ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸುವ ರೈತರು ಕೆಲವು ಬೆಳೆಗಳಿಗೆ ಆಗಸ್ಟ್ 16 ಕೊನೆಯ ದಿನಾಂಕವಾಗಿದೆ.

ಹೌದು, ಕೆಲವು ಬೆಳೆಗಳ ವಿಮೆ ಮಾಡಿಸುವ ಅವಧಿ ಮುಗಿದರೆ ಇನ್ನೂ ಕೆಲವು ಬೆಳೆಗಳ ವಿಮೆ ಮಾಡಿಸುವ ಅವಧಿ ಆಗಸ್ಟ್ 16 ಕೊನೆಯ ದಿನಾಂಕವಾಗಿದೆ. ಹಾಗಾದರೆ ಯಾವ ಯಾವ ಬೆಳೆಗಳಿಗೆ ವಿಮೆ ಮಾಡಿಸುವ ಅವಧಿ ಇನ್ನೂ ಐದು ದಿನ ಇರಬಹುದು ಅಂದುಕೊಂಡಿದ್ದೀರಾ… ಇಲ್ಲಿದೆ ಸಂಪೂರ್ಣ ಮಾಹಿತಿ.
ಭತ್ತ, ಸಜ್ಜೆ, ರಾಗಿ, ನೆಲಗಡಲೆ, ನವಣೆ, ಹುರಳಿ, ಕೆಂಪು ಮೆಣಸಿನ ಕಾಯಿ, ಸೂರ್ಯಕಾಂತಿ, ಈರುಳ್ಳಿ ಬೆಳೆಗಳ ವಿಮೆ ಮಾಡಿಸಲು ಆಗಸ್ಟ್ 16ರವರೆಗೆ ಅವಕಾಶವಿದೆ. ಆದರೆ ಇಲ್ಲಿ ಒಂದು ಮಾತು ನೆನಪಿಟ್ಟುಕೊಳ್ಳಬೇಕು. ಈ ಮೇಲೆ ತಿಳಿಸಿದ ಎಲ್ಲಾ ಬೆಳೆಗಳ ವಿಮೆ ಮಾಡಿಸಲು ರಾಜ್ಯದ ಎಲ್ಲಾ ರೈತರಿಗೆ ಅವಕಾಶವಿಲ್ಲ. ಕೆಲವು ಜಿಲ್ಲೆಗಳ ರೈತರು ಮಾತ್ರ ಈ ಅವಕಾಶ ನೀಡಲಾಗಿದೆ.ಇನ್ನೂ ಕೆಲವು ಜಿಲ್ಲೆಗಳ ರೈತರಿಗೆ ವಿಮೆ ಮಾಡಿಸುವ ಅವಧಿ ಮುಗಿದಿದೆ. ಹಾಗಾಗಿ ನಿಮ್ಮ ಜಿಲ್ಲೆಗೆ ಬೆಳೆ ವಿಮೆ ಮಾಡಿಸಲು ಅವಕಾಶವಿದೆಯೇ ಎಂಬುದನ್ನು ಮೊಬೈಲ್ ನಲ್ಲೇ ಚೆಕ್ ಮಾಡಬಹುದು.

ರೈತರು ತಮ್ಮ ಜಿಲ್ಲೆಗೆ ಯಾವ ಬೆಳೆಗಳಿಗೆ ಆಗಸ್ಟ್ 16 ರವರೆಗೆ ವಿಮೆ ಮಾಡಿಸಲ ಆವಕಾಶವಿದೆ ಎಂಬುದನ್ನು ಚೆಕ್ ಮಾಡಲು ಈ

https://www.samrakshane.karnataka.gov.in/PublicView/FindCutOff.aspx

ಲಿಂಕ್ ಮೇಲೆ ಕ್ಲಿಕ್ ಮಾಡಬೇಕು. ಆಗ ಸಂರಕ್ಷಣೆ ಪೇಜ್ ತೆರೆದುಕೊಳ್ಳುತ್ತದೆ.  ಇಲ್ಲಿ ರೈತರು ತಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡರೆ ಸಾಕು. ತಮ್ಮ ಜಿಲ್ಲೆಗೆ ಯಾವ ಯಾವ ಬೆಳೆಗೆ ವಿಮೆ ಮಾಡಿಸಲು ಆಗಸ್ಟ್ 16 ಕೊನೆಯ ದಿನವಾಗಿದೆ ಎಂಬ ಪಟ್ಟಿ ಕಾಣುತ್ತದೆ.

