ಭಾರತದಲ್ಲಿ  ಕೃಷಿಯು ಪ್ರಮುಖ ಜೀವನಾಧಾರ ಮೂಲವಾಗಿದೆ. ಕೃಷಿ ಕ್ಷೇತ್ರಕ್ಕೆ ಹವಾಮಾನದ ಮಾಹಿತಿ ಅತೀ ಅವಶ್ಯಕವಾಗಿದೆ. ಏಕೆಂದರೆ ಹವಾಮಾನ ಮುನ್ಸೂಚನೆ ಮೇಲೆ ಬೆಳೆ ಬಿತ್ತುವಿಕೆ. ಕಟಾವು ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಗಳಿಗೆ ಹವಾಮಾನ ಮುನ್ಸೂಚನೆ (weather forecast apps) ಮಹತ್ವ ಪಡೆದಿದೆ.

ಕೃಷಿ ಕ್ಷೇತ್ರದ ಸಮಸ್ಯೆಗಳನ್ನು ಬಗೆಹರಿಸಲು, ರೈತರಿಗೆ ಸಹಾಯವಾಗಲೆಂಬ ಉದ್ದೇಶದಿಂದ ಸರ್ಕಾರಗಳು, ಖಾಸಗಿ ಸಂಸ್ಥೆಗಳು ಹವಾಮಾನ ಮುನ್ಸೂಚನೆ ನೀಡುವ ಹಲವಾರು ಆ್ಯಪ್ ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇಲ್ಲಿ ನಾನು ಕೆಲವು ಮುಖ್ಯವಾದ ಹವಾಮಾನ ಮುನ್ಸೂಚನೆ, ಮಳೆಯ ಮುನ್ಸೂಚನೆ ಹಾಗೂ ಗುಡುಗು ಸಿಡಿಲಿನ ಮುನ್ಸೂಚನೆಯ ಆ್ಯಪ್ ಗಳನ್ನು ಇಲ್ಲಿ ಪರಿಚಯಿಸುತ್ತಿದ್ದೇನೆ.

ಮುಂಗಾರಿನ ಮುನ್ಸೂಚನೆ:

ಭಾರತೀಯ ಹವಾಮಾನ ಇಲಾಖೆಯು ಮುಂಗಾರಿನ ಆಗಮನಕ್ಕೆ 15 ದಿನಗಳು ಮುಂಚಿತವಾಗಿ ಮುನ್ಸೂಚನೆ ನೀಡುತ್ತಿತ್ತು. ಆದರೆ ರೈತರಿಗೆ ತಮ್ಮಕೃಸಿ ಚಟುವಟಿಕೆಗಳನ್ನು ಅಥವಾ ನೀರಿನ ಸಂಪನ್ಮೂಲಗಳನ್ನು ಸಂಪೂರ್ಣವಾಗಿ ಯೋಜಿಸಲು, ಈ ಸಮಯ ಸಾಕಾಗುತ್ತಿರಲಿಲ್ಲ. ಅದಕ್ಕಾಗಿಯೇ ಭಾರತೀಯ ಉಷ್ಣವಲಯದ ಹವಾಮಾನ ವಿಜ್ಹಾನ ಸಂಸ್ಥೆಯ ಸಂಶೋಧಕರು, ಈಗ ಋತುಮಾನದ ಮುಸ್ಸೂಚನೆಯನ್ನು ಒಂದು ಋತುವಿನಷ್ಟು ಮುಂಚಿತವಾಗಿಯೇ ತಿಳಿಸುವ ವಿಧಾನ ರೂಪಿಸಿದ್ದಾರೆ

