ಅನ್ನಭಾಗ್ಯ ಹಣ ಇನ್ಮುಂದೆ ಇವರಿಗೆ ಸಿಗಲ್ಲ: ಇಲ್ಲಿದೆ ಮಾಹಿತಿ

Written by Ramlinganna

Updated on:

ಬಿಪಿಎಲ್ ಕಾರ್ಡ್ ಹೊಂದಿದ್ದರೂ ಸಹ ಇನ್ನೂ ಮುಂದೆ ಕೆಲವರಿಗೆ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗುವುದಿಲ್ಲ. ಹೌದು, ಆದರೆ ಕಳೆದ ಐದಾರು ತಿಂಗಳಿಂದ ಯಾರು ಪಡಿತರ ಪದಾರ್ಥ ಪಡೆದಿಲ್ಲವೋ ಅಂತಹ ಕುಟುಂಬದ ಮುಖ್ಯಸ್ಥರ ಖಾತೆಗೆ ಇನ್ನೂ ಮುಂದೆ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗುವುದಿಲ್ಲ.

ರೇಶನ್ ಕಾರ್ಡ್ ಪಡೆದವರು ಅದರಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದರೂ ಕೆಲವು ಕಾರಣಗಳಿಂದ ಪಡಿತರ ಕಾರ್ಡ್ ಗಳನ್ನು ರದ್ದುಪಡಿಸಲಾಗಿದೆ.

ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಡವರಿಗಾಗಿ ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿದ್ದವರಿಗೆ ಕಾಂಗ್ರೆಸ್ ಸರ್ಕಾರವು 5 ಕೆಜಿ ಅಕ್ಕಿಯ ಬದಲಾಗಿ ಹೆಚ್ಚುವರಿ ಹಣವನ್ನು ನೇರವಾಗಿ ಅವರ ಖಾತೆಗೆ ಜಮೆ ಮಾಡುತ್ತಿದೆ. ಕಳೆದ ನಾಲ್ಕು ತಿಂಗಳಿಂದ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ.

ಆದರೆ ಕಳೆದ ಐದಾರು ತಿಂಗಳಿಂದ ಯಾರು ಪಡಿತರ ಪದಾರ್ಥ ಪಡೆದಿಲ್ಲವೋ ಅಂತಹ ಕುಟುಂಬದ ಮುಖ್ಯಸ್ಥರ ಖಾತೆಗೆ ಇನ್ನೂ ಮುಂದೆ ಅನ್ನಭಾಗ್ಯ ಯೋಜನೆಯ ಹಣ ಜಮೆಯಾಗುವುದಿಲ್ಲ. ಹೌದು ಇಂತಹ ಕುಟುಂಬಕ್ಕೆ ಅನರ್ಹತೆ ಎಂದು ಗುರುತಿಸಲಾಗುತ್ತಿದೆ.  ಹಾಗಾದರೆ ನಿಮ್ಮ ಹೆೆೆೆೆೆೆೆೆಸರೇನಾದರೂ ಪಡಿತರ ಪಟ್ಟಿಯಿಂದ ರದ್ದುಗೊಳಿಸಲಾಗಿದೆ? ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು. ಅದು ಹೇಗೆ ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಮಾಹಿತಿ.

ರದ್ದುಪಡಿಸಲಾದ ಪಡಿತರ ಚೀಟಿಗಳ ಪಟ್ಟಿಯಲ್ಲಿ ನಿಮ್ಮ ಹೆಸರು ಚೆಕ್ ಮಾಡುವುದು ಹೇಗೆ?

ರದ್ದುಪಡಿಸಲಾದ ಪಡಿತರ ಚೀಟಿ ಪಟ್ಟಿಯಲ್ಲಿ ಯಾರ ಯಾರ ಹೆಸರು ಇದೆ ಎಂಬುದನ್ನು ಚೆಕ್ ಮಾಡಲು ಈ

https://ahara.kar.nic.in/Home/EServices

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪೇಜ್ ತೆರೆದುಕೊಳ್ಳುತ್ತದೆ. ಅಲ್ಲಿ ಮೂರು ಲೈನ್ ಕಾಣಿಸುತ್ತದೆ. ಅದರ ಮೇಲೆ  ಕ್ಲಿಕ್ ಮಾಡಿದ ನಂತರ ನಿಮಗೆ ಕೆಲವು ಆಯ್ಕೆಗಳು ಕಾಣಿಸುತ್ತವೆ. ಅಲ್ಲಿ ಇ ಪಡಿತರ ಚೀಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ರದ್ದುಗೊಳಿಸಲಾದ / ತಡೆಹಿಡಿಯಲಾದ ಪಟ್ಟಿ ಮೇಲೆ ಕ್ಲಿಕ್ ಮಾಡಬೇಕು. ನಂತರ ನಿಮ್ಮ ಜಿಲ್ಲೆ ಆಯ್ಕೆ ಮಾಡಿಕೊಳ್ಳಬೇಕು. ನಂತರ ನಿಮ್ಮ ತಾಲೂಕು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ತಿಂಗಳು ಆಯ್ಕೆ ಮಾಡಿಕೊಳ್ಳಬೇಕು. ನಂತರ ಗೋ ಮೇಲೆ ಕ್ಲಿಕ್ ಮಾಡಬೇಕು. ಆಗ ನೀವು ಆಯ್ಕೆ ಮಾಡಿಕೊಂಡ ತಿಂಗಳಲ್ಲಿ ಯಾರ ಯಾರ ಹೆಸರುಗಳನ್ನು ರದ್ದುಗೊಳಿಸಲಾಗಿದೆ ಎಂಬ ಪಟ್ಟಿ ಕಾಣಿಸುತ್ತದೆ. ಇಲ್ಲಿ ಆಯಾ ತಿಂಗಳು ಆಯ್ಕೆ ಮಾಡಿಕೊಂಡು ಚೆಕ್ ಮಾಡಿಕೊಳ್ಳಬಹುದು.

