ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಇಲ್ಲಿದೆ

Written by Ramlinganna

Published on:

ರಾಜ್ಯದ ಎಲ್ಲಾ ವರ್ಗದ ರೈತರಿಗೆ ವಿವಿಧ ಸೌಲಭ್ಯಗಳು ಸಿಗಲೆಂಬ ಉದ್ದೇಶದಿಂದ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿದೆ. ಕೃಷಿ ಇಲಾಖೆಯಿಂದ ರೈತರಿಗೆ ಸಿಗುವ ಸೌಲಭ್ಯಗಳ ಮಾಹಿತಿ ಇಲ್ಲಿದೆ.

ಅಧಿಕ ಇಳುವರಿ ನೀಡುವ ತಳಿಗಳು

ರೈತರಿಗೆ ಮುಖ್ಯ ಬೆಳೆಗಳ ಹೈಬ್ರಿಡ್, ಅಧಿಕ ಇಳುವರಿ ನೀಡುವ ತಳಿಗಳು ಹಾಗೂ ತಳಿಗಳ ಉತ್ತಮ ಗುಣಮಟ್ಟದ ಪ್ರಮಾಣಿತ ಬೀಜಿಗಳನ್ನು ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುವುದು. ಸಕಾಲದಲ್ಲಿ ರೈತರು ಬೀಜಗಳನ್ನು ಸಬ್ಸಿಡಿಯಲ್ಲಿ ಪಡೆದು ಹೆಚ್ಚು ಇಳುವರಿ ಪಡೆದುಕೊಳ್ಳಬಹುದು.

ರೈತರಿಗೆ ರಿಯಾಯಿತಿ ದರದಲ್ಲಿ ವಿವಿಧ ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳು, ಆಯ್ತ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ಬಿತ್ತನೆ ಬೀಜಿಗಳನ್ನು ವಿತರಿಸಲಾಗುವುದು. ಸಾಮಾನ್ಯ ರೈತರಿಗೆ ಶೇ. 50 ರಷ್ಟು, ಎಸ್.ಸಿ, ಎಸ್.ಟಿ ವರ್ಗದವರಿಗೆ ಶೇ. 75 ರಷ್ಟು ರಿಯಾಯತಿ ನೀಡಲಾಗುವುದು.

ಮಣ್ಣಿನ ಸತ್ವ ಹೆಚ್ಚಿಸಲು ಹಾಗೂ ಉಪಕರಣಗಳಿಗೆ ನೀಡಲಾಗುವ ಸೌಲಭ್ಯಗಳು

ಕೃಷಿ ಪರಿಕರಗಳ ವಿತರಣೆಗೆ ಸಾಮಾನ್ಯ ರೈತರಿಗೆ ಶೇ. 50 ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗ ಶೇ. 75 ರಷ್ಟು ರಿಯಾಯಿತಿ ನೀಡಲಾಗುವುದು. ಹೌದು, ಹಸಿರೆಲ ಗೊಬ್ಬರ ಬೀಜ ವಿತರಣೆಗೆ ಹೆಕ್ಟೇರ್ ಗೆ ಸಾಮಾನ್ಯ ವರ್ಗದ ರೈತರಿಗೆ 2 ಸಾವಿರ ರೂಪಾಯಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 3000 ರೂಪಾಯಿ ಸಹಾಯಧನ ನೀಡಲಾಗುವುದು.

ಜಿಪ್ಸಂ, ಕೃಷಿ ಸುಣ್ಣ, ಲಘು ಪೋಷಕಾಂಶಗಳು, ಜೈವಿಕ ಗೊಬ್ಬರ, ಸಿಟಿ ಕಾಂಪೋಸ್ಟ್, ಸಾವಯವ ಗೊಬ್ಬರ, ರಂಜಕಯುಕ್ತ ಸಾವಯವ ಗೊಬ್ಬರ, ಖಾದ್ಯವಲ್ಲದ ಎಣ್ಣೆ ರಹಿತ ಹಿಂಡಿ ಗೊಬ್ಬರ (ಬೇವು) ವಿತರಣೆ ಮಾಡುವಾಗಲೂ ಸಬ್ಸಿಡಿ ನೀಡಲಾಗುವುದು.

ಬಯೋಡೈಜೆಸ್ಟರ್ ಘಟಕ ಸ್ಥಾಪನೆಗೆ ಸಾಮಾನ್ಯ ವರ್ಗದ ರೈತರಿಗೆ ಶೇ. 50 ರಷ್ಟು, ಎಸ್.ಸಿ, ಎಸ್.ಟಿ ವರ್ಗದವರಿಗೆ ಶೇ. 75 ರಷ್ಟು ಸಹಾಯಧನ ನೀಡಲಾಗುವುದು.

