Chipko Movement ನಾಯಕ (Sundarlal Bahuguna)ನಿಧನ

Written by By: janajagran

Updated on:

Chipko Movement ನಾಯಕ ಸುಂದಾರ್ ಲಾಲ್ ಬಹುಗುಣ (Chipko Movement Leader Sundarlal Bahuguna ) ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಕೊರೋನಾ ಸೋಂಕು ಕಾಣಿಸಿಕೊಂಡಿದ್ದರಿಂದ ರಿಷಿಕೇಷದ ಏಮ್ಸ್ ಆಸ್ಪತ್ರೆಯಲ್ಲಿ ಬಹುಗುಣ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಚಿಕಿತ್ಸೆಗೆ ಸ್ಪಂದಿಸದೆ ಬಹುಗುಣ ಕೋವಿಡ್ ನಿಂದ ಮೃತಪಟ್ಟಿದ್ದಾರೆಂದು ರಿಷಿಕೇಷದ ಏಮ್ಸ್ ಆಸ್ಪತ್ರೆ ದೃಢಪಡಿಸಿದೆ.

ಹಿರಿಯ ಪರಿಸರವಾದಿ  ಸುಂದರಲಾಲ್ ಬಹುಗುಣ, ಕಾಡುಗಳು ಮತ್ತು ಹಿಮಾಲಯ ಪರ್ವತಗಳ ನಾಶವನ್ನು ತಪ್ಪಿಸಲು ಗ್ರಾಮಸ್ಥರ ಮನವೊಲಿಸಲು ಶಿಕ್ಷಣ ನೀಡುವ ಮೂಲಕ ತಮ್ಮ ಇಡೀ ಜೀವನವನ್ನೇ ಕಳೆದರು. ಬಹುಗುಣರವರ ಪ್ರಯತ್ನದಿಂದಾಗಿ ಅಂದಿನ ಪ್ರಧಾನಿ ಇಂದಿರಾಗಾಂಧಿಯವರು ಮರಗಳನ್ನು ಕತ್ತರಿಸುವುದಕ್ಕೆ ನಿಷೇಧ ಹೇರಿದರು. ಪರಿಸರ ವಿಜ್ಞಾನ ಶಾಶ್ವತ ಆರ್ಥಿಕತೆ ಎಂಬುದೇ ಬಹುಗುಣರವರ ಘೋಷಣೆಯಾಗಿತ್ತು.

ಬೃಹತ್ ಆಣೆಕಟ್ಟು, ಕೈಗಾರಿಕೆ ಮತ್ತು ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯ ನಾಶ ಆಗುತ್ತಿರುವುದನ್ನು ತಡೆಯಲೆಂದು 1973 ರಲ್ಲಿ ಚಿಪ್ಕೋ ಚಳವಳಿ ಆರಂಭವಾಗಿತ್ತು. ಉತ್ತರ ಪ್ರದೇಶದಲ್ಲಿ ಈ ಚಳವಳಿಗೆ ಸುಂದರಲಾಲ್ ಬಹುಗುಣ ನಾಂದಿ ಹಾಡಿದ್ದರು.

ಸುಂದರಲಾಲ ಬಹುಗುಣದ ಜೀವನ ಚರಿತ್ರೆ (Sundarlal Bahugun’s life history)

ಸುಂದರ್ ಲಾಲ್ ಬಹುಗುಣ ಪರಿಸರವಾದಿ ಮತ್ತು ಚಿಪ್ಕೋ ಚಳುವಳಿಯ ನಾಯಕರಾಗಿದ್ದರು. ಹಿಮಾಲಯದಲ್ಲಿ  ಕಾಡುಗಳ ಸಂರಕ್ಷಣೆಗಾಗಿ ಹಲವು ವರ್ಷಗಳಿಂದ ಅವರು ಹೋರಾಟ ಮಾಡುತ್ತಿದ್ದರು. ಅವರು ಭಾರತದ ಆರಂಭಿಕ ಪರಿಸರವಾದಿಗಳಲ್ಲಿ ಒಬ್ಬರಾಗಿದ್ದರು. ಸುಂದರ್ ಲಾಲ್ ಬಹುಗುಣ ರವರು ಉತ್ತರಖಂಡದ  ತೆಹ್ರಿ ಬಳಿ ಮರೊಡ ಎಂಬ ಹಳ್ಳಿಯಲ್ಲಿ 9 ಜನವರಿ 1927 ರಂದು ಜನಿಸಿದರು. ತನ್ನ ಹದಿಮೂರನೇ ವಯಸ್ಸಿನಲ್ಲಿ ಶ್ರೀ ದೇವ್ ಸುಮನ್ ರವರ ಮಾರ್ಗದರ್ಶನದಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಪ್ರಾರಂಭಿಸಿದರು.

