ಪಶು ಸಂಗೋಪನೆಯಲ್ಲಿ ಆಸಕ್ತಿಯಿರುವ ರೈತರಿಗೆ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆಯಡಿ ಹೈನುಗಾರಿಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ತುಮಕೂರು ಜಿಲ್ಲೆಯ ತಿಪಟೂರು ತಾಲೂಕು ಕೊಪ್ಪಳ ಜಿಲ್ಲೆ, ಮೈಸೂರು ಜಿಲ್ಲೆಯ, ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯಿಂದ 2022-23ನೇ ಸಾಲಿನಲ್ಲಿ ಆರ್.ಕೆ.ವಿ.ವೈ ಯೋಜನೆಯಡಿಯಲ್ಲಿ ಒಂದು ಮಿಶ್ರ ತಳಿ ಹಸು ಅಥವಾ ಎಮ್ಮೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಆಯ್ಕೆಯಾದ ಪ್ರತಿ ಫಲಾನುಭವಿಗಳಿಗೆ ಒಂದು ಮಿಶ್ರ ತಳಿ ಹಸು ಅಥವಾ ಎಮ್ಮೆ ವಿತರಿಸಲಾಗುವುದು. ಘಟಕದ ಮೊತ್ತ 62 ಸಾವಿರ ರೂಪಾಯಿ ಇರುತ್ತದೆ. ಈ ಯೋಜನೆಯಲ್ಲಿ ಘಟಕ ಸ್ಥಾಪಿಸಲು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ. 33.33 ಹಾಗೂ ಇತರೆ ಜನಾಂಗದವರಿಗೆ ಶೇ. 25 ರಷ್ಟು ಸಹಾಯಧನ ನೀಡಲಾಗುವುದು. ಯೋಜನೆಯಡಿ ತಿಪಟೂರು ತಾಲೂಕಿಗೆ ನಿಗದಿಪಡಿಸಿದ ಗುರಿ ಒಟ್ಟು 15 ಆಗಿದೆ. ಅರ್ಜಿ ನಮೂನೆಯನ್ನು ರೈತರು ಹತ್ತಿರದ ಪಶು ಸಂಸ್ಥೆಗಳಲ್ಲಿ ಪಡೆದು ಸೂಕ್ತ ದಾಖಲೆಗಳೊಂದಿಗೆ ಸ್ಥಳೀಯ ಪಶುವೈದ್ಯ ಸಂಸ್ಥೆಗಳಿಗೆ ಜನವರಿ 15 ರೊಳಗೆ ಸಲ್ಲಿಸಲು ಕೋರಲಾಗಿದೆ. ಆಸಕ್ತ ರೈತರು ಈ ಯೋಜನೆಯಗಳ ಪ್ರಯೋಜನೆ ಪಡೆದುಕೊಳ್ಳಬಹುದು.
ಕೊರಟಗೇರೆ ತಾಲೂಕಿನಿಂದಲೂ ಅರ್ಜಿ ಆಹ್ವಾನ
ಕೊರಟಗೇರೆ ತಾಲೂಕಿನ ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯ ವತಿಯಿಂದಲೂ ಕೃಷಿ ವಿಕಾಸ ಯೋಜನೆಯಡಿ ಒಂದು ಮಿಶ್ರ ತಳಿ ಹಸರು ಅಥವಾ ಎಮ್ಮೆ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ತಾಲೂಕಿಗೆ ಈ ಯೋಜನೆಯಡಿ ನಿಗದಿಪಡಿಸಿದ ಗುರಿ ಒಟ್ಟು 10 ಆಗಿದೆ. ಪರಿಶಿಷ್ಟ ಜಾತಿಯವರಿಗೆ 2, ಪರಿಶಿಷ್ಟ ಪಂಗಡವರಿಗೆ 1 ಹಾಗೂ ಇತರೆ ವರ್ಗದವರಿಗೆ 7 ನಿಗದಿಪಡಿಸಲಾಗಿದೆ.
ಇದನ್ನೂ ಓದಿ : ನಿಮ್ಮ ಜಮೀನಿನ ಆಕಾರಬಂದ್ ಮೊಬೈಲ್ ನಲ್ಲೇ ಡೌನ್ಲೋಡ್ ಮಾಡಿ
ಆಸಕ್ತ ಫಲಾನುಭಿಗಳು ಸ್ಥಳೀಯ ಪಶುವೈದ್ಯಾಧಿಕಾರಿಗಳು, ಪಶು ಚಿಕಿತ್ಸಾಲ ಇವರ ಕಚೇರಿಯಿಂದ ನಿಗದಿತ ಅರ್ಜಿ ನಮೂನೆಯನ್ನು ಪಡೆದು ಜನವರಿ 10 ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು
ಅರ್ಜಿ ಸಲ್ಲಿಸಲು ರೈತರ ಬಳಿ 2 ಭಾವಚಿತ್ರಗಳು ಇರಬೇಕು. ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಪುಸ್ತಕ, ಜಾತಿ ಪ್ರಮಾಣ ಪತ್ರದ ಪ್ರತಿ, ಬಿಪಿಎಲ್ ಕಾರ್ಡ್ ಪ್ರತಿ, ಫ್ರೂಟ್ಸ್ ಐಡಿ ಎಲ್ಲಾ ದ್ವಿ ಪ್ರತಿಗಳಲ್ಲಿ ಅರ್ಜಿ ಸಲ್ಲಿಸಬೇಕು.
