ಬಿಸಿಲ ಧಗೆ ಹೆಚ್ಚುತ್ತಿರುವ ನಡುವೆ ರಾಜ್ಯಕ್ಕೆ ಮಳೆ ಸಿಂಚನವಾಗುವ ಸಾಧ್ಯತೆಯಿದೆ. ಇಂದನಿಂದ ರಾಜ್ಯದಲ್ಲಿ ವಿವಿಧ ಭಾಗಗಳಲ್ಲಿ ಮಳೆಯಾಗಲಿದೆ.
ಕರ್ನಾಟಕ ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಅಲ್ಲಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಹೌದು, ಸಮುದ್ರಗಳಲ್ಲಿ ಮೈಲ್ಮೈ ಸುಳಿಗಾಳಿ ಕಾಣಿಸಿಕೊಂಡಿರುವ ಪ್ರಯುಕ್ತ ರಾಜ್ಯದ ವಿವಿಧೆಡೆ ಇಂದಿನಿಂದ ಅಂದರೆ ಮಂಗಳವಾರದಿಂದ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ.
ಯಾವ ಜಿಲ್ಲೆಯಲ್ಲಿ ಯಾವ ದಿನಾಂಕದಂದು ಮಳೆಯಾಗುವ ಸಾಧ್ಯತೆ
ಮಾರ್ಚ್ 14 ರಿಂದ 18 ರವರೆಗೆ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಕೆಲವೆಡೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ. ಅದೇ ರೀತಿ ಮಾರ್ಚ್ 16 ರಿಂದ 18 ರವರೆಗೆ ಉತ್ತರ ಕನ್ನಡ ಜಿಲ್ಲೆಯ ಹಲವೆಡೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.
ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ನಗರ, ಚಿಕ್ಕಮಗಳೂರು, ಚಾಮರಾಜನಗರ, ಕೊಡಗು, ಹಾಸನ, ಮೈಸೂರು, ತುಮಕೂರು ಶಿವಮೊಗ್ಗ ಜಿಲ್ಲೆಗಳಲ್ಲಿ ಮಾರ್ಚ್ 17 ರಿಂದ18 ರವರೆಗೆ ಹಗುರವಾದ ಮಳೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ : ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಅರ್ಹ ರೈತರ ಪಟ್ಟಿ ಬಿಡುಗಡೆ: ನಿಮ್ಮ ಹೆಸರಿದೆಯೇ ಚೆಕ್ ಮಾಡಿ
ಉತ್ತರ ಒಳನಾಡಿನ ಬಾಗಲಕೋಟೆ, ಬಳ್ಳಾರಿ, ಬೀದರ್, ಧಾರವಾಡ, ಗದಗ, ಕಲಬುರಗಿ ಕೊಪ್ಪಳ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಕಡೆ ಮಾರ್ಚ್ 16 ರಿಂದ18ರವರೆಗೆ ಹಗರುವಾದ ಮಳೆಯಾಗುವ ಸಾಧ್ಯತೆಯಿದೆ.
ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಿ ಮಾರ್ಚ್ 16 ಮತ್ತು 17 ರಂದು ಹಗರುವಾದಮಳೆ ಹಾಗೂ ಸಾಧಾರಣದಿಂದ ಗುಡುಗು ಮಿಂಚಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ : ರೈತರ ಜಮೀನಿಗೆ ಹೋಗುವ ಕಾಲಾದಾರಿ, ಬಂಡಿದಾರಿ ಹಳ್ಳಕೊಳ್ಳಗಳ, ಬೆಟ್ಟಗುಡ್ಡಗಳ ಮಾಹಿತಿ ಮೊಬೈಲ್ ನಲ್ಲೇ ಚೆಕ್ ಮಾಡಿ
ರಾಜ್ಯದಲ್ಲಿ ಗರಿಷ್ಠ 32 ಮತ್ತು ಕನಿ ಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಮಧ್ಯಾಹ್ನದ ನಂತರ ಕೆಲಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದೆ.
ಅವಧಿಗೆ ಮುನ್ನ ಪೂರ್ವ ಮುಂಗಾರು ಸಾಧ್ಯತೆ
ರಾಜ್ಯದ ಉತ್ತರ ಕರ್ನಾಟಕ ಸೇರಿದಂತೆ ದೇಶದ ನಾನಾ ಭಾಗಗಳಲ್ಲಿ ಪ್ರಸಕ್ತ ಸಾಲಿನಲ್ಲಿ ಅವಧಿಗೂ ಮುನ್ನವೇ ಪೂರ್ವ ಮುಂಗಾರು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.
ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಮಹಾರಾಷ್ಟ್ರ,ದಲ್ಲಿ ಮಾರ್ಚ್ 6 ರಿಂದ 8 ರವರೆಗೆ ಅಕಾಲಿಕ ಮಳೆಯಾಗಿದ್ದು, ಬೆಳೆ ಹಾನಿಗೂ ಕಾರಣವಾಗಿದೆ. ದೇಶದ ಉತ್ತರ ಹಾಗೂ ಕೇಂದ್ರ ಭಾಗಗಳಲ್ಲಿ ಮಾರ್ಚ್ 15 ರವರೆಗೆ ಹಗುರವಾದ ಮಳೆಯಾಗಲಿದೆ. ಮಾರ್ಚ್ 16 ರಿಂದ 22 ರವರೆಗೆ ದೇಶದ ದಕ್ಷಿಣ ಭಾಗದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಜ್ಞರು ತಿಳಿಸಿದ್ದಾರೆ.
1901 ರ ಬಳಿಕೆ ಕಳೆದ ಫೆಬ್ರವರಿಯು ಅತ್ಯಂತ ಬಿಸಿಲಿನಿಂದ ಕೂಡಿತ್ತು.ಈ ರೀತಿ ಹವಾಮಾನ ವಾತಾವರಣದಿಂದ ಪೂರ್ವ ಮುಂಗಾರು ಮಳೆಗೆ ಅವಧಿಗೂ ಮುನ್ನವೇ ಬರಲಿದೆ ಎಂದು ತಜ್ಞರು ಹೇಳುತ್ತಾರೆ.
ಸಾಮಾನ್ಯವಾಗಿ ಮುಂಗಾರು ಪೂರ್ವ ಮಾರುತಗಳು ಮಾರ್ಚ್ ಮಧ್ಯದಲ್ಲಿ ರಚನೆಯಾಗುತ್ತವೆ. ಈ ವರ್ಷ ಬೇಗ ಸೃ ಷ್ಟಿಯಾಗಲಿದೆ. ಹೆಚ್ಚಿರುವ ಉಷ್ಣಾಂಶವು ಇದಕ್ಕೆ ಕಾರಣವಾಗಲಿದೆ ಎಂದು ಸ್ಟೈಮೆಟ್ ನ ಹವಾಮಾನ ತಜ್ಞ ಮಹೇಶ ಮಲಾವತ್ ಹೇಳಿದ್ದಾರೆ.
ಪೆಭ್ರವರಿಯಲ್ಲಿ ಗರಿಷ್ಠ ಉಷ್ಣಾಂಶ ದಾಖಲಾಗಿದೆ. ವಾತಾವರಣದ ಮೇಲೆ ಪರಿಣಾಮ ಬೀರಲಿದೆ. ಪೂರ್ವ ಮುಂಗಾರು ಮಳೆ ಬೇಗ ಸುರಿಯುವುದರಿಂದ ವಾತಾವರಣ ತಂಪಾಗಲಿದೆ. ಆದರೆ ಮುಂಗಾರು ಪ್ರವೇಶ ವಿಳಂಬವಾಗುವ ಸಾಧ್ಯತೆಯಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕೃಷಿ ಪರಿಸರ ವಿಭಾಗದ ಮುಖ್ಯಸ್ಥ ಆರ್.ಎಚ್. ಪಾಟೀಲ್ ಹೇಳಿದ್ದಾರೆ.