ಪ್ರತಿಯೊಬ್ಬ ರೈತರು ಬ್ಯಾಡಗಿ, ಗುಂಟೂರು ಮೆಣಸಿನಕಾಯಿ ಹೆಸರು ಕೇಳಿರಬಹುದು. ಆದರೆ ನಮ್ಮ ದೇಶದಲ್ಲಿ ಇನ್ನೂ ಬಹಳಷ್ಟು ಮೆಣಸಿನಕಾಯಿಗಳು ತಮ್ಮ ಇಳುವರಿಯಿಂದ ಮತ್ತು ಅದರಲ್ಲಿರುವ ಖಾರದ ಗುಣದಿಂದ ಹೆಸರು ಪಡೆದಿವೆ. ಇಲ್ಲಿ ಟಾಪ್ ಟೆನ್ ಮೆಣಸಿನಕಾಯಿ (Top 10 hottest Chilies in India) ತಳಿಗಳ ಬಗ್ಗೆ ಇಲ್ಲಿ ಪರಿಚಯಿಸುತ್ತಿದ್ದೇನೆ.
ಮೆಣಸಿನಕಾಯಿ ಮುಖ್ಯವಾದ ತರಕಾರಿ ಹಾಗೂ ಸಾಂಬಾರು ಬೆಳೆಗಳಲ್ಲಿ ಒಂದಾಗಿದೆ. ಇದನ್ನು ಖುಷ್ಕಿ ಹಾಗೂ ನೀರಾವರಿ ಎರಡರಲ್ಲೂ ಬೆಳೆಯಲಾಗುತ್ತದೆ. ನೀರು ಬಸಿದು ಹೋಗುವಂತಹ ಫಲವತ್ತಾದ ಗೋಡುಮಣ್ಣು ಈ ಬೆಳೆಗ ಉತ್ತಮ, ಮರಳು, ಮಿಶ್ರಿತ ಕಪ್ಪು ಮತ್ತು ಕೆಂಪು ಗೋಡು ಮಣ್ಣುಗಳಲ್ಲಿ ಈ ಬೆಳೆಯನ್ನು ಚೆನ್ನಾಗಿ ಬೆಳೆಸಬಹುದು.
HPH-1900, HPH-117, HPH-490, Bullet, Gayatgri, veera, pusa Sadabara, Arka Kyati ಸೇರಿದಂತೆ ಇನ್ನಿತರ ತಳಿಗಳು ಹೆಚ್ಚು ಇಳುವರಿ ಕೊಡುವ ತಳಿಗಳಾಗಿವೆ.
ಟಾಪ್ ಟೆನ್ ಮೆಣಸಿನಕಾಯಿ ತಳಿಗಳು
ಕೆಲವು ಅತೀ ಹೆಚ್ಚು ಖಾರ, ಕೆಲವು ಕಡಿಮೆ ತೀಕ್ಷ್ಣ ಮತ್ತು ಅವುಗಳ ರುಚಿ ಇನ್ನೂ ಕೆಲವು ಬಣ್ಣಕ್ಕೆ ಹೆಚ್ಚು ಜನಪ್ರಿಯವಾಗಿವೆ. ಅತೀ ಹೆಚ್ಚು ಖಾರವಿರುವ ಮೆಣಿಸಿನ ಕಾಯಿಯ ತಳಿಗಳ ಮಾಹಿತಿ ಇಲ್ಲಿದೆ.
