ಬೆಳೆ ವಿಮೆಗೆ ಅರ್ಜಿ ಆಹ್ವಾನ : ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಮೊಬೈಲ್ ನಲ್ಲೇ ಚೆಕ್ ಮಾಡಿ

Written by Ramlinganna

Updated on:

2023-24ನೇ ಸಾಲಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ಬೆಳೆ ವಿಮೆ ಮಾಡಿಸಲು ಅರ್ಜಿ ಆಹ್ವಾನಿಸಲಾಗಿದೆ.

ಹೌದು, ಬೆಳೆವಿಮೆಗೆ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಜಾರಿಗೊಳಿಸಿ ಅಧಿಸೂಚಸಲಾಗಿದ್ದು, ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದೆ.  ಮಳೆಯಾಶ್ರಿತ ಬೆಳೆಗಳಾದ ಈರುಳ್ಳಿ, ಎಳ್ಳು, ಕೆಂಪು ಮೆಣಸಿನಕಾಯಿ, ಜೋಳ, ಟೋಮ್ಯಾಟೋ, ತೊಗರಿ, ನವಣೆ, ನೆಲಗಡಲೆ (ಶೇಂಗಾ) ಸಾವೆ, ಸೂರ್ಯಕಾಂತಿ, ಹತ್ತಿ, ಹುರುಳಿ, ಹೆಸರು, ಮುಸುಕಿನ ಜೋಳ, ಹಾಗೆಯೇ ನೀರಾವರಿ ಬೆಳೆಗಳಾದ ಭತ್ತ ಹಾಗೂ ರಾಗಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ವಿಮೆಗೆ ಅಧಿಸೂಚನೆ ಮಾಡಲಾಗಿದೆ.

ರೈತರು ತಮ್ಮ ಜಿಲ್ಲೆಯಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಹಾಗೂ ಯಾವ ಬೆಳೆಗೆ ವಿಮೆ ಮಾಡಿಸಿದರೆ ಎಷ್ಟು ಹಣ ಜಮೆಯಾಗುತ್ತದೆ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ.

ನಿಮ್ಮ ಊರಿನ  ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು? ಹೀಗೆ ಚೆಕ್ ಮಾಡಿ

ರೈತರು ತಮ್ಮ ಊರಿನಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಹೌದೂ ರೈತರು ಈ

https://www.samrakshane.karnataka.gov.in/publichome.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ Farmers ಕೆಳಗಡೆ Premium Calculator ಕಾಣಿಸುತ್ತದೆ. ಅದರ ಮೇಲೆ ಕ್ಲಿಕ್ ಮಾಡಬೇಕು. ಅಲ್ಲಿ  ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದಮಂಲೆ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗ್ರಾಮ ಆಯ್ಕೆ ಮಾಡಿಕೊಳ್ಳಬೇಕು. Crop  ಎದುರುಗಡೆ ಕ್ಲಿಕ್ ಮಾಡಿದರೆ ಅಲ್ಲಿ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸಬಹುದು ಎಂಬ ಪಟ್ಟಿ ಕಾಣಿಸುತ್ತದೆ.

ಉದಾಹರಣೆಗೆ ನೀವು ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಮುಧೋಳ ಹೋಬಳಿಯ ಇಟಕಾಲ ಗ್ರಾಮದವರಾಗಿದ್ದರೆ  ಹೆಸರು, ತೊಗರಿ, ಭತ್ತ, ಸೂರ್ಯಕಾಂತಿ ಹತ್ತಿ, ಉದ್ದು, ಪಪ್ಪಾಯ ಹಾಗೂ ಮೆಣಸಿನ ಕಾಯಿಗೆ ಬೆಳೆ ವಿಮೆ ಮಾಡಿಸಬಹುದು.

ಒಂದು ವೇಳೆ ನೀವು ಹೆಸರು ಬೆಳೆಗೆ ಒಂದು ಎಕರೆಗೆ ವಿಮೆ ಮಾಡಿಸುವುದಾದರೆ ನೀವು ಕೇವಲ269 ರೂಪಾಯಿ ವಿಮೆ ಹಣ ಕಟ್ಟಬೇಕು. ನಿಮ್ಮ ಬೆಳೆ ಪ್ರಕೃತಿ ವಿಕೋಪ ಅಥವಾ ಬರಗಾಲದಿಂದ ಹಾನಿಯಾದರೆ ನಿಮಗೆ ಗರಿಷ್ಠ 13456 ರೂಪಾಯಿಯವರೆಗೆ ವಿಮೆ ಹಣ ಪಡೆಯುತ್ತೀರಿ. ಹೆಕ್ಟೇರಿಗೆ 33259 ರೂಪಾಯಿಯವರೆಗೆ ವಿಮೆ ಹಣ ರೈತರಿಗೆ ಜಮೆಯಾಗುತ್ತದೆ.

