ಇಕೆವೈಸಿ ಮಾಡದಿದ್ದರೆ ಪಿಎಂ ಕಿಸಾನ್ ಹಣ ಜಮೆಯಾಗಲ್ಲ

Written by Ramlinganna

Updated on:

Pm kisan ekyc process complete ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಇದೇ ತಿಂಗಳ ಜೂನ್ 30 ರೊಳಗೆ ಇಕೆವೈಸಿ ಮಾಡದಿದ್ದರೆ ನಿಮಗೆ ಮುಂದಿನ 14ನೇ ಕಂತಿನ ಹಣ ಜಮೆಯಾಗುವುದಿಲ್ಲ.

ಹೌದು, ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳಿಗೆ ಇಕೆವೈಸಿ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ರೈತರಿಗೆ ಇಕೆವೈಸಿ ಮಾಡುವ ಪ್ರಕ್ರಿಯೆ ತುಂಬಾ ಸರಳಗೊಳಿಸಲಾಗಿದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯ 14ನೇ ಪ್ರೋತ್ಸಾಹ ಧನದ ಕಂತನ್ನು ಜುಲೈ ತಿಂಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುವ ಸಾಧ್ಯತೆಯಿರುವುದರಿಂದ ಜೂನ್ 30 ರೊಳಗೆ ಇಕೆವೈಸಿ ಮಾಡಿಸಲು ಸೂಚಿಸಲಾಗಿದೆ.

ಪಿಎಂ ಕಿಸಾನ್ ಯೋಜನೆಯ ಮೊತ್ತವನ್ನು ರೈತರ ಆಧಾರ್ ಲಿಂಕ್ ಮಾಡಿದ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ. ಪಿಎಂ ಕಿಸಾನ್ ಯೋಜನೆಯ 14ನೇ ಕಂತಿನ ಹಣ ಜುಲೈ ಮೊದಲ ವಾರದಲ್ಲಿ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಯಾರು ಇಕೆವೈಸಿ ಮಾಡಿಸುತ್ತಾರೋ ಆ ರೈತರಿಗೆ ಮಾತ್ರ ಮುಂದಿನ ಕಂತಿನ ಹಣ ಜಮೆಯಾಗಲಿದೆ.

ರೈತರು ಗೂಗಲ್ ಪ್ಲೇ ಸ್ಟೋರ್ ನಿಂದ ಪಿಎಂ ಕಿಸಾನ್ ಆ್ಯಪ್ ಡೌನ್ಲೋಡ್ ಮಾಡಿಕೊಂಡು ಇಕೆವೈಸಿ ಮಾಡಿಸಿಕೊಳ್ಶಬಹುದು. ಅಥವಾ ತಮ್ಮ ಸಮೀಪದರೈತ ಸಂಪರ್ಕ ಕೇಂದ್ರ, ಗ್ರಾಮ ಒನ್ ಕೇಂದ್ರ, ಅಥವಾ ಗ್ರಾಹಕ ಸೇಾ ಕೇಂದ್ರಗಳಿಗೆ ಭೇಟಿ ನೀಡಿ ಬಯೋಮೆಟ್ರಿಕ ಅಥವಾ ಓಟಿಪಿ ಮೂಲಕ ಇ ಕೆವೈಸಿ ಮಾಡಿಸಬಹುದು.

Pm kisan ekyc process complete ಮೊಬೈಲ್ ನಲ್ಲೇ ಇಕೆವೈಸಿ ಮಾಡುವುದು ಹೇಗೆ?

ಪಿಎಂ ಕಿಸಾನ್ ಯೋಜನೆಯ ಫಲಾನುಭವಿಗಳು ಮೊಬೈಲ್ ನಲ್ಲಿ ಇಕೆವೈಸಿ ಮಾಡಸುಲ ಈ

https://exlink.pmkisan.gov.in/aadharekyc.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಪಿಎಂ ಕಿಸಾನ್ ಯೋಜನೆಯ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಹಾಕಬೇಕು. ನಂತರ ಸರ್ಚ್ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.  ಒಂದು ವೇಳೆ ನೀವು ಈಗಾಗಲೇ ಇಕೆವೈಸಿ ಮಾಡಿದ್ದರೆ ಇಕೆವೈಸಿ ಸಕ್ಸೆಸ್ ಫುಲಿ ಡನ್ ಎಂಬ ಮೆಸೆಜ್ ಬರುತ್ತದೆ. ಇಲ್ಲದಿದ್ದರೆ ನೀವ ನಿಮ್ಮ ಮೊಬೈಲ್ ನಂಬರ್ ಹಾಕಬೇಕಾಗುತ್ತದೆ. ನಂತರ ನಿಮ್ಮ ಪಿಎಂ ಕಿಸಾನ್ ಯೋಜನೆಗೆ ನೋಂದಣಿಯಾದ ಮೊಬೈಲ್ ನಂಬರಿಗೆ ಓಟಿಪಿ ಕಳಿಸಲಾಗುವುದು.  ಅದನ್ನು ಹಾಕಿ ಇಕೆವೈಸಿ ಮಾಡಿಸಬಹುದು.

