ತುಂತುರು ನೀರಾವರಿಗೆ ಶೇ. 90 ರಷ್ಟು ಸಬ್ಸಿಡಿ

Written by Ramlinganna

Updated on:

90% subsidy for sprinkler ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ವಿವಿಧ ಜಿಲ್ಲೆಗಳಿಂದ ಹನಿ ನೀರಾವರಿ ಹಾಗೂ ತುಂತುರು ನೀರಾವರಿಗೆ ಶೇ. 90 ರಷ್ಟು ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, 2023-24ನೇ ಸಾಲಿನ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆ ಸೂಕ್ಷ್ಮ ನೀರಾವರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುತ್ತಿದ್ದು, ಮೈಸೂರು ಜಿಲ್ಲೆಯ ಸಂಬಂಧಿಸಿದ ತಾಲೂಕಿನ ತೋಟಗಾರಿಕೆ ಇಲಾಖೆಗೆ ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದು. ಹನಿ ನೀರಾವರಿ ಹಾಗೂ ತುಂತುರು ನೀರಾವರಿಗೆ ಸಹಾಯಧನ ನೀಡಲಾಗುವುದು.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ವರ್ಗದ ರೈತರಿಗೆ (ಆರ್.ಡಿ ಸಂಖ್ಯೆಯಿರುವ) ಜಾತಿ ಮತ್ತು ಆದಾಯ ಪ್ರಮಾಣ ಪತ್ರ ಸಲ್ಲಿಸುವುದು ಕಡ್ಡಾಯವಾಗಿದೆ). ಗರಿಷ್ಠ ಎರಡು ಎಕರೆ ಪ್ರದೇಶದವರಿಗೆಶೇ. 90 ರಷ್ಟು ಸಹಾಯಧನ ಹಾಗೂ ಇತರೆ ರೈತರಿಗೆ ಗರಿಷ್ಠ ಎರಡು ಎಕರೆ ಪ್ರದೇಶದವರೆಗೆ ಶೇ. 75 ರಷ್ಟು ಸಹಾಯಧನ ನೀಡಲಾಗುವುದು.

ಎಲ್ಲಾ ವರ್ಗದ ರೈತರಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನ್ವಯ ಎರಡು ಎಕರೆ ಮೇಲ್ಪಟ್ಟು ಗರಿಷ್ಠ ಐದು ಎಕರೆ ಪ್ರದೇಶದವರಿಗೆ ಶೇ. 45 ರಷ್ಟು ಸಹಾಯಧನ ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಹಾಗೂ ಅರ್ಜಿ ಮತ್ತು ದಾಖಲೆಗಳ ವಿವರಗಳಿಗಾಗಿ ಮೈಸೂರು ಜಿಪಂ, ಮೈಸೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೂರವಾಣಿ ಸಂಖ್ಯೆ 0821 2430450 , ಹೆಚ್.ಡಿ. ಕೋಟೆ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೂರವಾಣಿ ಸಂಖ್ಯೆ 08228 255261, ಹುಣಸೂರು ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೂರವಾಣಿ ಸಂಖ್ಯೆ 08222 252447, ಕೆ.ಆರ್. ನಗರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೂರವಾಣಿ ಸಂಖ್ಯೆ ದೂರವಾಣಿ ಸಂಖ್ಯೆ 08223 262791,  ನಂಜನಗೂಡು ತಾಲೂಕು ಹಿರಿಯ ಸಹಾಯಕ  ತೋಟಗಾರಿಕೆ ನಿರ್ದೇಶಕರ ದೂರವಾಣಿ ಸಂಖ್ಯೆ 08221 226201, ಪಿರಿಯಾಪಟ್ಟಣ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೂರವಾಣಿ ಸಂಖ್ಯೆ 08223 273535, ಟಿ. ನರಸಿಪುರ ತಾಲೂಕು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ದೂರವಾಣಿ ಸಂಖ್ಯೆ 08227 260086 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಪಂಚಾಯತ್ ನ ತೋಟಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

90% subsidy for sprinkler ಚಿಕ್ಕಮಗಳೂರು ಜಿಲ್ಲೆಯಲ್ಲಿಯ ರೈತರಿಂದಲೂ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯ ವತಿಯಿಂದ 2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ತೋಟಗಾರಿಕೆ ಬೆಳೆಗಳಿಗೆ ಹನಿ ನೀರಾವರಿ ಅಳವಡಿಸಿಕೊಳ್ಳಲು ಚಿಕ್ಕಮಗಳೂರು ಜಿಲ್ಲೆಯ ತರಿಕೇರಿ ತಾಲೂಕಿನ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಒರಿಜಿನಲ್ ಸರ್ವೆ ಟಿಪ್ಪಣಿ ಪುಸ್ತಕ ಒಂದೇ ನಿಮಿಷದಲ್ಲಿ ಮೊಬೈಲ್ ನಲ್ಲೇ ಚೆಕ್ ಮಾಡಿ

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯಧನ ಅದೇ ರೀತಿ ಸಾಮಾನ್ಯ ವರ್ಗದ ರೈತರಿಗೆ ಶೇ. 75 ರಷ್ಟು ಸಹಾಯಧನ ನೀಡಲು ಅವಕಾಶವಿದೆ ಎಂದು ತರಿಕೇರೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಕೆ. ಯತಿರಾಜ್ ತಿಳಿಸಿದ್ದಾರೆ.

ರೈತರು ಅನುಮೋದನೆಗೊಂಡ ಕಂಪನಿಗಳ ಮಾಹಿತಿ ಪಡೆದು ನೋಂದಣಿ ಮಾಡಿ ನೇರವಾಗಿ ಕಂಪನಿ ಮೂಲಕ ಅಳವಡಿಸಿಕೊಳ್ಳಲು ತಿಳಿಸಲಾಗಿದೆ. ಕರ್ನಾಟಕ ಯಾಂತ್ರೀಕರಣ ಯೋಜನೆಯ ಇಲಾಖೆಯಲ್ಲಿ ಉಪಯೋಗಿಸುವ ಯಂತ್ರೋಪಕರಣಗಳಿಗೆ ಸಹಾಯಧನ, ಪ್ರದೇಶ ಅಭಿವೃದ್ಧಿ ಯೋಜನೆಯಡಿ ಉಚಿತವಾಗಿ ತಾಳೆ ಸಸಿ, ನಿರ್ವಹಣೆ ಸಹಾಯಧನ ನೀಡಲಾಗುವುದು.

ಆಸಕ್ತ ರೈತರು ಸೆಪ್ಟೆಂಬರ್ 15 ರೊಳಗೆ ಅರ್ಜಿ ಸಮೇತ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಪಂ) ತರಿಕೇರೆ ಕಚೇರಿ ಅಥವಾ ರೈತ ಸಂಪರ್ಕ ಕೇಂದ್ರದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಲು ಕೋರಲಾಗಿದೆ.

ಲಭ್ಯತೆಯ ಆಧಾರದ ಮೇಲೆ ಹಿರಿತನಕ್ಕೆ ಅನುಸಾರವಾಗಿ ರೈತರಿಗೆ ಹನಿ ನೀರಾವರಿ ಹಾಗೂ ತುಂತುರು ನೀರಾವರಿ ಉಪಕರಣಗಳನ್ನು ನೀಡಲಾಗುವುದು.

Leave a Comment