ಈ ರೈತರಿಗೆ ಮಾತ್ರ ರಾಜ್ಯದ ಪಿಎಂ ಕಿಸಾನ್ ಹಣ ಜಮೆ

Written by Ramlinganna

Updated on:

These farmers get state pmkisan  ಪಿಎಂ ಕಿಸಾನ್ ಯೋಜನೆಯ ರಾಜ್ಯ ಸರ್ಕಾರದ ಹೆಚ್ಚುವರಿ ಹಣ ಯಾವ ಯಾವ ರೈತರಿಗೆ ಜಮೆಯಾಗುತ್ತದೆ ಎಂಬುದನ್ನು ರೈತರು ಈಗ ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ಹೌದು, ತಮಗೆಲ್ಲಾ ಗೊತ್ತಿದ್ದ ಹಾಗೆ ಪಿಎಂ  ಕೇಂದ್ರ ಸರ್ಕಾರವು ಜಾರಿಗೆ ತಂದ ಯೋಜನೆಗಳಲ್ಲಿ ಪಿಎಂ ಕಿಸಾನ್ ಯೋಜನೆ ಅತೀ ಹೆಚ್ಚು ಮಹತ್ವ ಪಡೆದಿದೆ. ಈ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರವು  ಪ್ರತಿ ವರ್ಷ  6 ಸಾವಿರ ರೂಪಾಯಿ ರೈತರ ಖಾತೆಗೆ ಜಮೆ ಮಾಡುತ್ತದೆ. ಇದೇ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರವು ಹೆಚ್ಚುವರಿಯಾಗಿ 4 ಸಾವಿರ ರೂಪಾಯಿಯನ್ನು ಪ್ರತಿ ವರ್ಷ ಎರಡು ಕಂತುಗಳಲ್ಲಿ ರೈತರ ಖಾತೆಗೆ ಜಮೆ ಮಾಡುವುದನ್ನು ಘೋ ಷಿಸಿದ್ದು ತಮಗೆಲ್ಲಾ ಗೊತ್ತಿದ್ದ ಸಂಗತಿಯಾಗಿದೆ. ಈ ಯೋಜನೆಯಡಿಯಲ್ಲಿ ಈಗಾಗಲೇ ನೋಂದಾಯಿತ ರೈತರಿಗೆ ತಲಾ 2 ಸಾವಿರ ರೂಪಾಯಿಯಂತೆ ರೈತರ ಖಾತೆಗೆ ಜಮೆ ಮಾಡಲಾಗುತ್ತಿದೆ. ಆದರೆ ಯಾವ ಯಾವ ರೈತರಿಗೆ ಜಮೆಯಾಗುತ್ತಿದೆ ಎಂಬುದನ್ನು ಇಲ್ಲಿ ಚೆಕ್ ಮಾಡಬಹುದು.

These farmers get state pmkisan  ರಾಜ್ಯ ಸರ್ಕಾರದ ಹೆಚ್ಚುವರಿ ಹಣ ಯಾವ ರೈತರಿಗೆ ಜಮೆಯಾಗುತ್ತಿದೆ? ಚೆಕ್ ಮಾಡಿ

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ರಾಜ್ಯ ಸರ್ಕಾರದ ಹೆಚ್ಚುವರಿ ಹಣ 2 ಸಾವಿರ ರೂಪಾಯಿ ಯಾವ ಯಾವ ರೈತರಿಗೆ ಜಮೆಯಾಗುತ್ತಿದೆ? ಆ ಪಟ್ಟಿಯಲ್ಲಿ ಯಾರ್ಯಾರ ಹೆಸರಿದೆ ಎಂಬುದನ್ನು ಚೆಕ್ ಮಾಡಲು ಈ

https://fruitspmk.karnataka.gov.in/MISReport/FarmerDeclarationReport.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ರಾಜ್ಯ ಸರ್ಕಾರದ ಫ್ರೂಟ್ಸ್ ಪಿಎಂ ಕಿಸಾನ್ ಪೇಜ್ ತೆರೆದುಕೊಳ್ಳುತ್ತದೆ.  ಅದರ ಕೆಳಗಡೆ ಎಫ್ಎಸ್.ಡಿ ಪಡೆದ ರೈತರ ಪಟ್ಟಿ ಕಾಣಿಸುತ್ತದೆ. ಅದರ ಕೆಳಗಡೆ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಇದಾದ ನಂತರ ಹೋಬಳಿ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮಊರು ಆಯ್ಕೆ ಮಾಡಿಕೊಳ್ಳಬೇಕು.  ನಂತರ  ವೀಕ್ಷಿಸು ಮೇಲೆ ಕ್ಲಿಕ್ ಮಾಡಿದರೆ ಸಾಕು,  ನೀವು ಆಯ್ಕೆ ಮಾಡಿಕೊಂಡ ಗ್ರಾಮದಲ್ಲಿ ರಾಜ್ಯ ಸರ್ಕಾರದ ಪಿಎಂ ಕಿಸಾನ್ ಹೆಚ್ಚುವರಿ ಹಣ ಯಾವ ಯಾವ ರೈತರು ಪಡೆಯುತ್ತಿದ್ದಾರೆ ಅವರ ಹೆಸರು ಕಾಣಿಸುತ್ತದೆ.

