ಬೈಕ್ ಖರೀದಿಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Updated on:

Subsidy for purchase bike ವಿವಿಧ ಯೋಜನೆಗಳಡಿಯಲ್ಲಿ ಬೈಕ್ ಖರೀದಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು  ಗದಗ ಜಿಲ್ಲೆಯ ಮೀನುಗಾರಿಕೆ ಇಲಾಖೆಯ ವತಿಯಿಂದ ಪ್ರಸಕ್ತ ಆರ್ಥಿಕ ಸಾಲಿಗ ಜಿಲ್ಲಾ ವಲಯ ಯೋಜನೆಯಡಿಯಲ್ಲಿ ಮೀನುಗಾರರಿಗೆ ವಿವಿಧ ಯೋಜನೆಗಳ ಸಹಾಯಧನ ನೀಡುಲ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

Subsidy for purchase bike ಬೈಕ್ ಖರೀದಿಗೆ ಸಬ್ಸಿಡಿ 

ಮೀನುಗಾರರ ಸಹಕಾರಿ ಸಂಘದಲ್ಲಿ ಸದಸ್ಯತ್ವ ಹೊಂದಿರುವ ಮೀನುಗಾರರಿಗ ಮೀನು ಮಾರಾಟಕ್ಕಾಗಿ ದ್ವಿಚಕ್ರ ವಾಹನ ಹಾಗೂ ಪ್ಲಾಸ್ಟಿಕ್ ಕ್ರೇಟ್ಸ್ ಖರೀದಿಗಾಗಿ ಸಹಾಯಧನ ನೀಡಲಾಗುವುದು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವೃತ್ತಿಪರ ಮೀನುಗಾರರಿಗೆ ಮೀನುಗಾರಿಕೆ ಸಲಕರಣೆ ಕಿಟ್ ಖರೀದಿಗೂ ಸಹಾಯಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ, ಗದಗ, ರೋಗಣ, ನರಗುಂದ, ಗಜೇಂದ್ರಗಡ ತಾಲೂಕಿನ ಅರ್ಹ ಫಲಾನುಭವಿಗಳು ಮೀನುಗಾರಿಕೆ ಸಹಾಯಕ ನಿರ್ದೇಶಕರು, ಗದಗ (ಮೊಬೈಲ್ ಸಂಖ್ಯೆ 9880210505 ಅವರನ್ನು ಸಂಪರ್ಕಿಸಲು ಕೋರಲಾಗಿದೆ. ಮುಂಡರಗಿ, ಶಿರಹಟ್ಟಿ ಮತತ್ು ಲಕ್ಷೇಶ್ವರ ತಾಲೂಕಿನ ಅರ್ಹ ಫಲಾನುಭವಿಗಳು ಮೀನುಗಾರಿಕೆ ಸಹಾಯಕ ನಿರ್ದೇಶಕರು ಮುಂಡರಗಿ ಮೊಬೈಲ್ ಸಂಖ್ಯೆ 8095792530 ಅವರನ್ನು ಸಂಪರ್ಕಿಸಬಹುದು ಎಂದು ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನರಗುಂದ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡಲು ಅರ್ಜಿ ಆಹ್ವಾನ

ನರಗುಂದ ತಾಲೂಕಿನ ಕೋಟಗಾರಿಕೆ ಬೆಳೆಗಾರರಿಗೆ 2023-24ನೇ ಸಾಲಿನಲ್ಲಿ ತೋಟಗಾರಿಕೆ ಇಲಾಖೆಯಿಂದ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಸಹಾಯಧನ ನೀಡಲಾಗುತ್ತಿದೆ. ಆದ್ದರಿಂದ ಬಾಳೆ ಬೆಳೆ ಪ್ರದೇಶ ವಿಸ್ತರಣೆ, ಪೇರಲ ಬೆಳೆ, ಡ್ರ್ಯಾಗನ್ ಹಣ್ಣು, ಹೂವೂ, ಹೈಬ್ರಿಡ್ ತರಕಾರಿ, ವೈಯಕ್ತಿಕ ನೀರು ಸಂಗ್ರಹಣಾ, ಘಟಕಗಳ, ಸಮುದಾಯ ಕೆರೆ ನಿರ್ಮಾಣ, ಯಂತ್ರೋಪಕರಣಗಳಿಗೆ ಸಹಾಯಧನ, ತರಕಾರಿ ಬೆಳೆಗೆ ಪ್ಲಾಸ್ಚಿಕ್ ಹೊದಿಕೆ ಹಾಗೂ ತೋಟಗಾರಿಕೆ ಉತ್ಪನ್ನಗಳ ಮಾರುಕಟ್ಟೆಗೆ ತಳ್ಳುವ ಗಾಡಿಗಳಿಗೆ ನಿಯಮಾನುಸಾರ ಸಹಾಯಧನ ನೀಡಲಾಗುತ್ತಿದೆ.