- ಭುತ್ ಜೊಲೊಕಿಯಾ (Bhut Jolokia)
ಭುತ್ ಜೊಲೊಕಿಯಾವನ್ನು ‘ಘೋಸ್ಟ್ ಪೆಪ್ಪರ್’ ಎಂದೂ ಕರೆಯಲಾಗುತ್ತದೆ. 2007 ರಲ್ಲಿ ಗಿನ್ನೆಸ್ ಪುಸ್ತಕದಲ್ಲಿ ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ ಎಂದು ದಾಖಲಾಗಿದೆ. ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಈ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ಭುಟ್ ಜೊಲೊಕಿಯಾ ಒಂದು ಅಂತರ್ ನಿರ್ದಿಷ್ಟ (ಕ್ಯಾಪ್ಸಿಕಂ ಚೈನೀಸ್ ಮತ್ತು ಕ್ಯಾಪ್ಸಿಕಂ ಫ್ರಾನುಟೆಸೆನ್ಸ್) ಹೈಬ್ರಿಡ್ ಮೆಣಸಿನಕಾಯಿ. ನಾವು ತಿನ್ನುವ ಮಾಮೂಲಿ ಮೆಣಸಿನ ಕಾಯಿಗಿಂದ 400 ಪಟ್ಟು ಹೆಚ್ಚು ಖಾರವಾಗಿ ಇರುತ್ತವೆ ಇದು
- ಗುಂಟೂರು ಮೆಣಸಿನಕಾಯಿ (Guntoor Chilli)
ಗುಂಟೂರು ಶ್ರೀಲಂಕಾ, ಬಾಂಗ್ಲಾದೇಶ, ಮಧ್ಯಪ್ರಾಚ್ಯ, ದಕ್ಷಿಣ ಕೊರಿಯಾ, ಯುನೈಟೆಡ್ ಕಿಂಗ್ ಡಮ್, ಯುಎಸ್ಎ ಮತ್ತು ಲ್ಯಾಟಿನ್ ಅಮೆರಿಕಾದಲ್ಲಿ ಹೆಚ್ಚು ಬೆಳೆಸಲಾಗುತ್ತದೆ. ಈ ತಳಿಯು ಪ್ರಪಂಚದಾದ್ಯಂತ ಪ್ರಸಿದ್ಧವಾಗಿದೆ. ವಿಶೇಷವಾಗಿ ಇದನ್ನು ಹೆಚ್ಚಾಗಿ ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಬೆಳೆಸಲಾಗುತ್ತದೆ. ಅದಕ್ಕಾಗಿಯೇ ಇದನ್ನು ಗುಂಟೂರು ಮೆಣಸಿನಕಾಯಿ ಎಂದು ಕರೆಯಲಾಗುತ್ತದೆ.
- ಕಾಶ್ಮೀರಿ ಮೆಣಸಿನಕಾಯಿ (Kashmiri Chili)
ಈ ಮೆಣಸಿನಕಾಯಿಯು ಭಾರತದಲ್ಲಿ ಕೆಂಪು ಮೆಣಸಿನಕಾಯಿ ಎಂದೇ ಹೆಸರಾಗಿದೆ. . ಕಾಶ್ಮೀರಿ ಮಿರ್ಚ್ ಪೌಡರ್ ಇಲ್ಲದ ಭಾರತೀಯ ಅಡುಗೆ ಅಪೂರ್ಣವಾಗಿದೆ, ಇದು ಪ್ರತಿಯೊಬ್ಬ ಮನೆಯ ಅಡುಗೆಯವರ ಬಾಯಲ್ಲಿ ನೀರೂರಿಸುವ ಅಡಿಗೆಯಲ್ಲಿ ಬಣ್ಣವನ್ನು ತರುತ್ತದೆ. ಭಾರತದಲ್ಲಿ ಕಂಡುಬರುವ ಇತರ ರೂಪಾಂತರಗಳಿಗೆ ವ್ಯತಿರಿಕ್ತವಾಗಿ, ಇದು ಕಡಿಮೆ ಖಾರವಿರುತ್ತದೆ.
