ಈ ವರ್ಷ ಮುಂಗಾರು ಕೊರತೆಯಿಲ್ಲ- ಇಲ್ಲಿದೆ ಮಾಹಿತಿ

Written by Ramlinganna

Updated on:

This year normal monsoon ಭಾರತದಲ್ಲಿ ಈ ವರ್ಷವೂ ಸಹ ವಾಡಿಕೆಯಂತೆ  ಸಾಮಾನ್ಯ ಮುಂಗಾರು  ಸುರಿಯಲಿದೆ ಎಂದು ಹವಾಮಾನ  ಇಲಾಖೆ ಮುನ್ಸೂಚನೆ ನೀಡಿದೆ.

ಹೌದು, ಭಾರತದಲ್ಲಿ ಈ ವರ್ಷ ಮುಂಗಾರು ಕೊರತೆ ಆಗಿ ಶೇ. 20 ರಷ್ಟು  ಬರಗಾಲ ಬೀಳುವ ಸಾಧ್ಯತೆಯಿದೆ ಎಂದು ಖಾಸಗಿ ಹವಾಮಾನ ಸ್ಕೈಮೆಟ್ ಮುನ್ಸೂಚನೆ ನೀಡಿದ ಬೆನ್ನಲ್ಲೇ, ಅದಕ್ಕೆ ವ್ಯತಿರಿಕ್ತವಾದ ವರದಿಯನ್ನು  ಸರ್ಕಾರದ ಭಾರತೀಯ ಹವಾಮಾನ ಇಲಾಖೆ ನೀಡಿದೆ.

ಹವಾಮಾನವ ಇಲಾಖೆಯ ಮುನ್ಸೂಚನೆಯನ್ನೇ ರೈತಾಪಿ ವರ್ಗ ಬಹುವಾಗಿ ನಂಬಿತ್ತು. ಹೀಗಾಗಿ ರೈತರ ಜೀವನಾಡಿ ಎನ್ನಿಸಿರಿಕೊಂಡಿರುವ ಮುಂಗಾರು ಸಾಮಾನ್ಯ ಪ್ರಮಾಣದಲ್ಲಿ ಸುರಿಯುವ ಮುನ್ಸೂಚನೆ ಲಭಿಸಿರುವುದು ರೈತರಲ್ಲಿ ಆಶಾಕಿರಣ ಮೂಡಿಸಿದೆ.

ಇದನ್ನೂ ಓದಿ : ಪಿಎಂ ಕಿಸಾನ್ ಮುಂದಿನ ಕಂತು ನಿಮಗೆ ಜಮೆಯಾಗುತ್ತೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳ ಅವಧಿಯಲ್ಲಿ ದೇಶದಲ್ಲಿ ದೀರ್ಘ ಕಾಲಿನ ಸರಾಸರಿಯ ಶೇ. 96 ರಷ್ಟು ಮಳೆ ಸುರಿಯಲಿದೆ. ಇದರಲ್ಲಿ ಶೇ. 5 ರಷ್ಟು ಹೆಚ್ಚು ಕಡಿಮೆ ಮಳೆಯಾಗಬಹುದು. ದೇಶಾದ್ಯಂತ ಸರಾಸರಿ 87 ಸೆಂ. ಮೀ ಮಳೆ ಈ ಸಲ ಸುರಿಯಲಿದೆ ಎಂದು ಮುನ್ಸೂಚನೆಯ ಘೋಷಣೆ ಮಾಡಿದ ಭೂ ವಿಜ್ಞಾನ ಕಾರ್ಯದರ್ಶಿ ಎಂ. ರವಿಚಂದ್ರನ್ ಹೇಳಿದ್ದಾರೆ.

ವಾಡಿಕೆಗಿಂತ ಹೆಚ್ಚು ಮಳೆ ಆಗುವ ಸಾಧ್ಯತೆ ಶೇ. 67 ರಷ್ಟಿದೆ. ದಕ್ಷಿಣ ಭಾರತ, ಪೂರ್ವ – ಮಧ್ಯ ಭಾರತ, ವಾಯುವ್ಯ ಭಾರತ ಹಾಗೂ ಈಶಾನ್ಯ ಭಾರತದ ಹಲವಾರು ಭಾಗಗಳಲ್ಲಿ ವಾಡಿಕೆಯ ಮಳೆ ಬೀಳಲಿದೆ. ಪಶ್ಚಿಮ ಮಧ್ಯ ಭಾರತ, ವಾಯುವ್ಯ ಭಾರತ ಹಾಗೂ ಈಶಾನ್ಯ ಭಾರತದ ಕೆಲವೆಡೆ ಮಾತ್ರ ವಾಡಿಕೆಗಿಂತ ಕಡಿಮೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಸಂಸ್ಥೆ ಮಹಾ ನಿರ್ದೇಶಕ ಎಂ. ಮೊಹಾಪಾತ್ರ ತಿಳಿಸಿದ್ದಾರೆ.