ಮೈಸೂರು ಜಿಲ್ಲೆಯ ರೈತರಿಂದಲೂ ಅರ್ಜಿ ಆಹ್ವಾನ
ಹೌದು, 2022-23 ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಪಶುಭಾಗ್ಯ ಫಲಾನುಭವಿಗಳ ಆಧಾರಿತ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆ ಕಾರ್ಯಕ್ರಮದಡಿ ಅರ್ಜಿ ಆಹ್ವಾನಿಸಲಾಗಿದೆ.
ಹೌದು, ಹೈನುಗಾರಿಕೆ ಘಟಕ ವೆಚ್ಚಕ್ಕೆ 62 ಸಾವಿರ ರೂಪಾಯಿ ಇದ್ದು. ಇದರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ರೈತರಿಗೆ 20665 ರೂಪಾಯಿ ಸಹಾಯಧನ ನೀಡಲಾಗುವುದು. ಸಾಮಾನ್ಯ ವರ್ಗಕ್ಕೆ 15500 ರೂಪಾಯಿ ಸಹಾಯಧನ ನೀಡಲಾಗುವುದು. ಉಳಿದ ಮೊತ್ತವನ್ನುಫಲಾನುಭವಿಗಳ ವಂತಿಕೆ ಅಥವಾ ಸಾಲದ ರೂಪದಲ್ಲಿ ಬ್ಯಾಂಕಿನಿಂದ ಪಡೆಯಬಹುದು. ಮಹಿಳೆಯರಿಗೆ ಶೇ. 33, ಅಲ್ಪಸಂಖ್ಯಾತರಿಗೆ ಶೇ. 15 ಹಾಗೂ ಅಂಗವಿಕಲರಿಗೆ ಕನಿಷ್ಠ ಶೇ. 3 ಆದ್ಯತೆ ನೀಡಲಾಗುವುದು. ಆದ್ಯತೆ ಮೇರೆಗೆ ಫಲಾನುಭವಿಗಳನ್ನು ಕೂಲಿ, ಕೃಷಿ ಕಾರ್ಮಿಕರು ಹಾಗೂ ಪಶು ಸಂಗೋಪನೆಯಲ್ಲಿ ತೊಡಗಿಸಿಕೊಂಡವರನ್ನು ಆಯ್ಕೆ ಮಾಡಲಾಗುವುದು.
ಇದನ್ನೂ ಓದಿ : ನಿಮ್ಮ ಜಮೀನು ಹಾಗೂ ಅಕ್ಕಪಕ್ಕದ ಜಮೀನುಗಳಿಗೆ ಹೋಗಲು ದಾರಿವಿದೆಯೇ? ಮೊಬೈಲ್ ನಲ್ಲೇ ಚೆಕ್ ಮಾಡಿ
ಹೆಚ್ಚಿನ ಮಾಹಿತಿಗಾಗಿ ಮುಖ್ಯ ಪಶು ವೈದ್ಯಾಧಿಕಾರಿ ದೂರವಾಣಿ ಸಂಖ್ಯೆ 0821 2420606. ಮೊಬೈಲ್ ನಂಬರ್ 94483 50216 ಹಾಗೂ ಆಯಾ ತಾಲೂಕು ಸಹಾಯಕ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು. ಅರ್ಜಿಗಳನ್ನು ಜನವರಿ 15 ರೊಳಗಾಗಿ ಭರ್ತಿ ಮಾಡಿ ಆಯಾ ತಾಲೂಕು ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಬಹುದು.
ಕೊಪ್ಪಳ ಜಿಲ್ಲೆ ರೈತರಿಂದಲೂ ಅರ್ಜಿ ಆಹ್ವಾನ
ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಮುಖ್ಯಮಂತ್ರಿಗಳ ಜೀವನ ಯೋಜನೆಯಡಿ ಹೈನುಗಾರಿಕೆ ಘಟಕ ಸ್ಥಾಪನೆಗೆ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಜನವರಿ 8 ಕೊನೆಯ ದಿನವಾಗಿದೆಎಂದು ಪಶುಪಾಲನಾಇಲಾಖೆಯ ಉಪನಿರ್ದೇಶಕ ಡಾ. ನಾಗರಾಜ ಎಚ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.