ಕೃಷಿ ನವೋದ್ಯಮ ಯೋಜನೆ: 20 ಲಕ್ಷ ಸಬ್ಸಿಡಿಗೆ ಅರ್ಜಿ ಆಹ್ವಾನ

Written by Ramlinganna

Updated on:

ಕೃಷಿ ನವೋದ್ಯಯ ಯೋಜನೆಯಡಿಯಲ್ಲಿ ರೈತರಿಗೆ 5 ರಿಂದ 20 ಲಕ್ಷ ರೂಪಾಯಿಯವರೆಗೆ ( upto 20 lakh subsidy )ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮತ್ತು ಕೃಷಿ ಮಾರುಕಟ್ಟೆಗೆ ಸಂಬಂಧಿಸಿದ ವಲಯಗಳಲ್ಲಿ ನಾವೀನ್ಯತೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಕೃಷಿ ನವೋದ್ಯಮ ಯೋಜನೆಯಡಿ ರೈತರಿಗೆ ಅರ್ಜಿ ಆಹ್ವಾನಿಸಲಾಗಿದೆ.

ಕೃಷಿ ಇಲಾಖೆಯಿಂದ ಕೆ- ಕಿಸಾನ್ ವೆಬ್ ಪೈಟ್ ಮುಖಾಂತರ ಅರ್ಜಿ ಸಲ್ಲಿಸಬಹುದು. ಯೋಜನಾ ವರದಿಯ ಶೇ. 50 ರಷ್ಟು ಸಹಾಯಧನ (ಕನಿಷ್ಟ 5 ಲಕ್ಷ ರೂಪಾಯಿಯಿಂದ ಗರಿಷ್ಠ 20 ಲಕ್ಷ ರೂಪಾಯಿಗಳವರೆಗೆ) ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳ ವಿಸ್ತರಣೆ ಅಥವಾ ಮೇಲ್ದರ್ಜೆಗೆ ಸೇರಿಸಲು ಯೋಜನಾ ವರದಿಯ ಶೇ. 50 ರಷ್ಟು ಸಹಾಯಧನ (ಕನಿಷ್ಟ 20 ಲಕ್ಷ ರೂಪಾಯಿಯಿಂದ upto 20 lakh subsidy 50 ಲಕ್ಷ ರೂಪಾಯಿಗಳು) ಈ ಪ್ರಮುಖ ಘಟಕಗಳನ್ನು ಯೋಜನೆಯು ಒಳಗೊಂಡಿದೆ.

ಯೋಜನೆಗೆ ಅರ್ಜಿ ಸಲ್ಲಿಸುವ ಅಗ್ರಿ ಸ್ಟಾರ್ಟ್ ಅಪ್ ಗಳು ಕಡ್ಡಾಯವಾಗಿ ಕರ್ನಾಟಕದಲ್ಲಿ ನೋಂದಣಿಯಾಗಿರಬೇಕು. ನೋಂದಣಿಯಿಂದ ಇಲ್ಲಿಯವರೆಗೆ ಯಾವುದೇ ಆರ್ಥಿಕ ವರ್ಷದಲ್ಲಿ ವ್ಯವಹಾರ ಗಳಿಕೆಯು 5 ಕೋಟಿ ರೂಪಾಯಿ ಮೀರುವಂತಿಲ್ಲ. ಯಾವುದೇ ಅಗ್ರಿ ಸ್ಟಾರ್ಟ್ ಅಪ್ ಗಳು ಕೃಷಿ ವಲಯಕ್ಕೆ ಸಂಬಂಧಿಸಿದಾಗಿದ್ದು, ನೂತನ ಆವಿಷ್ಕಾರಗಳು, ಉಪಯೋಗಕಾರಿ ಉತ್ಪನ್ನಗಳು ಹಾಗೂ ಸೇವೆಗಳನ್ನು ಒಳಗೊಂಡಿದೆ.

ಇದನ್ನೂ ಓದಿ ನಿಮ್ಮ ಜಮೀನಿನ ಐಡಿ ನಿಮಗೆ ಗೊತ್ತೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ಉದ್ಯೋಗ ಸೃಜನೆ, ಸಾಮರ್ಥ್ಯ ಹೊಂದಿರಬೇಕು. ರೈತರು ಕೃಷಿಯೊಂದಿಗೆ ಇತರ ಪೂರಕ ಉಪಕಸುಬುಗಳಲ್ಲಿ ತೊಡಗಿಸಿಕೊಂಡು ಉದ್ಯಮಿಗಳಾಗಿ ಪರಿವರ್ತನೆ ಹೊಂದಲು ಉತ್ತೇಜನ ನೀಡುವ ಸಲುವಾಗಿ ರೈತರಿಂದ ಪ್ರಾರಂಭಿಸಲಾದ ಕೃಷಿ ನವೋದ್ಯಮಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಇತರೆ ಇಲಾಖೆಯಲ್ಲಿ ಮತ್ತು ಯೋಜನೆಗಳಡಿ ಈಗಾಗಲೇ ಸಹಾಯಧನದ ಫಲಾನುಭವಿ ಆಗಿರಬಾರದು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಏನಿದು ಕೃಷಿ ನವೋದ್ಯಮ ಯೋಜನೆ?

