ಕೃಷಿಹೊಂಡ, ಗ್ರೀನ್ ಹೌಸ್, ಹನಿ ನೀರಾವರಿ, ಮೀನುಗಾರಿಕೆಗೆ ಸಬ್ಸಿಡಿ ನೀಡಲು ಅರ್ಜಿ ಆಹ್ವಾನ

Written by Ramlinganna

Published on:

ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿಯಲ್ಲಿ ಕೃಷಿ ಹೊಂಡ, ಗ್ರೀನ್ ಹೌಸ್, ಹನಿ ನೀರಾವರಿ, ಮೀನುಗಾರಿಕೆಗೆ ಸಹಾಯಧನ ನೀಡಲು ವಿವಿಧ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಹೌದು, ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಮಾವು, ದಾಳಿಂಬೆ, ಬಾಳೆ, ಗೋಡಂಬಿ, ಹುಣಸೆ, ಗುಲಾಬಿ, ಬಿಡಿ ಹೂ ಹಾಗೂ ಹೈಬ್ರಿಡ್ ತರಕಾರಿ ಬೆಳೆಗಳ ಹೊಸ ಪ್ರದೇಶ ವಿಸ್ತರಣೆ, ಗೋಡಂಬಿ, ಮಾವು ಪುನಶ್ಚೇತನ, ಸಮುದಾಯ ಕೃಷಿಹೊಂಡ, ವೈಯಕ್ತಿಕ ಕೃಷಿಹೊಂಡ, ಹಣ್ಣು ಮಾರಾಟ ಮಾಡುವ ತಲ್ಳುವ ಗಾಡಿ, ಸಮಗ್ರ ಪೀಡೆ ನಿರ್ವಹಣೆ, ಪ್ಯಾಕ್ ಹೌಸ್, ಹಸಿರು ಮನೆ, ನೆರಳು ಪರದೆ ಮನೆ, ಸಣ್ಣ ನರ್ಸರಿ ಕಾರ್ಯಕ್ರಮಗಳು ಅನುಮೋದನೆಯಾಗಿದೆ.

ಆಸಕ್ತ ರೈತರು ಅರ್ಜಿಯೊಂದಿಗೆ ಪ್ರಸಕ್ತ ಸಾಲಿನ ಪಹಣಿ (ಆರ್.ಟಿ.ಸಿ) ಆಧಾರ್ ಕಾರ್ಡ್ ಝರಾಕ್ಸ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಝರಾಕ್ಸ್ ಪ್ರತಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ರೈತರು ಆಗಿದ್ದಲ್ಲಿ ಆರ್.ಡಿ. ಸಂಖ್ಯೆಯ ಜಾತಿ ಪ್ರಮಾಣ ಪತ್ರದೊಂದಿಗೆ ಅರ್ಜಿ ಸಲ್ಲಿಸಲು ಆಗಸ್ಟ್ 28 ಕೊನೆಯ ದಿನವಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ತಿಳಿಸಿದ್ದಾರೆ.

ತೋಟಗಾರಿಕೆ ಇಲಾಖೆಯ ವತಿಯಿಂದ ಅರ್ಜಿ ಆಹ್ವಾನ

ತೋಟಗಾರಿಕೆ ಇಲಾಖೆಯಿಂದ 2023-24ನೇ ಸಾಲಿನ ಇಲಾಖಾ ಯೋಜನೆಗಳಡಯಲ್ಲಿ ಸಂಡೂರ ತಾಲೂಕಿನಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ತೋಟಗಾರಿಕೆ ಮಿಷನ್, ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆ, ಪ್ರಧಾನಮಂತ್ರಿ ಕೃಷಿ ಸಿಂಚಾಯಿ (ಹನಿ ನೀರಾವರಿ) ಯೋಜನೆ, ಜೇನು ಕೃಷಿ, ಸಮಗ್ರ ತೋಟಗಾರಿಕೆ ಅಭಿವೃದ್ಧಿ ಯೋಜನೆ, ತೋಟಗಾರಿಕೆಯಲ್ಲಿ ಯಾಂತ್ರೀಕರಣ ಯೋಜನೆ ಅಡಿಯಲ್ಲಿ ಈರುಳ್ಳಿ ಶೇಖರಣಾ ಘಟಕ, ಫಾರಂ ಗೇಟ್, ಜೇನು ಪೆಟ್ಟಿಗೆ, ಖಾಸಗಿ ಮಧುವನ ಸ್ಥಾಪನೆ ಕಾರ್ಯಕ್ರಮಗಳಿಗೆ ಆಸಕ್ತ ತೋಟಗಾರಿಕಾ ರೈತರಿಂದ ಅರ್ಜಿಗಳನ್ನು ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ ರೇಷನ್ ಕಾರ್ಡ್ ದಾದರು ಇಕೆವೈಸಿ ಮಾಡಿಸುವುದು ಕಡ್ಡಾಯ- ಇಕೆವೈಸಿ ಆಗಿದೆಯೋ ಇಲ್ಲವೋ ಇಲ್ಲೆ ಚೇಕ್ ಮಾಡಿ

ಹೆಚ್ಚಿನ ಮಾಹಿತಿಗಾಗಿ ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕರು ಮೊಬೈಲ್ ನಂಬರ್ 9740934208 ಅವರನ್ನು ಸಂಪರ್ಕಿಸಬಹುದು.