ಇದನ್ನೂ ಓದಿ Ration card status ಮೊಬೈಲ್ ನಲ್ಲಿ ಚೆಕ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ

ಅದೇ ರೀತಿ ನೀವು ತೊಗರಿಗೆ ಬೆಳೆ ವಿಮೆ ಮಾಡಿಸುವುದಾದರೆ 388 ರೂಪಾಯಿ ಪಾವತಿಸಬೇಕು. ನೀಮ್ಮ ಬೆಳೆ ಪ್ರಕೃತಿ ವಿಕೋಪ ಹಾಗೂ ಪ್ರವಾಹದಿಂದಾಗಿ ಅಥವಾ ಬರಗಾಲದಿಂದ ಬೆಳೆ ಹಾನಿಯಾದರೆ ನಿಮಗೆ 19425 ರೂಪಾಯಿಯವರೆಗೆ ಬೆಳೆ ವಿಮೆ ಹಣ ಜಮೆಯಾಗುತ್ತದೆ.

ಇದೇ ರೀತಿ ರೈತರು ತಮ್ಮ ಊರನ್ನು ಆಯ್ಕೆ ಮಾಡಿಕೊಂಡ ನಂತರ ಯಾವ ಯಾವ ಬೆಳೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಆ ಬೆಳೆಯನ್ನು ಆಯ್ಕೆ ಮಾಡಿಕೊಂಡು ಎಷ್ಟು ಎಕರೆ ಗುಂಟೆಗೆ ವಿಮೆ ಮಾಡಿಸಬೇಕೆಂದುಕೊಂಡಿದ್ದೀರೋ ಅದನ್ನು ನಮೂದಿಸಿ ಚೆಕ್ ಮಾಡಬಹುದು. ರೈತರು ಇದಕ್ಕಾಗಿ ಎಲ್ಲಿಯೂ ಹೋಗಬೇಕಿಲ್ಲ. ಮನೆಯಲ್ಲಿಯೇ ಕುಳಿತು ಸುಲಭವಾಗಿ ಚೆಕ್ ಮಾಡಬಹುದು.

ಆಸಕ್ತ ರೈತರು ನಿಗದಿತ ದಿನಾಂಕದೊಳಗೆ ಬೆಳೆ ವಿಮೆಗೆ ನೋಂದಣಿ ಮಾಡಲು ವಿನಂತಿಸಸಲಾಗಿದೆ. ಅಂತಿಮ ಸಮಯದಲ್ಲಿ ಜನದಟ್ಟಣೆಯಿಂದಾಗಿ ನೋಂದಣಿಯಲ್ಲಿ ತಪ್ಪುಗಳು ಸಂಭವಿಸಿ, ವಿಮೆ ಪರಿಹಾರ ಬಾರದಿರುವ ಸಂಭವಿದೆ. ಸಕಾಲದಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೋರಲಾಗಿದೆ.

ರೈತರು ಬೆಳೆ ವಿಮೆ ಮಾಡಿಸುವುದಕ್ಕಿಂತ ಮುಂಚಿತವಾಗಿ ಯಾವ ವಿಮಾ ಕಂಪನಿಗೆ ವಿಮೆ ಹಣ ಕಟ್ಟುತ್ತಿದ್ದೀರೀ ಹಾಗೂ ನಿಮ್ಮ ತಾಲೂಕಿಗೆ ಸಂಬಂಧಿಸಿದ ವಿಮಾ ಕಂಪನಿಯ ಸಿಬ್ಬಂದಿಗಳ ನಂಬರ್ ಪಡೆದುಕೊಳ್ಳಬೇಕು. ಏಕೆಂದರೆ ಬೆಳೆ ಹಾಳಾದಾಗ ವಿಮಾ ಕಂಪನಿಗೆ ತಿಳಿಸುವುದು ಅತೀ ಮುಖ್ಯವಾಗಿರುತ್ತದೆ.

1 thought on “ಬೆಳೆ ವಿಮೆಗೆ ಅರ್ಜಿ ಆಹ್ವಾನ : ಯಾವ ಬೆಳೆಗಳಿಗೆ ಎಷ್ಟು ವಿಮೆ ಹಣ ಜಮೆಯಾಗುತ್ತದೆ? ಮೊಬೈಲ್ ನಲ್ಲೇ ಚೆಕ್ ಮಾಡಿ”

Leave a comment