ಇದನ್ನೂ ಓದಿLand Mutation Mobile ನಲ್ಲಿ ಚೆಕ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಗಾಂಧಿಯವರ ಪ್ರೇರಣೆಯಿಂದಾಗಿ, ಗಾಂಧೀ ಜೀವನದಿಂದ ಪ್ರೇರಿತಗೊಂಡು ಸ್ವಾತಂತ್ರ್ಯ ಪೂರ್ವದಲ್ಲೇ ವಸಾಹತುಶಾಹಿ ಆಡಳಿತದ ವಿರುದ್ಧ ಜನರನ್ನು ಜಾಗೃತಗೊಳಿಸಿದ್ದರು. ಸುಮಾರು 4700 ಕಿಲೋಮೀಟರ್ ನಷ್ಟು ಹಿಮಾಲಯ ಕಾಡು ಹಾಗೂ ಬೆಟ್ಟಗಳ ನಡುವೆ ಪಾದಯಾತ್ರೆಯನ್ನು ಮಾಡಿ ಮೆಗಾ ಅಭಿವೃದ್ಧಿ ಯೋಜನೆಯಿಂದ ಹಿಮಾಲಯದ ಪರಿಸರಕ್ಕೆ ಆದ ಹಾನಿಯನ್ನು ಗಮನಿಸಿದರು.  ಹಳ್ಳಿಯಿಂದ ಹಳ್ಳಿಗೆ ಪ್ರಯಾಣ ಬೆಳೆಸುವ ಮೂಲಕ ಚಿಪ್ಕೋ ಚಳುವಳಿಗೆ ಬೆಂಬಲ ನೀಡಿದರು. ಚಿಪ್ಕೋ ಚಳವಳಿಯನ್ನು ಕರ್ನಾಟಕದಲ್ಲಿ ಅಪ್ಪಿಕೋ ಚಳವಳಿಯಾಗಿ ಹೆಸರುವಾಸಿಯಾಯಿತು.  1981 ರಲ್ಲಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಬಂದರೂ ಅದನ್ನು ಅವರು ನಿರಾಕರಿಸಿದ್ದರು.

ಇತ್ತೀಚೆಗೆ ದೆಹಲಿಯಲ್ಲಿ ರೈತರು ಕೃಷಿ ಮಸೂದೆಗಳನ್ನು ವಿರೋಧಿಸಿ ನಡೆಸಿದ ಹೋರಾಟಕ್ಕೆ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆಯನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದ್ದರು.

 ಏನಿದು ಚಿಪ್ಕೊ ಚಳುವಳಿ..? (What is chipko movement)

ಹಿಮಾಲಯದ ಕಾಡುಗಳಿಗೆ ಹಾನಿ ಸಂಭವಿಸುತ್ತಿದ್ದುದನ್ನು ಗಮನಿಸಿದ ಸುಂದರ್ ಲಾಲ್ ಬಹುಗುಣರವರು 1973 ರಲ್ಲಿ  ಚಿಪ್ಕೋ ಚಳವಳಿಯ ನೇತೃತ್ವವಹಿಸಿದ್ದರು. ಅರಣ್ಯಗಳು ಹಿಮಾಲಯದ ತಪ್ಪಲಿನ ಜನ-ಜೀವನದ ಪ್ರಮುಖ ಅಂಗವಾಗಿವೆ. ಚಿಪ್ಕೋ ಚಳವಳಿಗೆ ನಾಂದಿ ಹಾಡಿದ್ದು 1973ರ ಸುಮಾರಿಗೆ ಮಂಡಲ್ ಎಂಬ ಹಳ್ಳಿ. ತಮ್ಮ ಕೃಷಿ ಸಲಕರಣೆಗಳ ತಯಾರಿಗಾಗಿ ಮುರಿದು ಬಿದ್ದ ಮರಗಳನ್ನು ಜನ ಉಪಯೋಗಿಸುವುದಕ್ಕೆ ಸರ್ಕಾರ ನಿರ್ಬಂಧ ಹೇರಿತ್ತು.ಸರ್ಕಾರದ ನಿರ್ಧಾರ ತೀವ್ರ ಜನಾಕ್ರೋಶಕ್ಕೆ ಕಾರಣವಾಗಿತ್ತು. ಇದೇ ಸಂದರ್ಭ ಬಂಡವಾಳಶಾಹಿಗೆ ಮಣಿದ ಸರ್ಕಾರ ಇದೇ ಪ್ರದೇಶದಲ್ಲಿ ಕ್ರೀಡಾ ಉಪಕರಣಗಳನ್ನು ತಯಾರಿಸುವ ಕಂಪನಿಯೊಂದಕ್ಕೆ ಮರಗಳನ್ನು ಕಡಿಯಲು ಅನುಮತಿ ನೀಡಿತು.

