾನ ಮಾಡಿದಾಗ ಆ ಆಸ್ತಿಗೆ ನಕ್ಷೆ ಮಾಡುವುದನ್ನು 11 ಇ ನಕ್ಷೆ ಎನ್ನುತ್ತಾರೆ. ಭಾಗವಾದ ಅಥವಾ ಮಾರಾಟವಾದ ಜಮೀನನ್ನು ತೋರಿಸಬೇಕಾಗುತ್ತದೆ. ಅದಕ್ಕಾಗಿ 11 ಇ ನಕ್ಷೆ ಬೇಕಾಗುತ್ತದೆ.

ಯಾವುದಾದರೊಂದು ಸರ್ವೆ ನಂಬರ್ ನಲ್ಲಿ ಉದಾಹರಣೆಗೆ ಸರ್ವೆ ನಂಬರ್ 2 ರಲ್ಲಿ ನಾಲ್ಕು ನಾಲ್ಕು ಎಕರೆ ಜಮೀನು ಇದೆ ಎಂದುಕೊಳ್ಳೋಣ. ಅದಕ್ಕೆ ಇಬ್ಬರು ಅಣ್ಣತಮ್ಮಂದಿರು ಮಾಲಿಕರಿದ್ದರೆ ತಲಾ 2 ಎಕರೆ ಭೂಮಿ ಭಾಗ ಮಾಡಬೇಕಾಗುತ್ತದೆ. ಈ ಪೈಕಿ ಒಬ್ಬ ಸಹೋದರ ಒಂದು ಎಕರೆ ಜಮೀನನ್ನು ದಾನ, ಅಥವಾ ಮಾರಾಟ ಮಾಡಬೇಕಾದರೆ 2 ಎಕರೆ ಜಮೀನಿಗೆ ಪ್ರತ್ಯೇಕ ಪೋಡಿ ಮಾಡಿ ಸರ್ವೆನಂಬರ್ 2/1 ಅಥವಾ 2/ಅ ಎಂದು ಸಬ್ ನಂಬರ್ ಕೊಟ್ಟು ಒಂದು ಎಕರೆಗೆ ಪ್ರತ್ಯೇಕ 11 ಇ ನಕ್ಷೆ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯನ್ನೇ 11 ಇ ನಕ್ಷೆ ಎಂದು ಕರೆಯುತ್ತಾರೆ.

ಒಂದು ಸರ್ವೆ ನಂಬರ್ ಸಂಪೂರ್ಣವಾಗಿ ಇನ್ನೊಬ್ಬರಿಗೆ ಮಾರಾಟ ಮಾಡುವುದಿದ್ದರೆ 11 ಇ ನಕ್ಷೆ ಬೇಕಾಗಿರುವುದಿಲ್ಲ. ಆದರೆ ಒಂದು ಸರ್ವೆ ನಂಬರ್ ನಲ್ಲಿ ಒಂದು ಭಾಗವನ್ನು ಮಾರಾಟ ಅಥವಾ ದಾನ ಮಾಡುವುದಿದ್ದರೆ 11 ಇ ನಕ್ಷೆ ಬೇಕಾಗುತ್ತದೆ.

ಕರ್ನಾಟಕ ಭೂ ಕಂದಾಯ ಕಾಯ್ದೆ ಪ್ರಕಾರ ಜಮೀನಿನ ಹಕ್ಕು ಬಂದ ಮೇಲೆ ಮುಟೇಷನ್  ಪಡೆಯುವ ಹಂತದಲ್ಲಿ 11 ಇ ನಕ್ಷೆ ಒದಗಿಸಬೇಕೆಂದು ಉಲ್ಲೇಖಿಸಲಾಗಿದೆ. ಆದರೆ ಬಡವರು 11 ಇ ನಕ್ಷೆ ಪಡೆಯಲು ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದರೆ ಅಧಿಕಾರಿಗಳು ಹಾಗೂ ಸರ್ವೆಯರ್ ಗಳು ನಾನಾ ನೆಪವೊಡ್ಡಿ ಅರ್ಜಿ ವಿಲೇವಾರಿ ವಿಳಂಬ ಮಾಡುತ್ತಿದ್ದದಾರೆ. 11 ಇ ನಕ್ಷೆ ಕೇವಲ ಉಳ್ಳವರ ಪಾಲಾಗುತ್ತಿದೆ ಎಂದು 11 ನಕ್ಷೆಯಿಂದ ವಂಚಿತಗೊಂಡವರ ಆರೋಪವಾಗಿದೆ.

ಇದನ್ನೂ ಓದಿ: ಪಿಎಂ ಕಿಸಾನ್ ಸ್ಟೇಟಸ್ ಮೊಬೈಲ್ ನಲ್ಲಿಯೇ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಭೂಮಿಗೆ ನಕ್ಷೆ ಇನ್ನಿತರ ದಾಖಲೆ ಒದಗಿಸಲು ಮೋಜಿಣಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿದೆ. ಆದರೆ ರೈತರಿಗೆ ಸರಿಯಾದ ಮಾಹಿತಿಯಿಲ್ಲದ್ದಕ್ಕಾರಣ 11 ಇನಕ್ಷೆ ಪಡೆಯುತ್ತಿಲ್ಲ.

11 ಇ ನಕ್ಷೆಗಾಗಿ ಅರ್ಜಿ ಎಲ್ಲಿ ಸಲ್ಲಿಸಬೇಕು? Where do apply for 11 E sketch?

ರೈತರು 11 ಇ ನಕ್ಷೆ ಪಡೆಯಲು ನೆಮ್ಮದಿ ಕೇಂದ್ರ  ಅಥವಾ ನಾಡ ಕಚೇರಿಯಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ. ಆಧಾರ್ ಕಾರ್ಡ್, ಪಹಣಿ  ಸೇರಿದಂತೆ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಯಾವ ಉದ್ದೇಶಕ್ಕಾಗಿ 11 ಇ ನಕ್ಷೆ ಬೇಕಾಗಿದೆ ಎಂಬುದರ ಬಗ್ಗೆ ಅರ್ಜಿಯಲ್ಲಿ ನಮೂದಿಸಬೇಕು. ಅರ್ಜಿ ಸಲ್ಲಿಸಿದ ನಂತರ ಸರ್ವೆಯರ್ ಗಳು ನಿಮ್ಮ ಜಮೀನಿಗೆ ಬಂದು ಸರ್ವೆ ಮಾಡುತ್ತಾರೆ. ಸರ್ವೆ ಮಾಡಿದ ನಂತರ ಒಂದು ತಿಂಗಳೊಳಗಾಗಿ 11 ಇನ ಕ್ಷೆ ಕೊಡಬೇಕೆಂಬ ನಿಯಮವಿರುತ್ತದೆ.

Leave a Reply

Your email address will not be published. Required fields are marked *