ರೇಶನ್ ಕಾರ್ಡ್ ಏಕೆ ರದ್ದುಗೊಳಿಸಲಾಗುತ್ತಿದೆ?

ಪಡಿತರ ಪರಾರ್ಥವಷ್ಟೇ ಅಲ್ಲ, ಕೆಲವರು ಸರ್ಕಾರಿ ಸೌಲಭ್ಯ ಹಾಗೂ ಆರೋಗ್ಯ ಸಂಬಂಧಿ ಶಸ್ತ್ರ ಚಿಕಿತ್ಸೆ ಉದ್ದೇಶಕ್ಕಾಗಿ ಬಿಪಿಎಲ್ ಕಾರ್ಡ್ ಪಡೆದಿರುತ್ತಾರೆ. ಅಂಥವರು ಪಡಿತರ ಪದಾರ್ಥಗಳನ್ನು ಪಡೆಯುವುದಿಲ್ಲ. ಹಾಗಾಗಿ ಯಾರು ಯಾರು ಕಳೆದ  ಐದಾರು ತಿಂಗಳಿಂದ ಪಡಿತರ ಪಡೆದಿರುವುದಿಲ್ಲವೋ ಅಂತಹವರ ಪಡಿತರಗಳನ್ನು ರದ್ದುಪಡಿಸಲಾಗುತ್ತಿದೆ.

ಇದನ್ನೂ ಓದಿ ನಿಮ್ಮ ಜಮೀನು ಯಾರ ಹೆಸರಿನೊಂದಿಗೆ ಎಷ್ಟು ಎಕರೆ ಜಂಟಿಯಾಗಿದೆ? ಇಲ್ಲೇ ಚೆಕ್ ಮಾಡಿ

ನಿಜವಾದ ಬಡವರಿಗೆ ಸೌಲಭ್ಯ ಸಿಗಲಿ ಎಂಬ ಉದ್ದೇಶಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿತ್ತು. ಆದರೆ ಸರ್ಕಾರಿ ನೌಕರರು, ಸರ್ಕಾರಕ್ಕೆ ತೆರಿಗೆ ಪಾವತಿಸುವವರೂ ಬಿಪಿಎಲ್ ಕಾರ್ಡ್ ಪಡೆದಿದ್ದರು. ಅಂತವರ ಹೆಸರುಗಳನ್ನು ತೆಗೆಯಲಾಗುತ್ತಿದೆ.

ಕೆಲವರೇಕೆ ರೇಶನ್ ಪಡೆಯುತ್ತಿಲ್ಲ?

ಬಿಪಿಎಲ್ ಕಾರ್ಡ್ ಹೊಂದಿರುವ ಕೆಲವರ ಕುಟುಂಬ ಬೇರೆಡೆಗೆ ತೆರಳಿರುತ್ತಾರೆ. ಅಥವಾ ಇನ್ನೂ ಕೆಲವರ ಕುಟುಂಬ ಮರಣ ಹೊಂದಿರುತ್ತಾರೆ. ಇನ್ನೂ ಕೆಲವರು ಬೇರೆ ರಾಜ್ಯಗಳಿಗೆ ವಲಸೆ ಹೋಗಿರುತ್ತಾರೆ. ಅವರು ತಮ್ಮ ಊರಿನಲ್ಲಿ ಬಿಪಿಎಲ್ ಕಾರ್ಡ್ ಪಡೆದಿರುತ್ತಾರೆ. ಆದರೆ ತಮ್ಮೂರಿನ ವರ್ಷಕ್ಕೆ ಒಂದೆರಡು ಸಲ ಬಂದು ಹೋಗುತ್ತಾರೆ. ಇಂತಹವರ ಕಾರ್ಡ್ ಚಾಲ್ತಿಯಲ್ಲಿರುವುದಿಲ್ಲ. ಅಂತಹವರ ಕಾರ್ಡ್ ಗಳನ್ನು ಸಹ ರದ್ದುಗೊಳಿಸಲಾಗುವುದು. ಯಾವ ಯಾವ ಕಾರ್ಡ್ ಗಳನ್ನು ರದ್ದುಪಡಿಸಬೇಕೆಂಬುದರ ಕುರಿತು ಸೂಕ್ತ ಮಾಹಿತಿ ಆಧರಿಸಿ ಪಡಿತರ ಚೀಟಿಗಳನ್ನು ರದ್ದುಪಡಿಸುವ ಕಾರ್ಯ ನಡೆಯುತ್ತಿದೆ.

Leave a Comment