- ಬ್ಯಾಡಗಿ ಮೆಣಸಿನಕಾಯಿ (Byadagi Chili,)
ಇದು ಪ್ರಸಿದ್ಧ ಮೆಣಸಿನಕಾಯಿ ಪ್ರಭೇದವಾಗಿದ್ದು, ಹೆಚ್ಚಾಗಿ ಕರ್ನಾಟಕದಲ್ಲಿ ಬೆಳೆಯಲಾಗುತ್ತದೆ. ಬ್ಯಾಡಗಿ ಮೆಣಸಿನ ಕಾಯಿಯನ್ನು ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ಅತೀ ಹೆಚ್ಚು ಬೆಳೆಸಲಾಗುತ್ತದೆ. ಹಾಗಾಗಿ ಇದನ್ನು ಬ್ಯಾಡಗಿ ಎಂದು ಕರೆಯಲಾಗುತ್ತದೆ. ಇದು ಗಾಢವಾದ ಕೆಂಪುಬಣ್ಣಹೊಂದಿದೆ. ಕರ್ನಾಟಕದಲ್ಲಿ ಅತೀ ಹೆಚ್ಚು ಬೆಲೆಗೆ ಮಾರಾಟವಾಗುವ ಇದಕ್ಕೆ ಹೆಚ್ಚು ಬೇಡಿಕೆಯಿದೆ.
- ಧಾನಿ (Dhani)
ಧಾನಿಯನ್ನು ಮಿಜೋರಾಂ ನಲ್ಲಿ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿ ವ್ಯಾಪಕವಾಗಿ ಬೆಳೆಸಲಾಗುತ್ತದ, ಇದನ್ನು ಪಕ್ಷಿಯ ಕಣ್ಣಿನ ಮೆಣಸಿನಕಾಯಿ ಎಂದು ಕರೆಯುತ್ತಾರೆ. ಏಕೆಂದರೆ ಅದರ ರೂಪ. ಇದು ಅತ್ಯಂತ ಚಿಕ್ಕದಾಗಿದ್ದರೂ, ಇದು ನಿಜವಾಗಿಯೂ ಮಸಾಲೆಯುಕ್ತ, ತೀಕ್ಷ್ಣವಾದ ಕೆಂಪು ಮೆಣಸಿನಕಾಯಿಯಾಗಿದ್ದು, ಕಲ್ಕತ್ತಾ ಮಾರುಕಟ್ಟೆಗಳಲ್ಲಿ ಜನಪ್ರಿಯವಾಗಿದೆ.
- ಗುಂಡು (Gundu)
ಫಲವತ್ತಾದ ರಾಮನಾಡ್ ಪ್ರದೇಶಗಳಲ್ಲಿ ತಮಿಳುನಾಡಿನಲ್ಲಿ ಬೆಳೆಯುವ ದುಂಡು ಕೊಬ್ಬಿನ ಮೆಣಸಿನಕಾಯಿ. ಫ್ಯಾಟ್ ಅಂಡ್ ರೌಂಡ್ ಎಂದರೆ ತಮಿಳಿನಲ್ಲಿ ಗುಂಡು ಎಂದರ್ಥ. ಅದಕ್ಕಾಗಿಯೇ ಈ ಹೆಸರು ಬಂದಿದೆ.
- ಜ್ವಾಲಾ (Jwala Chili)
ಈ ಮೆಣಸಿನಕಾಯಿಯನ್ನು ಖೇಡಾ, ಮೆಹ್ಸಾನಾ ಮತ್ತು ದಕ್ಷಿಣ ಗುಜರಾತ್ ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ಇದನ್ನು ಫಿಂಗರ್ ಹಾಟ್ ಪೆಪ್ಪರ್ (ಎಫ್ ಎಚ್ ಪಿ) ಎಂದೂ ಕರೆಯಲಾಗುತ್ತದೆ. ಆರಂಭದಲ್ಲಿ ಹಸಿರು ಬಣ್ಣದಿಂದ ಇದ್ದರೂ, ಪಕ್ವವಾಗುತ್ತಿದ್ದಂತೆ ಕೆಂಪಾಗುತ್ತದೆ. ಅವುಗಳನ್ನು ಮನೆಯಲ್ಲಿಯೂ ಬೆಳೆಸಬಹುದು. ಈ ಮೆಣಸಿನಕಾಯಿಯು ಹೆಚ್ಚು ತೀಕ್ಷ್ಣವಾದ ರುಚಿಯನ್ನು ಹೊಂದಿದೆ.