ಸಿಡಿಲು ಬೀಳುವ ಮೊದಲೇ ಮುನ್ಸೂಚನೆ ನೀಡುತ್ತದೆ ದಾಮಿನಿ  (Damini) ಆ್ಯಪ್‌

ಮಳೆಗಾಲದಲ್ಲಿ ಸಿಡಿಲಿನಿಂದ ಅನಾಹುತಗಳು ಬಹಳಷ್ಟು ಆಗುತ್ತಿರುತ್ತವೆ. ಈ ಸಿಡಿಲಿನಿಂದ ಪಾರಾಗಲು ಕೇಂದ್ರ ಸರ್ಕಾರದ ಭೂ ವಿಜ್ಞಾನ ಸಚಿವಾಲಯ ಅಧೀನದ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ದಾಮಿನಿ ಆ್ಯಪ್  ನ್ನು ಅಭಿವೃದ್ಧಿಪಡಿಸಿದೆ. ಇದು ರೈತರಿಗೆ ಆಪದ್ಭಾಂದವವಾಗಲಿದೆ.

ಸಿಡಿಲು ಹೊಡೆಯುವ ಕೆಲವು ನಿಮಿಷಗಳ ಮೊದಲೇ ಮುನ್ಸೂಚನೆ ನೀಡುವ ಈ  ಆ್ಯಪ್ ನಿಂದ ಸಾವು, ನೋವಿನ ಪ್ರಮಾಣ ಗಣನೀಯ ತಗ್ಗಿಸಲು ನೆರವಿಗೆ ಬರಲಿದೆ.

ಪುಣೆಯಲ್ಲಿರುವ ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆಯು ಸಿಡಿಲಿನ ಅನಾಹುತ ತಪ್ಪಿಸಲು ಸಿಡಿಲು ಪತ್ತೆಹಚ್ಚುವ ಸಂವೇದಕಗಳನ್ನು ದೇಶದ ವಿವಿಧ ಭಾಗಗಳಲ್ಲಿ ಸ್ಥಾಪಿಸಿದೆ. ಈ ಮೂಲಕ ಒಂದು ಸ್ಥಳದ ಸುತ್ತಲಿನ 20 ರಿಂದ 40 ಕಿ.ಮೀ. ದೂರದವರೆಗೆ 15 ನಿಮಿಷಗಳ ಒಳಗೆ ಸಂಭವಿಸಬಹುದಾದ ಸಿಡಿಲಿನ ಬಗ್ಗೆ ನಿಖರವಾದ ಮಾಹಿತಿ ದೊರೆಯುತ್ತದೆ.
ಈ ಮಾಹಿತಿ ಆಧರಿಸಿ, ಜನಸಾಮಾನ್ಯರು, ರೈತರು ಸುರಕ್ಷಿತವಾದ ಸ್ಥಳಗಳಿಗೆ ತೆರಳಿ ತಮ್ಮ ಪ್ರಾಣ ರಕ್ಷಣೆ ಮಾಡಿಕೊಳ್ಳಲು ಆ್ಯಪ್‌ ಸಹಕಾರಿಯಾಗಲಿದೆ.

ಆ್ಯಪ್‌ ಬಳಸುವುದು ಹೇಗೆ (How to use Damini app)?

ಈ ದಾಮಿನಿ  ಆ್ಯಪ್‌ ಅನ್ನುGoogle play store ನಿಂದ ಇನ್‌ಸ್ಟಾಲ್‌ ಮಾಡಿಕೊಂಡನಂತರ ಹೆಸರು, ದೂರವಾಣಿ ಸಂಖ್ಯೆ, ವಿಳಾಸ, ಪಿನ್‌ ಕೋಡ್‌, ಮತ್ತು ವೃತ್ತಿಯನ್ನು ನಮೂದಿಸಬೇಕು. ನಂತರ ಹೊಮ್‌ ಪೇಜ್‌ನಲ್ಲಿ ಒಂದು ನಕ್ಷೆ ತೋರುತ್ತದೆ. ಅದರ ಮೇಲ್ಭಾಗದಲ್ಲಿ ನಮಗೆ ಬೇಕಾದ ಸ್ಥಳದ ಹೆಸರು ಟೈಪ್‌ಮಾಡಿ ಸರ್ಚ್ ಮಾಡಬೇಕು. ಆ್ಯಪ್‌ನಲ್ಲಿ ಮಿಂಚನ್ನು ಸಮಯನುಸಾರವಾಗಿ ಗುರುತಿಸಲು 3 ಸಂಕೇತಗಳಿವೆ.

ಹಳದಿ ಬಣ್ಣದ ಮಿಂಚಿನ ಚಿಹ್ನೆ ತೋರಿಸಿದರೆ 5 ನಿಮಿಷದೊಳಗೆ ಮಿಂಚು ಸಂಭವಿಸುವುದನ್ನು ಸೂಚಿಸುತ್ತದೆ. ನೀಲಿ ಬಣ್ಣದ ಚಿಹ್ನೆ 5 ರಿಂದ 10ನಿಮಿಷಗಳವರೆಗೆ ಹಾಗೂ ನೇರಳೆ ಬಣ್ಣದ ಚಿಹ್ನೆ 10ರಿಂದ 15ನಿಮಿಷಗಳವರೆಗೆ ಸಂಭವಿಸಬಹುದಾದ ಮಿಂಚನ್ನು ಸೂಚಿಸುತ್ತದೆ. ಇಷ್ಟೇ ಅಲ್ಲದೆ ಮಿಂಚು, ಸಿಡಿಲಿನ ವೇಳೆ ಜನಸಾಮಾನ್ಯರು ಅನುಸರಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳು, ಯಾವ ಸ್ಥಳಗಳಲ್ಲಿ ಇರಬಾರದು ಎಂಬ ಮಾತಿಯ ಜತೆಗೆ ಮಿಂಚು ಹೊಡೆದಾಗ ಕೈಗೊಳ್ಳಬೇಕಾದ ಪ್ರಥಮ ಚಿಕಿತ್ಸೆಯ ವಿವರವನ್ನೂ ಈ ಆ್ಯಪ್‌ನಲ್ಲಿ ಅಳವಡಿಸಿರುವುದು ವಿಶೇಷವಾಗಿದೆ.

ಐದು ದಿನಗಳ ಮೊದಲೇ ಮಳೆಯ ಮುನ್ಸೂಚನೆ ಮೇಘಧೂತ (Meghdhoot)ಆ್ಯಪ್‌

ರೈತರಿಗೆ ಸುಲಭವಾಗಿ ಹವಾಮಾನದ ಮಾಹಿತಿ ನೀಡುವುದಕ್ಕಾಗಿ ಭಾರತೀಯ ಹವಾಮಾನ ಇಲಾಖೆ, ಭಾರತೀಯ ಸಂಶೋಧನಾ ಮಂಡಳಿ ಮತ್ತು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಸಹಯೋಗದಲ್ಲಿ ರೈತರಿಗೆ ಸ್ಥಳೀಯ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳನ್ನು ನೀಡಲು ಮೇಘಧೂತ ಆ್ಯಪ್‌ ಅಭಿವೃದ್ಧಿಪಡಸಲಾಗಿದೆ.

ಈ ಆ್ಯಪ್‌ನಿಂದಾಗಿ ಯಾವ ಯಾವ ಮಾಹಿತಿ ಪಡೆಯಬಹುದು. ಮತ್ತು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದು ಸಮಗ್ರ ಮಾಹಿತಿ ಇಲ್ಲಿದೆ.

ಈ ಆ್ಯಪ್‌ ಮೂಲಕ  ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ದೇಶದ 10 ಭಾಷೆಯಗಳಲ್ಲಿ ಜಿಲ್ಲಾವಾರು ಮಾಹಿತಿ ನೀಡುತ್ತದೆ. ಮುಂದಿನ ಐದು ದಿನಗಳ ಹವಾಮಾನ ಆಧಾರಿತ ಮಳೆ, ಉಷ್ಣಾಂಶ, ಆರ್ದ್ರತೆ, ಗಾಳಿಯ ವೇಗ, ಗಾಳಿಯ ದಿಕ್ಕಿನ ಮುನ್ಸೂಚನೆಯನ್ನು ಸಹ ಈ ಆ್ಯಪ್‌  ನೀಡುತ್ತದೆ.

ಡೌನ್ಲೋಡ್ ಮತ್ತು ಬಳಕೆ ಹೇಗೆ?