ಎರೆಹುಳು ಗೊಬ್ಬರ ಉತ್ಪದನಾ ಘಟಕ ಸ್ಥಾಪನೆಗೂ ರೈತರಿಗೆ ಸಬ್ಸಿಡಿ ನೀಡಲಾಗುವುದು.

ಕೃಷಿ ಯಂತ್ರೋಪಕರಣಗಳ ಖರೀದಿಗೆ ಸಬ್ಸಿಡಿ

ಕೃಷಿ ಯಾಂತ್ರೀಕರಣ ಯೋಜನೆಯಡಿಯಸಲ್ಲಿ ಕೃಷಿ ಕಾರ್ಮಿಕರ ಕೊರತೆ ಸಮಸ್ಯೆಯನ್ನು ನೀಗಿಸಿ, ಕೃಷಿ ಚಟುವಟಿಕೆಗಳ ಶ್ರಮದಾಯಕ ದುಡಿಮೆಯನ್ನು ತಗ್ಗಿಸಲು ರೈತರಿಗೆ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ನೀಡಲಾಗುವುದು.

ಇದನ್ನೂ ಓದಿ ನಿಮ್ಮ ಜಮೀನಿಗೆ ಹೋಗಲು ದಾರಿಯಿದೆಯೋ ಇಲ್ಲವೋ? ಮೊಬೈಲ್ ನಲ್ಲೇ ಚೆಕ್ ಮಾಡಿ

ಕೃಷಿ ಯಾಂತ್ರೀಕರಣ ಯೋಜನೆಯಡಿಯಲ್ಲಿ ಸಣ್ಣ ಟ್ರ್ಯಾಕ್ಟರ್ ಗೆ (25 ಪಿಡಿಒ ಹೆಚ್.ಪಿಯವರೆಗೆ), ಪವರ್ ಟಿಲ್ಲರ್, ಭೂಮಿ ಸಿದ್ದತೆ ಉಪಕರಣಗಳು, ಬಿತ್ತನೆ ನಾಟಿ ಉಪಕರಣಗಳು, ಅಂತರ ಬೇಸಾಯ ಉಪಕರಣಗಳು, ಡೀಸೆಲ್ ಪಂಪ್ ಸೆಟ್ ಗಳು, ಟ್ರ್ಯಾಕ್ಟರ್ ಟಿಲ್ಲರ್ ಎಂಜಿನ್ ಚಾಲಿತ ಸಸ್ಯ ಸಂರಕ್ಷಣಾ ಉಪಕರಣಗಳು ಹಾಗೂ ಕೃಷಿ ಸಂಸ್ಕರಣೆಗೆ ಉಪಯುಕ್ತವಾಗುವ ವಿವಿಧ ಮಾದರಿಯ ಕೃಷಿ ಯಂತ್ರೋಪಕರಣಗಳನ್ನು ಸಬ್ಸಿಡಿಯಲ್ಲಿ ವಿತರಿಸಲಾಗುವುದು. ಇದರಲ್ಲಿಸಾಮಾನ್ಯ ರೈತರಿಗೆ ಶೇ. 50 ರಷ್ಟು ಹಾಗೂ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ ಶೇ. 90 ರಷ್ಟು ಸಹಾಯ ಧನ ನೀಡಲಾಗುವುದು.

ಕೃಷಿ ಸಂಸ್ಕರಣಾ ಘಟಕನ್ನು ರೈತರಿಗೆ, ಮಹಿಳಾ ಸ್ವ ಸಹಾಯ ಗುಂಪುಗಳಿಗೆ, ರೈತ ಗುಂಪುಗಳಿಗೆ, ಸರ್ಕಾರೇತರ ಸಂಸ್ಥೆಗಳಿಗೆ ಸಾಮಾನ್ಯ ಯೋಜನೆಯಡಿ ಶೇ. 50 ಕ್ಕೆ ಮೀರದಂತೆ ಸಹಾಯಧನ ನೀಡಲಾದಗುವುದು.

ಕೃಷಿ ಉತ್ಪನ್ನಗಳ ಸಂಸ್ಕರಣಾ ಘಟಕಗಳಾದ ಬೇಳೆ ಮಾಡುವ ಯಂತ್ರ ಹಿಟ್ಟಿನ ಗಿರಣಿ, ಸಣ್ಣ ರೈಸ್ ಮಿಲ್, ಎಣ್ಣೆತೆಗೆಯುವ ಯಂತ್ರ, ರಾಗಿ ಕ್ಲೀನಿಂಗ್ ಮಷಿನ್, ಶುಗರ್ ಕೇನ್ ಕ್ರಶಿಂಗ್ ಯೂನಿಟ್ ಸೇರಿದಂತೆ ಇನ್ನಿತರ ಉಪಕರಣಗಳ ಖರೀದಿಗೆ ಕೃಷಿ ಇಲಾಖೆಯಿಂದ ಸಬ್ಸಿಡಿ ನೀಡಲಾಗುವುದು.

Leave a Comment