ಇದನ್ನೂ ಓದಿ : ಈ ಲಿಸ್ಟ್ ನಲ್ಲಿರುವವರಿಗೆ ಜುಲೈ 24 ರಂದು ಗೃಹಲಕ್ಷ್ಮೀ ಯೋಜನೆಯ 2 ಸಾವಿರ ರೂಪಾಯಿ ಜಮೆ

ಈ ಯೋಜನೆಯ ಸೌಲಭ್ಯ ಪಡೆಯಲು ಇಛ್ಚಿರುವ ರೈತರು ಅರ್ಜಿ ನಮೂನೆಯ ಜೊತೆಗೆ ಪಹಣಿ, ಇತ್ತೀಚಿನ ಭಾವಚಿತ್ರ, ಖಾತೆ, ಉತಾರ, ಜಾತಿ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಝರಾಕ್ಸ್, ಬ್ಯಾಂಕ್ ಪಾಸ್ ಬುಕ್ ಝರಾಕ್ಸ್, ತೋಟಗಾರಿಕೆ ಬೆಳೆ ಹಾಗೂ ನೀರಾವರಿ ಸೌಲಭ್ಯವನ್ನು ಹೊಂದಿರುವ ಹೊಸ ರೈತರಿಗೆ ಆದ್ಯತೆ ಮೇರೆಗೆ ಸಹಾಯಧನ ನೀಡಲಾಗುವುದು.

ಅರ್ಜಿ  ಸಲ್ಲಿಸಲು ಆಗಸ್ಟ್ 31 ಕೊನೆಯ ದಿನಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ನರಗುಂದ ಇಲ್ಲಿ ಸಂಪರ್ಕಿಸಲು ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೀನುಗಾರಿಕೆ ಘಟಕ ಸ್ಥಾಪಿಸಲು ಸಹಾಯಧನಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಜಿಲ್ಲಾ ಮೀನುಗಾರಿಕೆ ಇಲಾಖೆಯ ವತಿಯಿಂದ 2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ವಿವಿಧ ಘಟಕಗಳಿಗೆ ಸಹಾಯಧನ ನೀಡಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಮೀನು ಕೃಷಿ ಕೊಳಗಳ ನಿರ್ಮಾಣ – 10 ಹೆ, ಮೀನು ಕೃಷಿ ಕೊಳದ ಹೂಡಿಕೆ ವೆಚ್ಚಕ್ಕೆ ಸಹಾಯಕ -10ಹೆ, ಸಿಹಿ ನೀರು ಬಯೋಪ್ಲಾಕ್ಸ್ ಘಟಕ ಸ್ಥಾಪನೆಗೆ ಸಹಾಯಧನ -1, ಇನ್ಸುಲೇಟೆಡ್ (ಶಾಖ ನಿರೋಧಕ) ವಾಹನ ಖರೀದಿಗೆ ಸಹಾಯಧನ -1 , ಹಾಗೂ ಯಾಂತ್ರೀಕೃತ ದೋಣಿ ಖರೀದಿಗೆ -2 ರಂತೆ ಸಹಾಯಧನ ಘಟಕಗಳ ಉಪಯೋಜನೆಗಳನ್ನು ಪ್ರಾರಂಭಿಸಲು ಫಲಾನುಭವಿಗಳಿಗೆ ಸಹಾಯಧನ ನೀಡಲಾಗುತ್ತದೆ.

ಆಸಕ್ತರು ಆಗಸ್ಟ್ 22 ರೊಳಗಾಗಿ ಆಯಾ ತಾಲೂಕಿನ ಮೀನುಗಾರಿಕೆ ಸಹಾಯಕ ನಿರ್ದೇಶಕರ ಕಚೇರಿಯಿಂದ ಅರ್ಜಿಗಳನ್ನು ಪಡೆದು ಸಲ್ಲಿಸಲು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕದವರೆಗೆ ಕಾಯದೆ ಆದಷ್ಟು ಬೇಗ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.  ಹೆಚ್ಚಿನ ಮಾಹಿತಿಗಾಗಿ ತಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಬಹುದು.

Leave a Comment