ಇದನ್ನೂ ಓದಿ : ನೀವು ನಿಂತಿರುವ ಜಮೀನು ಯಾರ ಹೆಸರಿಗಿದೆ? ಸರ್ವೆ ನಂಬರ್ ಏನಿದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಈ ನಡುವೆ ಎಲ್ ನೀನೋ ಪ್ರಭಾವದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಇಲಾಖೆ, ಎಲ್.ನೀನೋ ಸ್ಥಿತ್ಯಂತರದ ಪ್ರಭಾವವು ಮುಂಗಾರಿನ ಉತ್ತರಾರ್ಧದಲ್ಲಿ ಆಗಬಹುದು. ಎಲ್.ನೀನೋ ಪ್ರಭಾವ ಬೀರಿದ ವರ್ಷಗಳೆಲ್ಲ ಕೆಟ್ಟ ಮುಂಗಾರು ಪಡೆದಿಲ್ಲ. 1951 ರಿಂದ 2022 ರವರೆಗಿನ ಎಲ್.ನೀನೋ ವರ್ಷಗಳಲ್ಲಿ ಶೇ. 40 ರಷ್ಟು ಸಾಲುಗಳುವಾಡಿಕೆಗಿಂತ ಅಧಿಕ ಮಳೆಯಾಗಲಿದೆ ಎಂದು ಮೊಹಪಾತ್ರ ತಿಳಿಸಿದ್ದಾರೆ.

ಮಳೆ ಹೇಗೆ ಮಾಪನ ಮಾಡುತ್ತಾರೆ?

ಶೇ. 90 ರಿಂದ 95 ರಷ್ಟು ಮಳೆಯಾದರೆ ಸಾಮಾನ್ಯಕ್ಕಿಂತ ಕಡಿಮೆ ಮಳೆ, ಶೇ. 96 ರಿಂದ ಶೇ. 104 ರ ನಡುವೆ ಮಳೆಯಾದರೆ ಸಾಮಾನ್ಯ, ಶೇ. 105 ರಿಂದ ಶೇ. 110 ರಷ್ಟು ಮಳೆಯಾದರೆ ಸಾಮಾನ್ಯಕ್ಕಿಂತ ಹೆಚ್ಚು, ಅದೇ ರೀತಿ ಶೇ. 1101 ರಿಂದ ಅಧಿಕ ಮಳೆಯಾದರೆ ಅದಕ್ಕೆ ಹೆಚ್ಚುವರಿ ಮಳೆ ಎಂದು ಹೇಳಲಾಗುವುದು.

This year normal monsoon ನಿಮ್ಮೂರಿನಲ್ಲಿ ಮಳೆಯ ಮಾಹಿತಿ ಬೇಕೆ?

ನಿಮ್ಮೂರಿನಲ್ಲಿಮಳೆ ಯಾವಾಗ ಬರುತ್ತದೆ? ಎಷ್ಟು ಮಳೆಯಾಗಲಿದೆ? ಸೇರಿದಂತೆ ಹವಾಮಾನ ವರದಿಯ ಮಾಹಿತಿ ಪಡೆಯಲು ವರುಣ ಮಿತ್ರ ಸಹಾಯವಾಣಿಗೆ ಕರೆ ಮಾಡಬೇಕು. ಹೌದು ಈ ಸಹಾಯವಾಣಿಗೆ ಕರೆ ಮಾಡಿದರೆ ಸಾಕು, ನಿಮ್ಮೂರಿನ ಸುತ್ತಮುತ್ತ ಯಾವ ಪ್ರಮಾಣದಲ್ಲಿ ಮಳೆಯಾಗುತ್ತದೆ? ಗಾಳಿಯು ಯಾವ ದಿಕ್ಕಿನಲ್ಲಿ ಬಿಸುತ್ತದೆ? ಎಂಬಿತ್ಯಾದಿ ಮಾಹಿತಿಯನ್ನು ಪಡೆಯಬಹುದು.

ವರುಣಮಿತ್ರ ಸಹಾಯವಾಣಿ ನಂಬರ್ 92433 45433

ರೈತರು ತಮ್ಮೂರಿನ ಸುತ್ತಮುತ್ತ ಯಾವಾಗ ಮಳೆಯಾಗಲಿದೆ ಎಂಬ ಮಾಹಿತಿ ಕೇಳಲು 92433 45433 ಉಚಿತ ಸಹಾಯವಾಣಿ ನಂಬರಿಗೆ ಕರೆ ಮಾಡಬೇಕು. ಆಗ ಸಿಬ್ಬಂದಿ ಕರೆ ಸ್ವೀಕರಿಸುತ್ತಾರೆ. ನಿಮ್ಮೂರಿನಲ್ಲಿ ಮಳೆಯಾಗುವ ಕುರಿತು ಮಾಹಿತಿ ನೀಡಲಿದ್ದಾರೆ ಇದು ದಿನದ 24 ಗಂಟೆಗಳ ಕಾಲ ಕಾರ್ಯನಿರ್ವಹಿಸಲಿದೆ.

Leave a Comment