ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಮತ್ತೊಂದು ಗುಡ್ ನ್ಯೂಸ್. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಪ್ರತಿ ವರ್ಷ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ಜಮಯಾಗುವುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಇದರೊಂದಿಗೆ ಕರ್ನಾಟಕ ರಾಜ್ಯದ ವತಿಯಿಂದ ಹೆಚ್ಚುವರಿಯಾಗಿ ಎರಡು ಕಂತುಗಳಲ್ಲಿ 4 ಸಾವಿರ ರೂಪಾಯಿ ಜಮೆಯಾಗುತ್ತಿದೆ. ಈಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಡೀಸೆಲ್ ಸಬ್ಸಿಡಿ ಹಣ ರೈತರ ಖಾತೆಗೆ ಜಮೆ ಮಾಡುವ ಕುರಿತಂತೆ ಘೋಷಣೆ ಮಾಡಿದ್ದು ಎಲ್ಲರಿಗೂ ತಿಳಿದ ಸಂಗತಿ. ಇದೇ ತಿಂಗಳು ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳ ಖಾತೆಗೆ ಡೀಸೆಲ್ ಸಬ್ಸಿಡಿ ಹಣವನ್ನು ಜಮೆ ಮಾಡಲಾಗಿದೆ.

ಹೌದು, ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರೈತರು ಎಷ್ಟು ಎಕರೆ ಜಮೀನನ್ನು ನೋಂದಣಿ ಮಾಡಿಸಿದ್ದಾರಾ ಆ ಆಧಾರದ ಮೇಲೆ  ಎಕರೆ ಅನುಸಾರವಾಗಿ ಜಮೆ ಮಾಡಲಾಗುತ್ತಿದೆ. ಒಂದು ವೇಳ ನೀವು ಒಂದು ಎಕರೆ ಜಮೀನು ನಮೂದಿಸಿದ್ದರೆ 250 ರೂಪಾಯಿ ಜಮೆಯಾಗಿದೆ..  2 ಎಕರೆ ಜಮೀನು ನಮೂದಿಸಿದ್ದರೆ 500 ರೂಪಾಯಿ ಜಮೆಯಾಗಿದೆ. ಅದೇ ರೀತಿ 3 ಎಕರೆ ಜಮೀನು ನಮೂದಿಸಿದ್ದರೆ 750 ರೂಪಾಯಿ ಜಮೆಯಾಗಿದೆ. ನಾಲ್ಕು ಎಕರೆ ಜಮೀನು ನಮೂದಿಸಿದ್ದರೆ 1000 ರೂಪಾಯಿ ಹಾಗೂ 5 ಎಕರೆ ಜಮೀನು ನಮೂದಿಸಿದ್ದರೆ 1250 ರೂಪಾಯಿ ರೈತರ ಖಾತೆಗೆ ನೇರವಾಗಿ ಜಮೆಯಾಗಿದೆ.

ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ

ರೈತ ಶಕ್ತಿ ಯೋಜನೆಯಡಿ ಜಮೆ ಮಾಡಲಾಗಿರುವ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡಲು ಈ

https://fruitspmk.karnataka.gov.in/MISReport/FarmerDeclarationReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಒಂದು ಓಪನ್ ಆಗುವುದು ಅಲ್ಲಿ ರೈತರು  ಜಿಲ್ಲೆ, ತಾಲೂಕು, ಹೋಬಳಿ ಗ್ರಾಮಆಯ್ಕೆ ಮಾಡಿಕೊಂಡು ವೀಕ್ಷಿಸು ಮೇಲೆ ಕ್ಲಿಕ್ ಮಾಡಬೇಕು.  ಓಪನ್ ಆಗುವ ಪೇಜ್ ನಲ್ಲಿರುವ ರೈತರಿಗೆ ಡೀಸೆಲ್ ಸಬ್ಸಿಡಿ ಜಮೆಯಾಗುತ್ತದೆ.

ಡೀಸೆಲ್ ಸಬ್ಸಿಡಿ ಜಮೆಯಾಗಿರುವುದು ಹೇಗೆ ಚೆಕ್ ಮಾಡಬೇಕು?

