ಆಟೋ ಖರೀದಿಗೆ 2 ಲಕ್ಷ ಸಬ್ಸಿಡಿ ನೀಡಲು ಅರ್ಜಿಆಹ್ವಾನ

Written by Ramlinganna

Updated on:

Upto 2 lakh subsidy  ನಿರುದ್ಯೋಗಿ ಯುವಕ ಯುವತಿಯರಿಗೆ ಮೂರು ಚಕ್ರಗಳ ಸರಕು ಸಾಗಾಣಿಕೆ ವಾಹನ ಹಾಗೂ ನಾಲ್ಕು ಚಕ್ರಗಳ ಸರಕು ಸಾಗಾಣಿಕೆ ವಾಹನ ಖರೀದಿಗೆ 2 ಲಕ್ಷ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಡಾ ಬಿಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ, ಕರ್ನಾಟಕ ಭೋವಿು ಅಭಿವೃದ್ಧಿ ನಿಗಮ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ, ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮಗಳ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.

ನಿರುದ್ಯೋಗ ಯುವಕ ಯುವತಿಯರಿಗಾಗಿ ಸ್ವಯಂ ಉದ್ಯೋಗ ಕೈಗೊಳ್ಳಲು ನಿಗಮದಿಂದ ಸಹಾಯಧನ ನೀಡಲಾಗುವುದು. ಮತ್ತು ಬ್ಯಾಂಕಿನ ಸಾಲ ವ್ಯವಸ್ಥೆ ಮಾಡಲಾಗುವುದು.

ಸ್ವಯಂ ಉದ್ಯೋಗ ಘಟಕ ವೆಚ್ಚದ ಶೇ. 50 ರಷ್ಟು ಅಥವಾ ಗರಿಷ್ಠ 2 ಲಕ್ಷ ಸಹಾಯಧನ ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ. (ವಾಹನ ಉದ್ದೇಶ ಹೊರತುಪಡಿಸಿ)

ಇದನ್ನೂ ಓದಿ ಈ ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆ- ಸ್ಟೇಟಸ್ ಚೆಕ್ ಮಾಡಿ

ಸರಕು ಸಾಗಾಣಿಕೆ ವಾಹನ ಉದ್ದೇಶಕ್ಕೆ ಘಟಕ ವೆಚ್ಚದ ಶೇ. 50 ರಷ್ಟು ಅಥವಾ ಗರಿಷ್ಠ 3.50 ಲಕ್ಷ ರೂಪಾಯಿಗಳ ಸಹಾಯಧನ ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.

ಅರ್ಹತೆಗಳು

ಅರ್ಜಿದಾರರು ಪರಿಶಿಷ್ಟ ಜಾತಿಗೆ ಸೇರಿದವರಾಗಿರಬೇಕು. ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು.ಅರ್ಜಿದಾರರು 21 ರಿಂದ 50 ವಯೋಮಾನದೊಳಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನವು 1.50 ಲಕ್ಷ ಗ್ರಾಮೀಣ ಪ್ರದೇಶದವರಿಗೆ ಹಾಗೂ 2 ಲಕ್ಷ ನಗರ ಪ್ರದೇಶದವರಿಗೆ ಇರಬೇಕು. ಅರ್ಜಿದಾರರು ಅಥವಾ ಕುಟುಂಬದ ಅವಲಂಬಿತ ಯಾವುದೇ ಸದಸ್ಯರು ಈ ಹಿಂದೆ ನಿಗಮ ಅಥವಾ ಸರ್ಕಾರದಿಂದ 1 ಲಕ್ಷ ಮೇಲ್ಪಟ್ಟು ಸೌಲಭ್ಯ ಪಡೆದಿದ್ದಲ್ಲಿ ಅಂತಹ ಫಲಾನುಭವಿಗಳು ಈ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.  ಅರ್ಜಿದಾರರು ಲಘು ವಾಹನ  ಚಾಲನಾ ಪರವಾನಗಿ ಹೊಂದಿರಬೇಕು.