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಫಲಾನುಭವಿಗಳು ಬ್ಯಾಂಕ್ ಅಕೌಂಟ್ ಗೆ ಆಧಾರ್ ಜೋಡಣೆ ಮತ್ತು ಎನ್.ಪಿ.ಸಿ.ಐ ಮ್ಯಾಪಿಂಗ್ ಕಡ್ಡಾಯ ಮಾಡಲಾಗಿದೆ.,

ಇಕೆವೈಸಿ ಮಾಡಿಸದಿದ್ದರೆ ಕೇಂದ್ರ ಸರ್ಕಾರದ ಆರು ಸಾವಿರ ರೂಪಾಯಿ ಹಾಗೂ ರಾಜ್ಯ ಸರ್ಕಾರದ ಹೆಚ್ಚುವರಿ 4 ಸಾವಿರ ರೂಪಾಯಿ ಸೇರಿ ಒಟ್ಟು 10 ಸಾವಿರ ರೂಪಾಯಿಗಳ ಆರ್ಥಿಕ ಸೌಲಭ್ಯ ದೊರೆಯುವುದಿಲ್ಲ.

ಇದನ್ನೂ ಓದಿ : ಬೆಳೆ ವಿಮೆಗೆ ಅರ್ಜಿ ಆಹ್ವಾನ : ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

ಇಕೆವೈಸಿ ಮಾಡಿಲ್ಲ ಆದರೂ ಪಿಎಂ ಕಿಸಾನ್ ಹಣ ಜಮೆಯಾಗುತ್ತಿದೆ ಎಂದು ನಿರ್ಲಕ್ಷ ಮಾಡಿದರೆ ಮುಂದಿನ ಕಂತಿನ ಹಣ ಜಮೆಯಾಗಲ್ಲ. ಏಕೆಂದರೆ ನಿಜವಾದ ಫಲಾನುಭವಿಗಳಿಗೆ ಪಿಎಂ ಕಿಸಾನ್ ಯೋಜನೆಯ ಹಣ ಜಮೆ ಮಾಡಲು ಸರ್ಕಾರವು ಇಕೆವೈಸಿಯನ್ನು ಕಡ್ಡಾಯಗೊಳಿಸಿದೆ. ಕಳೆದ ಐದಾರು ತಿಂಗಳಿಂದ ಇಕೆವೈಸಿಯನ್ನ ಕಡ್ಡಾಯಗೊಳಿಸಿದೆ. ಆದರೂ ಸಹ ಹಲವಾರು ರೈತರು ಇಕೆವೈಸಿಯನ್ನು ಇನ್ನೂ ಮಾಡಿಸಿಲ್ಲ. ಹಾಗಾಗಿರೈತರು ಈ ಸಲ ಇಕೆವೈಸಿ ಮಾಡಸಲು ವಿಳಂಬ ಮಾಡದೆ ಜೂನ್ 30 ರೊಳಗೆ ಇಕೆವೈಸಿಯನ್ನು ಪೂರ್ಣಗೊಳಿಸಿ ಪಿಎಂ ಕಿಸಾನ್ ಯೋಜನೆಯ ಸೌಲಭ್ಯ ಪಡೆದುಕೊಳ್ಳಬಹುದು. ಇಕೆವೈಸಿ ಮಾಡಸಲು ಇನ್ನೂ ಕೇವಲ ಐದು ದಿನ ಮಾತ್ರ ಉಳಿದಿದೆ. ಹಾಗಾಗಿ ತಡಮಾಡದೆ ನಿಮ್ಮ ಮೊಬೈಲ್ ನಲ್ಲಿ ಇಕೆವೈಸಿ ಮಾಡಿಸಿ. ಒಂದು ವೇಳೆ ಇಕೆವೈಸಿ ಮಾಡಿದ್ದರು ಮೇಲಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಒಮ್ಮೆ ಇಕೆವೈಸಿ ಪ್ರಕ್ರಿಯೆಯನ್ನು ಪರಿಶೀಲಿಸಿಕೊಳ್ಳಬಹುದು.

Leave a Comment