ನೀರಾವರಿ ಮಾಡಿ ತೋಟಗಾರಿಕೆ ಬೆಳೆ ಸೇರಿದಂತೆ ಇನ್ನಿತರ ಬೆಳೆ ಬೆಳೆಯಲು ಆಸಕ್ತಿಯಿರುವ ರೈತರಿಗಿಲ್ಲಿದೆ ಸಂತಸದ ಸುದ್ದಿ. ಹೌದು, ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಕೊಳವೆ ಬಾವಿ ಕೊರೆಯಲು 2 ಲಕ್ಷ ರೂಪಾಯಿಯವರೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
2022-23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಗಂಗಾ ಕಲ್ಯಾಣ ನೀರಾವರಿ ಯೋಜನೆಯಡಿ ಸೌಲಭ್ಯ ಪಡೆಯಲು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ವತಿಯಿಂದ ಅರ್ಜಿ ಆಹ್ವಾನಿಸಲಾಗಿದೆ.
ಉಪ್ಪಾರ ಮತ್ತು ಇದರ ಉಪಜಾತಿಗೆ ಸೇರಿದ ಅರ್ಹ ಫಲಾಪೇಕ್ಷಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಯೋಜನೆಯಡಿಯಲ್ಲಿ ಉಪ್ಪಾ ಮತ್ತು ಇತರ ಉಪಜಾತಿಯ ಸಮಾಜದ ಸಣ್ಣ ಮತ್ತು ಅತೀ ಸಣ್ಣ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾಗುವುದು. ಗಂಗಾ ಕಲ್ಯಾಣ ಯೋಜನೆಯಡಿ ನೀಡಲಾಗುವ ಈ ಘಟಕದ ವೆಚ್ಚ 2.50 ಅಂದರೆ ಎರಡುವರೆ ಲಕ್ಷ ರೂಪಾಯಿ ಆಗಿರುತ್ತದೆ. ಇದರಲ್ಲಿ ರೈತರಿಗೆ 2 ಲಕ್ಷ ರೂಪಾಯಿಯವರೆಗೆ ಸಹಾಯಧನ ನೀಡಲಾಗುವುದು. ಒಂದು ವೇಳೆ ರೈತರಿಗೆ ಹೆಚ್ಚುವರಿ ಆಗತ್ಯವಿದ್ದಲ್ಲಿ 50 ಸಾವಿರ ರೂಪಾಯಿಗಳನ್ನು ಸಾಲದ ರೂಪದಲ್ಲಿ ಬ್ಯಾಂಕಿನಿಂದ ನೀಡಲಾಗುವುದು. ವಾರ್ಷಿಕ ಶೇ. 4 ರ ಬಡ್ಡಿ ದರದಲ್ಲಿ ಮೂರು ವರ್ಷಗಳ ಮರುಪಾವತಿ ಅವಧಿಯೊಂದಿಗೆ ನೀಡಲಾಗುವುದು.
ಅರ್ಜಿ ಸಲ್ಲಿಸಲು ಬೇಕಾಗುವ ಅರ್ಹತೆಗಳು
ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಪ್ರವರ್ಗ 1 ರಡಿಯ್ಲಲಿ ಬರುವ ಕ್ರಮ ಸಂಖ್ಯೆ ಪ್ರವರ್ಗ-1ರ 53 (ಎ) ಯಿಂದ 53(ವಿ) ವರೆಗಿನ ಉಪ್ಪಾರ ಮತ್ತು ಇದರ ಉಪಜಾತಿಗೆ ಸೇರಿದವರಾಗಿರಬೇಕು. ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಹೊಂದಿರಬೇಕು. ಆನ್ಲೈನ್ ನಲ್ಲಿಅರ್ಜಿ ಸಲ್ಲಿಸುವಾಗ ರೈತರ ಬಳಿ ಆಧಾರ್ ಕಾರ್ಡ್ ಇರಬೇಕು. ಇದರೊಂದಿಗೆ ಬ್ಯಾಂಕ್ ಪಾಸ್ಬುಕ್ ಝರಾಕ್ಸ್ ಪ್ರತಿ ಇರಬೇಕು. ಜಮೀನು ಹೊಂದಿರುವ ಪಹಣಿ (ಆರ್.ಟಿ.ಸಿ) ದಾಖಲೆ ಇರಬೇಕು.
