ಇನ್ನೂ ಮುಂದೆ ಈ ಲಿಸ್ಟ್ ನಲ್ಲಿದ್ದವರಿಗೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ

Written by Ramlinganna

Published on:

farmers not get pmkisanmoney ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದಿಂದ ನೀಡಲಾಗುವ ಹೆಚ್ಚುವರಿ ಹಣ ಈಗ ರೈತರ ಖಾತೆಗೆ ಜಮೆಯಾಗುವುದಿಲ್ಲ. ಲಿಸ್ಟ್ ನಲ್ಲಿ ಯಾರ್ಯಾರ ಹೆಸರಿದೆ ಇಲ್ಲೇ ಚೆಕ್ ಮಾಡಿ.

ತಮಗೆಲ್ಲಾ ಗೊತ್ತಿದ್ದ ಹಾಗೆ, ರೈತರಿಗೆ ಆರ್ಥಿಕ ಸಹಾಯವಾಗಲೆಂದು ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಯೋಜನೆಯನ್ನು ಜಾರಿಗೆ ತರಲಾಗಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರದ ವತಿಯಿಂದ ಪ್ರತಿ ವರ್ಷ ಮೂರು ಕಂತುಗಳಲ್ಲಿ 6 ಸಾವಿರ ರೂಪಾಯಿ ಜಮೆ ಮಾಡಲಾಗುತ್ತಿದೆ. ಪ್ರತಿ ನಾಲ್ಕು ತಿಂಗಳಿಗೆ 2 ಸಾವಿರ ರೂಪಾಯಿಯಂತೆ ಒಟ್ಟು ಕೇಂದ್ರ ಸರ್ಕಾರದ ವತಿಯಿಂದ 6 ಸಾವಿರ ರೂಪಾಯಿ ಜಮೆ ಮಾಡಲಾಗುತ್ತಿದೆ. ಈ ಯೋಜನೆಯಡಿಯಲ್ಲಿ ಇಲ್ಲಿಯವರೆಗೆ 14 ಕಂತುಗಳು ರೈತರ ಖಾತೆಗೆ ಜಮೆಯಾಗಿದೆ.

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಬಿಜೆಪಿ ಸರ್ಕಾರವಿದ್ದಾಗ ಹೆಚ್ಚುವರಿಯಾಗಿ 4 ಸಾವಿರ ರೂಪಾಯಿಯನ್ನು ನೀಡಲು ಘೋಷಣೆ ಮಾಡಿತ್ತು. ಉಳಿದ ರಾಜ್ಯಗಳಿಗೆ ಪಿಎಂ ಕಿಸಾನ್ ಯೋಜನೆಯಡಿ ಪ್ರತಿ ವರ್ಷ 6 ಸಾವಿರ ರೂಪಾಯಿ ಜಮೆಯಾಗುತ್ತಿದ್ದರೆ ಕರ್ನಾಟಕದ ರೈತರಿಗೆ 10 ಸಾವಿರ ರೂಪಾಯಿ ಜಮೆಯಾಗುತ್ತಿತ್ತು. ಪ್ರತಿ ಆರು ತಿಂಗಳಿಗೆ  ಎರಡು ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡಲಾಗುತ್ತಿತ್ತು. ಇಲ್ಲಿಯವರೆಗೆ ರೈತರ ಖಾತೆಗೆ ನಾಲ್ಕು ಕಂತುಗಳ ಹಣ  ಜಮೆ ಮಾಡಲಾಗಿತ್ತು. ಆದರೆ ಈಗ ಈ ಹೆಚ್ಚುವರಿ ಹಣ ನೀಡುವುದನ್ನು ಕಾಂಗ್ರೆಸ್ ಸರ್ಕಾರವು ಸ್ಥಗಿತಗೊಳಿಸಿದೆ. ಹಾಗಾಗಿ ಇನ್ನೂ ಮುಂದೆ ರಾಜ್ಯ ಸರ್ಕಾರದ ಹೆಚ್ಚುವರಿ ಹಣ ರೈತರ ಖಾತೆಗೆ ಜಮೆಯಾಗುವುದಿಲ್ಲ. ಯಾವ ರೈತರಿಗೆ ಜಮೆಯಾಗುವುದಿಲ್ಲ. ಆ ಪಟ್ಟಿಯಲ್ಲಿ ಯಾವ್ಯಾವ ರೈತರಿದ್ದಾರೆ ಎಂಬುದನ್ನು ಚೆಕ್ ಮಾಡಬಹುದು.

farmers not get pmkisanmoney ಯಾವ ರೈತರಿಗೆ ರಾಜ್ಯ ಸರ್ಕಾರದ ಪಿಎಂ ಕಿಸಾನ್ ಹಣದ ಹೆಚ್ಚುವರಿ ಹಣ ಜಮೆಯಾಗಲ್ಲ?