ಡೀಸೆಲ್ ಸಬ್ಸಿಡಿ ಹಣವನ್ನು ರೈತರ ಆಧಾರ್ ಲಿಂಕ್ ಆಗಿರುವ ಬ್ಯಾಂಕಿಗೆ ನೇರವಾಗಿ ಅವರ ಖಾತೆಗೆ ಜಮೆ ಮಾಡಲಾಗುತ್ತಿದೆ. ಹೌದು, ನಿಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿರುವ ಮೊಬೈಲ್ ನಂಬರಿಗೆ ಎಕರೆಗೆ ಅನುಸಾರವಾಗಿ ಇಂತಿಷ್ಟು ಹಣ ಜಮೆ ಮಾಡಲಾಗುತ್ತಿದೆ.

ಒಂದು ವೇಳೆ ನಿಮಗೆ ಮೂರು ಎಕರೆ ಇದ್ದರೆ INR 750.00 deposite4d to your bank account number towards APB subsidy ಎಂದು ಮೆಸೆಜ್ ಬಂದಿರುತ್ತದೆ. ಒಂದು ವೇಳೆ ನಿಮಗೆ 4 ಎಕರೆ ಜಮೀನಿದ್ದರೆ 1000 ರೂಪಾಯಿ 5 ಎಕರೆ ಜಮಿನಿದ್ದರೆ 1250 ಜಮೆಯಾಗಿರುವ ಕುರಿತು ಮೆಸೆಜ್ ಬಂದಿರುತ್ತದೆ.

ಡೀಸೆಲ್ ಸಬ್ಸಿಡಿ ಹಣವನ್ನು ಹೇಗೆ ಗುರುಸಿಲಾಗುತ್ತಿದೆ?

ರೈತರ ಡೀಸೆಲ್ ಸಬ್ಸಿಡಿ ಪಡೆಯಲು ರೈತರು ಎಲ್ಲಿಯೂ ಹೋಗಬೇಕಿಲ್ಲ, ಕೃಷಿ ಇಲಾಖೆಗೂ ಹೋಗಬೇಕಿಲ್ಲ.

ಇದನ್ನೂ ಓದಿ ಈ ಪಟ್ಟಿಯಲ್ಲಿರುವ ರೈತರಿಗಷ್ಟೇ ಪಿಎಂ ಕಿಸಾನ್ ಹಣ ಜಮೆ- ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡಿ

ಸರ್ಕಾರ ತನ್ನ ಬಳಿ ಲಭ್ಯವಿರುವ ಕಿಸಾನ್ ಸಮ್ಮಾನ್ ನಿಧಿ ದತ್ತಾಂಶ ಆಧರಿಸಿ ನೇರವಾಗಿ ರೈತರ ಖಾತೆಗೆ ಹಣ ಜಮೆ ಮಾಡಲಿದೆ. ಹೌದು, ಈ ಕುರಿತು ಕೃಷಿ ಸಚಿವರು ಬಿ.ಸಿ. ಪಾಟೀಲ್ ತಿಳಿಸಿದ್ದಾರೆ.

5 ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಡೀಸೆಲ್ ಸಬ್ಸಿಡಿ

ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ನೀಡುತ್ತಿರುವ ಪ್ರೋತ್ಸಾಹ ಧನಕ್ಕಾಗಿ ರಾಜ್ಯದ 53 ಲಕ್ಷ ರೈತರಿಂದ ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಜಮೀನು ಪಹಣಿ, ಆಧಾರ್ ಜೋಡಣೆಯೂ ಆಗಿದೆ. ಇದರ ಆಧಾರದ ಮೇಲೆ 5 ಎಕರೆವರೆಗೆ ಜಮೀನು ಹೊಂದಿರುವ ಅರ್ಹ ರೈತರಿಗೆ ಡೀಸೆಲ್ ಸಬ್ಸಿಡಿ ನೀಡಲಾಗುವುದು ಎಂದು ಕೃಷಿ ಸಚಿವರು ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Leave a Reply

Your email address will not be published. Required fields are marked *