ಗೂಗಲ್ ಪ್ಲೇ ಸ್ಟೋರ್, ಅಥವಾ ಗೂಗಲ್ ಕ್ರೋಮ್ ನಲ್ಲಿ https/[email protected] ಟೈಪ್ ಮಾಡಿದಾಗ ಮೇಘದೂತ್ ಆ್ಯಪ್‌ ನ ಹೋಮ್ ಪೇಜ್ ತೆರೆಯುತ್ತದೆ. ಇಲ್ಲಿ ಇನ್ಸಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ಆ್ಯಪ್‌  ಡೌನ್ಲೋಡ್ ಆದ ಮೇಲೆ ನೋಂದಣಿ ಮಾಡಲು ಭಾಷೆ ಆಯ್ಕೆ, ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆ ಆಯ್ಕೆ ಮಾಡಿ ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನೋಂದಣಿಯಾಗಿರುವುದಾಗಿ ಮೊಬೈಲ್ ಪರದೆಯ ಮೇಲೆ ಹೆಸರು ಬರುತ್ತದೆ. ಇದಾನ ನಂತರ ಲಾಗಿನ್ ಆಗಿ ನೀವು ಮಳೆಯ ಮುನ್ಸೂಚನೆ ಮತ್ತು ಇತರ ಮಾಹಿತಿ ಪಡೆಯಬಹುದು.

ಹವಾಮಾನದ ಕುರಿತು ಮುನ್ಸೂಚನೆ ನೀಡುತ್ತದೆ ಮೌಸಮ್ (Mausam)ಆ್ಯಪ್

ನಗರಗಳನ್ನು ಆಧರಿಸಿ ಯಾವ ನಗರದಲ್ಲಿ ಮಳೆಯಾಗುತ್ತದೆ ಅಲ್ಲಿನ ವಾತಾವರಣ ಕುರಿತು ಮಾಹಿತಿ ನೀಡುತ್ತದೆ ಮೌಸಮ್ ಆ್ಯಪ್.  ಇಂಟರ್‌ನ್ಯಾಷನಲ್‌ ಕಾರ್ಫ್ಸ್‌ ರೀಸರ್ಚ್ ಇನ್‌ಸ್ಟಿಟ್ಯೂಟ್‌ ಫಾರ್‌ ಸೆಮಿ- ಏರಿಡ್‌ ಟ್ರಾಪಿಕ್ಸ್‌(ಐಸಿಆರ್‌ಐಎಸ್‌ಎಟಿ) ಹಾಗೂ ಪುಣೆಯ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಟ್ರಾಪಿಕಲ್‌ ಮಿಟೀಯರಾಲಜಿ (ಐಐಟಿಎಮ್‌) ಹಾಗೂ ಇಂಡಿಯಾ ಮೆಟೀಯರಲಾಜಿಕಲ್‌ ಡಿಪಾರ್ಟ್‌ಮೆಂಟ್‌ (ಐಎಮ್‌ಡಿ) ಈ ಆ್ಯಪ್‌ ಅನ್ನು ಅಭಿವೃದ್ಧಿಪಡಿಸಿದೆ.

ಉಷ್ಣತೆ, ಆದ್ರ್ರತೆ ಹಾಗೂ ಗಾಳಿಯ ವೇಗ ಹಾಗೂ ದಿಕ್ಕನ್ನು ತಿಳಿಸಲಿದೆ. ದಿನಕ್ಕೆ ಎಂಟು ಬಾರಿ ಈ ಆ್ಯಪ್‌ನ ಮಾಹಿತಿ ಅಪ್‌ಡೇಟ್‌ ಆಗಲಿದೆ. ಇದರಲ್ಲಿ ಹವಮಾನದಲ್ಲಿನ ತೀವ್ರ ಏರುಪೇರಿನ ಬಗ್ಗೆ ಮಾಹಿತಿ ನೀಡುವ ಸೌಲಭ್ಯವೂ ಇದೆ

Leave a Reply

Your email address will not be published. Required fields are marked *