ರೈತರಿಗೆ ‘ಆಪರೇಷನ್ ಗ್ರೀನ್ಸ್’ ಕಾರ್ಯಕ್ರಮದಡಿಯಲ್ಲಿ  ಹಣ್ಣು ಮತ್ತು ತರಕಾರಿ ಸಾಗಾಣಿಕೆ ಹಾಗೂ ಶೇಖರಣೆಗಾಗಿ ಶೇ.50 ರಷ್ಟು (Subsidy for vegetable fruits storage ) ಸಹಾಯಧನ ನೀಡಲಾಗುವುದು. ಹಣ್ಣು ಮತ್ತು ತರಕಾರಿಗಳ ಸಂಸ್ಕರಣೆದಾರರು, ರೈತರು, ರೈತ ಉತ್ಪಾದಕ ಸಂಸ್ಥೆ ಮತ್ತು ರೈತರ ಗುಂಪು, ವರ್ತಕರು, ಪರವಾನಗಿ (ಲೈಸನ್ಸ್) ಹೊಂದಿರುವ ಕಮಿಷನ್ ಏಜೆಂಟರುಗಳು, ರಫ್ತುದಾರರು ಹಾಗೂ ಇನ್ನಿತರೆ ಭಾಗಿದಾರರಿಗೆ ಅವಕಾಶ ಕಲ್ಪಿಸಲಾಗಿದೆ.

ಹಣ್ಣು ಮತ್ತು ತರಕಾರಿ ಬೆಳೆಗಾರರು ವಿಶೇಷವಾಗಿ ಕೋವಿಡ್ ಲಾಕ್‌ಡೌನ್ ರೀತಿಯ ಸಂಕಷ್ಟದ ಸಂದರ್ಭದಲ್ಲಿ ತಾವು ಬೆಳೆದ ಉತ್ಪನ್ನಗಳನ್ನು ಸರಿಯಾಗಿ ಮಾರಾಟ ಮಾಡಲು ಸಾಧ್ಯವಾಗದೇ ಕಷ್ಟ-ನಷ್ಟ ಅನುಭವಿಸಿರುವುದನ್ನು ಹಾಗೂ ಬೆಳೆಗಳ ಕಟಾವಿನ ನಂತರ ಆದ ಉತ್ಪನ್ನಗಳ ನಷ್ಟವನ್ನು ನಿಯಂತ್ರಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಈ ಯೋಜನೆಯ ಮಾರ್ಗಸೂಚಿಗೆ ಅನುಗುಣವಾಗಿ ಹಣ್ಣು ಮತ್ತು ತರಕಾರಿ ಉತ್ಪನ್ನಗಳ ಸಾಗಾಣಿಕೆಗೆ ಮತ್ತು ಶೇಖರಣೆಗೆ ಶೇ.50 ಸಹಾಯಧನ ನೀಡಲು ಅವಕಾಶವಿರುತ್ತದೆ.

ಆತ್ಮನಿರ್ಭರ ಭಾರತ ಅಭಿಯಾನದಡಿಯಲ್ಲಿ ಸಹಾಯಧನ ಪಡೆಯಲು ಇಚ್ಛಿಸುವ ಜಿಲ್ಲೆಯಲ್ಲಿನ ಹಣ್ಣು ಮತ್ತು ತರಕಾರಿ ಬೆಳೆಗಾರರು, ಅಗತ್ಯವಿರುವ ದಾಖಲಾತಿಗಳು ಹಾಗೂ ಇನ್ನಾವುದೇ ಮಾಹಿತಿಗಾಗಿ ಆಯಾ ತಾಲೂಕು ತೋಟಗಾರಿಕೆ ಇಲಾಖೆ ಕಚೇರಿಗಳನ್ನು ಸಂಪರ್ಕಿಸಿ ಮಾಹಿತಿ ಪಡೆಯುವ ಮೂಲಕ ಯೋಜನೆಯ ಸದುಪಯೋಗ ಪಡೆದುಕೊಳ್ಳಬಹುದು.. ಹೆಚ್ಚಿನ ಮಾಹಿತಿಗೆ ಶಿವಮೊಗ್ಗ: 08182-270415, ಭದ್ರಾವತಿ: 08282-268239, ಶಿಕಾರಿಪುರ: 08187-223544, ಸೊರಬ: 08184-272112, ಸಾಗರ: 08183-226193, ತೀರ್ಥಹಳ್ಳಿ: 08181-2281514, ಹೊಸನಗರ: 08185-221364 ಈ ತಾಲೂಕುವಾರು ತೋಟಗಾರಿಕೆ ಕಚೇರಿ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *