ರೈತರಿಗಿಲ್ಲಿದೆ ಸಂತಸದ ಸುದ್ದಿ. ಈಗ ಮಳೆಯ ಮುನ್ನೂಚನೆ ಪಡೆಯಲು ಯಾವ ಅಧಿಕಾರಿಗಳಿಗೂ ಕೇಳುವ ಅಗತ್ಯವಿಲ್ಲ. ನಿಮ್ಮ ಕೈಯಲ್ಲಿರುವ ಮೊಬೈಲ್ ನಲ್ಲಿಯೇ ಐದು ದಿನಗಳ ಮುಂಚೆ ಮಳೆಯ ಮುನ್ಸೂಚನೆ ಪಡೆಯಬಹುದು. ಹೌದು ಮೇಘದೂತ ಈ ಈ ಮಾಹಿತಿ ನೀಡಲಿದೆ. ದೇಶದಲ್ಲಿ ಮಳೆಯ ಮುನ್ಸೂಚನೆ ಗೊತ್ತಾಗದೆ ರೈತರಿಗೆ ಸಾಕಷ್ಟು ಬೆಳೆ ಹಾನಿಯಾಗುತ್ತಿರುತ್ತದೆ. ಬಿತ್ತಣಿಕೆ, ರಾಶಿ, ಸೇರಿದಂತೆ ಇನ್ನಿತರ ಕೃಷಿ ಚಟುವಟಿಕೆಯಲ್ಲಿ ಗುಡುಗು, ಸಿಡಿಲಿನೊಂದಿಗೆ ಜೋರಾಗಿ ಬೀಸುವ ಗಾಳಿಯಿಂದಾಗಿ ರೈತರಿಗೆ ನಷ್ಟವಾಗತ್ತಿರುತ್ತದೆ. ರೈತರ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ರೈತರಿಗೆ ಹವಾಮಾನ ಮುನ್ನೆಚ್ಚರಿಕೆ ನೀಡುವುದಕ್ಕಾಗಿ ಬಂದಿದೆ (use Meghdoot app see five days advance Climate weather forecast report )ಹೊಸ ಆ್ಯಪ್.
ರೈತರಿಗೆ ಸುಲಭವಾಗಿ ಹವಾಮಾನದ ಮಾಹಿತಿ ನೀಡುವುದಕ್ಕಾಗಿ ಭಾರತೀಯ ಹವಾಮಾನ ಇಲಾಖೆ, ಭಾರತೀಯ ಸಂಶೋಧನಾ ಮಂಡಳಿ ಮತ್ತು ಭಾರತೀಯ ಉಷ್ಣವಲಯದ ಹವಾಮಾನ ಸಂಸ್ಥೆ ಸಹಯೋಗದಲ್ಲಿ ರೈತರಿಗೆ ಸ್ಥಳೀಯ ಹವಾಮಾನ ಮುನ್ಸೂಚನೆ ಮತ್ತು ಕೃಷಿ ಆಧಾರಿತ ಸಲಹೆಗಳನ್ನು ನೀಡಲು ಮೇಘಧೂತ ಆ್ಯಪ್ ಅಭಿವೃದ್ಧಿಪಡಸಲಾಗಿದೆ.
ಈ ಆ್ಯಪ್‌ನಿಂದಾಗಿ ಯಾವ ಯಾವ ಮಾಹಿತಿ ಪಡೆಯಬಹುದು. ಮತ್ತು ಡೌನ್ಲೋಡ್ ಮಾಡಿಕೊಳ್ಳುವುದು ಹೇಗೆ ಎಂಬುದು ಸಮಗ್ರ ಮಾಹಿತಿ ಇಲ್ಲಿದೆ.
ಈ ಆ್ಯಪ್ ಮೂಲಕ ಕನ್ನಡ, ತೆಲುಗು, ಮರಾಠಿ, ಹಿಂದಿ, ತಮಿಳು, ಮಲಯಾಳಂ ಸೇರಿದಂತೆ ದೇಶದ 10 ಭಾಷೆಯಗಳಲ್ಲಿ ಜಿಲ್ಲಾವಾರು ಮಾಹಿತಿ ನೀಡುತ್ತದೆ. ಮುಂದಿನ ಐದು ದಿನಗಳ ಹವಾಮಾನ ಆಧಾರಿತ ಮಳೆ, ಉಷ್ಣಾಂಶ, ಆರ್ದ್ರತೆ, ಗಾಳಿಯ ವೇಗ, ಗಾಳಿಯ ದಿಕ್ಕಿನ ಮುನ್ಸೂಚನೆಯನ್ನು ಸಹ ಈ ಆ್ಯಪ್ ನೀಡುತ್ತದೆ.