Upto 2 lakh subsidy  ಯೋಜನೆಯಡಿ ಆಯ್ಕೆಗೆ ಷರತ್ತುಗಳು

ಅರ್ಜಿದಾರರು ಆಯ್ಕೆ ಸಮಿತಿಯಲ್ಲಿ ಆಯ್ಕೆಯಾಗಿರಬೇಕು.  ಮಂಜೂರಾತಿ ಪಡೆದ ಫಲಾನುಭವಿಗಳು ಅನರ್ಹರು ಎಂದು ತಿಳಿದುಬಂದ ಸಂದರ್ಭದಲ್ಲಿ ಮಂಜೂರಾತಿಯನ್ನು ರದ್ದುಪಡಿಸಲಾಗುವುದು. ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಟ್ಯಾಕ್ಸಿ ಯೋಜನ ಅಡಿ ಸೌಲಭ್ಯ ಪಡೆದವರು ಈ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿರುವುದಿಲ್ಲ.

ಭೂ ಒಡೆತನ ಯೋಜನೆಯಡಿಯಲ್ಲಿ ಶೇ. 50 ರಷ್ಟು ಸಬ್ಸಿಡಿ

ಭೂ ಒಡೆತನ ಯೋಜನೆಯು ನಿಗಮದ ಒಂದು ಪ್ರತಿಷ್ಠಿತ ಯೋಜನೆಯಾಗಿದ್ದು, ಪರಿಶಿಷ್ಟ ಜಾತಿಯ ಭೂ ರಹಿತ ಕೃಷಿ ಕಾರ್ಮಿಕರ ಕುಟುಂಬದ ಮಹಿಳೆಯರಿಗೆ ಮಾತ್ರ ಈ ಯೋಜನೆಯಡಿ ಸೌಲಭ್ಯ ನೀಡಲಾಗುವುದು.

ಈ ಯೋಜನೆಯಡಿಯಲ್ಲಿ ಭೂಮಿ ಖರೀದಿಗೆ ಶೇ. 50 ರಷ್ಟು ಅಂದರೆ 10 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲಾಗುುದು. ಉಳಿದ ಹಣವನ್ನುಬ್ಯಾಂಕಿನಿಂದ ಕಡಿಮೆದರದಲ್ಲಿ ಸಾಲ ಸೌಲಭ್ಯ ಪಡೆಯಬಹುದು.  ಫಲಾನುಭವಿಯು ಸಾಲದ ಹಣವನ್ನು 10 ವಾರ್ಷಿಕ ಕಂತುಗಳಲ್ಲಿ ಮರಪಾವತಿ ಮಾಡಬೇಕು. ಇದಕ್ಕೆ ಬಡ್ಡಿದರ ಶೇ 6 ರಷ್ಟು ವಿಧಿಸಲಾಗುವುದು.

ಇದನ್ನೂ ಓದಿ ಗ್ರಾಮ ಪಂಚಾಯತ್ ನ ಮಾಹಿತಿ ಮೊಬೈಲ್ ನಲ್ಲೇ ಪಡೆಯಲು ಇಲ್ಲಿ ಕ್ಲಿಕ್ ಮಾಡಿ

ಜಮೀನನ್ನು ಮಾರಾಟ ಮಾಡುವವರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗಕ್ಕೆ ಸೇರಿದವರಾಗಿರಬೇಕು. ಫಲಾನುಭವಿಯು ವಾಸಿಸುತ್ತಿರುವ ಸ್ಥಳದಿಂದ ಗರಿಷ್ಠ10 ಕಿ.ಮೀ. ವ್ಯಾಪ್ತಿಯೊಳಗೆ ಜಮೀನನ್ನು ಫಲಾನುಭವಿಗೆ ಖರೀದಿಸಿ ಕೊಡಲಾಗುವುದು. ಜಿಲ್ಲಾಮಟ್ಟದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಸಮಿತಿಯು ದರ ನಿಗದಿಪಡಿಸುತ್ತದೆ.

ಅರ್ಜಿ ಎಲ್ಲಿ ಸಲ್ಲಿಸಬೇಕು?

ಅರ್ಜಿಗಳನ್ನು ಫಲಾನುಭವಿಗಳು ಹತ್ತಿರದ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲಿಚ್ಚಿಸುವವರು ಸೇವಾಸಿಂಧು ಪೋರ್ಟಲ್

https://sevasindhu.karnataka.gov.in/Sevasindhu/Kannada ಈ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿಸೆಂಬರ್ 15 ಕೊನೆಯ ದಿನವಾಗಿದೆ.

Leave a Comment