ಉದ್ಯಮಶೀಲತೆಯನ್ನು ಹೆಚ್ಚಿಸಲು ಹಾಗೂ ಗ್ರಾಮೀಣ ಭಾಗದ ಯುವಕರಿಗೆ ಉದ್ಯೋಗ ಸೃಜಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೃಷಿ ನವೋದ್ಯಮ ಹೊಸ ಯೋಜನೆಯನ್ನು ಜಾರಿಗೊಳಿಸಿದೆ. ಇದಕ್ಕಾಗೆ ಗರಿಷ್ಠ 20 ಲಕ್ಷರೂಪಾಯಿ ಸಬ್ಸಿಡಿ ನೀಡಲಾಗುವದು.

ಕೃಷಿ ಪದವೀಧರರು, ವಿದ್ಯಾವಂತ ಯುವಕರು, ಆಸಕ್ತ ಪ್ರಗತಿಪರರೈತರು ಹೊಸದಾಗಿ ಕೃಷಿಯಲ್ಲಿ ನವೋದ್ಯಮ ಸ್ಥಾಪಿಸಲು ಮುಂದೆ ಬರುವವರಿಗೆ ಸ್ಟಾರ್ಟಪ್ ಯೋಜನೆಯಡಿಯಲ್ಲಿ ಶೇ. 50 ರಷ್ಟು ಸಬ್ಸಿಡಿ ಅಂದರೆ 5 ರಿಂದ 20 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುವುದು.

ಇದನ್ನೂ ಓದಿ ವೃದ್ಯಾಪ್ಯ ವೇತನ, ವಿಧನ ವೇತನ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಿ

ಈಗಾಗಲೇ ಸ್ಥಾಪಿಸಲಾದ ನವೋದ್ಯಮಗಳಿಗೆ ವಿಸ್ತರಣೆ ಅಥವಾಮೇಲ್ದರ್ಜೆಗೇರಿಸಲು  ಶೇ. 50 ರಷ್ಟು ಸಹಾಯಧನ 20 ರಿಂದ 50 ಲಕ್ಷ ರೂಪಾಯಿಯವರೆಗೆ ಬ್ಯಾಂಕಿನಿಂದ ಸಾಲದ ಮೂಲಕ ಸಬ್ಸಿಡಿ ನೀಡಲಾಗುವುದು.

ಜಿಲ್ಲಾಮಟ್ಟದತಾಂತ್ರಿ ಸಮಿತಿ, ಅನುಷ್ಠಾನ ಸಮಿತಿ ಒಪ್ಪಿಗೆ ನಂತರ ರಾಜ್ಯ ಮಟ್ಟದಲ್ಲಿ ಅನುಮೋದನೆ ಪಡೆದ ನಂತರ ಈ ಸಹಾಯಧನ ನೀಡಲಾಗುವುದು. ಈ ಕುರಿತು ಹೆಚ್ಚಿನ ಮಾಹಿತಿಗೆ ಹತ್ತಿರದ ತಾಲೂಕು ಸಹಾಯಕ ಕೃಷಿ ನಿರ್ದೇಶಕರನ್ನು ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ. ಅಥವಾ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬಹುದು. ಮೊದಲು ಅರ್ಜಿ ಸಲ್ಲಿಸಿದ ರೈತರಿಗೆ ಈ ಸೌಲಭ್ಯ ಸಿಗುವುದು. ಕೂಡಲೇ ತಮ್ಮ ಹತ್ತಿರ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಅರ್ಜಿಯ ಮಾಹಿತಿ ಮಾದರಿಗಾಗಿ ರೈತ ಸಂಪರ್ಕ ಕೇಂದ್ರಕ್ಕೆ ಅಥವಾ ಕೃಷಿ ಇಲಾಖೆಗೆ ಭೇಟಿ ನೀಡಲು ಕೋರಲಾಗಿದೆ.

Leave a Comment