ವಾರದ ಹವಾಮಾನವನ್ನು ನಿಖರವಾಗಿ ಪ್ರತಿ ಮಂಗಳವಾರ ಮತ್ತು ಶುಕ್ರವಾರ ಅಪ್ಡೆಟ್ ಮಾಡಿಕೊಡುತ್ತದೆ. ಬದಲಾಗುತ್ತಿರುವ ಹವಾಮಾನ ವೈಪರೀತ್ಯದಿಂದ ರೈತರು ಸಾಕಷ್ಟು ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕಾಗಿ ಹವಾಮಾನ ಮುನ್ಸೂಚನೆ ಆಧರಿಸಿ ನೀಡುವ ಸಲಹೆ ಅನುಸರಿಸುವುದು ಅವಶ್ಯ. ಇದರಿಂದ ಬೆಳೆ ನಷ್ಟ ಕಡಿಮೆ ಮಾಡಿಕೊಂಡು ಆದಾಯ ಹೆಚ್ಚಿಸಿಕೊಳ್ಳಬಹುದು.
ನಾಲ್ಕು ಹಂತದ ಮಾಹಿತಿ (Four type information gives meghdoot app)
ಹಿಂದಿನ 10 ದಿನಗಳ ಹವಾಮಾನ ವರದಿಯ ಮಾಹಿತಿಯನ್ನು ಪಡೆಯಬಹುದು. ಪ್ರತಿ ದಿನದ ಗರಿಷ್ಠ ಮತ್ತು ಕನಿಷ್ಟ ತಾಪಮಾನ ಹಾಗೂ ಮಳೆಯ ಪ್ರಮಾಣ ಕುರಿತಾದ ಮಾಹಿತಿಯು ಲಭ್ಯವಿರುತ್ತದೆ. ಮುಂದಿನ 5 ದಿನಗಳ ಗರಿಷ್ಟ ಮತ್ತು ಕನಿಷ್ಟ ತಾಪಮಾನ, ಆರ್ದ್ರತೆ, ಮಳೆ ಪ್ರಮಾಣ, ಮೋಡಗಳ ಮಾಹಿತಿ, ಗಾಳಿಯ ದಿಕ್ಕು ಮತ್ತು ವೇಗಗಳ ಕುರಿತು ಮುನ್ಸೂಚನೆಯ ಮಾಹಿತಿಯನ್ನು ಪಡೆಯಬಹುದು.
ಡೌನ್ಲೋಡ್ ಮತ್ತು ಬಳಕೆ ಹೇಗೆ? (How to download)
ಗೂಗಲ್ ಪ್ಲೇ ಸ್ಟೋರ್, ಅಥವಾ ಗೂಗಲ್ ಕ್ರೋಮ್ ನಲ್ಲಿ https/[email protected] ಟೈಪ್ ಮಾಡಿದಾಗ ಮೇಘದೂತ್ ಆ್ಯಪ್ ನ ಹೋಮ್ ಪೇಜ್ ತೆರೆಯುತ್ತದೆ. ಅಥವಾ https://play.google.com/store/apps/details?id=com.aas.meghdoot&hl=en_IN&gl=US ಇಲ್ಲಿ ಇನ್ಸಸ್ಟಾಲ್ ಮೇಲೆ ಕ್ಲಿಕ್ ಮಾಡಬೇಕು. ಆ್ಯಪ್ ಡೌನ್ಲೋಡ್ ಆದ ಮೇಲೆ ನೋಂದಣಿ ಮಾಡಲು ಭಾಷೆ ಆಯ್ಕೆ, ಹೆಸರು, ದೂರವಾಣಿ ಸಂಖ್ಯೆ, ರಾಜ್ಯ ಮತ್ತು ಜಿಲ್ಲೆ ಆಯ್ಕೆ ಮಾಡಿ ನೋಂದಣಿ ಆಯ್ಕೆ ಮೇಲೆ ಕ್ಲಿಕ್ ಮಾಡಿದಾಗ ನೋಂದಣಿಯಾಗಿರುವುದಾಗಿ ಮೊಬೈಲ್ ಪರದೆಯ ಮೇಲೆ ಹೆಸರು ಬರುತ್ತದೆ. ಇದಾನ ನಂತರ ಲಾಗಿನ್ ಆಗಿ ನೀವು ಮಳೆಯ ಮುನ್ಸೂಚನೆ ಮತ್ತು ಇತರ ಮಾಹಿತಿ ಪಡೆಯಬಹುದು.
Super
Valleyadu
Good information .