ಹೊಸವರ್ಷದಂತೆ ಪ್ರಧಾನಿ ನರೇಂದ್ರ ಮೋದಿಯವರು ದೇಶದ ರೈತರಿಗೆ ಸಂತಸದ ಸುದ್ದಿ ನೀಡಿದ್ದಾರೆ. ಹೌದು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ 20,900 ಸಾವಿರ ಕೋಟಿ ರೂಪಾಯಿ 10ನೇ ಕಂತಿನ ಹಣ ಬಿಡುಗಡೆ ಮಾಡಿ ಸಂತಸದ ಸುದ್ದಿ ನೀಡಿದ್ದಾರೆ.
ದೇಶದ 10 ಕೋಟಿಗೂ ಹೆಚ್ಚಿನ ರೈತರಿಗೆ ಈ ಹಣ ಜಮೆಯಾಗಿದೆ. ಪಿಎಂ ಕಿಸಾನ್ ಹಣ ಜಮೆಯಾಗಿದೆಯೋ ಇಲ್ಲವೋ ಎಂಬುದನ್ನು ಮೊಬೈಲ್ ನಲ್ಲಿಯೇ ನೋಡಿಕೊಳ್ಳಬಹುದು. ಪಿಎಂ ಕಿಸಾನ್ ಯೋಜನೆಯ ಸ್ಟೇಟಸ್ ನೋಡಲು ರೈತರು ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಮೊಬೈಲ್ ನಲ್ಲಿಯೇ ಸ್ಟೇಟಸ್ ನೋಡಬಹುದು. ಇದರಿಂದ ಹಿಂದಿನ ಕಂತುಗಳು ಹಾಗೂ ಈಗ 10ನೇ ಕಂತಿನ ಸ್ಟೇಟಸ್ ಸಹ ಚೆಕ್ ಮಾಡಬಹುದು.
ಶನಿವಾರ ಮಧ್ಯಾಹ್ನ ಪ್ರಧಾನಿ ನರೇಂದ್ರ ಮೋದಿಯವರು ವೀಡಿಯೋ ಕಾನ್ಫರೆನ್ಸ್ ಮೂಲಕ 10ನೇ ಕಂತಿನ ಹಣ ಬಿಡುಗಡೆ ಮಾಡಿದರು. ಈಗಾಗಲೇ ರೈತರ ಖಾತೆಗೆ ಈ ಹಣ ಜಮೆಯೂ ಆಗಿದೆ. ಹಾಗಾಗಿ ರೈತರು ಪಿಎಂ ಕಿಸಾನ್ ಸ್ಟೇಟಸ್ ಮೊಬೈಲ್ ನಲ್ಲಿಯೇ ನೋಡಬಹುದು.. ಇಲ್ಲಿಯವರೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ ಎಂಬುದನ್ನು ಮನೆಯಲ್ಲಿಯೇ ಕುಳಿತು ಕ್ಷಣಾರ್ಧದಲ್ಲಿ ಸ್ಟೇಟಸ್ ನೋಡಿಕೊಳ್ಳಬಹುದು. ಅದು ಹೇಗೆ ಅಂದುಕೊಂಡಿದ್ದೀರಾ ಇಲ್ಲಿದೆ PM Kisan Status ಮಾಹಿತಿ.
How to check PM kisan status? ಪಿಎಂ ಕಿಸಾನ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ?
ಪಿಎಂ ಕಿಸಾನ್ ಯೋಜನೆಗೆ ನೋಂದಣಿ ಮಾಡಿಸಿಕೊಂಡ ರೈತರು ಈ https://pmkisan.gov.in/beneficiarystatus.aspx ಲಿಂಕ್ ಮೇಲೆ ಕ್ಲಿಕ್ ಮಾಡಬೇಕು.
ಆಗ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ವೆಬ್ ಪೇಜ್ ಓಪನ್ ಆಗುತ್ತದೆ.
ಇಲ್ಲಿ ನಿಮ್ಮ ಆಧಾರ್ ನಂಬರ್ ಅಥವಾ ಅಕೌಂಟ್ ನಂಬರ್ ಅಥವಾ ಮೊಬೈಲ್ ನಂಬರ್ ಈ ಮೂರರಲ್ಲಿ ಯಾವುದಾದರೊಂದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು.
ಒಂದು ವೇಳೆ ನೀವು ಮೊಬೈಲ್ ನಂಬರ್ ಸೆಲೆಕ್ಟ್ ಮಾಡಿಕೊಂಡರೆ ಅಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿ ಗೆಟ್ ಡಾಟಾ (Get Data) ಮೇಲೆ ಕ್ಲಿಕ್ ಮಾಡಬೇಕು.
ಆಗ ಇಲ್ಲಿಯವರೆಗೆ ನಿಮ್ಮ ಯಾವ ಖಾತೆಗೆ ಎಷ್ಟು ಕಂತಿನ ಹಣ ಜಮೆಯಾಗಿದೆ ಎಂಬುದನ್ನು ನೋಡಬಹುದು.
ಒಂದು ವೇಳೆ ನೀವು ಖಾತೆಗೆ ಹಣ ಜಮೆಯಾಗುವ ಸ್ಟೇಟಸ್ ಏನೂ ತೊರಿಸದೆ ಇದ್ದರೆ ಅಥವಾ ನೋಂದಣಿಯಾಗಿಲ್ಲ ಎಂಬಿತ್ಯಾದಿ ಸಂದೇಶ ಕಂಡರೆ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ, ಅಥವಾ ಕೃಷಿ ಇಲಾಖೆಯ ಕಚೇರಿಗೆ ಭೇಟಿ ನೀಡಿ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅಥವಾ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯ ಸಹಾಯವಾಣಿ ನಂಬರ್ ಟೋಲ್ ಫ್ರೀ ನಂಬರ್ : 18001155266, ಪಿಎಂ ಕಿಸಾನ್ ಹೆಲ್ಪ್ ಲೈನ್ ನಂಬರ್ : 155261, ಪಿಎಂ ಕಿಸಾನ್ ಲ್ಯಾಂಡಲೈನ್ ನಂಬರ್ : 011—23381092, 23382401, PM Kisan helpline: 0120-6025109, 011-24300606 ಅಥವಾ ಈ Email ID: pmkisan-ict@gov.in ಗೆ ಮೇಲ್ ಮಾಡಬಹುದು.