ಅಲ್ಲಿ ನಿಮ್ಮ ಜಿಲ್ಲೆ, ತಾಲೂಕು, ಹೋಬಳಿ ನಿಮ್ಮ ಗ್ರಾಮ ಕಾಣಿಸುತ್ತದೆ. ಅದರ ಮುಂದುಗಡೆ ಪಿಎಂಕೆಐಡಿ ಕಾಣಿಸುತ್ತದೆ.ಅದರ ಎದುರುಗಡೆ ನಿಮ್ಮ ಹೆಸರು ಇರುತ್ತದೆ. ರಾಜ್ಯ ಸರ್ಕಾರದ ಪಿಎಂ ಕಿಸಾನ್ ಯೋಜನೆಗೆ ನಿಮ್ಮ ಅರ್ಜಿ ಅಪ್ರೂವ್ ಆಗಿದೆಯೋ ಇಲ್ಲವೋ ಎಂಬ ಮೆಸೆಜ್ ಇರುತ್ತದ. ಅದರ ಎದುರುಗಡೆ ಪಿಎಂಕಿಸಾನ್ ಗೆ ನಿಮ್ಮ ಅರ್ಜಿ ಕಳುಹಿಲಾಗಿದ್ದರೆ ಯಸ್ ಇರುತ್ತದೆ. ಅದರ ಮುಂದುಗಡೆ ನೀವು ಯಾವ ಕೆಟಗರಿಗೆ ಸೇರಿದ್ದೀರಿ ಎಂಬುದನ್ನು ಬರೆಯಲಾಗಿರುತ್ತದೆ.

ಇದನ್ನೂ ಓದಿ :  ಜೂನ್ 30 ರೊಳಗೆ ಇಕೆವೈಸಿ ಮಾಡದಿದ್ದರೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ- ಮೊಬೈಲ್ ನಲ್ಲೇ ಇಕೆವೈಸಿ ಮಾಡಿ

ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಕರ್ನಾಟಕ ರಾಜ್ಯ ಹೊರತು ಪಡಿಸಿ ಉಳಿದ ಎಲ್ಲಾ ರಾಜ್ಯದ ರೈತರಿಗೆ 6 ಸಾವಿರ ರೂಪಾಯಿ ಜಮೆಯಾಗುತ್ತಿದ್ದರೆ ಕರ್ನಾಟಕದ ರೈತರಿಗೆ ಮಾತ್ರ 10 ಸಾವಿರ ರೂಪಾಯಿ ಜಮೆಯಾಗುತ್ತಿದೆ. ಹೌದು, ಕೇಂದ್ರ ಸರ್ಕಾರದ 6 ಸಾವಿರ ರೂಪಾಯಿ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ ಹಣ 4 ಸಾವಿರ ರೂಪಾಯಿ ಸೇರಿ ಒಟ್ಟು 10 ಸಾವಿರ ರೂಪಾಯಿ ರೈತರಿಗೆ ಸಿಗುತ್ತದೆ. ಈ ಹೆಚ್ಚುವರಿ ಹಣ ಜಮೆಯಾಗುವ ಯೋಜನೆಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಘೋಷಣೆ ಮಾಡಿದ್ದರು.

ಈ ಯೋಜನೆಯಡಿಯಲ್ಲಿ ರೈತರಿಗೆಹಣ ಜಮೆಯಾಗುತ್ತಿದೆ. ಆದರೆ ಬಹುತೇಕ ರೈತರು ಈ ಹಣವನ್ನೂ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಯೋಜನೆಯಡಿಯಲ್ಲಿ ಜಮೆಯಾಗುತ್ತಿದೆ ಎಂದು ಭಾವಿಸುತ್ತಿದ್ದಾರೆ.  ಆದರೆ ರಾಜ್ಯ ಸರ್ಕಾರದ ಹೆಚ್ಚುವರಿ 4 ಸಾವಿರ ರೂಪಾಯಿ ಎರಡು ಕಂತುಗಳಲ್ಲಿ ಜಮೆ ಮಾಡಲಾಗುತ್ತಿದೆ.

Leave a Comment