ರೈತರು ತಮ್ಮ ಜಮೀನಿನ ಅಳತೆಯನ್ನು ತಮ್ಮ ಬಳಿಯಿರುವ ಮೊಬೈಲ್ ನಲ್ಲೇ ಅಳತೆ ಮಾಡಬಹುದು. ಹೌದು, ಇದಕ್ಕಾಗಿ ಯಾರ ಸಹಾಯವೂ ಇಲ್ಲದೆ ಇಲ್ಲಿ ತಿಳಿಸಲಾದ ಕೆಲವು ಮಾಹಿತಿಗಳ ಪ್ರಕಾರ ಅಳತೆ ಮಾಡಬಹುದು.
ಹಿಂದಿನ ಕಾಲದಲ್ಲಿ ಜಮೀನಿನ ಅಳತೆ ಮಾಡಲು ಸರಪಳಿ, ಹಗ್ಗ, ಕೋಲು ಬಳಸುತ್ತಿದ್ದರು. ಇಲ್ಲವೇ ಜಮೀನಿನ ಅಳತೆ ಮಾಡಲು ಭೂ ಕಂದಾಯ ಇಲಾಖೆಗೆ ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳು ರೈತರ ಜಮೀನಿಗೆ ಬಂದು ಸರ್ವೆ ಮಾಡುತ್ತಾರೆ. ಇದಕ್ಕೂ ರೈತರು ಅಧಿಕಾರಿಗಳಿಗಾಗಿ ಕಾಯಬೇಕಾಗುತ್ತದೆ. ಇದಕ್ಕೆ ಶುಲ್ಕವೂ ಪಾವತಿಸಬೇಕಾಗುತ್ತದೆ. ಇಂದಿನ ತಂತ್ರಜ್ಞಾನ ಎಷ್ಚು ಮುಂದುವರೆದಿದಿದೆಯೆಂದರೆ ಕುಳಿತಲ್ಲಿಯೇ ತಮ್ಮ ಸ್ಮಾರ್ಟ್ ಫೋನ್ ನಲ್ಲಿ ಎಲ್ಲಾ ಸೌಲಭ್ಯ ಪಡೆದುಕೊಳ್ಳಬಹುದು.
ಏನಿದು ದಿಶಾಂಕ್ ಆ್ಯಪ್ (What is Dishaank app)
ರೈತರು ತಮ್ಮ ಜಮೀನಿನ ಅಳತೆ ಮಾಡಲು ಕಂದಾಯ ಇಲಾಖೆಯು ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ದಿಶಾಂಕ್ ಆ್ಯಾಪ ಸಹಾಯದಿಂದ ರೈತರು ಜಮೀನಿನ ಅಳತೆ ಮಾಡಬಹುದು. 1960 ರ ಸರ್ವೆ ನಕಾಶೆಗಳ ಆದಾರದಲ್ಲಿ ಕಂದಾಯ ಇಲಾಖೆಯು ಈ ದಿಶಾಂಕ್ ಆ್ಯಪ್ ಅಭಿವೃದ್ಧಿಪಡಿಸಿದೆ.
ಜಮೀನು ಅಳತೆ ಮಾಡುವುದರಿಂದ ರೈತರಿಗೆ ಯಾವ ಯಾವ ಪ್ರಯೋಜನ?
ಜಮೀನಿನ ಅಳತೆ ಮಾಡುವುದರಿಂದ ರೈತರು ತಮ್ಮ ಜಮೀನಿನ ಅಕ್ಕಪಕ್ಕದ, ಕೆರೆಕುಂಟೆಗಳ ಪ್ರದೇಶ ವಿಸ್ತರಣೆ, ತಮ್ಮ ಜಮೀನು ಅಕ್ಕಪಕ್ಕದವರಿದ ಒತ್ತುವರಿಯಾಗಿದೆ ಎಂಬ ಮಾಹಿತಿ ಪಡೆಯಬಹುದು. ರೈತರ ಜಮೀನಿನ ನೆರೆಹೊರೆಯ ಜಮೀನು ಕೆರೆ ಕಟ್ಟೆ, ಹಳ್ಳಕೊಳ್ಳ, ಖರಾಬು ಜಮೀನಿದ್ದರೆ ರೈತರು ದಿಶಾಂಕ್ ಆ್ಯಪ್ ಸಹಾಯದಿಂದ ಪಡೆಯಬಹುದು.