ಇದನ್ನೂ ಓದಿ : PM kisan ಅರ್ಹ ಮತ್ತು ಅನರ್ಹ ರೈತರ ಪಟ್ಟಿ ಬಿಡುಗಡೆ: ಮೊಬೈಲ್ ನಲ್ಲೆ ಚೆಕ್ ಮಾಡಿ ಯಾವ ಪಟ್ಟಿಯಲ್ಲಿದೆ ನಿಮ್ಮ ಹೆಸರು
ಒಂದೇ ಸ್ಥಳಕ್ಕೆ ಹೊಂದಿಕೊಂಡಿರುವಂತೆ ಕನಿಷ್ಠ 2 ಎಕರೆ ಜಮೀನು ಹೊಂದಿರಬೇಕು. ಉಡುಪಿ, ದಕ್ಷಿಣ ಕನ್ನಡ, ಕೊಡಗು, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಜಮೀನು ಹೊಂದಿರಬೇಕು. ಅರ್ಜಿದಾರರ ವಾರ್ಷಿಕ ವರಮಾನವು ಗ್ರಾಮೀಣ ಪ್ರದೇಶದಲ್ಲಿ 98 ಸಾವಿರ ರೂಪಾಯಿ ಮೀರಿರಬಾರದು. ಅರ್ಜಿದಾರರ ವಯಸ್ಸು ಕನಿಷ್ಠ 18 ವರ್ಷ ಹಾಗೂ ಗರಿಷ್ಠ 55 ವರ್ಷಗಳ ಮಿತಿಯೊಳಗಿರಬೇಕು. ಮಹಿಳೆಯರಿಗೆ ಈ ಯೋಜನೆಯಲ್ಲಿ ಶೇ. 33 ರಷ್ಟು ಮೀಸಲು ನಿಗದಿಪಡಿಸಲಾಗಿದೆ. ಅಂಗವಿಕಲರಿಗೆ ಈ ಯೋಜನೆಯಲ್ಲಿ ಶೇ. 5 ರಷ್ಟು ಮೀಸಲು ನಿಗದಿಪಡಿಸಲಾಗಿದೆ. ನಿಗದಿಪಡಿಸಲಾಗಿದೆ. ಅರ್ಜಿದಾರರು ಸಣ್ಣ ಮತ್ತು ಅಥೀ ಸಣ್ಣ ರೈತರಾಗಿರುವ ಬಗ್ಗೆ ಕಂದಾಯ ಅಧಿಕಾರಿಗಳಿಂದ ಪಡೆದ ಪ್ರಮಾಣ ಪತ್ರ ಹೊಂದಿರಬೇಕು.
ಅರ್ಜಿ ಎಲ್ಲಿ ಸಲ್ಲಿಸಬೇಕು?
ಅರ್ಜಿದಾರರು ತಮ್ಮ ಅರ್ಜಿಯನ್ನು
https://sevasindhu.karnataka.gov.in/Sevasindhu/Kannada
ತಂತ್ರಾಂಶದಲ್ಲಿ, ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ನಾಗರಿಕ ಸೇವಾ ಕೇಂದ್ರಗಳಲ್ಲಿ ಮಾರ್ಚ್ 2 ರೊಳಗಾಗಿ ಆನ್ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.
ಅರ್ಹ ಅರ್ಜಿದಾರರು ಹೆಚ್ಚಿನ ಮಾಹಿತಿಗಾಗಿ ಸೇವಾ ಸಿಂಧು ತಂತ್ರಾಂಶದ ವೆಬ್ಸೈಟ್ ನ್ನು ಹಾಗೂ ಅಥವಾ ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ ವೆಬ್ಸೈಟ್
https://uppardevelopment.karnataka.gov.in/
ಗೆ ಸಂಪರ್ಕಿಸಬಹುದು. ನಿಗಮದ ಸಹಾಯವಾಣಿ ಸಂಖ್ಯೆ 7026288888 ಗೆ ಬೆಳಗ್ಗೆ 10 ರಿಂದ ಸಾಯಂಕಾಲ 5.30 ಗಂಟೆಯವರೆಗೆ ಕರೆ ಮಾಡಬಹುದು.