ಮೀನುಗಾರಿಕೆಗೆ ಬೈಕ್ ಖರೀದಿಗೆ ಸಹಾಯಧ ನೀಡಲು ಅರ್ಜಿ ಆಹ್ವಾನ

ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಯ್ಸ ಸಂಪದ ಯೋಜನೆಯಡಿ ಮೀನು ಕೃಷಿ ಕೊಳ ನಿರ್ಮಿಸಲು ಮತ್ತು ಮೀನು ಕೃಷಿ ಹೂಡಿಕೆ ವೆಚ್ಚಗಳಿಗೆ ಉಪ ನಿರ್ಮಿಸಿ ಕಾರ್ಯರೂಪಕ್ಕೆ ತರಲು ಆಸಕ್ತಿ ಹೊಂದಿರುವ ವ್ಯಕ್ತಿಗಳಿಂದ ಸಹಾಯಧನ ಪಡೆಯಲು ಧಾರವಾಡ ಜಿಲ್ಲೆಯ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.

ಸಾಮಾನ್ಯ ವರ್ಗಕ್ಕೆ ಸಹಾಯಧನ ಪ್ಮಾಣ ಯೋಜನಾ ವೆಚ್ಚದಶೇ. 40  ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಮಹಿಳಾ ವರ್ಗಕ್ಕೆ ಶೇ. 60 ರಷ್ಟಿದೆ. ಜಿಲ್ಲಾ ವಲಯ ಮತ್ತು ರಾಜ್ಯ ವಲಯದ ಯೋಜನೆಗಳಾದ ಮೀನುಗಾರಿಕೆ ಸಲಕರಣೆಗಳ ಕಿಟ್, ಹರಿಗೋಲು ವಿತರಿಸುವ ಯೋಜನೆ, ಮೀನು ಮಾರಾಟಕ್ಕೆ ಅಗತ್ಯವಿರುವ ದ್ವಿಚಕ್ರ ವಾಹನ ಮತ್ತು ಶಾಖ ನಿರೋಧಕ ಪೆಟ್ಟಿಗೆ ಖರೀದಿಸಲು ಸಹಾಯಧನ ಯೋಜನೆ, ಮೀನು ಮರಿ ಖರೀದಿಗೆ ಸಹಾಯಧನ ನೀಡಲಾಗುವುದು. ಕೃಷಿ ಹೊಂಡಗಳಿಗೆ  ಮೀನುಮರಿ ಪೂರೈಕೆ, ಹುಲ್ಲುಗೆಂಡೆ, ಮೀನುಮರಿ ಪೂರೈಕೆ, ಮೀನುಗಾರಿಕೆ ತರಬೇತಿ ಮುಂತಾದ ಯೋಜನೆಗಳಡಿಯಲ್ಲಿ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಆಗಸ್ಟ್ 31 ರೊಳಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836 2447416, 984367267, 9448907603 ಗೆ ಸಂಪರ್ಕಿಸಬಹುದು ಎಂದು ಮೀನುಗಾರಿಕೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮತ್ಸ್ಯ ಸಂಪದ ಯೋಜನೆಯಡಿ ಸಹಾಯಧನ ನೀಡಲು ಅರ್ಜಿ ಆಹ್ವಾನ

2023-24ನೇ ಸಾಲಿನಲ್ಲಿ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯ ವಿವಿಧ ಘಟಕಗಳ ಸ್ಥಾಪನೆಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಹೊಸಪೇಟೆ ತಾಲೂಕಿನ ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕರ ಎನ್. ಬಸವನಗೌಡ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಮೀನುಗಾರಿಕೆ ಉಪನಿರ್ದೇಶಕರು ಮೊಬೈಲ್ ನಂಬರ್ 9901244116, ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ, ಹೂವಿನಹಡಗಲತಿಯ ಮೀನುಗಾರಿಕೆ ಸಹಾಯಕ ನಿರ್ದೇಶಕ ಮೊಬೈಲ್ ನಂಬರ್ 9620177588, ಹರಪನಹಳ್ಳಿ ಮೀನುಗಾರಿಕೆ ಸಹಾಯಕ ನಿರ್ದೇಶಕರ ಮೊಬೈಲ್ ನಂಬರ್ 8296792934 ಗೆ ಸಂಪರ್ಕಿಸಬಹುದು.

Leave a comment