ಕಾಡಿನ ನಾಶದ ಮುನ್ಸೂಚನೆ ಅರಿತ ಸ್ಥಳೀಯ ಮಹಿಳೆಯರು ಮರಗಳ ಸುತ್ತ ವೃತ್ತಾಕಾರದಲ್ಲಿ ನಿಂತು ಮರ ಕಡಿಯಲು ತಡೆಯೊಡ್ಡಿದರು.ಹಗಲು-ರಾತ್ರಿಯೆನ್ನದೆ ಮರಗಳನ್ನು ಅಪ್ಪಿಕೊಂಡು ನಿಂತ ಪರಿಣಾಮ ಗುತ್ತಿಗೆದಾರ ಹಿಂತಿರುಗಬೇಕಾಯಿತು. ಮರ ಕಡಿಯುವುದ ವಿರುದ್ಧ ಆಗಿನ ಪ್ರಧಾನಿ ಇಂದಿರಾ ಗಾಂಧಿಯವರಲ್ಲಿ ಮನವಿ ಮಾಡಿ ಸರ್ಕಾರದ ಕ್ರಮದ ವಿರುದ್ಧ ಸತತ ಹೋರಾಟ ನಡೆಸಿದರು. ಹೋರಾಟ ತೀವ್ರಗೊಂಡಿತು. ಪರಿಣಾಮ ಆ ಪ್ರದೇಶದಲ್ಲಿ 15 ವರ್ಷಗಳ ಕಾಲ ಯಾವುದೇ ಮರ ಕಡಿಯದಂತೆ 1981ರಲ್ಲಿ ಕಾನೂನು ಹೊರ ಬಂದಿತು. ಚಿಪ್ಕೋ ಚಳವಳಿಯ ನಂತರ ಬಹುಗುಣ ಹಿಮಾಲಯದ ಪ್ರದೇಶಗಳಿಗೆ ಪಾದಯಾತ್ರೆ ಕೈಗೊಂಡು ಜನರಿಗೆ ಚಳವಳಿಯ ಸಂದೇಶವನ್ನು ತಲುಪಿಸಿದ ಪರಿಣಾಮ ಅವರಿಗೆ ಬೆಂಬಲ ದೊರೆಯಿತು.

ಚಿಪ್ಕೋ ಚಳವಳಿಯ ಪ್ರಭಾವದಿಂದಾಗಿ ಪಶ್ಚಿಮ ಘಟ್ಟದಲ್ಲಿನ ಅರಣ್ಯ ನಾಶದ ವಿರುದ್ಧದ ಅಪ್ಪಿಕೋ ಚಳವಳಿ ಕೂಡ ಕಾವೇರಿತು. 1983ರ ಸೆಪ್ಟೆಂಬರ್ 8 ರಂದು ಶಿರಸಿ ತಾಲೂಕಿನ ಕಳಾಸೆ ಕುದ್ರಗೋಡ ಅರಣ್ಯ್ಯದಲ್ಲಿ ಚಳುವಳಿ ಪ್ರಾರಂಭವಾದ ಅಪ್ಪಿಕೋ ಚಳವಳಿಯು ಇಡಿ ಕರ್ನಾಟಕದ ಮಲೆನಾಡಿನ ಪ್ರದೇಶದಲ್ಲಿ ವ್ಯಾಪಿಸಿತು.

Leave a Comment