ಫೆ. 24 ರಿಂದ 26 ರವರೆಗೆ ನೂತನ ಗೋವುಗಳ, ಶ್ವಾನಗಳ ಪ್ರದರ್ಶನ, ಕೃಷಿ ಯಂತ್ರೋಪಕರಣಗಳ ಹಾಗೂ ಮತ್ಸ್ಯಮೇಳ ಪ್ರದರ್ಶನ ಏರ್ಪಡಿಸಲಾಗಿದೆ.

ಹೌದು, ಕಲಬುರಗಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ, ಜಿಲ್ಲಡಳಿತ ಹಾಗೂ ಜಿಲ್ಲಾ ಪಂಚಾಯತ್ ಸಂಯುಕ್ತಾಶ್ರಯದಲ್ಲಿ ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಬೃಹತ್ ಮಟ್ಟದ ಪ್ರದರ್ಶನ  ಹಾಗೂ ಮರಾಟ ಮಳಿಗೆಗಳನ್ನು ಫೆಬ್ರವರಿ 24 ರಿಂದ 26 ರವರೆಗೆ ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಉತ್ಸವದ ಪ್ರದರ್ಶನ ಸಮಿತಿಯು ತಿಳಿಸಿದೆ.

ಮೇಲ್ಕಂಡ ದಿನದಂದು ಪ್ರತಿದಿನ ಬೆಳಗ್ಗೆ 10 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಈ ಪ್ರದರ್ಶನ  ಹಾಗೂ ಮಾರಾಟ ಮೇಳವನ್ನು ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ ಸಾವಯವ ಮತ್ತು ಸಿರಿಧಾನ್ಯಗಳ ಮೇಳ, ಸಮಗ್ರ ಕೃಷಿ ಪದ್ಧತಿ ಪ್ರಾತ್ಯಕ್ಷಿಕೆ, ಫಲಪುಷ್ಪ ಪ್ರದರ್ಶನ, ಮತ್ಸ್ಯ ಮೇಳ, ಸ್ವ ಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ, ಎಫ್.ಪಿಓಗಳ ಉತ್ಪನ್ನಗಳ ಪ್ರದರ್ಶನ ಮಾಡಲಾಗುವುದು.  ಇದರೊಂದಿಗೆ ನವೀನ ಕೃಷಿ ಹಾಗೂ ಯಂತ್ರೋಪಕರಣಗಳ ಪ್ರದರ್ಶನ ಸಹ ಹಮ್ಮಿಕೊಳ್ಳಲಾಗಿದೆ. ಇದಲ್ಲದೆ ಫೆಬ್ರವರಿ 25 ಹಾಗೂ 26 ರಂದು ನೂತನ ಗೋವು ತಳಿಗಳ ಪ್ರದರ್ಶನ  ನಡೆಯಲಿದೆ.

ಆಸಕ್ತರು ಪ್ರದರ್ಶನದಲ್ಲಿಮಳಿಗೆಗಾಗಿ ಮೊಬೈಲ್ ನಂಬರ್ 8453381700, 8217333171, 9880626689 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಫೆಬ್ರವರಿ 26 ರಂದು ಶ್ವಾನಗಳ ಪ್ರದರ್ಶನ

ಕಲ್ಯಾಣ ಕರ್ನಾಟಕ ಉತ್ಸವ ಅಂಗವಾಗಿ ಕಲಬುರಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಫೆಬ್ರವರಿ 26 ರಂದು ಬೆಳ್ಗಗೆ 10 ಗಂಟೆಗೆ ಗುಲ್ಬರ್ಗ ವಿಶ್ವವಿದ್ಯಾಲಯ ಆವರಣದಲ್ಲಿ ಶ್ವಾನಗಳ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.

ಇದನ್ನೂ ಓದಿ : ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ಎರಡು ತಿಂಗಳು ಮೇಲ್ಪಟ್ಟ ಶ್ವಾನಗಳ ಪ್ರದರ್ಶನಕ್ಕೆ ಅರ್ಹರಾಗಿದ್ದು, ಒಂದು ವರ್ಷದ ಕೆಳಗಿನ ಶ್ವಾನ ಮರಿಗಳನ್ನು ಪ್ರತ್ಯೇಕ ವಿಭಾಗವಾಗಿ ಪರಿಗಣಿಸಲಾಗುವುದು. ತಳಿಯವಾರು ಉತ್ತಮ ಶ್ವಾನಗಳಿಗೆ ಆಕರ್ಷಕ ಬಹುಮಾನ ನೀಡಲಾಗುವುದು. ತಳಿಯವಾರು ವಿಭಾಗದಲ್ಲಿ ಪ್ರಥಮ ಬಹುಮಾನ ಪಡೆದ ಶ್ವಾನಗಳನ್ನು ಚಾಂಪಿಯನ್ ಸುತ್ತಿಗೆ ಪರಿಗಣಿಸಲಾಗುವುದು. ಚಾಂಪಿಯನ್ ಸುತ್ತಿಗೆ ಅತ್ಯುತ್ತಮ ಶ್ವಾನಕ್ಕೆ ಚಾಂಪಿಯನ್ ಪ್ರಶಸ್ತಿ ನೀಡಲಾಗುವುದು. ಯಾವುದೇ ನೋಂದಣಿ ಶುಲ್ಕವಿರುವುದಿಲ್ಲ.