ಕರ್ನಾಟಕದ ಯಾವ ಯಾವ ರೈತರಿಗೆ ಪಿಎಂ ಕಿಸಾನ್ ಯೋಜನೆಯಡಿ ರಾಜ್ಯ ಸರ್ಕಾರದ ಹೆಚ್ಚುವರಿ ಹಣ ಜಮೆಯಾಗುವುದಿಲ್ಲ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/FarmerDeclarationReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಂಡು ಹೋಬಳಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ನಂತರ ನಿಮ್ಮ ಊರು ಆಯ್ಕೆ ಮಾಡಿಕೊಂಡು ವೀಕ್ಷಿಸು ಮೇಲೆ ಕ್ಲಿಕ್ ಮಾಡಿದರೆ ಸಾಕು, ಇನ್ನೊಂದು ಪಟ್ಟಿ ಕಾಣಿಸುತ್ತದೆ. ಅಲ್ಲಿ ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ ಪಿಎಂಕೆಐಡಿ, ಯಾವ ಯಾವ ರೈತರು ಈ ಯೋಜನೆಯಡಿಯಲ್ಲಿ ಹಣ ಪಡೆಯುತ್ತಿದ್ದರುಅವರ ಹೆಸರು ಕಾಣಿಸುತ್ತದೆ.

ಪಿಎಂ ಕಿಸಾನ್ ಯೋಜನೆಯ ಹೆಚ್ಚುವರಿ ಹಣ ಯಾವಾಗ ಜಮೆಯಾಗಬಹುದು?

ಈ ಪಟ್ಟಿಯಲ್ಲಿರುವ ಯಾವ ರೈತರಿಗೂ ರಾಜ್ಯ ಸರ್ಕಾರದ ಹೆಚ್ಚುವರಿ ಪಿಎಂ ಕಿಸಾನ್ ಹಣ ಈಗ ಜಮೆಯಾಗುವುದಿಲ್ಲ. ಒಂದು ವೇಳೆ ಕಾಂಗ್ರೆಸ್ ಸರ್ಕಾರವು ಈ ಯೋಜನೆಯನ್ನು ಮಾರ್ಪಡಿಸಿ ಮುಂದುವರೆಸಿದರೆ ಈ ಪಟ್ಟಿಯಲ್ಲಿರುವ ಎಲ್ಲಾ ರೈತರಿಗೆ ಪಿಎಂ ಕಿಸಾನ್ ಹೆಚ್ಚುವರಿ ಹಣ ಜಮೆಯಾಗುವ ಸಾಧ್ಯತೆಯಿದೆ. ಆದರೆ ಈ ಕುರಿತು ಕಾಂಗ್ರೆಸ್ ಸರ್ಕಾರವು ಘೋಷಣೆ ಮಾಡಬೇಕು. ಅಧಿಕೃತ ಆದೇಶ ಹೊರಡಿಸಬೇಕು. ಆಗ ರೈತರ ಖಾತೆಗೆ ಹಣ ಜಮೆಯಾಗಲಿದೆ.

ಇದನ್ನೂ ಓದಿ : ಮೊಬೈಲ್ ನಂಬರ್ ಹಾಕಿ ನಿಮಗೆಷ್ಟು ಹಣ ಜಮೆ ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಹೆಚ್ಚುವರಿಯಾಗಿ ನೀಡಲಾಗುವ ಈ ಯೋಜನೆಯನ್ನು ಸ್ಥಗಿತಗೊಳಿಸಿದ್ದರಿಂದ ರೈತವಲಯದಲ್ಲಿ ಆಕ್ರೋಶ ಉಂಟಾಗಿದೆ. ಈ ಯೋಜನೆಯನ್ನು ಮುಂದುವರೆಸಿ ರೈತರಿಗೆ ಹಣ ಜಮೆ ಮಾಡುವುದನ್ನು ಬಿಟ್ಟು ಯೋಜನೆಗೆ ತಿಲಾಂಜಲಿ ಹಾಡಿ ರೈತರಿಗೆ ಅನ್ಯಾಯ ಮಾಡಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.ರೈತರ ಪ್ರತಿಭಟನ ಕೂಗಿಗೆ ಸ್ಪಂದಿಸಿ ಈ ಯೋಜನೆ ಮುಂದುವರೆಸಿದರೆ ರಾಜ್ಯದ ಬಹುತೇಕ ರೈತರಿಗೆ ಈ ಯೋಜನೆಯ ಲಾಭ ಸಿಗಲಿದೆ.

Leave a Comment