- ಇಂಡೋ-5 ಮೆಣಸಿನಕಾಯಿ (Indo-5)
ಇದು ಭಾರತದ ಅತ್ಯಂತ ಪ್ರಸಿದ್ಧ ಕೆಂಪು ಮೆಣಸಿನಕಾಯಿಗಳಲ್ಲಿ ಒಂದಾಗಿದೆ, ಇದನ್ನು ಇಂಡೋಮ್-5, ಯುಎಸ್-5 ಮತ್ತು ಎಂಡೋ-5 ಮೆಣಸಿನಕಾಯಿ ಎಂದು ಕರೆಯಲಾಗುತ್ತದೆ ಮತ್ತು ಪ್ರಪಂಚದಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ರವಾನಿಸಲಾಗುತ್ತದೆ. ಭಾರತದಲ್ಲಿ ಇಂಡೋ 5 ಕೆಂಪು ಮೆಣಸಿನಕಾಯಿಯನ್ನು ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚು ಬೆಳೆಯಲಾಗುತ್ತದೆ.
- ವಾರಂಗಲ್ ಚಪ್ಪಟಾ (Varangal)
ಸಣ್ಣ ಮತ್ತು ಆಳವಾದ ಕೆಂಪು ಬಣ್ಣ, ಕಡಿಮೆ ನಯವಾದ ಮತ್ತು ಮಧ್ಯಮ ರುಚಿ, ಚಿಲ್ಲಿ ಟೊಮೆಟೊ ಅಥವಾ ಚಪ್ಪಟಾ ವಾರಂಗಲ್ ತುಂಬಾ ಬಣ್ಣ ಮತ್ತು ಕಡಿಮೆ ಖಾರ ಹೊಂದಿದೆ, ಇದನ್ನು ಸಾಮಾನ್ಯವಾಗಿ ಬಣ್ಣ ಹೊರತೆಗೆಯುವಲ್ಲಿ ಬಳಸಲಾಗುತ್ತದೆ.
- ಭಾವನಗ್ರಿ ಮಿರ್ಚಿ (Bhavanagri)
ಭಾವನಗ್ರಿ ಉದ್ದಮೆಣಸಿನಕಾಯಿ. 13 ಸೆಂ.ಮೀ ಉದ್ದ ಮತ್ತು 2 ಸೆಂ.ಮೀ ದಪ್ಪ ಇರುತ್ತದೆ. ಈ ಮೆಣಸಿನ ಕಾಯಿ ಸಹ ಹೆಚ್ಚು ಖಾರವಾಗಿರುತ್ತದೆ. ಅವು ಪಕ್ವವಾಗುತ್ತಿದ್ದಂತೆ, ಹಸಿರು ಬಣ್ಣದಿಂದ ಕೆಂಪು ಬಣ್ಣಕ್ಕೆ ರೂಪಾಂತರಗೊಳ್ಳುತ್ತವೆ. ಸಸ್ಯದಲ್ಲಿ ಹಸಿರು ಕಾಂಡಗಳು, ಹಸಿರು ಎಲೆಗಳು ಮತ್ತು ಬಿಳಿ ಹೂವುಗಳಿರುತ್ತವೆ.
ಭಾರತದಲ್ಲಿ ಅತೀ ಹೆಚ್ಚು ಖಾರವಿರುವ ಮೆಣಸಿನಕಾಯಿ ಯಾವುದು?
ಭುತ್ ಜೋಲಿಕಿಯಾ
ಭುತ್ ಜೋಲಿಕಿಯಾ ವಿಶ್ವದ ಅತ್ಯಂತ ಖಾರವಾದ ಮೆಣಸಿನಕಾಯಿ ಎಂದು ಹೆಸರುವಾಸಿಯಾಗಿದೆ. ಇದನ್ನು ‘ಭೂತ ಮೆಣಸು’ ಎಂದೂ ಕರೆಯಲಾಗುತ್ತದೆ ಮತ್ತು ಅರುಣಾಚಲ ಪ್ರದೇಶ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಮಣಿಪುರದಲ್ಲಿ ಬೆಳೆಯಲಾಗುತ್ತದೆ.