ಜಮೀನು ಅಳತೆ ಮಾಡುವುದು ಹೇಗೆ? (How to measure land)
ರೈತರು ತಮ್ಮ ಮೊಬೈಲ್ ನಲ್ಲಿ ಜಮೀನು ಅಳತೆ ಮಾಡಲು ಈ
https://play.google.com/store/apps/details?id=com.ksrsac.sslr&hl=en_IN&pli=1
ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಘ Dishaank ಆ್ಯಪ್ ತೆರೆದುಕೊಳ್ಳುತ್ತದೆ. ಅಲ್ಲಿ ರೈತರು install ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲೋ ದಿಶಾಂಕ್ ಟು ಅಕ್ಸೆಸ್ ದಿಸ್ ಡಿವೈಸ್ ಸೆಲೆಕ್ಟ್ ಮಾಡಿಕೊಳ್ಳಬೇಕು. ನಂತರ ಭಾಷೆ ಆಯ್ಕೆ ಮಾಡಿಕೊಳ್ಳಬೇಕು. ಇದಾದಮೇಲೆ ಜಿಪಿಎಸ್ ಆನ್ ಮಾಡಿಕೊಳ್ಳಬೇಕು. ಆಗ ನೀವು ನಿಂತಿರುವ ಸ್ಥಳದ ಮಾಹಿತಿ ಕಾಣಿಸುತ್ತದೆ. ನೀವು ಯಾವ ಸರ್ವೆ ನಂಬರಿನಲ್ಲಿ ನಿಂತಿರುತ್ತೀರೋಆ ಸ್ಥಳದ ಪಾಯಿಂಟ್ ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಿದಾಗ ಸರ್ವೆ ನಂಬರ್ ಕಾಣಿಸುತ್ತದೆ. ಇದಾದ ಮೇಲೆ ರೈತರು ಹೆಚ್ಚಿನ ವಿವರಗಳು ಮೇಲೆ ಕ್ಲಿಕ್ ಮಾಡಬೇಕು. ಆಗ ಇನ್ನೊಂದು ಪೇಜೆ ತೆರದುಕೊಳ್ಳುತ್ತದೆ.ಅಲ್ಲಿ ಮಾಲಿಕರ ವಿವರಗಳು ಎಂಬುದರ ಮೇಲೆ ಕ್ಲಿಕ್ ಮಾಡಬೇಕು.ಆಗ ನಿಮಗೆ ಆ ಜಮೀನಿನ ಮಾಲಿಕರು ಯಾರ್ಯಾರು ಇದ್ದಾರೆ ಹಾಗೂ ಅಕ್ಕಪಕ್ಕದ ಜಮೀನಿನ ಮಾಲಿಕರ ಹೆಸರು ಕಾಣಿಸುತ್ತದೆ.
ನಿಮಗೆ ಒಂದು ವೇಳೆ ನೀವು ನಿಂತಿರುವ ಸ್ಥಳದ ಪಾಯಿಂಟ್ ಕಾಣಿಸಿದ್ದರೆ ಸರ್ವೆ ನಂಬರ್ ಹುಡುಕಿ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ಪೇಜ್ ಓಪನ್ ಆಗುತ್ತದೆ. ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್ ನಮೂದಿಸಿದ ನೀವು ನಿಂತಿರುವ ಸ್ಥಳದ ಪಾಯಿಂಟ್ ಕಾಣಿಸುತ್ತದೆ. ಆಗ ನಿಮ್ಮ ಜಮೀನಿನ ಅಕ್ಕಪಕ್ಕದ ರಸ್ತೆಯಿದ್ದರೆ ಕಾಣಿಸುತ್ತದೆ.
ಅಲ್ಲಿ ಕಾಣಿಸುವ ಮಾಪನ ಸಾಧನಗಳು ಮೇಲೆ ಕ್ಲಿಕ್ ಮಾಡೇ ಲೈನ್ ಆಯ್ಕೆ ಮಾಡಿಕೊಂಡು ಸರ್ವೆ ನಂಬರಿನ ಯಾವ ದಿಕ್ಕಿನಿಂದ ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅಲ್ಲಿ ಕ್ಲಿಕ್ಮಾಡಬೇಕು. ನಂತರ ಜಮೀನು ನಾಲ್ಕು ಮೂಲಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಜಮೀನಿನ ಅಳತೆ ಪ್ರಕಾರಗಳು, ಮೀಟರ್, ಫೀಟ್, ಹೀಗೆ ಆಯ್ಕೆಗಳಿರುತ್ತವೆ. ಅದರಲ್ಲಿ ಯಾವುದರ ಮೂಲಕ ಅಳತೆ ಮಾಡಬೇಕೆಂದುಕೊಂಡಿದ್ದೀರೋ ಅದನ್ನು ಆಯ್ಕೆ ಮಾಡಿಕೊಂಡರೆ ಜಮೀನಿನ ಸುತ್ತಳತೆ ಕಾಣಿಸುತ್ತದೆ.
ದಿಶಾಂಕ್ ಆ್ಯಪ್ ಮಾಹಿತಿ ವೀಕ್ಷಣೆಗೆ ಮಾತ್ರ- ಆರ್. ಅಶೋಕ
ದಿಶಾಂಕ್ ಆ್ಯಪ್ ನಲ್ಲಿರುವ ಮಾಹಿತಿ ಕೇವಲ ವೀಕ್ಷಣೆಗಾಗಿ ಇದೆ. ಸರ್ವೆ ನಂಬರ್ ಗಳ ಗಡಿ ಮತ್ತು ಇತರೆ ಮಾಹಿತಿಯನ್ನು ಯಾವುದೇ ಕಾನೂನಾತ್ಮಕ ಕಾರ್ಯಕ್ಕೆ ಬಳಕೆ ಮಾಡುವಂತಿಲ್ಲ ಎಂದು ಕಂದಾಯ ಸಚಿವ ಆರ್. ಅಶೋಕ ತಿಳಿಸಿದ್ದಾರೆ. ಈ ಆ್ಯಪ್ ರೈತರಿಗೆ ಮಾಹಿತಿ ನೀಡುತ್ತದೆ.