ಶ್ರೇಷ್ಟ ಕೃಷಿಕ ಪ್ರಶಸ್ತಿಗೆ ಅರ್ಜಿ ಆಹ್ವಾನ

Written by Ramlinganna

Updated on:

Taluka district Farmer Award ತಾಲೂಕು ಮಟ್ಟ ಹಾಗೂ ಜಿಲ್ಲಾ ಮಟ್ಟದ ಶ್ರೇ ಜಿಲ್ಲಾಮಟ್ಟ ಹಾಗೂ ತಾಲೂಕು ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ ಆಹ್ವಾನಿಸಲಾಗಿದೆ.

ಹೌದು, ಆತ್ಮ ಯೋಜನೆಯಡಿ ಜಿಲ್ಲಾಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿಗಾಗಿ ಕಲಬುರಗಿ ಜಿಲ್ಲೆಯ 11 ತಾಲೂಕುಗಳ ರೈತರಿಂದ ನಾಮನಿರ್ದೇಶನ ಅರ್ಜಿಗಳನ್ನು ಆಹ್ವಾನಿಸಲಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Taluka district Farmer Award ಯಾವ ಯಾವ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ? 

2023-24ನೇ ಸಾಲಿನ ಆತ್ಮಯೋಜನೆಯಡಿ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿಹಾಗೂ ತಾಲೂಕುಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿಗಳನ್ನು ಪ್ರಗತಿಪರ ರೈತರ ಸಾಧನೆಗಳನ್ನು ಗುರುತಿಸಿ ಪುರಸ್ಕರಿಸಲು ಸರ್ಕಾರ ತೀರ್ಮಾನಿಸಿದೆ. ಕೃಷಿ ವಲಯದಲ್ಲಿ ತಮ್ಮದೇ ಆದ ಅಮೂಲ್ಯ ಅನ್ವೇಷಣೆ ವಿಶಿಷ್ಟ ಸಾಧನೆ ಮೂಲಕ ರೈತರ ಸಮುದಾಯಕ್ಕೆ ಅತ್ಯುತ್ತಮ ಕೊಡಗು ನೀಡುತ್ತಿರುವ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಪರಿಣಿತ ಕೃಷಿಿಕ ರೈತ ಮಹನಿಯರನ್ನು ಗುರುತಿಸಿ ಜಿಲ್ಲಾ ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿ ಹಾಗೂ ತಾಲೂಕು ಮಟ್ಟದ ಶ್ರೇಷ್ಟ ಕೃಷಿಕ ಪ್ರಶಸ್ತಿಯನ್ನು ನಗದು ಬಹುಮಾನದೊಂದಿಗೆ ನೀಡಿ ಗೌರವಿಸಲಾಗುತ್ತದೆ.

ಇದನ್ನೂ ಓದಿ ಆಧಾರ್ ನಂಬರ್ ಹಾಕಿ ಮೊಬೈಲ್ ನಲ್ಲಿ ಸಾಲಮನ್ನಾ ಸ್ಟೇಟಸ್ ಚೆಕ್ ಮಾಡಿ

ಉದ್ದೇಶಿತ ಶ್ರೇಷ್ಟ ಕೃಷಿಕ ಪ್ರಶಸ್ತಿಗಾಗಿ ಭಾಗವಹಿಸಲಿಚ್ಚಿಸುವವರು ಕೃಷಿ ಕ್ಷೇತ್ರದಲ್ಲಿ ಗಮನಾರ್ಹ ವಿಶಿಷ್ಟ ಸಾಧನೆಯನ್ನು ಮಾಡಿರಬೇಕು. ಅವರ ಸಂಶೋಧನೆಗಳು / ಸಾಧನೆಗಳು ವ್ಯಾಪಕವಾಗಿ ಅಳವಡಿಸಲು ಕೃಷಿ ಕ್ಷೇತ್ರದ ಏಳಿಗೆಗೆ ಪೂರಕವಾಗಿರಬೇಕು. ಅಭ್ಯರ್ಥಿಗಳು ಮಾಡಿರುವ ಸಾಧನೆಯ ಮೂಲ ಸ್ವರೂಪವಾಗಿದ್ದುಬೇರೆಯವರ ಮಾಡಿರುವ ಸಾಧನೆಗಿಂತ ಭಿನ್ನವಾಗಿರಬೇಕು.

ಅರ್ಹ ರೈತರು ಸಂಬಂಧಪಟ್ಟ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ನಾಮನಿರ್ದೇಶನ ಅರ್ಜಿಯನ್ನು ಪಡೆದು ಭರ್ತಿ ಮಾಡಿ 2023ರ ಡಿಸೆಂಬರ್ 30 ರೊಳಗಾಗಿ ಆಯಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರು ಅಥವಾ ತಾಲೂಕು ತಾಂತ್ರಿಕ ಅಧಿಕಾರಿಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು.

ಇದನ್ನೂ ಓದಿ ಬರ ಪರಿಹಾರ ಲಿಸ್ಟ್ ನಲ್ಲಿ ನಿಮ್ಮ ಹೆಸರಿದೆಯೇ? ಇಲ್ಲೇ ಚೆಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು, ಉಪ ಯೋಜನಾ ನಿರ್ದೇಶಕರು (ಆತ್ಮ) ಕಲಬುರಗಿ ಹಾಗೂ ತಾಲೂಕು ತಾಂತ್ರಿಕ ವ್ಯವಸ್ಥಾಪಕರನ್ನು ಜಂಟಿ ಕೃಷಿ ನಿರ್ದೇಶಕರ ಕಚೇರಿ, ನಿಖಿಲ್ ಆರ್ ಕಟ್ಟೋಳ್ಳಿ 8123679990, ಆಳಂದ ಶ್ರೀ ಸಂಜಯ ಕುಮಾರ 9481880805, ಅಫಜಲ್ಪುರ ತಾಲೂಕು ಅನಿತಾ 8095094038, ಜೇವರ್ಗಿ ಬಸವರಾಜ 9902182092, ಕಲಬುರಗಿ ಶಿವರಾಯ 9900383618, ಸೇಡಂ ಬಾಲರಾಜ ಇವರ ಮೊಬೈಲ್ ನಂಬರ್ 9480294584, ಚಿತ್ತಾಪುರ ಜಗದೀಶ ಡೋರನಳ್ಳಿ 9845173676 ಹಾಗೂ ಚಿಂಟೋಳಿ ಇವರ ವೀರೇಶ ಜೈನ್ 8550866178 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

Leave a Comment