ಗದಗ ಜಿಲ್ಲೆಯ ಮಂಡರಗಿ ಹಾಗೂ ಡಂಬಳ ತಾಲೂಕಿನ ಕೃಷಿ ಇಲಾಖೆಯ ಕಾರ್ಯಕ್ರಮ ಕೃಷಿ ಸಂಸ್ಕರಣೆಯೋಜನೆಯಡಿ ಅರ್ಹರೈತರಿಗೆ ತಾಡಪತ್ರಿ ವಿತರಿಸಲು (Tarpaulin distribution) ಅರ್ಜಿ ಆಹ್ವಾನಿಸಲಾಗಿದೆ. ಎಪ್ರೀಲ್ 30 ರ ಒಳಗಾಗಿ ಅರ್ಜಿಗಳನ್ನು ಮುಂಡರಗಿ ಹಾಗೂ ಡಂಬಳ ರೈತ ಸಂಪರ್ಕ ಕೇಂದ್ರದಲ್ಲಿ ರೈತರು ಸಲ್ಲಿಸಬಹುದು.
ಫಲಾನುಭವಿಗಳನ್ನು ಲಾಟರಿ ಮುಖಾಂತರ ಆಯ್ಕೆ ಮಾಡಲಾಗುವುದು. ಕೊನೆಯ ದಿನಾಂಕದ ನಂತರ ಸಲ್ಲಿಸುವ ಅರ್ಜಿಗಳನ್ನು ಹಾಗೂ ಹಿಂದಿನ ಮೂರು ವರ್ಷಗಳ ಅವಧಿಯಲ್ಲಿ ಕಷಿ ಇಲಾಖೆಯಿಂದ ತಾಡಪತ್ರಿ ಪಡೆದ ಫಲಾನುಭವಿಗಳನ್ನು ಮಾನ್ಯ ಮಾಡಲಾಗುವುದಿಸ್ಸಯ
ಗ್ರಾಮ ಪಂಚಾಯತ ಕ್ಷೇತ್ರವಾರು ತಾಡಪತ್ರಿಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಅರ್ಜಿಯೊಂದಿಗೆ ರೈತರ ಆಧಾರ್ ಕಾರ್ಡಿನ ನಕಲು ಪ್ರತಿ, ಖಾತೆ ಉತಾರ, ಬ್ಯಾಂಕ್ ಪಾಸ್ ಪುಸ್ತಕ ನಕಲು ಪ್ರತಿ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಅರ್ಜಿ ಸಲ್ಲಿಸುವಾಗ ಇತ್ತೀಚಿನ ಜಾತಿ ಪ್ರಮಾಣ ಪತ್ರದ ನಕಲು ಪ್ರತಿಯನ್ನು ಅರ್ಜಿ ಜೊತೆಗೆ ಸಲ್ಲಿಸಬೇಕು. ಲಾಟರಿಯಲ್ಲಿ ಆಯ್ಕೆಯಾದ ರೈತರ ಪಟ್ಟಿಯನ್ನು ಹಾಗೂ ವಿತರಣೆಯ ದಿನಾಂಕವನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಪ್ರಕಟಿಸಲಾಗುವುದು ಎಂದು ಮುಂಡರಗಿ ತಾಲೂಕು ಸಹಾಯಕ ಕಷಿ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಶಿರಹಟ್ಟಿ ತಾಲೂಕಿನ ರೈತರಿಂದ ತಾಡಪತ್ರಿ ವಿತರಣೆಗಾಗಿ ಅರ್ಜಿ ಆಹ್ವಾನ
ಗದಗ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕೃಷಿ ಇಲಾಖೆಯಲ್ಲಿ ರಿಯಾಯಿತಿ ದರದಲ್ಲಿ ತಾಡಪತ್ರಿ ವಿತರಿಸಲಾಗುತ್ತಿದ್ದು, ಅರ್ಹ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ. ರೈತರು ಏಪ್ರೀಲ್ 26 ರಿಂದ ಮೇ 5 ನೇ ತಾರಿಖಿನೊಳಗೆ ಸಂಬಂದಿಸಿದ ರೈತ ಸಂಪರ್ಕ ಕೇಂದ್ರದಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತಿದ್ದು, ಅರ್ಜಿಯೊಂದಿಗೆ ಆಧಾರ್ ಕಾರ್ಡ್, ಖಾತೆ ಉತಾರ, ಬ್ಯಾಂಕ್ ಪಾಸ್‌ಬುಕ್ ನೀಡಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ರೈತರು ಜಾತಿ ಪ್ರಮಾಣ ಪತ್ರದ ಝರಾಕ್ಸ್ ಪ್ರತಿಯನ್ನು ಸಲ್ಲಿಸಬೇಕು.
ಕಳೆದ ಮೂರು ವರ್ಷಗಳಲ್ಲಿ ತಾಡಪತ್ರಿ ಪಡೆದ ರೈತರ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಸಹಾಯಕ ಕೃಷಿ ನಿರ್ದೇಶಕ ಮಹೇಶ ಬಾಬು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.