ನೋಂದಣಿಗಾಗಿ ಡಾ. ವಿಶ್ವನಾಥ ಹೆಗ್ಗಾ ಇವರು ಮೊಬೈಲ್ ನಂಬರ್ 7899993014, ಡಾ. ವಿಜಯಕುಮಾರ ತೇಲಗಾರ ಮೊಬೈಲ್ ನಂಬರ್ 7625027936, ಡಾ. ಅಭಿಲಾಷ ಬೆಳಮಕರ್ ಮೊಬೈಲ್ ನಂಬರ್ 9902455591, ಡಾ. ಅನುಪಮ ಸೂರಿ ಇವರ ಮೊಬೈಲ್ ನಂಬರ್ 8880333622 ಗೆ ಕರೆ ಮಾಡಬಹುದು. ಶ್ವಾನ ಪ್ರದರ್ಶನಕ್ಕಾಗಿ ನೋಂದಣಿ ಮಾಡಿಕೊಳ್ಳಲು ಫೆಬ್ರವರಿ 24 ರಂದು ಕೊನೆಯ ದಿನಾಂಕವಾಗಿದೆ. ಶ್ವಾನ ಪ್ರದರ್ಶನ ಸಂದರ್ಭದಲ್ಲಿ ರೇಬಿಸ್ಲಸಿಕೆ ಮತ್ತು ಜಂತುನಾಶಕ ಔಷಧಿ ನೀಡಲಾಗುತ್ತದೆ.

ಕಲ್ಯಾಣ ಕರ್ನಾಟಕ ಉತ್ಸವ ಮಳಿಗೆ ಸ್ಥಾಪಿಸಲು ನೋಂದಣಿಗೆ ಅವಕಾಶ

ಗುಲ್ಬರ್ಗ ವಿಶ್ವವಿದ್ಯಾಲಯದ ಜ್ಞಾನಗಂಗಾ ಆವರಣದಲ್ಲಿ ಫೆಬ್ರವರಿ 24, 25 ಹಾಗೂ 26 ರವರೆಗೆ ಮೂರು ದಿನಗಳ ಕಾಲ ಜರುಗಲಿರುವ ಕಲ್ಯಾಣ ಕರ್ನಾಟಕ ಉತ್ಸವ ಹಿನ್ನೆಲೆಯಲ್ಲಿ ಪ್ರಸಕ್ತ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ಉತ್ಸವದ ಪುಸ್ತಕ ಮಳಿಗೆ ವಿಚಾರ ಸಂಕೀರಣ ಹಾಗೂ ಕವಿಗೋಷ್ಠಿ ಸಮಿತಿಯ ಸದಸ್ಯ ಕಾರ್ಯದರ್ಶಿ ಪ್ರೊ. ಹೆಚ್.ಟಿ. ಪೋತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : ಈ ರೈತರ ಖಾತೆಗೆ ಜಮೆಯಾಯಿತು 1250 ರೂಪಾಯಿಯವರೆಗೆ ರೈತ ಶಕ್ತಿ ಯೋಜನೆಯ ಹಣ: ಚೆಕ್ ಮಾಡಿ ಇಲ್ಲೇ ನಿಮ್ಮ ಹೆಸರು

ಉತ್ಸವ ಅಂಗವಾಗಿ ಕಲಬುರಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಕಾರ್ಯಸೌಧದ ಎಡಭಾಗದಲ್ಲಿ ಪುಸ್ತಕ ಮಳಿಗೆಗಳನ್ನು ಸ್ಥಾಪಿಸಿ ಪುಸ್ತಕ ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ.

ಈ ಉತ್ಸವವದಲ್ಲಿ ಮಳಿಗೆ ಹಾಕಲು ಇಚ್ಚಿಸುವವರು ವ್ಯಕ್ತಿಗಳು ಹಾಗೂ ಸಂಘ ಸಂಸ್ಥೆಗಳು ಪ್ರಕಾಶಕರು, ಲೇಖಕರು ಅಜಯಕುಮಾರ, ಉಪನಿರ್ದೇಶಕರು, ಸಾರ್ವಜನಿಕ ಗ್ರಂಥಾಲಯ, ಮುಖ್ಯರಸ್ತೆ, ಕಲಬುರಗಿ, ಮೊಬೈಲ್ ನಂಬರ್ 9880160042 ಕಚೇರಿ ವಿಳಾಸಕ್ಕೆ ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ನೋಂದಣಿ ಉಚಿತವಾಗಿರುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *