ಮಳೆಯಾಶ್ರಿತ ಬೆಳೆಗೆ 16800, ನೀರಾವರಿ ಬೆಳೆಗೆ 25500 ಹಾಗೂ ಬಹುವಾರ್ಷಿಕ ಬೆಳೆಗೆ 28000 ಪರಿಹಾರ ನಿಗದಿ-ಆರ್. ಅಶೋಕ

Written by Ramlinganna

Published on:

ಕಳೆದೆರಡು ತಿಂಗಳಿಂದ ಸುರಿಯಿತ್ತಿರುವ ಮಳೆ ಮಳೆ ಹಾಗೂ ಪ್ರವಾಹದಿಂದ ಈವರೆಗೆ ರಾಜ್ಯದಲ್ಲಿ ಒಟ್ಟು 1,37,029 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಾಶವಾಗಿದೆ. ಇದರಿಂದಾಗಿ ರೈತರಿಗೆ ಅಪಾರ ಹಾನಿಯಾಗಿದೆ.  ಮಳೆ ಮುಗಿಯುತ್ತಿದ್ದಂತೆ ರೈತರಿಗೆ ಬೆಳೆ ನಷ್ಟ  ಪರಿಹಾರಕ್ಕಾಗಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದರೆ.

ಅವರು ಬೆಂಗಳೂರಿನಲ್ಲಿ ಅತೀವೃಷ್ಟಿಯ ಸ್ಥಿತಿಗತಿಯ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಎರಡು ತಿಂಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷಿ ಬೆಳೆಗಳು 1,29,087 ಹೆಕ್ಟೇರ್ ಹಾಳಾಗಿದೆ. ತೋಟಗಾರಿಕೆ ಬೆಳೆಗಳು 7.942 ಹೆಕ್ಟೇರ್  ಹಾಳಾಗಿದೆ. ರಾಜ್ಯದ 14 ಜಿಲ್ಲೆಗಳು ಮತ್ತು 161 ಗ್ರಾಮಗಳು ಪ್ರವಾಹ ಪೀಡಿತವಾಗಿವೆ.  21 727 ಜನರು ಪ್ರವಾಹದ ಹೊಡೆತಕ್ಕೆ ಸಿಲುಕಿದ್ದಾರೆ. ಗುಡುಗಿನಿಂದ 15 ಜನ ಸಾವನ್ನಪ್ಪಿದ್ದಾರೆ. ಮರ ಬಿದ್ದು ಐದು ಜನ, ಮನೆ ಕುಸಿತದಿಂದಾಗಿ 19 ಜನ ಸಾವನ್ನಪ್ಪಿದ್ದಾರೆ. 24 ಜನರು ನದಿಯಲ್ಲಿಕೊಚ್ಚಿಕೊಂಡುಹೋಗಿದ್ದಾರೆ. 9 ಜನ ಭೂ ಕುಸಿತದಿಂದ ಹಾಗೂ ಒಬ್ಬರು ವಿದ್ಯುತ್ ಅವಘಡದಿಂದ ಮೃತಪಟ್ಟಿದ್ದಾರೆ ಎಂದರು.

ದೊಡ್ಡ ಜಾನುವಾರು 204 ಹಾಗೂ 305 ಸಣ್ಣ ಜಾನುವಾರುಗಳು ಮಳೆಯ ಅವಘಡದಿಂದಾಗಿ ಮೃತಪಟ್ಟಿವೆ.ಮಳೆಯ ಅವಘಡದಿಂದಾಗಿ ಮೃತಪಟ್ಟ ಜಾನುವಾರು ಮಾಲಿಕರಿಗೆ ಪರಿಹಾರ ನೀಡಲಾಗುವುದು. ಪ್ರವಾಹ ಸಂಬಂಧಿತ ಅನಾಹುತಗಳಲ್ಲಿ ಮೃತಪಟ್ಟ ಕುಟುಂಬ ಸದಸ್ಯರಿಗೆ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತಿದೆ. ಇದರಲ್ಲಿ 4 ಲಕ್ಷ ರೂಪಾಯಿ ರಾಷ್ಟೀಯ ವಿಪತ್ತು ನಿರ್ವಹಣಾ ನಿಧಿ ಸಹ ಒಳಗೊಂಡಿದೆ

ಪ್ರತಿ ಹೆಕ್ಟೇರಿಗೆ ಎಷ್ಟು ಪರಿಹಾರ?

ಕಳೆದ ವರ್ಷದಂತೆ  ಈ ವರ್ಷವೂ  ಬೆಳೆ ಹಾನಿ ಪರಿಹಾರ ಸಹಾಯಧನ ಪರಿಷ್ಕರಿಸಲಾಗಿದೆ. ಅದರ ಪ್ರಕಾರ ಮಳೆಯಾಶ್ರಿತ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 16800 ರೂಪಾಯಿ, ನೀರಾವರಿ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 25500 ರೂಪಾಯಿ ಪರಿಹಾರ ನೀಡಲಾಗುವುದು. ಅದೇ ರೀತಿ ಬಹುವಾರ್ಷಿಕ ಬೆಳೆ ಪ್ರದೇಶದಲ್ಲಿ ಪ್ರತಿ ಹೆಕ್ಟೇರಿಗೆ 28000 ರೂಪಾಯಿ ಪರಿಹಾರ ಧನ ನಿಗದಿ ಮಾಡಲಾಗಿದೆ ಎಂದರು.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯಕ್ಕಾಗಿ ಒಟ್ಟು 857 ಕೋಟಿ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಲಭ್ಯವಿದ್ದು, ಬೆಳೆಗಾವಿ ಜಿಲ್ಲೆಯಲ್ಲಿ ಅತೀ ಹೆಚ್ಚು 86 ಕೋಟಿ, ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 23 ಕೋಟಿ ರೂಪಾಯಿ, ವಿಜಯಪುರ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 28 ಕೋಟಿ ರೂಪಾಯಿ ಇದೆ. ಅದೇ ರೀತಿ ಬೀದರ್ ಜಿಲ್ಲೆಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 20 ಕೋಟಿ ರೂಪಾಯಿ ಇದೆ ಎಂದರು.

ಪ್ರವಾಹ ಪರಿಹಾರಕ್ಕಾಗಿ 26 ಜಿಲ್ಲೆಗಳಿಗೆ ಜುಲೈ 8 ರಂದು 55 ಕೋಟಿ, ಆಗಸ್ಟ್ 4 ರಂದು ಮನೆಗಳ ಪರಿಹಾರಕ್ಕಾಗಿ 300 ಕೋಟಿ ಹಾಗೂ ಆಘಸ್ಟ್ 6 ರಂದು 21 ಜಿಲ್ಲೆಗಳಿಗೆ ಒಟ್ಟು 200 ಕೋಟಿರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದರು.

ಬೆಳೆ ಹಾನಿ ಪರಿಹಾರ ಸ್ಟೇಟಸ್ ಹೀಗೆ ಚೆಕ್ ಮಾಡಿ

ಬೆಳೆ ಹಾನಿ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಈ

https://landrecords.karnataka.gov.in/PariharaPayment/

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಆಧಾರ್ ಕಾರ್ಡ್ ಮೇಲೆ ಕ್ಲಿಕ್ ಮಾಡಬೇಕು. ಫ್ಲಡ್ ಆಯ್ಕೆ ಮಾಡಿಕೊಂಡು ವರ್ಷ ಆಯ್ಕೆ ಮಾಡಿಕೊಂಡು  ಆಧಾರ್ ಕಾರ್ಡ್ ನಮೂದಿಸಬೇಕು. ನಂತರ ಕ್ಯಾಪ್ಚ್ಯಾ ಕೋಡ್ ನಮೂದಿಸಿ ವಿವರಗಳನ್ನು ಪಡೆಯಲು ಮೇಲೆ ಕ್ಲಿಕ್ ಮಾಡಿ ಕಳೆದ ವರ್ಷ ನಿಮಗೆ ಸಿಕ್ಕ ಪರಿಹಾರದ ಸ್ಟೇಟಸ್ ಚೆಕ್ ಮಾಡಬಹುದು. ಅತೀ ಶೀಘ್ರದಲ್ಲಿ ಸರ್ಕಾರ ಪರಿಹಾರ ಹಣ ಬಿಡುಗಡೆ ಮಾಡಿದ ನಂತರ ಈ ವರ್ಷದ ಸ್ಟೇಟಸ್ ಸಹ ಅಪ್ಡೇಟ್ ಆಗಲಿದೆ.

ಕಳೆದ ವರ್ಷ ಎಷ್ಟು ಪರಿಹಾರ ಬಿಡುಗಡೆ ?

2021 ರಲ್ಲಿ ಅತೀವೃಷ್ಟಿಯಿಂದ 14,93,811 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿತ್ತು. ಒಟ್ಟು 18.52 ಲಕ್ಷ ರೈತರಿಗೆ 2446.08 ಕೋಟಿ ಪರಿಹಾರವನ್ನು ನೀಡಲಾಗಿದೆ. ಇಧರಲ್ಲಿ ಎಸ್.ಡಿ.ಆರ್.ಎಫ್ ವತಿಯಿಂದ 1285.58 ಕೋಟಿ ರೂಪಾಯಿ, ಹೆಚ್ಚುವರಿಯಾಗಿ1960 ಕೋಟಿ ರೂಪಾಯಿ ಪರಿಹಾರ ನೀಡಲಾಗಿತ್ತು.

Leave a comment