ಉದಾಹರಣೆಗೆ ಬಳ್ಳಾರಿ ಜಿಲ್ಲೆಗೆ ಭತ್ತ (ಐ), ಸಜ್ಜೆ(ಐ), ರಾಗಿ (ಆರ್), ತೊಗರಿ (ಆರ್), ಶೇಂಗಾ (ನೆಲಗಡಲೆ) ನವಣೆ (ಆರ್), ಹುರುಳಿ (ಐ), ಬೆಳೆಗಳಿಗೆ ಆಗಸ್ಟ್ 16 ಕೊನೆಯ ದಿನಾಂಕವಾಗಿದೆ. ಆದರೆ ಈ ಬೆಳೆಗಳಲ್ಲಿ ಕೆಲವು ಜಿಲ್ಲೆಗಳಲ್ಲಿ ಕೆಲವು ಬೆಳೆಗಳ ವಿಮೆ ಮಾಡಿಸುವ ಅವಧಿ ಮುಗಿದಿರುತ್ತದೆ. ಹಾಗಾಗಿ ರೈತರು ಬೆಳೆ ವಿಮೆ ಮಾಡಿಸುವ ಮುನ್ನ ತಮ್ಮ ಜಿಲ್ಲೆಗೆ ವಿಮೆ ಮಾಡಿಸುವ ಅವಧಿಯಿದೆಯೋ ಇಲ್ಲವೋ ಎಂಬುದನ್ನುಚೆಕ್ ಮಾಡಿಕೊಂಡು ವಿಮೆ ಮಾಡಿಸಬಹುದು.

ಬಾಗಲಕೋಟೆ ಜಿಲ್ಲೆ ಸೂರ್ಯಕಾಂತಿ (ಐ), ಈರುಳ್ಳಿ (ಐ, ಆರ್), ಕೆಂಪು ಮೆಣಸಿನಕಾಯಿ (ಆರ್) ಗೆ ವಿಮೆ ಮಾಡಿಸಲು ಆಗಸ್ಟ್ ಹದಿನಾರರವರೆಗೆ ಅವಕಾಶವಿದೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಭತ್ತದೊಂದಿಗೆ ಮುಸುಕಿನ ಜೋಳ, ರಾಗಿ, ಹುರುಳಿ ಬೆಳೆಗೆ ವಿಮೆ ಮಾಡಿಸಲು ಆಗಸ್ಟ್ ಆರು ದಿನ ಕಾಲಾವಕಾಶವಿದೆ.

ಬೆಳೆ ವಿಮೆ ಹಣ ಎಲ್ಲಿ ಪಾವತಿಸಬೇಕು?

ರೈತರು ಬೆಳೆ ವಿಮೆ ಮಾಡಿಸುವ ಮುನ್ನ ಯಾವ ವಿಮಾ ಕಂಪನಿಗೆ ವಿಮೆ ಪಾವತಿಸಿದ್ದಾರೆ ಎಂಬುದನ್ನು ತಿಳಿದುಕೊಳ್ಳಬೇಕು. ವಿಮೆ ಮಾಡಿಸಿದ ನಂತರ ರಸೀದಿ ಜೋಪಾನವಾಗಿಟ್ಟುಕೊಳ್ಳಬೇಕು. ರೈತರು ಸಿಎಸ್.ಸಿ ಕೇಂದ್ರಗಳು, ಗ್ರಾಮ ಒನ್ ಅಥವಾ ಹತ್ತಿರದ ಬ್ಯಾಂಕುಗಳಲ್ಲಿ ವಿಮೆ ಪಾವತಿಸುವ ಮುನ್ನ ನಿಮ್ಮ ಜಿಲ್ಲೆಗೆ ವಿಮೆ ಮಾಡಿಸುವ ಅವಧಿ ಇದೆಯೋ ಇಲ್ಲವೋ ಎಂಬುದನ್ನು ಮೊದಲು ಚೆಕ್ ಮಾಡಬೇಕು. ನಂತರ ಯಾವ ವಿಮಾಕಂಪನಿಗೆ ಹಣ ಪಾವತಿಸುತ್ತಿದ್ದೀರೀ ಹಾಗೂ ಆ ವಿಮಾ ಕಂಪನಿಯ ಸಹಾಯವಾಣಿ ಅಥವಾ ನಿಮ್ಮ ಜಿಲ್ಲೆಗೆ ಸಂಬಂಧಿಸಿದ ವಿಮಾ ಕಂಪನಿಯ ಸಿಬ್ಬಂದಿಗಳ ದೂರವಾಣಿ ಸಂಖ್ಯೆ ಪಡೆದುಕೊಳ್ಳಬೇಕು.

ಇದನ್ನೂ ಓದಿ  : ಬೆಳೆ ವಿಮೆ ಪರಿಹಾರ 2022 ಸ್ಟೇಟಸ್ ಮೊಬೈಲ್ ನಲ್ಲೇ ಚೆಕ್ ಮಾಡಿ

ಏಕೆಂದರೆ ಬೆಳೆ ವಿಮೆ ಮಾಡಿಸಿದ ರೈತರ ಬೆಲೆ ಹಾಳಾದಾಗ 72 ಗಂಟೆಯೊಳಗೆ ದೂರು ನೀಡಬೇಕಾಗುತ್ತದೆ. 72 ಗಂಟೆಯೊಳಗೆ ದೂರು ನೀಡಿದ ನಂತರವೇ ನಿಮ್ಮ ಬೆಳೆ ಯಾವ ಪ್ರಮಾಣದಲ್ಲಿ ಹಾಳಾಗಿದೆ ಎಂಬುದನ್ನು ಪರಿಶೀಲಿಸಿ ವಿಮಾ ಪರಿಹಾರ ಹಣ ನೀಡಲಾಗುವುದು.

Leave a Reply

Your email address will not be published.